Asianet Suvarna News Asianet Suvarna News

ಈ ವಾರ ನಿಮ್ಮ ಜೀವನದಲ್ಲಿನ ಅನಿರೀಕ್ಷಿತ ಘಟನೆಗಳೇನು..?

ಈ ವಾರ ನಿಮ್ಮ ಜೀವನದಲ್ಲಿನ ಅನಿರೀಕ್ಷಿತ ಘಟನೆಗಳೇನು..?

Vara Bhavishya June 24

ಈ ವಾರ ನಿಮ್ಮ ಜೀವನದಲ್ಲಿನ ಅನಿರೀಕ್ಷಿತ ಘಟನೆಗಳೇನು..?

ಮೇಷ
ನಿಮ್ಮಲ್ಲಿನ ನಾಯಕತ್ವ ಗುಣಕ್ಕೆ ಸೂಕ್ತವಾದ ಸ್ಥಾನಮಾನ
ದೊರೆಯಲಿದೆ. ಅಧಿಕಾರಸ್ಥರು ಸಾಧ್ಯವಾದಷ್ಟು
ಜನೋಪಯೋಗಿ ಕಾರ್ಯ ಮಾಡುವುದು ಉತ್ತಮ.
ದಾಂಪತ್ಯದಲ್ಲಿ ಕಲಹಗಳು ನಿವಾರಣೆಯಾಗಲಿವೆ. ಆರೋಗ್ಯದ
ಕಡೆಗೆ ಹೆಚ್ಚು ಗಮನ ನೀಡಿ. ಅನಿರೀಕ್ಷಿತ ಖರ್ಚುಗಳು ಅಧಿಕ.
ಒಂದೇ ವಿಚಾರದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಬೇಡ.

ವೃಷಭ
ಹಣ್ಣು ಹಂಪಲುಗಳನ್ನು ಹೆಚ್ಚಾಗಿ ಸೇವಿಸಿ. ಬ್ಯಾಂಕಿಂಗ್
ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಹೊಸ ಸಾಲಕ್ಕೆ ಮಿತಿ
ಇರಲಿ. ರೈತರಿಗೆ ಹೆಚ್ಚಿನ ಲಾಭವಾಗಲಿದೆ. ವೈದ್ಯಕೀಯ
ಕ್ಷೇತ್ರದಲ್ಲಿರುವವರಿಗೆ ಮಾನಸಿಕ ಕಿರಿಕಿರಿ. ಆಧುನಿಕ
ತಂತ್ರಜ್ಞಾನದಿಂದ ಅಂತರ ಕಾಯ್ದುಕೊಳ್ಳಿ. ಗಮನವನ್ನು ಗುರಿಯ
ಕಡೆಗೆ ಕೇಂದ್ರೀಕರಿಸಿ ಮುಂದೆ ಸಾಗಿ. ಗಣೇಶ ಸ್ತುತಿ ಮಾಡಿ

ಮಿಥುನ
ಹಿರಿಯರ ನೆರವಿನಿಂದ ಮಾನಸಿಕ ನೆಮ್ಮದಿ. ಮದುವೆ
ಮೊದಲಾದ ಶುಭ ಕಾರ್ಯಗಳು ತ್ವರಿತವಾಗಿ
ನೆರವೇರಲಿವೆ. ಆರೋಗ್ಯದಲ್ಲಿ ಚೇತರಿಕೆ. ಸುತ್ತಾಟ
ಹೆಚ್ಚಾಗುವುದು. ಹತ್ತಿರದ ಗೆಳೆಯರೊಂದಿಗೆ ಆತ್ಮೀಯತೆ
ಹೆಚ್ಚಾಗಲಿದೆ. ಖರ್ಚು ಕಡಿಮೆ, ಉಳಿತಾಯ ಹೆಚ್ಚಾಗಲಿದೆ.
ಸಂಪೂರ್ಣವಾಗಿ ತಿಳಿದುಕೊಳ್ಳದೆ ಪ್ರತಿಕ್ರಿಯೆ ನೀಡುವುದು ಬೇಡ

ಕಟಕ
ಮನೆಯಲ್ಲಿ ಧಾರ್ಮಿಕ ಚಟುವಟಿಕೆಗಳು
ನಡೆಯಲಿವೆ. ಲಕ್ಷ್ಮೀ ಕಟಾಕ್ಷ ಹೆಚ್ಚಾಗಿದ್ದು,
ಆದಾಯದಲ್ಲಿ ಗಣನೀಯ ಏರಿಕೆ ಕಂಡುಬರಲಿದೆ.
ಮಕ್ಕಳ ಆರೋಗ್ಯದ ಕಡೆ ನಿಗಾ ವಹಿಸಿ. ತಲೆ ನೋವು, ಬೆನ್ನು
ನೋವುಗಳ ತಾತ್ಕಾಲಿಕ ಶಮನವಾಗಲಿದೆ. ಶುಭ ಲಾಭ.
ತಂದೆ-ತಾಯಿ ಮಾತಿಗೆ ಬದ್ಧರಾಗಿ ನಡೆದುಕೊಳ್ಳಿ. 

ಸಿಂಹ
ಸ್ವಂತ ವಾಹನ ಕೊಳ್ಳುವ ಯೋಗ ಕೂಡಿಬರಲಿದೆ.
ಮನರಂಜನಾ ಕ್ಷೇತ್ರದಲ್ಲಿರುವವರಿಗೆ ಉತ್ತಮ
ಅವಕಾಶಗಳು ಸಿಗಲಿವೆ. ಪ್ರವಾಸಿ ತಾಣಗಳಿಗೆ ಭೇಟಿ
ನೀಡುವಿರಿ. ನಿಮ್ಮ ವೈಯಕ್ತಿಕ ಅಭಿಪ್ರಾಯಕ್ಕೆ ಹೆಚ್ಚು ಮಾನ್ಯತೆ
ದೊರೆಯಲಿದೆ. ನಿಂದಕರ ಮಾತಿಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದು
ಬೇಡ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅತ್ಯಗತ್ಯ

ಕನ್ಯಾ
ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರೆಯಲು ಸ್ವಲ್ಪ
ಅಡೆತಡೆಗಳು ಉಂಟಾಗಲಿವೆ. ಸೇನೆಯಲ್ಲಿರುವವರಿಗೆ
ಕಠಿಣ ದಿನಗಳಿವು. ಹೊಸ ಸ್ನೇಹಗಳು ಹೆಚ್ಚಾಗಲಿವೆ.
ಪೂರ್ಣ ಪ್ರಮಾಣದ ಮನಸ್ಸಿನಿಂದ ಹೊಸ ಕಾರ್ಯಗಳಲ್ಲಿ
ಮುಂದಾಗಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸ
ಲಿದ್ದೀರಿ. ಪತಿಯ ಆರೋಗ್ಯದಲ್ಲಿ ಚೇತರಿಕೆ ಕಾಣಲಿ

ತುಲಾ
ನಿಮ್ಮ ಕೆಲಸಗಳಿಗೆ ಸಾಮಾಜಿಕ ಮಾನ್ಯತೆ
ದೊರೆಯಲಿದೆ. ಮಾಡುವ ಕೆಲಸದಲ್ಲಿ ಏಕಾಗ್ರತೆ
ಸಿದ್ಧಿಯಾಗಲಿದೆ. ಗೆಳೆಯರೊಂದಿಗಿನ
ಭಿನ್ನಾಭಿಪ್ರಾಯದಿಂದ ಮನಸ್ಸಿಗೆ ಕಸಿವಿಸಿ. ಅಂದುಕೊಂಡ
ಕಾರ್ಯವನ್ನು ಮುಂದೂಡುವುದು ಬೇಡ. ವಿದ್ಯಾರ್ಥಿಗಳಿಗೆ
ಒಳ್ಳೆಯ ದಿನಗಳ ಆರಂಭ. ಈ ವಾರ ಹೆಚ್ಚು ತಾಳ್ಮೆಯಿಂದಿರಿ.

ವೃಶ್ಚಿಕ
ಮಕ್ಕಳ ಆರೋಗ್ಯದಲ್ಲಿ ಸುಧಾರಣೆ. ಓದಿನಲ್ಲಿ ಆಸಕ್ತಿ
ಹೆಚ್ಚಾಗಲಿದೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ
ನೀಡಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಕೈ
ತುಂಡಾಗಲಿದೆ. ಹತ್ತಿರದ ಸ್ನೇಹಿತರಿಂದ ನೆರವು. ಉಸಿರಾಟದ
ಸಮಸ್ಯೆಗೆ ಪರಿಹಾರ ದೊರೆಯಲಿದೆ. ದಾಂಪತ್ಯದಲ್ಲಿ ಸಣ್ಣ ಕಲಹ.
ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಅಲ್ಪ ಮುನ್ನಡೆ.

ಧನಸ್ಸು
ಕಂಟಕಗಳ ನಿವಾರಣೆಯಾಗಲಿದೆ. ಔದ್ಯೋಗಿಕ
ಕ್ಷೇತ್ರದಲ್ಲಿರುವವರು ಉಳಿತಾಯದ ಕಡೆಗೆ ಗಮನ
ನೀಡುವಿರಿ. ಮಕ್ಕಳ ವಿದ್ಯಾಭ್ಯಾಸಕ್ಕೆ ಆಧ್ಯತೆ. ಹಿಂದಿನ
ಉಳಿತಾಯಗಳು ನೆರವಿಗೆ ಬರಲಿವೆ. ಕಣ್ಣಿನ ಸಮಸ್ಯೆ ಹೆಚ್ಚಾಗಲಿದೆ.
ಸಾಲಭಾದೆಯಿಂದ ಅಲ್ಪ ಬಿಡುಗಡೆ. 

ಮಕರ
ಉದ್ಯೋಗದಲ್ಲಿ ಪ್ರಗತಿ ಕಾಣಲಿದ್ದೀರಿ. ದೈಹಿಕ ಕ್ಷಮತೆ
ಹೆಚ್ಚಾಗಲಿದೆ. ಒತ್ತಡಗಳಿಂದ ಮುಕ್ತಿ ಸಿಗಲಿದೆ.
ಚಿನ್ನಾಭರಣ ಕೊಳ್ಳುವ ಅವಕಾಶಗಳಿವೆ. ಸಂಬಂಧಗಳ
ವೃದ್ಧಿ. ಖರ್ಚಿನ ಮೇಲೆ ಹಿಡಿತವಿರಲಿ. ಶತ್ರುಭಾದೆ
ಶಮನವಾಗಲಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ

ಕುಂಭ
ಭೂ ವ್ಯಾಜ್ಯಗಳಲ್ಲಿ ಜಯ ಸಿಗಲಿದೆ. ಮನೆಯಲ್ಲಿನ
ಜಗಳಕ್ಕೆ ವಿರಾಮ ಬೀಳಲಿದೆ. ತಂದೆಯ
ಆರೋಗ್ಯದಲ್ಲಿ ಅಲ್ಪ ಚೇತರಿಕೆ. ಶೈಕ್ಷಣಿಕ ಕ್ಷೇತ್ರದಲ್ಲಿ
ಪ್ರಗತಿ ಕಾಣಲಿದೆ. ಬೃಹತ್ ಉದ್ಯಮ ಸ್ಥಾಪನೆಗೆ ಕೆಲ ಸಮಯ
ಕಾಯುವುದು ಒಳಿತು. ಮನರಂಜನೆ ಕ್ಷೇತ್ರದಲ್ಲಿರುವವರಿಗೆ ಹೆಚ್ಚು
ಅವಕಾಶಗಳು ಲಭ್ಯವಾಗಲಿವೆ. ಆದಾಯದಲ್ಲಿ ಏರುಪೇರು.

ಮೀನ
ನೂತನ ಉದ್ಯೋಗ ದೊರೆಯಲಿದೆ. ಧಾರ್ಮಿಕ
ಕ್ಷೇತ್ರಗಳಿಗೆ ಭೇಟಿ. ಮನೆಯ ವಾಸ್ತು ದೋಷಕ್ಕೆ ಸೂಕ್ತ
ಪರಿಹಾರ ಕಂಡುಕೊಳ್ಳುವುದು ಉತ್ತಮ. ವ್ಯಾಪಾರ
ವಹಿವಾಟಿನಲ್ಲಿ ಪ್ರಗತಿ ಕಾಣಲಿದೆ. ಸುಖಾ ಸುಮ್ಮನೆ
ಸ್ನೇಹಿತರೊಂದಿಗೆ ಕೋಪ ಮಾಡಿಕೊಳ್ಳುವುದು ಬೇಡ. 

Follow Us:
Download App:
  • android
  • ios