ಕಷ್ಟಗಳು ಕರಗಿ ಸುಖ ನಿಮ್ಮ ಈ ರಾಶಿಗೆ ಕಾಲಿಟ್ಟಿದೆ : ವಾರ ಭವಿಷ್ಯ 

ಮೇಷ
ವರ್ತಕರಿಗೆ ಹಣದ ಹೊಸ ಮೂಲ
ಹುಟ್ಟಬಹುದು. ಕುಟುಂಬದಲ್ಲೂ ಸಮರಸ,
ನೆಮ್ಮದಿ. ಸಣ್ಣಪುಟ್ಟ ಕಲಹಗಳಿಗೆ ಹೆಚ್ಚು
ಗಮನಹರಿಸದಿರಿ. ಹೊಸ ಕೆಲಸಕ್ಕೆ ಕೈಹಾಕಲು ಇದು
ಸಕಾಲ. ಸಾಮಾಜಿಕವಾಗಿ ಉತ್ತಮ ಸ್ಥಾನಮಾನ ಸಿಗುತ್ತದೆ.
ಗೆಳೆಯರಿಂದ ಸಲಹೆ, ಸಹಕಾರ ಸಿಗುತ್ತೆ. 

ವೃಷಭ
ಈ ವಾರ ಮಿಶ್ರ ಫಲವಿದೆ. ಉದ್ಯೋಗದಲ್ಲಿ
ಸ್ಥಿರತೆ. ಪ್ರೇಮದ ವಿಷಯದಲ್ಲಿ ಗೊಂದಲ
ಉಂಟಾಗಬಹುದು. ಗೆಳೆಯರ ಏಳಿಗೆ ಕಂಡು
ಹೊಟ್ಟೆಕಿಚ್ಚು ಪಟ್ಟರೆ ಪರಿಣಾಮ ನಿಮ್ಮ ಮೇಲೇ ಆಗುತ್ತದೆ.
ಮುನ್ನುಗ್ಗುವ, ಹೊಸ ಸಾಹಸಗಳಿಗೆ ಎದುರು ನೋಡುವ
ಪ್ರವೃತ್ತಿ ಹೆಚ್ಚಲಿ, ಒಳ್ಳೆಯದಾಗುತ್ತೆ. 

ಮಿಥುನ
ಸೋಮಾರಿತನ ಕಾಡಬಹುದು. ಎಂದಿನ
ಲವಲವಿಕೆಗೆ ಬ್ರೇಕ್ ಬೀಳಬಹುದು. ಸ್ನೇಹಿತರು
ಹಾಗೂ ಬಂಧುಮಿತ್ರರ ನೆರವು ಸಿಗುತ್ತೆ.
ಸಂವಹನ ಕಲೆ ನಿಮಗೆ ಸಿಕ್ಕ ವರ. ಈ ವಾರದ ಅದರ
ಸದುಪಯೋಗವಾಗಬಹುದು. ವಾರಾಂತ್ಯಕ್ಕೆ ಹಿಂದಿನ
ಫಾರ್ಮ್‌ಗೆ ಮರಳುವಿರಿ. 

ಕಟಕ
ವೈಯುಕ್ತಿಕವಾಗಿ ಹಾಗೂ ವೃತ್ತಿ ಬದುಕಿನಲ್ಲಿ
ಖುಷಿ ಇದೆ. ಈ ವಾರ ಶುಭ ಫಲಗಳೇ ಹೆಚ್ಚು.
ಆದರೆ ಮುಂದಿನವಾರ ದೆಸೆ ತುಸು
ಬದಲಾಗಬಹುದು. ದುಡುಕುವ, ಆತುರದ ನಿರ್ಧಾರ
ತೆಗೆದುಕೊಳ್ಳುವ ನಿಮ್ಮ ಸ್ವಭಾವವನ್ನು
ನಿಯಂತ್ರಣದಲ್ಲಿಟ್ಟುಕೊಳ್ಳಿ. 

ಸಿಂಹ
ಎಗ್ಸೈಟಿಂಗ್ ಕ್ಷಣಗಳು ನಿಮಗಾಗಿ ಕಾದಿವೆ.
ವೃತ್ತಿ ಬದುಕಿನಲ್ಲಿ ಊಹಿಸದ
ಬೆಳವಣಿಗೆಗಳಾಗಬಹುದು. ನಿಮ್ಮ ಪರಿಶ್ರಮಕ್ಕೆ
ಪ್ರತಿಫಲ ಸಿಗುತ್ತೆ. ಏಕಾಗ್ರತೆಯ ಕೊರತೆಯಾಗಬಹುದು.
ಫೋಕಸ್‌ಅನ್ನು ಇನ್ನಷ್ಟು ತೀವ್ರಗೊಳಿಸಿ.
ವೈಯುಕ್ತಿಕವಾಗಿಯೂ ಗೆಲುವಿದೆ.

ಕನ್ಯಾ
ವಾರದ ಆರಂಭದಲ್ಲೇ
ಧನಲಾಭವಾಗಬಹುದು. ಆತ್ಮವಿಶ್ವಾಸ
ಹೆಚ್ಚಬಹುದು. ಪ್ರೇಮದ ವಿಷಯದಲ್ಲಿ ನೀವು
ಎಷ್ಟೇ ಪ್ರಾಕ್ಟಿಕಲ್ ಆಗಿದ್ದರೂ ಭಾವುಕವಾಗುವ ಸನ್ನಿವೇಶ
ಸೃಷ್ಟಿಯಾಗಬಹುದು. ವಾರಾಂತ್ಯದ ಹೊತ್ತಿಗೆ ಸರ್‌ಪ್ರೈಸ್
ನಿಮಗಾಗಿ ಕಾದಿರುತ್ತದೆ. ಖುಷಿ ಹೆಚ್ಚುತ್ತದೆ. 

ತುಲಾ
ಹತಾಶೆ ಕಾಡಬಹುದು, ಮಾಡಿದ ಕೆಲಸ
ಅಷ್ಟಾಗಿ ಫಲಕೊಡಲಿಕ್ಕಿಲ್ಲ. ಪೊಸೆಸ್ಸಿವ್‌ನೆಸ್
ನಿಂದ ವರ್ತಿಸಬೇಡಿ. ಹೊರಗೆ ಪ್ರಾಕ್ಟಿಕಲ್
ಆಗಿರುವಂತೆ ತೋರಿದರೂ ಒಳಗೆ ಭಾವನಾತ್ಮಕವಾಗಿರುವ
ನಿಮಗೆ ಇದರಿಂದಲೇ ನೋವುಂಟಾಗಬಹುದು.
ಚಾಲೆಂಜಿಂಗ್ ಆಗಿ ತಗೊಂಡು ಮುಂದುವರಿಯಿರಿ.

ವೃಶ್ಚಿಕ
ಈ ಜಗತ್ತೇ ಸರಿಯಿಲ್ಲ. ಜನರೂ ಸರಿಯಿಲ್ಲ
ಅನ್ನುವ ನಿಮ್ಮ ಸ್ವಭಾವವನ್ನು
ಬದಲಾಯಿಸಿಕೊಳ್ಳಿ.ಆಪ್ತರಿಗಾಗಿ ಇಷ್ಟವಿಲ್ಲದ
ಕೆಲಸ ಮಾಡಬೇಕಾಗಿ ಬರಬಹುದು. ಚಾಲೆಂಜಿಂಗ್
ಅನಿಸುವ ಸಾಹಸಕ್ಕೆ ಕೈ ಹಾಕಬೇಕಾದೀತು. ಇದರಲ್ಲಿ
ಗೆಲುವಾಗಿ ನಿಮಗೂ ಸಂತಸವಾಗುತ್ತದೆ.

ಧನಸ್ಸು
ಎಷ್ಟೇ ಶ್ರಮ ಹಾಕಿದರೂ ಸರಿಯಾದ ಪ್ರತಿಫಲ
ಸಿಗುತ್ತಿಲ್ಲ ಅನ್ನುವ ಚಿಂತೆ ಕಾಡುತ್ತೆ. ಇದನ್ನು
ಸೋಲು ಅಂತ ಭಾವಿಸಬೇಡಿ. ಕೌಟುಂಬಿಕ
ಬದುಕಿನಲ್ಲಿ ಸಾಕಷ್ಟು ಖುಷಿ ಸಿಗಲಿದೆ. ನಿಮ್ಮೆಲ್ಲ ಕೆಲಸಕ್ಕೂ
ಸಂಗಾತಿಯ ಸಹಕಾರ ಸಿಗುತ್ತೆ. 

ಮಕರ
ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿಯಿದ್ದರೆ
ರಂಗಪ್ರವೇಶಕ್ಕೆ ಇದು ಸಕಾಲ. ಉದ್ಯೋಗದಲ್ಲಿ
ಪ್ರಗತಿ. ಮಕ್ಕಳಿಂದ ಶುಭಸುದ್ದಿ ಬರಬಹುದು.
ತಾಯಿಯ ರಕ್ಷೆ ಇರುತ್ತೆ. ಸಂಗಾತಿಯ ಜೊತೆಗೆ ಹೆಚ್ಚು
ಸಮಯ ಕಳೆಯುತ್ತೀರಿ. 

ಕುಂಭ
ನೀವು ಬಹಳ ಪ್ರೀತಿ ತೋರಿಸುವವರಿಂದ
ಸಕಾರಾತ್ಮಕ ಪ್ರತಿಕ್ರಿಯೆ ಬರುತ್ತದೆ. ಗೆಳೆಯರು
ನಿಮ್ಮ ಜೊತೆಗಿರುತ್ತಾರೆ. ನಿಮ್ಮ ಮನಸ್ಸಿನೊಳಗಿನ
ಬೇಗುದಿಯನ್ನು ಹೊರಹಾಕಿ ನಿರಾಳರಾಗುತ್ತೀರಿ.
ಆರೋಗ್ಯ ಚೆನ್ನಾಗಿರುತ್ತದೆ. ಕಷ್ಟಗಳೆಲ್ಲ ಕರಗಿಹೋಗಿ ಸುಖ
ಕಾಲಿಟ್ಟಿದೆ. ಅದನ್ನು ಖುಷಿಯಿಂದ ಅನುಭವಿಸಿ. 

ಮೀನ
ಈ ವಾರವಿಡೀ ಮಹತ್ವದ ವಿಷಯವೊಂದಕ್ಕೆ
ಪೂರ್ವಭಾವಿ ಕೆಲಸಗಳಲ್ಲಿ ತೊಡಗುತ್ತೀರಿ.
ಆದರೆ ಗೆಲುವಿನ ಬಗ್ಗೆ ನಿಶ್ಚಿತತೆ ಇಲ್ಲ.
ವಾರಾಂತ್ಯದಲ್ಲಿ ಚಿಂತೆ ಕಳೆದು ಹಗುರಾಗುತ್ತದೆ.
ಗೊಂದಲ ನಿವಾರಣೆಯಾಗಿ ಗೆಲುವು ಮೂಡುತ್ತೆ.