ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಎಲ್ಲ ವಸ್ತು, ಕೋಣೆಗಳಿಗೆ ವಾಸ್ತು ತುಂಬಾ ಮುಖ್ಯ. ಇಲ್ಲವಾದರೆ ಅದು ಮನೆಯ ಜನರು, ಮನಸ್ಸಿನ ಮೇಲೆ ಹಾಗೂ ಮನೆಯ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತದೆ. ಹಾಗೆ ಆಗಬಾರದೆಂದಾದರೆ ಮನೆಯಲ್ಲಿ ಕೆಲವೊಂದು ಬದಲಾವಣೆ ಮಾಡಬೇಕು. 

  • ಮನೆಯಲ್ಲಿ ಯಾವುದೇ ವಸ್ತುಗಳು ಅವ್ಯವಸ್ಥಿತವಾಗಿ ಇಡಬಾರದು. ಇದರಿಂದ ಮನೆಯಲ್ಲಿ ನೆಗೆಟಿವ್ ಎನರ್ಜಿ ಹೆಚ್ಚುತ್ತದೆ. 
  • ಹೆಚ್ಚಾಗಿ ಜನರು ಮನೆಯ ಸ್ಟೋರ್ ರೂಮಿನಲ್ಲಿ ಬೇಡವಾದ ವಸ್ತುಗಳನ್ನು ತುಂಬುತ್ತಾರೆ. ಹೀಗೆ ಮಾಡಬಾರದು. ಇದು ಮನೆಯ ಮಂದಿಯ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. 
  • ಮನೆಯ ಪೇಂಟಿಂಗ್ ಅಥವಾ ಪ್ಲಾಸ್ಟರ್ ಬೀಳುತ್ತಿದ್ದರೆ ಅದನ್ನು ತಕ್ಷಣವೇ ಸರಿಪಡಿಸಿ. 
  • ಆಗ್ನೇಯ ಕೊನೆಯಲ್ಲಿ ಅಡುಗೆ ಕೋಣೆ ಇರದಿದ್ದರೆ ಅಲ್ಲೊಂದು ಕೆಂಪು ಬಲ್ಬ್ ಹಾಕಿ. 
  • ಮನೆಯಲ್ಲಿ ದೇವರ ಕೋಣೆ ಈಶಾನ್ಯ ಭಾಗದಲ್ಲಿದ್ದರೆ ಒಳಿತು. 
  • ಬಾತ್‌ರೂಮಿನಲ್ಲಿ ಅಥವಾ ಟಾಯ್ಲೆಟ್ ಬಾಗಿಲಿನ ಎದುರು ಪರದೆ ಹಾಕಿ. 
  • ಅಪ್ಪಿ ತಪ್ಪಿಯೂ ಈಶಾನ್ಯ ದಿಕ್ಕಿನಲ್ಲಿ ಬಾತ್‌ರೂಮ್ ಅಥವಾ ಟಾಯ್ಲೆಟ್ ಮಾಡಬಾರದು. 
  • ಮನೆಗೆ ಯಾವಾಗಲೂ ತಿಳಿ ಬಣ್ಣವನ್ನು ಬಳಿಯಿರಿ. ಗಾಢವಾದ ಬಣ್ಣ ಬೇಡವೇ ಬೇಡ.