ಈ ವಾರ ಈ ರಾಶಿಗೆ ಅತ್ಯಂತ ಶುಭ : ಉಳಿದ ರಾಶಿ ಹೇಗಿದೆ?


ಮೇಷ
ಮನೆಯವರ ಖುಷಿಗಾಗಿ ಏನು ಮಾಡಲೂ
ಸಿದ್ಧರಿರುವ ನಿಮಗೆ ಈ ವಾರ ಒಳ್ಳೆಯ ಸುದ್ದಿ
ಸಿಗಲಿದೆ. ನಿಮ್ಮ ಕೆಲಸ ಕಾರ್ಯಗಳಿಂದ ಎಲ್ಲರ
ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ಸೇವಾ ಮನೋಭಾವ
ಹೀಗೆ ಸದಾ ನಿಮ್ಮಲ್ಲಿರಲಿ. ಮಕ್ಕಳ ವಿದ್ಯಾಭ್ಯಾಸದಲ್ಲಿ
ಏರುಪೇರು. ವಾರಾಂತ್ಯದಲ್ಲಿ ದೂರ ಪ್ರವಾಸ ಸಾಧ್ಯತೆ.

ವೃಷಭ
ಅಂದುಕೊಳ್ಳದ್ದು ಕೆಲವೊಮ್ಮೆ ಅಚಾನಕ್ಕಾಗಿ
ಆಗಿಹೋಗತ್ತೆ. ಅದು ಆ ಕ್ಷಣ ಯಾರಿಂದಲೂ
ಬದಲಾಯಿಸುಲು ಸಾಧ್ಯವಿಲ್ಲ. ಆದರೆ
ಆಗಿದ್ದೆಲ್ಲವೂ ಒಳ್ಳೆಯದಕ್ಕೆ. ಮುಂದೊಂದು ದಿನ ಅದರ
ಪ್ರಭಾವ ಭಾರೀಯಾಗಿದ್ದು, ನಿಮ್ಮನ್ನು ಉನ್ನತ ಸ್ಥಾನಕ್ಕೆ
ತಂದೊಡ್ಡುತ್ತದೆ. ಹಣ ಕಾಸಿನಲ್ಲಿ ಲಾಭ.

ಮಿಥುನ
ನಿಮ್ಮದಲ್ಲದ ತಪ್ಪಿಗೆ ಹದರುವುದು ಅಗತ್ಯವಿಲ್ಲ.
ಬೇರೆಯವರ ಮಾತಿಗೆ ತಲೆ ಕೆಡಿಸಿಕೊಳ್ಳುವ
ಅಗತ್ಯವಿಲ್ಲ. ಮನಸಿಗನ್ನಿಸಿದ ಕೆಲಸ ಈ ವಾರ
ಮಾಡಿ ಮುಗಿಸಲಿದ್ದೀರಿ. ನಿಮ್ಮ ಕೆಲಸಗಳು ಯಶಸ್ಸು
ಸಿಗುವುದರ ಜೊತೆಗೆ ಆತ್ಮವಿಶ್ವಾಸ ಹೆಚ್ಚಿಸಲಿದೆ. ಮನೆಯಲ್ಲಿ
ಸಂತೋಷ ನೆಲಸಲಿದೆ. 

ಕಟಕ
ಕೆಲವೊಮ್ಮೆ ನೋಡಿಯೂ ನೋಡದಂತೆ,
ಗೊತ್ತಿದ್ದೂ ಗೊತ್ತಿಲ್ಲದಂತಿರುವುದು ಆರೋಗ್ಯದ
ದೃಷ್ಟಿಯಿಂದಲೂ ಒಳ್ಳೆಯದು. ಈ ಸಂದರ್ಭ
ಈ ವಾರ ಎದುರಾಗುವು ಸಾಧ್ಯತೆಗಳಿದ್ದು, ಅದನ್ನು
ಯಶಸ್ವಿಯಾಗಿ ಎದುರಿಸಿ ಹೊರಬರಲಿದ್ದೀರಿ. ನಿಮ್ಮ
ದೃಢತೆ, ನಿಮ್ಮ ಧೈರ್ಯವು ಎಲ್ಲರ ಮೆಚ್ಚುಗೆ ಗಳಿಸಲಿದೆ

ಸಿಂಹ
ಇಷ್ಟು ದಿನ ನಿರೀಕ್ಷಿಸದೇ ಇರದ ಸನ್ನಿವೇಶಗಳು
ಈ ವಾರ ಎದುರಾಗಲಿದೆ. ವಿದೇಶಕ್ಕೆ ಹೋಗುವ
ಅವಕಾಶ ಬರಲಿದ್ದು, ಅದನ್ನು ಮಿಸ್
ಮಾಡಿಕೊಂಡಲ್ಲಿ ನಿಮಗೇ ನಷ್ಟವಾಗಲಿದೆ. ಆರೋಗ್ಯದಲ್ಲಿ
ಕೊಂಚ ಸುಧಾರಣೆ. ಮುನ್ನೆಚ್ಚರಿಕೆಯಾಗಿ ಬೆಚ್ಚಗಿನ
ಉಡುಪಿನಲ್ಲಿದ್ದರೆ ಒಳ್ಳೆಯದು. ಸಿಹಿ ಸುದ್ದಿ ಕೇಳಲಿದ್ದೀರಿ

ಕನ್ಯಾ
ಬೇಕು ಬೇಕು ಎಂದಷ್ಟು ಇನ್ನೂ ಬೇಕೆನ್ನಿಸುತ್ತದೆ.
ಆಸೆಗೆ ಕೊನೆ ಎಂಬುದಿಲ್ಲ. ಮನಸ್ಸಿನ ಹಿಡಿತ
ಇದ್ದಲ್ಲಿ ನಾಳಿನ ಬದುಕು ಸುಂದರವಾಗಿ
ಇರಲಿದೆ. ಉದ್ಯೋಗದಲ್ಲಿ ಪ್ರಗತಿ, ನಿಮ್ಮ ಕೆಲಸ ಮೆಚ್ಚಿ
ಮೇಲಧಿಕಾರಿಗಳಿಂದ ಪ್ರಶಂಸೆಗೆ ಒಳಗಾಗಲಿದ್ದೀರಿ.
ಅನಿರೀಕ್ಷಿತವಾಗಿ ಹಳೆ ಸ್ನೇಹಿತರ ಭೇಟಿ ಸಾಧ್ಯತೆ

ತುಲಾ
ಕೊರಗಿದರೂ, ಸೊರಗಿದರೂ ನಷ್ಟವಾಗುವುದು
ನಿಮಗೆ ಹಾಗೂ ನಿಮ್ಮ ನಂಬಿದವರಿಗೆ
ಎನ್ನುವುದು ನೆನಪಿರಲಿ. ಹಿಂದಿನದನ್ನು ಮರೆತು
ಇಂದು ಹಾಗೂ ನಾಳೆಗಾಗಿ ಸಂತೋಷದಿಂದ ಬದುಕು
ಸವೆಸಬೇಕು. ಮನಸ್ಸಿನಲ್ಲಿ ಈ ವಾರ ಕಿರಿಕಿರಿ ಹೆಚ್ಚಲಿದೆ.
ವಾರಾಂತ್ಯದಲ್ಲಿ ಎಲ್ಲವೂ ಸರಿದೂಗಲಿದೆ.

ವೃಶ್ಚಿಕ
ಕುಟುಂಬ ಸಮಸ್ಯರೊಂದಿಗೆ ದೂರ ಪ್ರವಾಸ
ಸಾಧ್ಯತೆ. ಸಂತೋಷದಿಂದ ಕಾಲ ಕಳೆಯುವಿರಿ.
ಪ್ರಯಾಣದ ಆಯಾಸದಿಂದ ಹಾಗೂ
ವಾತಾವರಣದಲ್ಲಿನ ಬದಲಾವಣೆಯಿಂದ ಆರೋಗ್ಯದಲ್ಲಿ
ತೊಂದರೆ ಉಂಟಾಗಲಿದೆ. ಹೊಸ ಸ್ನೇಹಿತರ ಪರಿಚಯ.
ಆರ್ಥಿಕವಾಗಿ ಲಾಭ ಕಾಣಲಿದ್ದೀರಿ. ಮಕ್ಕಳಲ್ಲಿ ಪ್ರಗತಿ.

ಧನಸ್ಸು
ಮಳೆಗಾಲವಾದ್ದರಿಂದ ಈ ಮಳೆಯು ನಿಮ್ಮ
ಆರೋಗ್ಯದಲ್ಲಿ ಭೂತನಂತೆ ಕಾಣಲಿದೆ. ಕೊಂಚ
ಎಚ್ಚರಿಕೆಯಿಂದಿರುವುದು ಸೂಕ್ತ. ಬೆಚ್ಚಗಿನ
ಉಡುಪು ತೊಟ್ಟು ನಿಮ್ಮನ್ನು ನೀವು ಕಾಯ್ದುಕೊಳ್ಳಿ.
ವಾರಾಂತ್ಯದಲ್ಲಿ ಮಕ್ಕಳಿಂದ ಸಿಹಿ ಸುದ್ದಿ ಕೇಳಲಿದ್ದೀರಿ. 

ಮಕರ
ನಿಮ್ಮ ಪ್ರಗತಿಗಾಗಿ ಹಿರಿಯರು ಏನಾದರೂ
ಹೇಳುತ್ತಿದ್ದಾರೆ ಎಂದರೆ ಅದನ್ನು ತಾಳ್ಮೆಯಿಂದ
ಕೇಳುವ ಮನೋಭಾವ ಬೆಳೆಸಿಕೊಳ್ಳಿ.
ಇಲ್ಲವಾದಲ್ಲಿ ನಷ್ಟ ನಿಮಗೇ ಆಗುತ್ತದೆ. ಈ ವಾರ
ಸ್ನೇಹಿತರೊಂದಿಗಿನ ಹಣಕಾಸಿನ ವ್ಯವಹಾರ ಬೇಡ.

ಕುಂಭ
ಮನಸ್ಸಿನ ಕಿರಿಕಿರಿ, ಗೊಂದಲಗಳಿಂದ
ಹೇರಳವಾಗಿ ಸಿಟ್ಟು, ಅಳು ಬರುತ್ತಿದ್ದರೆ ಅದನ್ನು
ಹತ್ತಿಕ್ಕುವ ಪ್ರಯತ್ನ ಮಾಡಬೇಡಿ. ಮನಸ್ಸಿನ
ಭಾವನೆಯನ್ನು ಹೊರಹಾಕಿ ಹಗುರವಾಗಿಸಿ. ಇದರಿಂದ
ಜೀವನದಲ್ಲಿ ಸಂತೋಷ ಕೊಡುತ್ತದೆ. ಆದಷ್ಟು ಧ್ಯಾನ,
ಪ್ರಾಣಾಯಾಮ, ಯೋಗವನ್ನು ಮಾಡಿ.

ಮೀನ
ಹೊಸ ಕೆಲಸಗಳಿಗೆ ಮುಂದಾಗುವ ಮುನ್ನ
ಕುಟುಂಬದ ಹಾಗೂ ಹಿರಿಯರ ಅಭಿಪ್ರಾಯ
ಪಡೆದು ನಿರ್ಧರಿಸಿ. ವಾರಾಂತ್ಯದಲ್ಲಿ ಕೈಗೂಂಡ
ಹೊಸ ಕೆಲಸಕ್ಕೆ ಯಶಸ್ಸು ಸಿಗಲಿದೆ. ಮನೆಯಲ್ಲಿ ಶುಭ
ಕಾರ್ಯಕ್ರಮಗಳು ಜರುಗಲಿದ್ದು, ಸಂತಸ ನೆಲೆಸಲಿದೆ.