ಯಾರದೇ ಮನೆ ಅಥವಾ ಅಂಗಡಿಯಲ್ಲಿ ಪದೇ ಪದೆ ಕಳ್ಳತನವಾಗುತ್ತಿದ್ದರೆ, ಮನದಲ್ಲಿ ಏನೋ ಆತಂಕ ಮೂಡುತ್ತದೆ. ನಮ್ಮ ಮನೆಯಲ್ಲೂ ಕಳ್ಳತನವಾದರೆ ಎಂಬ ಭಯ ಕಾಡುತ್ತದೆ. ಇದಕ್ಕೆ ವಾಸ್ತುವಿಗೆ ಸಂಬಂಧಿಸಿದ ಅಂಶಗಳು ಕಾರಣವಾಗಿರುತ್ತವೆ. ಮನೆ ಹಾಗೂ ಅಂಗಡಿಯಲ್ಲಿ ಕಳ್ಳತನ ಆಗಬಾರದೆಂದರೆ ಈ ವಾಸ್ತು ಟಿಪ್ಸ್ ಪಾಲಿಸಿ.. 

ರೋಗ ರುಜಿನ ದೂರವಾಗಲು ವಾಸ್ತು ಟಿಪ್ಸ್...

  • ನಿಮ್ಮ ಅಮೂಲ್ಯ ವಸ್ತುಗಳು, ಹಣ ಇತ್ಯಾದಿ ವಸ್ತುಗಳನ್ನು ವಾಯುವ್ಯ ದಿಕ್ಕಿನಲ್ಲಿಡಿ. 
  • ಮನೆ ಮತ್ತು ಅಂಗಡಿಯಲ್ಲಿ ಎಲ್ಲಿ ಹಣ ಇಡುತ್ತೀರೋ ಆ ಜಾಗದಲ್ಲಿ ನೀರು ಮತ್ತು ನೀರಿಗೆ ಸಂಬಂಧಿಸಿದ ವಸ್ತುಗಳನ್ನಿಡಬೇಡಿ. 
  • ಮನೆ ಅಥವಾ ಅಂಗಡಿಯ ಮೂರು ಬಾಗಿಲು ಒಂದೇ ಲೈನಿನಲ್ಲಿದ್ದರೂ ಕಳ್ಳತನವಾಗಬಹುದು. ಹೀಗಿದ್ದರೆ ಬಾಗಿಲಿನ ಮೇಲೆ ಕೆಂಪು ರಿಬ್ಬನ್‌ನಲ್ಲಿ ಕ್ರಿಸ್ಟಲ್ ಕಟ್ಟಿಡಿ. 
  • ಹಣವನ್ನಿಡಲು ಬ್ರೌನ್ ಬಣ್ಣದ ಹಣದ ಸ್ಟೋರ್ ಅಥವಾ ಅಲಮಾರಿ ಉತ್ತಮ. ನೀಲಿ ಬಣ್ಣ ಬೇಡ. ಏಕೆಂದರೆ ಇದು ನೀರಿನ ಬಣ್ಣ. ಇದರಲ್ಲಿ ಹಣ ಸರಿಯಾಗಿ ಉಳಿಯೋದಿಲ್ಲ. 
  • ಹಣವನ್ನು ನೈಋತ್ಯ ದಿಕ್ಕಿನಲ್ಲಿಟ್ಟರೆ ಕಳ್ಳತನವಾಗಬಹುದು. ಆದರೆ ಅಲ್ಲಿ ತೆರೆದಿರುವ ಕಿಟಕಿ ಇರದಂತೆ ನೋಡಿಕೊಳ್ಳಿ. 
  • ಮನೆ ಅಥವಾ ಅಂಗಡಿಯಲ್ಲಿ ನೌಕರರಿಗೆ ತಂಗುವ ಸ್ಥಳವನ್ನು ಅಪ್ಪಿ ತಪ್ಪಿಯೂ ನೈಋತ್ಯ ದಿಕ್ಕಿನ ಜಾಗ ನೀಡಬೇಡಿ. ಇದರಿಂದ ಅವರಲ್ಲಿ ಕಳ್ಳತನ ಮಾಡುವ ಮನಸಾಗುತ್ತದೆ. 
  • ವಾಸ್ತು ಶಾಸ್ತ್ರದ ಅನುಸಾರ ಮನೆ ಅಥವಾ ಅಂಗಡಿ ಮುಖ್ಯ ದ್ವಾರ ಉಳಿದ ದ್ವಾರಕ್ಕಿಂತ ದೊಡ್ಡದಾಗಿರಬೇಕು.