Asianet Suvarna News Asianet Suvarna News

ಈ ವಾರ ಒಂದು ರಾಶಿಗೆ ಭಾರೀ ಲಾಭದಾಯಕ : ಉಳಿದ ರಾಶಿ?

ವಾರದ ಮೊದಲ ದಿನದಿಂದ ಹಿಡಿದು, ವಾರದ ಕಡೇವರೆಗೂ ಸಂತೋಷದಾಯಿಕವಾಗಿರಲೆಂದು ಎಲ್ಲರೂ ಬಯಸುತ್ತಾರೆ. ಆದರೆ, ಹೇಗೋ ಏನೋ? ಯಾವುದಕ್ಕೂ ಈ ವಾರ ನಿಮ್ಮ ಭವಿಷ್ಯ ಹೇಗಿದೆ ಎಂದು ನೋಡಿಕೊಂಡು ಬಿಡಿ. ಅಕಸ್ಮಾತ್ ಚೆನ್ನಾಗಿಲ್ಲವೆಂದರೆ ಚಿಂತಿಸಬೇಡಿ, ಚೆಂದವಾಗಿಸಲು ಏನಾದರ್ರೂ ಕ್ರಮ ಕೈಗೊಳ್ಳಿ.

Weekly Horoscope 22 September 2019
Author
Bengaluru, First Published Sep 22, 2019, 7:16 AM IST

ಇನ್ನೇನು ಒಂದು ವಾರ ಕಳೆದರ ಸೆಪ್ಟೆಂಬರ್ ಸಹ ಮುಗಿಯುತ್ತದೆ. ವಾರದ ಅಂತ್ಯದಲ್ಲಿ ನವರಾತ್ರಿ ಆರಂಭವಾಗುವುದಲ್ಲದೇ, ಮಕ್ಕಳಿಗೂ ರಜೆಯೂ ಬರುತ್ತದೆ. ಯಾವ ಊರಿಗೆ ಹೋಗಲು ಟ್ರಿಪ್ ಹಾಕಿದ್ದೀರಿ? ಹೇಗಿದೆ ವಾರದ ಭವಿಷ್ಯ? ಓದಿಕೊಳ್ಳಿ ಒಮ್ಮೆ. ಪ್ಲ್ಯಾನ್ ಮಾಡಿ ನಿಮ್ಮ ದಿನವನ್ನು...

ಮೇಷ:  ಹುಡುಕಿದರೆ ಬಹಳಷ್ಟು ವಿಷಯ ಸಿಗುತ್ತದೆ. ಇಲ್ಲಿ ಶ್ರಮ ಪಡಬೇಕಿರುವುದು ಹುಡುಕು ವುದರಲ್ಲಿ ಅಷ್ಟೇ. ಅದಕ್ಕೆ ವಿಚಾರ ವಿಷಯಗಳ ಬಗ್ಗೆ ಆಸಕ್ತಿ ಇರಬೇಕು. ಸುಮ್ಮಣೇ ಹುಡುಕುತ್ತಾ ಕುಳಿತರೆ ಪ್ರಯೋಜನ ಇರದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.ಕೆಲಸದೊತ್ತಡದಿಂದ ಈ ವಾರ ಮನಸ್ಸಿಗೆ ಕಿರಿಕಿರಿ ಹೆಚ್ಚಿರುತ್ತೆ

ವೃಷಭ: ಭಯ ಎನ್ನುವುದು ವಿಷದ ಸರ್ಪದಂತೆ. ಒಮ್ಮೆ ಮನಸ್ಸಿಗೆ ಹೊಕ್ಕಿದರೆ ಅದು ನಮ್ಮಲ್ಲಿನ ಆತ್ಮ ವಿಶ್ವಾಸವನ್ನು, ಧೈರ್ಯವನ್ನು ಕುಗ್ಗಿಸುತ್ತೆ. ಸಕಾರಾತ್ಮಕ ಚಿಂತನೆಗಳು, ವಿಚಾರಗಳು, ಪುಸ್ತಕ ಓದುವು ದರಿಂದ ಆತ್ಮಬಲವು ನಮ್ಮಲ್ಲಿ ಮೂಡುತ್ತೆ. ಈ ನಿಟ್ಟಿನಲ್ಲಿ ನೀವು ಪ್ರಯತ್ನಿಸಿದರೆ ಅಂದುಕೊಂಡ ಕೆಲಸವಾಗುತ್ತೆ 

ಕೈ ತುಂಬಾ ದುಡ್ಡು ಇರಬೇಕೆಂದರೆ ಹೀಗ್ ಮಾಡಿ ನೋಡಿ

ಮಿಥುನ: ಎಷ್ಟೋ ದಿನ ಕೈಬಿಟ್ಟ ಕೆಲಸವನ್ನು ಮತ್ತೆ ಕೈಗೆತ್ತಿಕೊಳ್ಳಲು ಇದು ಸರಿಯಾದ ಸಮಯ. ಒಮ್ಮೆ ಗಟ್ಟಿ ಮನಸ್ಸು ಮಾಡಿ ಹೊಸ ರೂಪದಲ್ಲಿ ಆ ಕೆಲಸದಲ್ಲಿ ಮುನ್ನಡೆಯಿರಿ. ತೀರಾ ತಳಮಳ ಎನಿಸಿದರೆ ನಿಮ್ಮ ಹಿರಿಯರಿಂದ ಸೂಕ್ತ ಮಾರ್ಗದರ್ಶನ ಪಡೆಯಿರಿ. ಉದ್ಯೋಗದಲ್ಲಿ ಲಾಭ ಹೆಚ್ಚಲಿದೆ. ನೆಮ್ಮದಿ ನೆಲೆಸಲಿದೆ.

ಕಟಕ: ತಂತ್ರಜ್ಞಾನಕ್ಕೆ ಹೆಚ್ಚು ಅಡಿಕ್ಟ್ ಆದಂತಿದೆ. ಇದರಿಂದ ಕೆಲ ಸಮಸ್ಯೆಗಳು ನಿಮ್ಮ ಬೆನ್ನೇರಲಿದೆ. ಅದು ಮೊಬೈಲ್, ಕಂಪ್ಯೂಟರ್ ಕೆಲಸವೇ ಇರಬಹುದು. ಸ್ವಲ್ಪ ಆರೋಗ್ಯದ ಕಡೆ ಗಮನ ಇರಲಿ ನೆಗ್ಲೆಕ್ಟ್ ಬೇಡ. ಕಾಡುತ್ತಿದ್ದ ಎಷ್ಟೋ ಪ್ರಶ್ನೆಗಳಿಗೆ ಈ ವಾರ ಉತ್ತರ ಸಿಗಲಿದ್ದು, ನಿರಾಳರಾಗುವಿರಿ. 

ಸಿಂಹ: ಮೂರನೆಯವರು ಏನೋ ಹೇಳುತ್ತಾರಂತೆ ಮನಸ್ಸಿಗೆ ತಂದುಕೊಳ್ಳದೆ, ಅದನ್ನು ಧೈರ್ಯ ವಾಗಿ ಎದುರಿಸುವ ಮಾರ್ಗವನ್ನು ಸ್ವತಃ ನೀವೇ ಕಂಡುಕೊಳ್ಳಬೇಕು. ಇದರಿಂದ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಲಿದ್ದು, ಮುಂದೇ ಏನೇ ಸಮಸ್ಯೆ ಬಂದರೂ ಅದನ್ನು ಸಮರ್ಥವಾಗಿ ಎದುರಿಸಲು ಪಾಠವಾಗಲಿದೆ.

ಕನ್ಯಾ: ಮಾಡಿದ್ದುಣ್ಣೋ ಮಹರಾಯ ಎನ್ನುವಂತೆ ಮಾಡಿದ ತಪ್ಪಿಗೆ ಪಶ್ಚತ್ತಾಪ ಅನುಭವಿಸುವ ಕಾಲ ದೂರವಿಲ್ಲ. ಆದ ತಪ್ಪನ್ನು ಸಮರ್ಥಿಸಿಕೊಳ್ಳದೆ, ಅದರಿಂದ ತಿದ್ದಿ ನಡೆದರೆ ಉತ್ತಮ. ಒತ್ತಡದ ಜೀವನದಿಂದ ಹೊರಬರಲು ಮೊದಲು ಒಂದಷ್ಟು ಸಮಯ ಮನೆಯ ವರಿಗಾಗಿ ಮೀಸಲಿಡಿ. ಮನಸ್ಸಿಗೆ ಹಾಯ್ ಎನಿಸುತ್ತೆ. 

ತುಲಾ: ಸದಾ ಒಂದಿಲ್ಲೊಂದು ಕಾರ್ಯ ಚಟುವಟಿಕೆ ಗಳಲ್ಲಿ ತೊಡಗಿಕೊಂಡಲ್ಲಿ ನಿಮ್ಮಲ್ಲಾಗುವ  ಬದಲಾವಣೆಯಿಂದಾಗಿ ಬಾಕಿ ಉಳಿದ ಕೆಲಸಗಳು ಶೀಘ್ರದಲ್ಲಿ ಮುಗಿದು ಹೋಗಲಿದೆ. ಹೊಸ ಕೆಲಸಗಳಿಗೆ ಮನೆಯವರ ನೆರವು ಸಿಗಲಿದೆ. ಮಹಿಳೆಯರು ಕ್ರಿಯಾಶೀಲ ಚಟುವಟಿಗಳಲ್ಲಿ ತೊಡಗಲಿದ್ದಾರೆ.

ದೇವರನ್ನು ಒಲಿಸಿಕೊಳ್ಳುವ ಮಾರ್ಗ ಇಲ್ಲಿದೆ

ವೃಶ್ಚಿಕ: ನಿಮ್ಮ ಕಟು ಮಾತುಗಳು ಇನ್ನೊಬ್ಬರನ್ನು ನೋವು ಮಾಡದಿರಲಿ. ಒಬ್ಬರಿಗೆ ಒಳ್ಳೆಯದು ಮಾಡಲು ಆಗುವುದಿಲ್ಲವೆಂದಲ್ಲಿ ಸುಮ್ಮನಿರು ವುದು ಲೇಸು. ಮಾಡುವ ಕೆಲಸದಲ್ಲಿ ಶ್ರದ್ಧೆ, ಭಕ್ತಿ ನಿಮ್ಮದಾಗಿರಲಿ. ಉದ್ಯೋಗ ಅರಸುತ್ತಿರುವ
ಮಹಿಳೆಯರಿಗೆ ಈ ವಾರ ಶುಭ ಸುದ್ದಿ ಸಿಗಲಿದೆ. 

ಧನಸ್ಸು: ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆಯ ನಡೆ ಅಗತ್ಯ. ಹಣಕ್ಕಾಗಿ ಸ್ನೇಹ ಬಯಸುವವರೂ ನಿಮಗೆ ಸಿಗಲಿದ್ದಾರೆ. ಮತ್ತೆ ಹಳೇ ಕೆಲಸಕ್ಕೆ ಮರಳುವ ಸಾಧ್ಯತೆ. ಕಳೆದ ವಾರ ತೆಗೆದುಕೊಂಡ ರೆಸ್ಟ್‌ನಿಂದಾಗಿ ಈ ವಾರ ಹೊಸ ಚೈತನ್ಯದಿಂದ ಕೆಲಸ ಮಾಡುವಿರಿ.

ಮಕರ: ಮನಸ್ಸಿನಲ್ಲಿ ಉಂಟಾದ ಕಿರಿಕಿರಿಯಿಂದಾಗಿ ಏಕಾಂತ ಬಯಸುವಿರಿ. ಈ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಿ. ಕ್ರಮೇಣ ಆ ಗೊಂದಲಗಳಿಗೆ ಉತ್ತರ ಸಿಗುವ ಸಾಧ್ಯತೆ ಹೆಚ್ಚಿದೆ. ಪುಸ್ತಕ ಓದಿದಷ್ಟು ನಿರಾಳರಾಗುವಿರಿ. ದೂರ ಪ್ರಯಾಣ ಸಾಧ್ಯತೆ. 

ದಿನ ಭವಿಷ್ಯ ನೋಡಲು ಇಲ್ಲಿ ಕ್ಲಿಕ್ ಮಾಡಿ

ಕುಂಭ: ನೆರೆ ಮನೆಯವರೊಂದಿಗೆ ವಿನಾಕಾರಣ ಮನಸ್ಥಾಪ ಬೇಡ. ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ದುರ್ಬಲರಿಗೆ ನೆರವಾಗಲಿದ್ದೀರಿ.ನಿಮ್ಮ ಆದಾಯಕ್ಕೆ ತಕ್ಕಂತೆ ಖರ್ಚು ಇರಲಿದೆ. ಈ ವಾರ ಜವಾಬ್ದಾರಿ ಹೆಚ್ಚಾಗಲಿದ್ದು, ಅದಕ್ಕೆ ಸೂಕ್ತ ತಯಾರಿ ನಡೆಸಿ ಮುನ್ನಡೆಯುವುದು ಒಳಿತು. ಬಂಧುಗಳ ಆಗಮನ. 

ಮೀನ: ಕಷ್ಟ ನಷ್ಟಗಳು ಎಲ್ಲರಿಗೂ ಇದ್ದದ್ದೆ. ಅದರಿಂದ ಕೊರಗುವುದು ಬೇಡ. ಆತ್ಮೀಯರೊಂದಿಗೆ ಮಾತನಾಡುವಾಗ ಎಚ್ಚರಿಕೆ ಇರಲಿ. ಹೆಚ್ಚು ಇಷ್ಟ ಪಡುವ ವಸ್ತು ಈ ವಾರ ನಿಮ್ಮ ಕೈಯಿಂದ ಜಾರಿ ಹೋಗಲಿದೆ. ಗಣ್ಯ ವ್ಯಕ್ತಿಗಳ ಭೇಟಿ ಸಾಧ್ಯತೆ.

ವಾಸ್ತು ಸುದ್ದಿಗಳು ಇಲ್ಲಿವೆ ನೋಡಿ

Weekly Horoscope 22 September 2019

 

Follow Us:
Download App:
  • android
  • ios