Asianet Suvarna News Asianet Suvarna News

ಈ ರಾಶಿಯವರಿಗೆ ಮೂಗಿನ ತುದಿಯಲ್ಲಿ ಕೋಪ.. ನೀವು ಹಿಂಗೆ ಮಾಡ್ತೀರಾ?

ಜೀವನದಲ್ಲಿ ಪ್ರತಿಯೊಬ್ಬರೂ ತಮ್ಮ ಕೋಪದ ಕ್ಷಣಗಳನ್ನು ಹೊಂದಿದ್ದಾರೆ, ಆದರೆ ತಾಳ್ಮೆ ಮತ್ತು ತಿಳುವಳಿಕೆಯಿಂದ ಯಾವುದೇ ಕೋಪವನ್ನು ಶಮನಗೊಳಿಸಬಹುದು ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ.

these zodiac sign people are anger and short tempered behaviour suh
Author
First Published Sep 12, 2023, 4:18 PM IST

ಜೀವನದಲ್ಲಿ ಪ್ರತಿಯೊಬ್ಬರೂ ತಮ್ಮ ಕೋಪದ ಕ್ಷಣಗಳನ್ನು ಹೊಂದಿದ್ದಾರೆ, ಆದರೆ ತಾಳ್ಮೆ ಮತ್ತು ತಿಳುವಳಿಕೆಯಿಂದ ಯಾವುದೇ ಕೋಪವನ್ನು ಶಮನಗೊಳಿಸಬಹುದು ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಗುಣ ಮತ್ತು ದೋಷಗಳನ್ನು ಅವನ ರಾಸಿಚಕ್ರದ ಚಿಹ್ನೆಯಿಂದ ನಿರ್ಧರಿಸಬಹುದು. ಕೆಲವು ರಾಸಿಚಕ್ರ ಚಿಹ್ನೆಗಳ ಜನರು ತಮ್ಮ ಕೋಪದ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಕೆಲವು ರಾಶಿಚಕ್ರ ಚಿಹ್ನೆಗಳ ಜನರು ಬಹಳ ತಾಳ್ಮೆ ಮತ್ತು ಶಾಂತ ಮನಸ್ಸಿನಿಂದ ಸಂದರ್ಭಗಳನ್ನು ಎದುರಿಸುತ್ತಾರೆ.ಕೆಲವರಿಗೆ ಚಿಕ್ಕ ಚಿಕ್ಕ ವಿಷಯಗಳಿಗೆ ತುಂಬಾ ಕೋಪ ಬರುತ್ತದೆ ಮತ್ತು ಕೋಪವನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಈ ರಾಶಿಚಕ್ರದ ಜನರು ಬೇಗನೆ ಕೋಪಗೊಳ್ಳುತ್ತಾರೆ.

ಮೇಷ ರಾಶಿ (Aries) 

ಮೇಷ ರಾಶಿಯ ಆಡಳಿತ ಗ್ರಹ ಮಂಗಳ. ಈ ರಾಶಿಚಕ್ರ ಚಿಹ್ನೆಯ ಜನರು ಕೋಪ ಮತ್ತು ಮೊಂಡುತನದ ಸ್ವಭಾವವನ್ನು ಹೊಂದಿರುತ್ತಾರೆ. ಬೇಗನೆ ಕೋಪೊಂಡರೆ ಆಶ್ಚರ್ಯವೇನಿಲ್ಲ ಎಕೆಂದರೆ ಈ ರಾಶಿಚಕ್ರ ಚಿಹ್ನೆಯ ಜನರು ಅವಮಾನಗಳನ್ನು ಸಹಿಸುವುದಿಲ್ಲ. ಅವರ ಕೋಪ ಸ್ವಲ್ಪ ಸಮಯದವರೆಗೆ ಇರುತ್ತದೆ.

ಸಿಂಹ ರಾಶಿ (Leo) 

ಸಿಂಹ ರಾಶಿಯ ಆಡಳಿತ ಗ್ರಹ ಸೂರ್ಯ. ಈ ರಾಶಿಚಕ್ರ ಚಿಹ್ನೆಯ ಜನರು ಆತ್ಮವಿಶ್ವಾಸ ಮತ್ತು ಉತ್ಸಾಹವನ್ನು ಹೊಂದಿರುವುದಿಲ್ಲ. ಆದರೆ ಇವರು ತಮ್ಮ ಆತ್ಮ ಗೌರವಕ್ಕೆ ಆದ್ಯತೆ ನೀಡುತ್ತಾರೆ.ಅವರ ಅಹಂಕಾರವು ಘರ್ಷಣೆಯಾದಾಗ ಸುಲಭವಾಗಿ ಕೋಪಗೊಳ್ಳುತ್ತಾರೆ.  ಅವರು ತಮ್ಮ ಅಸಮಧಾನವನ್ನು ಬಹಳ ನಾಟಕೀಯ ರೀತಿಯಲ್ಲಿ ತೋರಿಸಿಕೊಳ್ಳುತ್ತಾರೆ. ಬೇಗನೆ ಕೋಪವನ್ನು ಮರೆಯುತ್ತಾರೆ.

ಬುಧನ ನೇರ ಚಲನೆ: ಈ ರಾಶಿಗಳಿಗೆ ಅದೃಷ್ಟ,ಉದ್ಯೋಗದಲ್ಲಿ ಪ್ರಗತಿ

 

ವೃಶ್ಚಿಕ ರಾಶಿ (Scorpio) 

ವೃಶ್ಚಿಕ ರಾಶಿ ಆಡಳಿತ ಗ್ರಹ ಪ್ಲುಟೊ. ಇವರು ತಮ್ಮ ಭಾವನೆಗಳಿಗೆ ಹೆಸರುವಾಸಿಯಾಗಿದ್ದಾರೆ. ವೃಶ್ಚಿಕ ರಾಶಿಯ ಜನರು ತುಂಬಾ ಶಾಂತವಾಗಿರುತ್ತಾರೆ. ಆದರೆ ಯಾರಾದರು ಅವರನ್ನು ಪ್ರಚೋದಿಸಲು ಪ್ರಯತ್ನಿಸಿದಾಗ , ತಮ್ಮ ಕೋಪವನ್ನು ಕಳೆದುಕೊಳ್ಳುತ್ತಾರೆ. ಬೇಗನೆ ವಿಷಯಗಳನ್ನು ಇವರು ಮರೆಯುವುದಿಲ್ಲ, 

ವೃಷಭ ರಾಶಿ (Taurus) 

ವೃಷಭ ರಾಶಿ ಆಡಳಿತ ಗ್ರಹ ಶುಕ್ರ. ಅವರು ಸೌಕರ್ಯ ಮತ್ತು ಭದ್ರತೆಗೆ ಪ್ರಾಮುಖ್ಯತೆ ನೀಡುತ್ತಾರೆ. ವೃಷಭ ರಾಶಿಯ ಜನರು ಸಾಮಾನ್ಯವಾಗಿ ಸಾಂತ ಮತ್ತು ಸಭ್ಯ ಸ್ವಬಾವವನ್ನು ಹೊಂದಿರುತ್ತಾರೆ. ಆದರೆ ಯಾರಾದರೂ ಅವರನ್ನು ಮೋಸಗೊಳಿಸಲು ಪ್ರಯತ್ನಿಸಿದಾಗ ಅವರು ತಮ್ಮ ಕೋಪವನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಕೋಪ ನಿಧಾನವಾಗಿ ಏರುತ್ತದೆ. ದೀರ್ಘಕಾಲದವರೆಗೆ ಇರುತ್ತದೆ.

ಮಕರ (Capricorn) 

ಮಕರ  ರಾಶಿ ಆಡಳಿತ ಗ್ರಹ ಶನಿ. ಇದು ಶಿಸ್ತು ಮತ್ತು ಜವಾಬ್ದಾರಿಯ ಗ್ರಹವೆಂದು ಪರಿಗಣಿಸಲಾಗಿದೆ. ಮಕರ ರಾಶಿಯ ಜನರು ಬಹಳ ಮಹತ್ವಾಕಾಂಕ್ಷೆಯುಳ್ಳವರು ಮತ್ತ ಯಶಸ್ಸನ್ನು ಪಡೆಯಲು ಶ್ರಮಿಸುತ್ತಾರೆ. ವೈಫಲ್ಯವನ್ನು ಎದುರಿಸಿದರೆ ಬೇಗನೆ ದುಃಖಿತರಾಗುತ್ತಾರೆ. ಕೋಪದಿಂದ ಇತರರನ್ನು ತುಂಬಾ ಟೀಕಿಸುತ್ತಾರೆ.


 

Follow Us:
Download App:
  • android
  • ios