Today November 20th horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ
ಶ್ರೀ ಕಂಠ ಶಾಸ್ತ್ರಿ
ಮೇಷ = ಇಂದು ಈ ರಾಶಿಯವರಿಗೆ ಸ್ನೇಹಿತರು-ಬಂಧುಗಳಿಂದ ಉಪಕಾರ ಸಿಗಲಿದೆ. ಕೃಷಿಕರಿಗೆ ಅನುಕೂಲಕರ ದಿನವಾಗಿದೆ. ಧರ್ಮ ಕಾರ್ಯಗಳಲ್ಲಿ ಹಿನ್ನಡೆ ಉಂಟಾಗಬಹುದು. ಈಶ್ವರ ಪ್ರಾರ್ಥನೆ ಮಾಡಿ.
ವೃಷಭ = ಇಂದು ಈ ರಾಶಿಯವರಿಗೆ ಸಹೋದರರ ಸಹಕಾರದಿಂದ ಎಲ್ಲಾ ಶುಭ. ಕಾರ್ಯಗಳಲ್ಲಿ ಅನುಕೂಲಕರ ವಾತಾವರಣ. ಸಂಗಾತಿಯಿಂದ ಸಹಕಾರ ಸಿಗುತ್ತದೆ. ಅಪಮಾನ-ವಸ್ತು ನಷ್ಟತೆ ಸಾಧ್ಯತೆ ಇದೆ. ಕೃಷ್ಣನಿಗೆ ತುಳಸಿ ಸಮರ್ಪಣೆ ಮಾಡಿ
ಮಿಥುನ = ಕುಟುಂಬ ಸೌಖ್ಯದಿಂದ ಇಂದು ನೆಮ್ಮದಿ ವಾತಾವರಣ. ಆರೋಗ್ಯದಲ್ಲಿ ಚೇತರಿಕೆಯಿದೆ. ಗಂಡ-ಹೆಂಡತಿ ನಡುವೆ ದಾಂಪತ್ಯದಲ್ಲಿ ಅಸಮಾಧಾನ ಇರಬಹುದು. ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ
ಕರ್ಕ = ಪ್ರತಿಭಾ ಬಲದಿಂದ ಯಶಸ್ಸು ಸಿಗುತ್ತದೆ. ಯಂತ್ರೋದ್ಯಮ ಕ್ಷೇತ್ರದಲ್ಲಿ ಲಾಭದ ಸಾಧ್ಯತೆ ಇದೆ. ಮೆಡಿಕಲ್ ಕ್ಷೇತ್ರದಲ್ಲಿ ಅನುಕೂಲಕರ ವಾತಾವರಣ ಇದೆ. ಆರೋಗ್ಯದಲ್ಲಿ ಏರುಪೇರು ಇರಬಹುದು. ದುರ್ಗಾ ಸನ್ನಿಧಿಯಲ್ಲಿ ಅಭಿಷೇಕ ಮಾಡಿಸಿ.
ಸಿಂಹ = ವೃತ್ತಿಯಲ್ಲಿ ಅನುಕೂಲಕರ ವಾತಾವರಣ ಇದೆ. ವಿದೇಶ ವಹಿವಾಟಿನಲ್ಲಿ ಲಾಭ. ಸ್ನೇಹಿತರಲ್ಲಿ ಉಪಕಾರದಿಂದ ಚಿಂತೆ ನಿವಾರಣೆ. ಪೊಷಕರು ಮತ್ತು ಮಕ್ಕಳ ನಡುವೆ ಅಸಮಾಧಾನ ಇರುತ್ತದೆ. ಲಲಿತಾ ಪ್ರಾರ್ಥನೆ ಮಾಡಿ
ಕನ್ಯಾ = ವೃತ್ತಿಯಲ್ಲಿ ಅನುಕೂಲ ವಾತಾವರಣ ಇದೆ. ಸಿಹಿ ಹಾಗೂ ವಸ್ತ್ರ ವ್ಯಾಪಾರದಲ್ಲಿ ಲಾಭ ಸಾಧ್ಯತೆ ಇದೆ ಇಂದು. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ ಇದೆ. ಪ್ರಯಾಣದಲ್ಲಿ ತೊಂದರೆ ಇದೆ ಎಚ್ಚರ. ಬಂಧುಗಳಲ್ಲಿ ಕಲಹ. ಲಲಿತಾ ಪ್ರಾರ್ಥನೆ ಮಾಡಿ
ತುಲಾ = ವೃತ್ತಿಯಲ್ಲಿ ಅನುಕೂಲ ವಾತಾವರಣ ಇದೆ. ಸ್ತ್ರೀಯರಿಗೆ ಅಸಮಾಧಾನವಾಗುವ ಸಾಧ್ಯತೆ ಇದೆ. ಗಂಟಲು-ಕಿವಿ ನೋವಿನ ಬಾಧೆ ಉಂಟಾಗಬಹುದು. ದುರ್ಗಾ ಸನ್ನಿಧಾನದಲ್ಲಿ ಅಭಿಷೇಕ ಮಾಡಿಸಿ
ವೃಶ್ಚಿಕ = ಆಹಾರ ವ್ಯತ್ಯಾಸದಿಂದ ಆರೋಗ್ಯದಲ್ಲಿ ಏರು-ಪೇರು ಆಗಬಹುದು. ವಿದ್ಯಾರ್ಥಿಗಳಿಗೆ ತೊಡಕಿನ ದಿನವಾಗಿರಬಹುದು. ಕೆಲಸದಲ್ಲಿ ಅನುಕೂಲ. ರಾಜಕಾರಣದಲ್ಲಿ ಅನುಕೂಲ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ
ಧನು = ಕಾರ್ಯಗಳಲ್ಲಿ ಪರಿಶ್ರಮ ಇದೆ. ನಿಮ್ಮದಲ್ಲದ ತಪ್ಪಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಹಳೆಯ ಸ್ನೇಹಿತರಿಂದ ಸಹಕಾರ. ಗುರು ಪ್ರಾರ್ಥನೆ ಮಾಡಿ
ಮಕರ = ವ್ಯಾಪಾರದಲ್ಲಿ ಲಾಭದ ದಿನ ಇಂದು. ಹೋಟಲ್ ಕ್ಷೇತ್ರದಲ್ಲಿ ಕೆಲಸಮಾಡುವವರಿಗೆ ಉತ್ತಮ ದಿನ. ಡಿಸೈನಿಂಗ್ ಹಾಗೂ ಐಟಿ ಉದ್ಯೋಗದಲ್ಲಿ ಅನುಕೂಲ-ವ್ಯಯ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ.
ಕುಂಭ = ಲಾಭದಾಯಕ ದಿನ. ಧರ್ಮ ಕಾರ್ಯಗಳಲ್ಲಿ ಭಾಗಿ. ವೃತ್ತಿಯಲ್ಲಿ ಅನುಕೂಲ. ಇಷ್ಟದೇವತಾರಾಧನೆ ಮಾಡಿ
ಮೀನ = ವೃತ್ತಿಯಲ್ಲಿ ತೊಂದರೆ. ವಿಘ್ನಗಳು. ಸಂಗಾತಿಯಲ್ಲಿ ಸಾಮರಸ್ಯ. ಗಣಪತಿ ಪ್ರಾರ್ಥನೆ ಮಾಡಿ
