ವಾರ ಭವಿಷ್ಯ : ಒಂದು ರಾಶಿಗೆ ಭರ್ಜರಿ ಲಾಭದ ವಾರ

ಮೇಷ
ವಾರ ಪೂರ್ತಿ ವಿವಿಧ ಕೆಲಸ ಕಾರ್ಯಗಲ್ಲಿ
ತೊಡಗಿಕೊಳ್ಳಲಿದ್ದೀರಿ. ಅಮ್ಮನ ಸಲಹೆಯಂತೆ
ಮುಂದೆ ಸಾಗಿ. ಮಹಿಳೆಯರಿಗೆ ಮನೆಯಲ್ಲಿ
ಸ್ವಲ್ಪ ಕಿರಿಕಿರಿ ಉಂಟಾಗಬಹುದು. ಮತ್ತೊಬ್ಬರು ಮೆಚ್ಚಲಿ
ಎಂದು ಯಾವ ಕೆಲಸವನ್ನೂ ಮಾಡದಿರಿ. ನಿಮ್ಮ ಶಕ್ತಿಯೇ
ನಿಮಗೆ ವರ. ಉತ್ಸಾಹದಿಂದ ಮುಂದೆ ಸಾಗುವಿರಿ.

ವೃಷಭ
ಮತ್ತೊಬ್ಬರ ಬಗ್ಗೆ ಆರೋಪ ಮಾಡುವ ಬದಲಿಗೆ
ನಿಮ್ಮ ದಾರಿಯಲ್ಲಿ ನೀವು ಪ್ರಾಮಾಣಿಕವಾಗಿ
ಸಾಗಿ. ಆರೋಗ್ಯದ ಕಾರಣದಿಂದ ದೂರದ
ಪ್ರವಾಸದಿಂದ ಹಿಂದೆ ಸರಿಯಲಿದ್ದೀರಿ. ಬೀದಿ ಬದಿಯ
ವ್ಯಾಪಾರಿಗಳಿಗೆ ಒಳ್ಳೆಯ ಲಾಭ ದೊರೆಯಲಿದೆ. ಹೊಸಬರ
ಬಗ್ಗೆ ಅತಿಯಾದ ಸಲುಗೆ ಬೇಡ. ನೆಮ್ಮದಿ ಹೆಚ್ಚಾಗಲಿದೆ.

ಮಿಥುನ
ಆಗಿ ಹೋದ ತಪ್ಪಿಗೆ ಕೊರಗುತ್ತಾ ಕೂರುವುದು
ಬೇಡ. ತಂದೆಯ ಸಲಹೆಯಂತೆ ಮುಂದೆ ಸಾಗಿ.
ನಿಮ್ಮ ಸ್ನೇಹಿತರು ನಿಮಗೆ ನೆರವಾಗಲಿದ್ದಾರೆ.
ದೊಡ್ಡ ಮಟ್ಟದ ವ್ಯವಹಾರದಲ್ಲಿ ನೀವೂ ಪಾಲುದಾರ
ರಾಗಲಿದ್ದೀರಿ. ಕಲಾ ಕ್ಷೇತ್ರದಲ್ಲಿ ದುಡಿಯುತ್ತಿರುವವರಿಗೆ
ಇದು ಸಕಾಲ. ಕೃಷಿ ಚಟುವಟಿಕೆಯಲ್ಲಿ ವಾರ ಕಳೆಯುವಿರಿ.

ಕಟಕ
ಹಿರಿಯರೊಂದಿಗೆ ವಿನಾಕಾರಣ ಮುನಿಸಿ
ಕೊಳ್ಳುವುದು ಬೇಡ. ಸಹೋದ್ಯೋಗಿಯ
ಕೆಲಸದ ಹೊರೆ ನಿಮ್ಮ ಮೇಲೆ ಬೀಳಲಿದೆ.
ನಿರ್ಧಿಷ್ಟ ವಿಚಾರದ ಬಗ್ಗೆಯೇ ವಾರ ಪೂರ್ತಿ ಮುಳುಗಲಿ
ದ್ದೀರಿ. ಮದುವೆ ಮತ್ತಿತರ ಶುಭ ಸಮಾರಂಭಗಳಲ್ಲಿ
ತೊಡಗಿಕೊಳ್ಳಲಿದ್ದೀರಿ. ಅತಿ ಆಸೆ ಬೇಡ.

ಸಿಂಹ
ಅಲ್ಪರೊಂದಿಗೆ ವಾದ ಮಾಡುವುದಕ್ಕೆ
ಹೋಗದಿರಿ. ನಿಮ್ಮ ವೃತ್ತಿಯಲ್ಲಿ ಪದೋನ್ನತಿ
ಹೊಂದಲಿದ್ದೀರಿ. ನಿಮ್ಮ ಪ್ರಾಮಾಣಿಕತೆಯನ್ನು
ಪರೀಕ್ಷೆಗೆ ಒಡ್ಡುವ ಸಂದರ್ಭಗಳು ಬರಲಿವೆ. ಮಹಿಳೆಯರ
ಪಾಲಿಗೆ ಇದು ಒಳ್ಳೆಯ ವಾರ. ಅಂದುಕೊಂಡ
ಕಾರ್ಯಗಳು ಕೈಗೂಡಲಿವೆ. ಧನಾಗಮನವಾಗಲಿದೆ.

ಕನ್ಯಾ
ಆರೋಗ್ಯದಲ್ಲಿ ಹೆಚ್ಚು ಚೇತರಿಕೆ ಕಾಣಲಿದ್ದೀರಿ.
ಹೆಚ್ಚು ಅಧ್ಯಯನ, ವೃತ್ತಿಯಲ್ಲಿ ಬದ್ಧತೆ
ತೋರಲಿದ್ದೀರಿ. ಹೊಸದಾಗಿ ಮದುವೆಯಾದ
ದಂಪತಿಗಳಿಗೆ ಕುಟುಂಬದಿಂದ ಸ್ವಲ್ಪ ಕಿರಿಕಿರಿಯಾಗುತ್ತದೆ.
ಹಣಕಾಸಿನ ವಿಚಾರದಲ್ಲಿ ಹೆಚ್ಚು ಹಿಡಿತ ಸಾಧಿಸಿ. ದೂರದ
ಪ್ರಯಾಣವನ್ನು ಮುಂದೂಡುವುದು ಸೂಕ್ತ.

ತುಲಾ
ಮಾಡಿದ್ದುಣ್ಣೋ ಮಹರಾಯ ಎನ್ನುವಂತೆ
ನೀವು ಮಾಡಿದ ತಪ್ಪಿಗೆ ಈ ವಾರದಲ್ಲಿ ಬೆಲೆ
ಕಟ್ಟಬೇಕಾಗಬಹುದು. ಸ್ವಾರ್ಥಿಗಳು,
ಅಸೂಯೆಉಳ್ಳ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳಿ. ನಿಮ್ಮ
ಪ್ರೀತಿ ಪಾತ್ರರಿಗೆ ನಿಮ್ಮಿಂದ ನೋವು ಉಂಟಾಗಲಿದೆ. ತಂದೆ
ತಾಯಿ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿ

ವೃಶ್ಚಿಕ
ಕುಟುಂಬ ಸಮೇತವಾಗಿ ದೂರದ ಪ್ರಯಾಣ
ಮಾಡಲಿದ್ದೀರಿ. ಬಹು ದಿನಗಳ ನಂತರ ದೂರದ
ಬಂಧುಗಳು ಇಂದು ನಿಮ್ಮ ಮನೆಗೆ ಬರಲಿದ್ದಾರೆ.
ಅರ್ಹತೆ ನೋಡಿಕೊಂಡು ಸಹಾಯ ಮಾಡಿ.
ಯಾರೊಂದಿಗೂ ಅತಿಯಾದ ಸಲುಗೆ, ನಂಬಿಕೆ ಬೇಡ.
ನಿಮ್ಮವರೇ ನಿಮಗೆ ತೊಂದರೆ ಕೊಡುವ ಸಾಧ್ಯತೆ ಇದೆ.

ಧನಸ್ಸು
ಊಟ ಹಾಕಿ ತಲೆಗಳನ್ನು ಎಣಿಸುತ್ತಾ
ಕೂರುವುದು ಬೇಡ. ಬಲಗೈಲಿ ಕೊಟ್ಟ ದಾನ
ಎಡಗೈಗೆ ಗೊತ್ತಾಗದಿರಲಿ. ನಿಮಗೆ ಸರಿ ಎನ್ನಿಸಿದ
ದಾರಿಯಲ್ಲಿ ನೀವು ಮುಂದೆ ಸಾಗಿ. ಹಿರಿಯರ ಮಾತಿಗೆ
ಮನ್ನಣೆ ನೀಡಲಿದ್ದೀರಿ. ಭ್ರಷ್ಟಾಚಾರದಲ್ಲಿ ತೊಡಗದಿರಿ

ಮಕರ
ನಿಮ್ಮ ಸಂಸ್ಕಾರವೇ ನಿಮ್ಮ ಗೌರವವನ್ನು
ಹೆಚ್ಚಿಸಲಿದೆ. ಬರುವ ಕಷ್ಟಗಳೆಲ್ಲವೂ ನಿಮ್ಮನ್ನು
ಗಟ್ಟಿ ಮಾಡಿಯೇ ಹೋಗುವುದು. ಹೆಣ್ಣು
ಮಕ್ಕಳಿಗೆ ಈ ವಾರ ಶುಭವಾಗಲಿದೆ. ಹೆಚ್ಚು ವಿಶ್ವಾಸದಿಂದ
ಮಾಡಿದ ಕಾರ್ಯಗಳೂ ನಿಮ್ಮ ನಿರೀಕ್ಷೆ ಹುಸಿ ಮಾಡಲಿವೆ.

ಕುಂಭ
ತಾಳ್ಮೆಯಿಂದ ಮುಂದೆ ಸಾಗಿ. ವಾಹನ ಚಾಲನೆ
ಮಾಡುವಾಗ ಎಚ್ಚರಿಕೆ ಇರಲಿ. ಸರಕಾರಿ
ಕಾರ್ಯಗಳು ಸರಾಗವಾಗಿ ನಡೆಯಲಿವೆ.
ಹಳೆಯ ಸ್ನೇಹಿತರನ್ನು ಭೇಟಿ ಮಾಡಲಿದ್ದೀರಿ. ಮನೆಯಲ್ಲಿ
ಸಂಭ್ರಮದ ವಾತಾವರಣ ಇರಲಿದೆ. ಅಪ್ಪ, ಅಮ್ಮನ
ಮಾತಿನಿಂದ ನಿಮ್ಮಲ್ಲಿ ಧೈರ್ಯ ಹೆಚ್ಚಾಗಲಿ

ಮೀನ
ಕಾರ್ಯವಾಸಿ ಕತ್ತೆ ಕಾಲಾದರೂ ಹಿಡಿಯಬೇಕು
ಎನ್ನುವ ಗಾದೆ ಮಾತಿನ ಅರ್ಥ ನಿಮಗೆ
ಆಗಲಿದೆ. ನಿಮ್ಮತನವನ್ನು ಕಳೆದುಕೊಳ್ಳದೇ
ಮುಂದೆ ಸಾಗಿ. ಸಂಸಾರದಲ್ಲಿ ಸಂತೋಷ ಹೆಚ್ಚಾಗಲಿದೆ.
ಹಳೆಯ ದ್ವೇಷ ಮರೆತು ಹೊಸ ಸ್ನೇಹ ಸಾಧಿಸುವಿರಿ.