ಗಂಡ-ಹೆಂಡ್ತಿ ಜಗಳ ತಡೆಯಲು ಇಲ್ಲಿದೆ ಸಿಂಪಲ್ ವಾಸ್ತು ಟಿಪ್ಸ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 20, Jun 2018, 6:07 PM IST
Vaastu tips for bed room
Highlights

ವಾಸ್ತು ಶಾಸ್ತ್ರಕ್ಕೆ ತನ್ನದೇ ಆದ ವಿಭಿನ್ನ ಆಯಾಮಗಳಿವೆ. ಮನೆಯ ಪ್ರವೇಶಕ್ಕೆ ಒಂದು ವಾಸ್ತುವಿದ್ದರೆ, ಮಲಗುವ ಕೋಣೆಗೆ ಮತ್ತೊಂದು. ಕಟ್ಟಿದ್ದನ್ನು ಉರುಳಿಸುವುದರಲ್ಲಿ ಅರ್ಥವಿಲ್ಲ. ಆದರೆ, ಇರುವ ವಸ್ತುಗಳನ್ನೇ ವಾಸ್ತು ಪ್ರಕಾರವಾಗಿ ಇಡಬಹುದು. ಮಲಗುವ ಕೋಣೆಗೆ ಇಲ್ಲಿವೆ ವಾಸ್ತು ಟಿಪ್ಸ್.

ನೆಮ್ಮದಿಯಾಗಿ ನಿದ್ರಿಸುವ ಜತೆಗೆ, ನಾಳೆಗೂ ಮುನ್ನಡಿ ಬರೆಯುವುದು ಮಲಗುವ ಕೋಣೆ. ಸುಖವಾಗಿ ನಿದ್ರಿಸಲು ಏನು ಅಗತ್ಯವೋ ಅದನ್ನು ಫಾಲೋ ಮಾಡುವ ಜತೆಗೆ, ನಮ್ಮ ಭವಿಷ್ಯ ಉಜ್ವಲವಾಗಲು ಇಲ್ಲಿವೆ ಕೆಲವು ವಾಸ್ತು ಟಿಪ್ಸ್.

- ಮಲಗುವ ಕೋಣೆಯಲ್ಲಿ ಬೀರುವನ್ನು ನೈಋತ್ಯ ಮೂಲೆಯಲ್ಲಿ ಇಟ್ಟರೆ ಒಳ್ಳೆಯದು. 
- ಬೀರಿಟ್ಟರೆ ಅದು ಉತ್ತರ ದಿಕ್ಕಿನಲ್ಲಿ ಮುಖ ಮಾಡಿ ತೆಗೆಯುವಂತಿರಬೇಕು.
- ಹೂವಿನ ಗಿಡ ಮತ್ತು ಅಕ್ವೇರಿಯಂ ಗಳನ್ನು ಮಲಗುವ ಕೋಣೆಯಲ್ಲಿ ಇರಿಸಬಾರದು. 
- ಮಲಗುವ ದಿಕ್ಕು ದಕ್ಷಿಣದ ದಿಕ್ಕಿಗೆ ಇರಬೇಕು. 
- ಮನೆಯಲ್ಲಿ ಮಲಗುವ ಕೋಣೆಯಲ್ಲಿ ಯಥೇಚ್ಛವಾಗಿ ಗಾಳಿ ಹಾಗೂ ಬೆಳಕು ಬರುವಂತಿರಬೇಕು, ಕತ್ತಲಿರಬಾರದು.
- ಮನೆಯಲ್ಲಿ ಮಲಗುವ ಕೋಣೆಯಲ್ಲಿ ದೇವರ ಮನೆ ಇರಬಾರದು.
- ಚಾಕು ಮತ್ತು ಕತ್ತರಿ -   ಹರಿತವಾದ ವಸ್ತುಗಳನ್ನು ಮಲಗುವ ಜಾಗದಲ್ಲಿ, ಇಟ್ಟರೆ ಮನಸ್ಸು ‌ಕೆರಳುತ್ತದೆ.

loader