Asianet Suvarna News Asianet Suvarna News

ಇಂದು ಈ ರಾಶಿಯವರು ಈ ಕೆಲಸ ಮಾಡಿದರೆ ಶ್ರೇಯಸ್ಸು ವೃದ್ಧಿ

ಇಂದು ಈ ರಾಶಿಯವರು ಈ ಕೆಲಸ ಮಾಡಿದರೆ ಶ್ರೇಯಸ್ಸು ವೃದ್ಧಿ

Special Bhavishya June 29

ಇಂದು ಈ ರಾಶಿಯವರು ಈ ಕೆಲಸ ಮಾಡಿದರೆ ಶ್ರೇಯಸ್ಸು ವೃದ್ಧಿ

29-06-18 - ಶುಕ್ರವಾರ
ಶ್ರೀ ವಿಲಂಬಿ ನಾಮ ಸಂವತ್ಸರ
ಉತ್ತರಾಯಣ
ಗ್ರೀಷ್ಮ ಋತು
ನಿಜ ಜ್ಯೇಷ್ಠ ಮಾಸ
ಕೃಷ್ಣ ಪಕ್ಷ
ಪ್ರತಿಪತ್ ತಿಥಿ
ಪೂರ್ವಾಷಾಢ ನಕ್ಷತ್ರ

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು. ಮಿಥೀನ ರಾಶಿಯಲ್ಲಿ ರವಿ ಇದ್ದು, ಕರ್ಕಟಕ ರಾಶಿಯಲ್ಲಿ ಬುಧ, ಶುಕ್ರ, ರಾಹುಗಳಿದ್ದು, ತುಲಾ ರಾಶಿಯಲ್ಲಿ ಗುರು ಇದ್ದು, ಇಂದೂ ಕೂಡ ಧನಸ್ಸು ರಾಶಿಯಲ್ಲಿ ಚಂದ್ರ - ಶನಿಯರು ಒಟ್ಟಿಗೆ ಇದ್ದಾರೆ. ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  


ಮೇಷ ರಾಶಿ : ಇಂದು ಬೆಳಗ್ಗೆ ಎದ್ದ ಕೂಡಲೇ ನೀವು ಮಾಡಬೇಕಾದ ಮೊದಲ ಕೆಲಸ ಭೂಮಿ ನಮಸ್ಕರಿಸುವುದು. ಆನಂತರವೇ ಮುಂದಿನ ಕೆಲಸ ಮಾಡಬೇಕು. ಇಂದು ನಿಮ್ಮ ಮನಸ್ಸು ಪ್ರಶಾಂತವಾಗಿರುತ್ತದೆ. ಉದ್ಯೋಗದಲ್ಲೂ ಯಾವುದೇ ಸಮಸ್ಯೆ ಇರುವುದಿಲ್ಲ. ಆದರ್ಶವಾಗಿ ದಿನವನ್ನು ಕಳೆಯುತ್ತೀರಿ. ಅಂದರೆ ನಾಲ್ಕು ಜನಕ್ಕೆ ಏನಾದರೂ ಮಾರ್ಗದರ್ಶನ ಮಾಡುವ ಉತ್ಸಾಹ ಧೈರ್ಯ ನಿಮ್ಮಲ್ಲಿ ಮೂಡುತ್ತದೆ.

ದೋಷಪರಿಹಾರ : ಒಂದು ಕೆಜಿಯಷ್ಟು ತೊಗರಿ ಬೇಳೆ ದಾನ ಮಾಡಿ. ಜೊತೆಗೆ ಗಣಪತಿಗೆ ಸಾಧ್ಯವಾದಷ್ಟು ಗರಿಕೆ ಸಮರ್ಪಿಸಿ.

ವೃಷಭ : ಬೆಳಗ್ಗೆ ಎದ್ದು ಸ್ನಾನ ಮಾಡಿ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ 5 ಲೋಟ ಹಾಲನ್ನು ದುರ್ಗಾ ದೇವಸ್ಥಾನಕ್ಕೆ ಅಥವಾ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಕೊಟ್ಟು ಬನ್ನಿ. ಇಂದು ನಿಮ್ಮಲ್ಲಿ ಒಂದು ಹೊಸ ಉತ್ಸಾಹ ಮೂಡುತ್ತದೆ. ಸಹೋದರಿಯರು ನಿಮಗೆ ಗೈಡ್ ಮಾಡ್ತಾರೆ. ನಿಮ್ಮ ಆಪ್ತ ಸಂಗಾತಿ ನಿಮ್ಮಲ್ಲಿ ಹೊಸ ಚೈತನ್ಯ ತುಂಬುತ್ತಾರೆ. ಅಂದಹಾಗೆ ಇಂದು ತಾಯಿಯೊಡನೆ ಒಂದು ಗಂಭೀರ ವಿಯಷ ಚರ್ಚಿಸುವ ಸಾಧ್ಯತೆ ಇದೆ.

ದೋಷ ಪರಿಹಾರ : ಓಂ ಶುಕ್ರಾಯ ನಮ:  ಮಂತ್ರವನ್ನು 18 ಬಾರಿ ಪಠಿಸಿ.

ಮಿಥುನ : ಆತ್ಮೀಯರೇ ಇಂದು ಬೆಳಗ್ಗೆ ಎದ್ದ ತಕ್ಷಣ ತಪ್ಪದೆ ನಿಮ್ಮ ತಾಯಿಗೆ ನಮಸ್ಕಾರ ಮಾಡಿ. ಆನಂತರವೇ ನಿಮ್ಮ ದೈನಂದಿನ ಕಾರ್ಯಕ್ಕೆ ತೊಡಗಿಕೊಳ್ಳಿ. ಇಂದು ನೀವು ನಿಮ್ಮ ಬುದ್ಧಿ ಶಕ್ತಿಯನ್ನು ಸರಿಯಾಗಿ ಪ್ರಯೋಗ ಮಾಡಲಿದ್ದೀರಿ. ನಿಮ್ಮಲ್ಲಿರುವ ಸದ್ಗುಣ ಇತರರಿಗೆ ಆದರ್ಶವಾಗಲಿದೆ. ಕೆಲ ಸಣ್ಣಪುಟ್ಟ ಸಮಸ್ಯೆ ಇದ್ದೇ ಇರತ್ತೆ. ಹೆಚ್ಚು ಯೋಚನೆ ಬೇಡ. 

ದೋಷ ಪರಿಹಾರ : ಒಂದು ಪುಟ್ಟ ಪರಿಹಾರ ಏನಂದ್ರೆ 10 ತುಳಸಿ ಪತ್ರೆ ತೆಗೆದುಕೊಂಡು ಹತ್ತಿರದ ವಿಷ್ಣು ದೇವಾಲಯಕ್ಕೆ ಹೋಗಿ 3 ಪ್ರದಕ್ಷಿಣೆ ಹಾಕಿ.

ಕಟಕ : ಇಂದು ಬೆಳಗ್ಗೆ ನೀವು ಮಾಡಬೇಕಾದ ಮೊದಲ ಕೆಲಸ ಸೂರ್ಯ ನಮಸ್ಕಾರ. ನೀವು ಪ್ರಯಾಣ ಮಾಡುತ್ತಿದ್ದರೆ ಕುಳಿತಲ್ಲಿಂದಲೇ ಸೂರ್ಯನ ಕಿರಣಗಳನ್ನು ನೋಡಿದರೂ ಸಾಕು. ಇಂದು ನಿಮ್ಮ ಮನಸ್ಸು ಸ್ವಲ್ಪ ಖಿನ್ನವಾಗಿರಲಿದೆ. ಒಂದು ವಿಷಯಕ್ಕಾಗಿ ತುಂಬಾ ಕೊರಗುವ ಸಾಧ್ಯತೆ ಇದೆ. ಹತ್ತಿರದ ಬಂಧುಗಳು ಧೈರ್ಯ ತುಂಬುತ್ತಾರೆ. ಕಾರ್ಯದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ ಆಗ ನಿಮ್ಮ ನೋವು ಸ್ವಲ್ಪ ಮರೆಯಾಗುತ್ತದೆ.

ದೋಷ ಪರಿಹಾರ : ಒಂದು ಲೋಟ ಹಾಲಿಗೆ ಸ್ವಲ್ಪ ಜೇನು ಬೆರೆಸಿ ಸ್ವಲ್ಪ ಚಂದನವನ್ನು ಬೆರೆಸಿ ಗಣಪತಿಗೆ ನೈವೇದ್ಯ ಮಾಡಿ ಆ ಹಾಲನ್ನು ನೀವೇ ಕುಡಿಯಿರಿ. ಖಂಡಿತಾ ಒಳಿತಾಗಲಿದೆ.

ಸಿಂಹ : ಆತ್ಮೀಯರೇ ಇಂದು ನೀವು ಮಾಡಿದ ಒಂದೇ ಒಂದು ಉಪಕಾರ ನಿಮ್ಮನ್ನು ಗೌರವಿಸುವಂತೆ ಮಾಡುತ್ತದೆ. ಪುಟ್ಟ ವಿಯಷವನ್ನೂ ಕಡೆಗಾಣಿಸಬೇಡಿ. ಶ್ರದ್ಧೆಯಿಂದಲೇ ಮಾಡಿ. ಆ ಪುಟ್ಟ ಸಂಗತಿಯೇ ನಿಮ್ಮನ್ನು ವಿಶೇಷ ವ್ಯಕ್ತಿಯನ್ನಾಗಿ ಮಾಡುತ್ತದೆ.

ದೋಷ ಪರಿಹಾರ : ಸ್ವಲ್ಪ ವಿಭೂತಿಯನ್ನು ಶಿವನಿಗೆ ಸಮರ್ಪಣೆ ಮಾಡಿ ಅದೇ ವಿಭೂತಿಯನ್ನು ಹಣೆಗೆ ಹಚ್ಚಿಕೊಳ್ಳಿ.

ಕನ್ಯಾ : ಪ್ರಿಯರೇ ಇಂದು ನೀವು ಮಾಡಬೇಕಾದ ಮೊದಲ ಕೆಲಸ ನಿಮ್ಮ ಸಹೋದರಿಗೆ ಅಥವಾ ನಿಮ್ಮ ತಾಯಿಗೆ  ಒಂದು ಪುಟ್ಟ ಸಹಾಯ ಮಾಡುವುದರ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸಿ. ಜೊತೆಗೆ ನಿಮ್ಮ ರಾಶಿಯವರಲ್ಲಿ ಒಂದು ಗುಣ ಸ್ತ್ರೀಯರನ್ನು ಓಲೈಸುವುದು. ಸ್ತ್ರೀಯರಿಗಾಗಿ ತುಂಬಾ ಶ್ರಮಿಸಬೇಕಾಗುತ್ತದೆ. ನಿಮ್ಮ ಕಾರ್ಯವೂ ಯಶಸ್ವಿಯಾಗಲಿದೆ.  

ದೋಷ ಪರಿಹಾರ : ಓಂ ಅವ್ಯಯಾಯ ನಮ: ಎಂಬ ಮಂತ್ರವನ್ನು ಭಕ್ತಿಯಿಂದ 12 ಬಾರಿ ಪಠಿಸಿ.

ತುಲಾ :   ಇಂದು ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ಓಂ ಭ್ರದ್ನಾಯ ನಮ: ಮಂತ್ರವನ್ನ 12 ಬಾರಿ ಪಠಿಸುವುದು. ಆನಂತರವೇ ಮುಂದಿನ ಕಾರ್ಯ ಮಾಡಿ. ಅಂದಹಾಗೆ ಇಂದು ನಿಮ್ಮ ಉತ್ಸಾಹ ಇಮ್ಮಡಿಯಾಗುತ್ತದೆ. ಇತರರ ಸಹಕಾರವೂ ಇರಲಿದೆ. ಶುಭ ದಿನ

ದೋಷ ಪರಿಹಾರ : ಲಕ್ಷ್ಮೀ ಸಹಿತ ವಿಷ್ಣು ದರ್ಶನ ನಿಮ್ಮ ದಿನವನ್ನು ಶುಭದಾಯಕ ಮಾಡುತ್ತದೆ.

ವೃಶ್ಚಿಕ : ಬೆಳಗ್ಗೆ  ಸ್ನಾನವಾದ ಕೂಡಲೇ ಒಂದು ಜಾಗದಲ್ಲಿ ಕುಳಿತು ಓಂ ಮಹಾಸೇನಾಯ ನಮ: ಎಂಬ ಮಂತ್ರವನ್ನು 24 ಬಾರಿ ಪಠಿಸಿ ಆನಂತರ ಮುಂದಿನ ಕಾರ್ಯ ಪ್ರಾರಂಭ ಮಾಡಿ. ಸಣ್ಣ ಪರಿಹಾರವೇ ನಿಮ್ಮ ದಿನವನ್ನು ಸಮಾಧಾನದಿಂದ ಇಟ್ಟಿರುತ್ತದೆ. 

ದೋಷ ಪರಿಹಾರ : ಸುಬ್ರಹ್ಮಣ್ಯ ದರ್ಶನ ಹಾಗೂ ಪ್ರಾರ್ಥನೆ ಮಾಡಿ

ಧನಸ್ಸು : ಇಂದು ನೀವು ಬೆಳಗ್ಗೆ ಸ್ನಾನವಾದ ಕೂಡಲೇ ಒಂದು ಲೋಟ ಹಾಲನ್ನು ದೇವರಿಗೆ ನೈವೇದ್ಯ ಮಾಡಿ ಆ ಹಾಲನ್ನು ತೀರ್ಥವಾಗಿ ಸ್ವೀಕರಿಸಿ. ಆ ಹಾಲು ಸ್ವೀಕರಿಸುವಾಗ ‘‘ ನಮ: ಶಾಂತಾಯ ದಿವ್ಯಾಯ ಸತ್ಯ ಧರ್ಮಸ್ವ ರೂಪಿಣೆ ಸ್ವಾನಂದಾ ಮೃತ ತೃಪ್ತಾಯ ಶ್ರೀ ಧರಾಯ ನಮ ’’ ಎಂಬ ಮಂತ್ರ ಪಠಿಸಿ. ಆನಂತರ ನಿಮ್ಮ ದಿನವನ್ನು ನೀವೇ ಪರೀಕ್ಷಿಸಿಕೊಳ್ಳಿ.
ದೋಷ ಪರಿಹಾರ : ಓಂ ಶ್ರೀಧರಾಯ ನಮ: ಮಂತ್ರವನ್ನು 21 ಬಾರಿ ಪಠಿಸಿ. 

ಮಕರ : ಬೆಳಗ್ಗೆ ಎದ್ದು ಸ್ನಾನದ ನಂತರ ಒಂದು ತಾಮ್ರದ ತಂಬಿಗೆಯಲ್ಲಿ ನೀರನ್ನು ತುಂಬಿ ಅದಕ್ಕೆ ಸ್ವಲ್ಪ ತುಳಸಿ ಪತ್ರೆಯನ್ನು ಹಾಕಿ ಆ ತಂಬಿಗೆಯನ್ನು ಎಡಗೈ ಅಂಗೈಯಲ್ಲಿಟ್ಟುಕೊಂಡು ಸೂರ್ಯನಿಗೆ ಎದುರಾಗಿ ನಿಂತು ನಿಮ್ಮ ಬಲಗೈಯನ್ನು ತಂಬಿಗೆ ಮೇಲೆ ಮುಚ್ಚಿಕೊಂಡು ಆ ತಂಬಿಗೆಯನ್ನು ಸೂರ್ಯನಿಗೆ ತೋರಿಸುತ್ತಾ ಓಂ ಅರುಣಾಯ ನಮ: ಎಂಬ ಮಂತ್ರವನ್ನು 21 ಬಾರಿ ಪಠಿಸಿ ಆ ನೀರನ್ನು ಕುಡಿದುಬಿಡಿ. ಇಡೀ ದಿನ ನಿಮ್ಮ ಕಾರ್ಯದಲ್ಲಿ ಸಾಕಷ್ಟು ಅನುಕೂಲವಾಗುತ್ತದೆ.
ದೋಷ ಪರಿಹಾರ : ನಂಬಿಕೆಯಿಂದ ಮೇಲೆ ತಿಳಿಸಿರುವ ಉಪಾಯ ಮಾಡಿ.

ಕುಂಭ :   ಇಂದು ನೀವು ಒಂದು ಹಿಡಿ ಎಳ್ಳನ್ನು ತೆಗೆದುಕೊಂಡು ಶನೈಶ್ಚರ ದೇವಸ್ಥಾನಕ್ಕೆ ಹೋಗಿ 7 ಪ್ರದಕ್ಷಿಣೆ ಹಾಕಿ ಆ ಎಳ್ಳನ್ನು ಮೂರು ಸುತ್ತು ನೀವಾಳಿಸಿ ಇದನ್ನು ಹೋಮಕ್ಕೆ ಬಳಸಿ ಎಂದು ಅರ್ಚಕರಿಗೆ ಕೊಟ್ಟುಬನ್ನಿ.
ದೋಷ ಪರಿಹಾರ :  ಶಂ ಶನೈಶ್ಚರಾಯ ನಮ: ಎಂಬ ಮಂತ್ರವನ್ನು 7 ಬಾರಿ ಪಠಿಸಿ ಸಾಕು.
  
ಮೀನ : ಗೊಂದಲದ ಸ್ವಭಾವ ನಿವಾರಣೆಗೆ ಎರಡು ಬಾಳೆಹಣ್ಣನ್ನು ತಂದು ಕೆಂಪುಬಣ್ಣದ ಹಸುವಿಗೆ ಕೊಟ್ಟುಬಿಡಿ. ಇಂದಿನ ನಿಮ್ಮ ದಿನ ಶುಭದಿನವಾಗಿರಲಿದೆ.  
ದೋಷ ಪರಿಹಾರ : ಓಂ ಭವಹರಾಯ ನಮ: ಎಂಬ ಮಂತ್ರವನ್ನು 11 ಬಾರಿ ಪಠಿಸಿ.

ಗೀತಾಸುತ.

Follow Us:
Download App:
  • android
  • ios