ವಾರಾಂತ್ಯದಲ್ಲಿ ಈ ರಾಶಿಗೆ ಭಾರೀ ಸಿಹಿ ಸುದ್ದಿ ಕಾದಿದೆ

ಮೇಷ
ಪ್ರಯತ್ನದಲ್ಲಿ ನಿಜವಾದ ಪ್ರಯತ್ನ ಇದ್ದರೆ ಫಲ
ಸಿಗುತ್ತದೆ. ಮೇಲ್ನೋಟದ ಪ್ರಯತ್ನಗಳು
ಎಂದಿಗೂ ದೀರ್ಘ ಯಶಸ್ಸು ಕೊಡುವುದಿಲ್ಲ.
ಶ್ರದ್ಧೆ, ಏಕಾಗ್ರತೆ, ಭಕ್ತಿಯಿಂದ ನೀವು ಗುರಿಯ ಕಡೆ
ಶ್ರಮಿಸಿ, ಫಲ ಸಿಗುತ್ತದೆ. ವಾರಾಂತ್ಯದಲ್ಲಿ ಸಿಹಿ ಸುದ್ದಿ.
ಮನೆಗೆ ಬಂಧುಗಳ ಆಗಮನ ಸಾಧ್ಯತೆ.

ವೃಷಭ
ಮನಸ್ಸಿನಲ್ಲಿನ ದುಗುಡವನ್ನು ನಿಮ್ಮ ಆಪ್ತರ ಬಳಿ
ಹಂಚುಕೊಂಡಾದರೂ ಪರಿಹಾರ ಕಂಡುಕೊಳ್ಳಿ.
ಒಬ್ಬರೇ ಮನ್ನಸ್ಸಿನಲ್ಲಿಟ್ಟುಕೊಂಡು ಕೊರಗುವು
ದರಿಂದ ಪ್ರಯೋಜನವಿಲ್ಲ. ಕಷ್ಟಗಳನ್ನು ಧೈರ್ಯದಿಂದ
ಎದುರಿಸಿದರೆ ನೀರಿನಂತೆ ಹರಿದುಕೊಂಡು ಹೋಗುತ್ತದೆ.
ಅದಕ್ಕೆ ಆತ್ಮವಿಶ್ವಾಸ ಒಂದೇ ನಿಮ್ಮ ಮಂತ್ರವಾಗಿರಲಿ. 

ಮಿಥುನ
ಬೇರೆಯವರ ಕಷ್ಟಗಳನ್ನು ನಿವಾರಿಸಲು ಸದಾ
ಮುಂದಿರುವ ನಿಮ್ಮನ್ನು ಎಲ್ಲರ ಇನ್ನಷ್ಟು
ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ಈಗತಾನೆ
ಮನೆಯಲ್ಲಿ ಶುಭ ಸಮಾರಂಭ ನೆರವೇರಿದ್ದು, ಈ ವಾರ
ಸ್ವಲ್ಪ ವಿಶ್ರಾಂತಿ ಪಡೆಯುವುದು ಒಳ್ಳೆಯದು. ಬಂಧುಗಳ
ಆಗಮನದಿಂದ ಮನೆಯಲ್ಲಿ ಸಂತೋಷ ಮನೆಮಾಡಲಿದೆ. 

ಕಟಕ
ವಾರ ಪೂರ್ತಿ ಒತ್ತಡದ ಕೆಲಸ. ಹಣಕಾಸಿನ
ವಿಚಾರದಲ್ಲಿ ತಾಳ್ಮೆ ಹಾಗೂ ಜಾಣ್ಮೆಯಿಂದ
ವರ್ತಿಸಿ. ಕೆಲಸದಲ್ಲಿ ಪ್ರಗತಿ ಕಾಣಲಿದೆ.
ಗೃಹಿಣಿಯರಿಗೆ ಈ ವಾರ ಲಾಭ. ಹೊಸ ವಾಹನ ಖರೀದಿ
ಸಾಧ್ಯತೆ. ಮಕ್ಕಳ ವಿದ್ಯಾಭ್ಯಾ ಸದಲ್ಲಿ ಒಳ್ಳೆಯ ತೀರ್ಮಾನ
ಆಗಲಿದೆ. ವಾರಂತ್ಯದಲ್ಲಿ ಸಿಹಿ ಸುದ್ದಿ

ಸಿಂಹ
ಆರೋಗ್ಯದಲ್ಲಿ ಚೇತರಿಕೆ ಕಾಣಲಿದ್ದು, ಬಿಡು
ವಿಲ್ಲದ ಪ್ರವಾಸದಿಂದ ಒತ್ತಡಕ್ಕೆ ಒಳಗಾಗ
ಲಿದ್ದೀರಿ. ಆದಷ್ಟು ನಿದ್ರೆ ಚೆನ್ನಾಗಿ ಮಾಡಿ.
ಯಾವುದೇ ವಿಚಾರಗಳಿಗೆ ಅತಿಯಾಗಿ ತಲೆಕೆಡಿಸಿಕೊಳ್ಳದಿರಿ.
ಒಳ್ಳೆ ವಿಚಾರಗಳನ್ನು ತೆಗೆದುಕೊಳ್ಳಿ. ಆದಷ್ಟು ಧ್ಯಾನ ಮಾಡಿ
ಶಾಂತತೆ ಕಂಡುಕೊಳ್ಳಿ. ಮಹಿಳೆಯರಿಗೆ ಶುಭ ವಾರ.

ಕನ್ಯಾ
ಆದಷ್ಟು ಇನ್ನೊಬ್ಬರ ಕೆಡುಕಿನ ಬಗೆಗಿಂತ ಒಳಿತಿನ
ಬಗ್ಗೆ ಮಾತನಾಡಿ. ಇದರಿಂದ ಇನ್ನೊಬ್ಬರಿಗೆ
ನಿಮ್ಮ ಮೇಲೆ ಒಳ್ಳೆಯ ಅಭಿಪ್ರಾಯ, ನಿಮ್ಮಲ್ಲಿ
ಸಕಾರಾತ್ಮಕ ಆಲೋಚನೆಗಳು ಬೆಳೆಯುತ್ತವೆ. ಪ್ರತಿಭೆ
ಅನಾವರಣಕ್ಕೆ ಸೂಕ್ತ ಸಮಯಬೇಕೆಂದು ನಿರೀಕ್ಷಿಸುವುದ
ಕ್ಕಿಂತ ಅವಕಾಶವನ್ನು ನೀವೆ ಕಂಡುಕೊಳ್ಳುವುದು ಸೂಕ್ತ.

ತುಲಾ
ನೀನು ನೀನು ಎಂದು ಇನ್ನೊಬ್ಬರ ಹತ್ತಿರ
ಕೈಚಾಚಿಕೊಂಡು ಹೋಗುವುದಕ್ಕಿಂತ ನನ್ನಲ್ಲೂ
ಈ ಕೆಲಸ ಆಗುತ್ತದೆ ಎಂಬ ಸದ್ಭಾವನೆ
ನಿಮ್ಮಲ್ಲಿರಲಿ. ಆಗ ನಿಮ್ಮಲ್ಲಿ ಆತ್ಮವಿಶ್ವಾಸ ಬೆಳೆಯುತ್ತದೆ.
ಇದರಿಂದ ನೀವು ಯಾವುದೇ ಕೆಲಸದಲ್ಲೂ ಯಶ ಕಾಣಲು
ಸಾಧ್ಯ. ಈ ವಾರ ಹೊಸ ಕಟ್ಟಡ ಖರೀದಿ ಸಾಧ್ಯತೆ.

ವೃಶ್ಚಿಕ
ಒಳ್ಳೆಯತನದಲ್ಲಿ ಸಾಗುವ ನೀವು ಇತರರಿಗೆ
ಒಳ್ಳೆಯದನ್ನು ಬಯುಸುತ್ತೀರಿ. ನಿಮ್ಮ ಈ
ಕೆಲಸಗಳಿಂದ ಇನ್ನಷ್ಟು ಜನರಿಗೆ ಹತ್ತಿರವಾಗ
ಲಿದ್ದೀರಿ. ಹಳೇ ಸ್ನೇಹಿತರ ಭೇಟಿ ಸಾಧ್ಯತೆ. ಹೊಸ ವ್ಯಕ್ತಿಗಳ
ಪರಿಚಯವಾಗಲಿದೆ. ಕುಟುಂಬದಲ್ಲಿ ಶುಭ ಸಮಾರಂಭ
ನೆರವೇರುವ ಸಾಧ್ಯತೆ. ಹಣ ಕಾಸಿನ ವಿಚಾರದಲ್ಲಿ ಎಚ್ಚರ.

ಧನಸ್ಸು
ಮನೆಯಲ್ಲಿ ಬಂಧುಗಳ ಆಗಮನದಿಂದ
ಸಂತೋಷ ನೆಲಸಲಿದೆ. ಕಳೆದ ವಾರದ ಪ್ರವಾಸ
ದಿಂದ ಆರೋಗ್ಯದಲ್ಲಿ ಸ್ವಲ್ಪ ಬದಲಾವಣೆ
ಸಾಧ್ಯತೆ. ಕುಟುಂಬ ವರ್ಗದ ಕಷ್ಟಕ್ಕೆ ಸಲಹೆ ಸೂಚನೆ
ನಿಮ್ಮಿಂದ ಸಾಧ್ಯತೆ. ಪುಟ್ಟ ಮಕ್ಕಳ ಬಗ್ಗೆ ಜಾಗ್ರತೆ ಇರಲಿ. 

ಮಕರ
ವೃತ್ತಿ ಬದುಕಿನಲ್ಲಿ ತೃಪ್ತಿ ನಿಮ್ಮಲ್ಲಿದ್ದು, ಮುಂದೆ
ಒಳ್ಳೆಯ ಸ್ಥಾನಕ್ಕೇರುವ ಸಾಧ್ಯತೆ. ಪಾಲುದಾರಿಕೆ
ವ್ಯವಹಾರದಲ್ಲಿ ಗೊಂದಲ ಮೂಡಲಿದ್ದು,
ವಾರಾಂತ್ಯದಲ್ಲಿ ಎಲ್ಲವೂ ಸರಿಯಾಗಲಿದೆ. ಮಹಿಳೆಯರು
ಸಣ್ಣ ಕೈ ಕೆಲಸಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಲಿದ್ದೀರಿ

ಕುಂಭ
ಇಷ್ಟು ದಿನದ ನಿಮ್ಮ ಶ್ರಮದ ಕೆಲಸಕ್ಕೆ ಪೆಟ್ಟು
ಬೀಳಲಿದೆ. ನಿರೀಕ್ಷೆಗಿಂತ ಕಡಿಮೆ ಫಲ
ದೊರೆಯಲಿದೆ. ಹಾಗಾಯಿತೆಂದು ಮನಸ್ಸಿನಲ್ಲಿ
ಕೊರಗುವುದು, ಬೇಸರದಿಂದಿರುವುದು ಬೇಡ. ನಿಮ್ಮ
ಪಾಲಿಗೆ ಬಂದ ಕೆಲವನ್ನು ಹೆಚ್ಚು ಶ್ರದ್ಧೆಯಿಂದ ಮಾಡಿ.
ವಾರಾಂತ್ಯದಲ್ಲಿ ಲವಲವಿಕೆಯಿಂದ ಇರುವಿರಿ.

ಮೀನ
ಕುಟುಂಬಕ್ಕೆ ಹೊಸ ಸದಸ್ಯರ ಸೇರ್ಪಡೆ.
ಮನೆಯಲ್ಲಿ ಸಂತೋಷದ ಹಬ್ಬದ ವಾತಾವರಣ
ಇರಲಿದೆ. ಹೊಸ ಕೆಲಸ ಕಾರ್ಯಗಳು ಈ ವಾರ
ನಿಮ್ಮಿಂದ ಆರಂಭವಾಗಲಿದೆ. ಕುಟುಂಬ, ಸ್ನೇಹಿತರಿಂದ
ನಿಮ್ಮ ಕೆಲಸಕ್ಕೆ ಉತ್ತಮ ಬೆಂಬಲ ಸಿಗಲಿದೆ.