ಈ ರಾಶಿಗೆ ಅವಘಡ ಸಾಧ್ಯತೆ : ಎಚ್ಚರಿಕೆ ಅಗತ್ಯ

05-12-18 - ಬುಧವಾರ
====================
ಶ್ರೀ ವಿಲಂಬಿ ನಾಮ ಸಂವತ್ಸರ
ದಕ್ಷಿಣಾಯನ
ಶರದೃತು
ಕಾರ್ತೀಕ ಮಾಸ
ಕೃಷ್ಣ ಪಕ್ಷ
ತ್ರಯೋದಶಿ
ವಿಶಾಖಾ
====================
ರಾಹುಕಾಲ : 12.10 ರಿಂದ 01.35
ಯಮಗಂಡ ಕಾಲ : 07.55 ರಿಂದ 09.10
ಗುಳಿಕ ಕಾಲ : 10.45 ರಿಂದ 12.10
=============================

ಮೇಷ ರಾಶಿ :  ಉದ್ಯೋಗದಲ್ಲಿ ಕಿರಿಕಿರಿ, ಆದರೆ ಸಮಾಧಾನವೂ ಬರಲಿದೆ, ವಿಘ್ನಗಳ ನಡುವೆಯೂ ಲಾಭದ ದಿನವಾಗಿರಲಿದೆ, ಉತ್ತಮ ದಿನ, ಮಿತ್ರರೊಂದಿಗೆ ಪ್ರವಾಸ ಹೊರಡುವ ಕಾಲ, ವಿಶೇಷ ದಿನವಾಗಿರುತ್ತದೆ. 

ದೋಷಪರಿಹಾರ : ಗಣಪತಿ ಪ್ರಾರ್ಥನೆ ಮಾಡಿ

ವೃಷಭ : ಅತ್ಯುತ್ತಮ ಫಲ ದೊರೆಯುತ್ತದೆ, ನಿಮ್ಮ ಅಪೇಕ್ಷೆಗಳು ಶೀಘ್ರದಲ್ಲಿ ಈಡೇರಲಿವೆ. ಭುಜಗಳ ನೋವು, ಬೆನ್ನು ನೋವು ಸ್ವಲ್ಪಮಟ್ಟಿಗೆ ಕಾಡಲಿದೆ, ನಿಮ್ಮ ಸಹೋದರರ ಸಹಕಾರ ದೊರೆಯುವುದಿಲ್ಲ, ಮಾನಸಿಕ ಅಶಾಂತಿಯೂ ಇದೆ, ಮಿಶ್ರಫಲ,   
      
ದೋಷ ಪರಿಹಾರ : ದೇವೀ ಅಪರಾಧ ಕ್ಷಮಾ ಸ್ತೋತ್ರ ಪಠಿಸಿ

ಮಿಥುನ :  ಸ್ತ್ರೀಯರಿಂದ ಧನ ನಷ್ಟ, ಮಕ್ಕಳಿಗೆ ಅಲಂಕಾರಿಕ ವಸ್ತು ಖರೀದಿ, ತಂದೆ ಮಕ್ಕಳಲ್ಲಿ ಬಾಂಧವ್ಯ ಹಾಳು, ವಿವೇಕ ಶೂನ್ಯದಿಂದ ಮಾನಸಿಕ ಹಿಂಸೆ ಅನುಭವಿಸುತ್ತೀರಿ, ಮಾಡಿದ ಸಂಪಾದರೆ ದುಷ್ಟರ ಕೈಸೇರುತ್ತದೆ. ಎಚ್ಚರವಾಗಿರಿ.
 
ದೋಷ ಪರಿಹಾರ : ವಿಷ್ಣು ಸಹಸ್ರನಾಮ ಪಠಿಸಿ

ಕಟಕ : ಮಾನಸಿಕ ನೋವು, ಮಿತ್ರರಿಂದ, ಸಂಗಾತಿಯಿಂದ ಮಾನಸಿಕ ತೊಂದರೆ, ತಂದೆ-ತಾಯಿಯರ ಸಹಕಾರ ಇರುತ್ತದೆ, ಮಕ್ಕಳ ಜಾಣತನ ನಿಮಗೆ ಪ್ರಶಂಸೆ ಬರಲಿದೆ. ಉತ್ತಮ ಫಲ ಅನುಭವಿಸುತ್ತೀರಿ.  
  
ದೋಷ ಪರಿಹಾರ : ಲಲಿತಾ ಉಪಾಸನೆ ಮಾಡಿ

ಸಿಂಹ :  ನಿಮ್ಮ ಪೌರುಷ ಅಡಗಲಿದೆ, ಸ್ತ್ರೀಯರಿಂದ ಅನುಕೂಲವಾಗಲಿದೆ, ಗೃಹ ಸೌಕರ್ಯ, ವಾಹನ ಸೌಲಭ್ಯ ದೊರಕಲಿದೆ, ಮಕ್ಕಳಿಂದ ಅನುಕೂಲ, ಆರೋಗ್ಯದಲ್ಲಿ ಅನಾನುಕೂಲ, ದಾಂಪತ್ಯದಲ್ಲಿ ಕೊಂಚ ಅವಘಡ. 

ದೋಷ ಪರಿಹಾರ : ಶಿವಾನಂದ ಲಹರಿ ಪಠಿಸಿ

ಕನ್ಯಾ : ಸ್ತ್ರೀಯರಿಂದ ಧನನಷ್ಟ, ಗೃಹದಲ್ಲಿ ತೊಂದರೆ, ಆರೋಗ್ಯ ತೊಂದರೆ,ಮಕ್ಕಳಲ್ಲಿ ಸ್ವಲ್ಪ ಭಿನ್ನಾಭಿಪ್ರಾಯದ ಮಾತು, ಮಿತ್ರರಿಂದ ಅನುಕೂಲ ಪ್ರಾಪ್ತಿ, ದೇವಸ್ಥಾನಗಳ ಯಾತ್ರೆ, ಮಾನಸಿಕ ಕಿರಿಕಿರಿ. ಅನಾನುಕೂಲ.
  
ದೋಷ ಪರಿಹಾರ : ಅರ್ಧನಾರೀಶ್ವರ ದರ್ಶನ ಮಾಡಿ

ತುಲಾ :  ಸ್ತ್ರೀಯರಿಂದ ಸಹಕಾರ, ಕುಟುಂಬದವರ ಅನುಕೂಲ, ಮಕ್ಕಳಿಂದ ಕಠಿಣ ಮಾತು ಕೇಳಬೇಕಾಗುತ್ತದೆ, ಮಾನಸಿಕ ತೊಂದರೆ, ವಿಶಿಷ್ಟ ವ್ಯಕ್ತಿಗಳ ಪರಿಚಯವಾಗುತ್ತದೆ. ಉತ್ತಮ ದಿನ.  

ದೋಷ ಪರಿಹಾರ : ಸೌಂದರ್ಯ ಲಹರಿ ಪಠಿಸಿ

ವೃಶ್ಚಿಕ :  ನಿಮ್ಮ ಜಾಣತನದ ನಡೆಯಿಂದ ಅವಘಡ ತಪ್ಪಲಿದೆ, ಉತ್ತಮ ಕ್ರಿಯೆಗಳಲ್ಲಿ ಭಾಗವಹಿಸುತ್ತೀರಿ, ಧನವ್ಯಯವಾಗುತ್ತದೆ, ಬಂಧುಗಳಿಂದ ಸ್ವಲ್ಪ ಮಟ್ಟಿಗೆ ಕಟು ಮಾತು ಕೇಳಬೇಕಾಗುತ್ತದೆ.      

ದೋಷ ಪರಿಹಾರ : ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಧನಸ್ಸು :  ಆರೋಗ್ಯದಲ್ಲಿ ವ್ಯತ್ಯಯ, ಮಕ್ಕಳಿಂದ ಸ್ವಲ್ಪ ಸಮಾಧಾನ ಹಾಗೂ ಸಹೋದರರಿಂದ ಅನುಕೂಲ, ಮಿತ್ರರು ಕೊನೆ ಕ್ಷಣದಲ್ಲಿ ತೊಂದರೆ ಕೊಡುತ್ತಾರೆ, ಎಚ್ಚರದಿಂದ ದಿನದ ಕಾರ್ಯಕ್ರಮಗಳ ಯೋಜನೆ ಮಾಡಿಕೊಳ್ಳಿ. 

ದೋಷ ಪರಿಹಾರ : ಮಧುಕರಿ ಸೇವೆ ಮಾಡಿ

ಮಕರ : ನಿಮ್ಮ ಸಮಸ್ಯೆಗಳಿಗೆ ಇಂದು ಉತ್ತರ ಸಿಗಲಿದೆ, ನಿಮ್ಮ ಮನಸ್ಸು ಚೇತೋಹಾರಿಯಾಗಲಿದೆ. ನಿಮ್ಮ ಸ್ನೇಹಿತರು ನಿಮ್ಮ ಜೊತೆ ಸಂಚಾರಕ್ಕೆ ಬರಲಿದ್ದಾರೆ. ನೀರಿನ ವ್ಯಾಪಾರಿಗಳಿಗೆ ಉತ್ತಮ ದಿನ.
  
ದೋಷ ಪರಿಹಾರ : ಕುಲ ದೇವರಿಗೆ ತುಪ್ಪದ ದೀಪವನ್ನು ಹಚ್ಚಿ

ಕುಂಭ :   ಸ್ವಲ್ಪ ಧನ ನಷ್ಟ, ಕಾರ್ಯ ವೃದ್ಧಿಗೆ ಅಡೆತಡೆ, ಆರೋಗ್ಯದಲ್ಲಿ ಏರುಪೇರು, ಉದ್ಯೋಗದ ಕಾರಣಕ್ಕೆ  ಮಡದಿಯಲ್ಲಿ ಕಲಹ, ಮನೆ ವಸ್ತು ಖರೀದಿಗಾಗಿ ಮನೆಯಲ್ಲಿ  ಮಾತುಕತೆ, ನಿಮ್ಮ ಯೋಜನೆ ಸಿದ್ಧಿ ಪ್ರದವಾಗಿರಲಿದೆ, ಸಂತೋಷದ ದಿನ.

ದೋಷ ಪರಿಹಾರ : ಇಷ್ಟ ದೇವರಿಗೆ ತುಪ್ಪದ ದೀಪ ಹಚ್ಚಿ
  
ಮೀನ : ಉತ್ತಮ ದಿನ, ಕಾರ್ಯ ಸಿದ್ಧಿಗೆ ಹಿರಿಯರ ಸಹಾಯ, ವಾಹನ ಸಂಚಾರದಲ್ಲಿ ಅನುಕೂಲ, ಉದ್ಯೋಗದಲ್ಲಿ  ಸಹಾಯ ಹಾಗೂ ನಿಮ್ಮ ಕಾರ್ಯ ವೈಖರಿಗೆ ಪ್ರಶಂಸೆ, ನಿಮ್ಮನ್ನು ಕೆಣಕುವ ಮಂದಿಗೆ ಸ್ಪಷ್ಟ ಉತ್ತರ ಸಿಗಲಿದೆ.  

ದೋಷ ಪರಿಹಾರ : ರಾಮ ಮಂತ್ರ ಪಠಿಸಿ


ವಾಞ್ಮಯೀ.