ಈ ರಾಶಿಯವರಿಂದು ಜಾಗ್ರತೆಯಿಂದ ವಾಹನ ಚಲಾಯಿಸಿದರೊಳಿತು, ಯಾರಿಗೇನು ಫಲ? ಓದಿ ಇಂದಿನ ರಾಶಿ ಫಲ

Special Bhavishya June 28
Highlights

ಈ ರಾಶಿಯವರಿಂದು ಜಾಗ್ರತೆಯಿಂದ ವಾಹನ ಚಲಾಯಿಸಿದರೊಳಿತು, ಯಾರಿಗೇನು ಫಲ? ಓದಿ ಇಂದಿನ ರಾಶಿ ಫಲ

ರಾಶಿ ಫಲ

28-06-18 - ಗುರುವಾರ

ಶ್ರೀ ವಿಲಂಬಿ ನಾಮ ಸಂವತ್ಸರ

ಉತ್ತರಾಯಣ 

 

ಗ್ರೀಷ್ಮ ಋತು

 

ನಿಜ ಜ್ಯೇಷ್ಠ 

ಮಾಸ 

ಶುಕ್ಲ 

ಪಕ್ಷ

 ಪೌರ್ಣಮಿ 

ತಿಥಿ 

ಮೂಲಾ ನಕ್ಷತ್ರ

ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು. ಮಿಥುನ ರಾಶಿಯಲ್ಲಿ ರವಿ ಇದ್ದು, ಕರ್ಕಟಕ ರಾಶಿಯಲ್ಲಿ ಬುಧ, ಶುಕ್ರ, ರಾಹುಗಳಿದ್ದು, ತುಲಾ ರಾಶಿಯಲ್ಲಿ 

ಗುರು ಇದ್ದು, ಧನಸ್ಸು ರಾಶಿಯಲ್ಲಿ ಚಂದ್ರ - ಶನಿಯರು ಒಟ್ಟಿಗೆ ಇದ್ದಾರೆ. ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ 

ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  

 

ಮೇಷ ರಾಶಿ : ಇಂದು ನಿಮ್ಮ ಮನಸ್ಸಿನಲ್ಲಿ ಒಂದು ಹೊಸ ವಿಚಾರ ಹೊಳೆಯುವುದಲ್ಲದೆ ಅದಕ್ಕೆ ಹಿರಿಯರಿಂದ ಅಥವಾ ಗುರುಗಳಿಂದ ಪ್ರೋತ್ಸಾಹ ಸಿಕ್ಕುತ್ತದೆ. ನಂಬಿಕೆ 

ವಿಚಾರದಲ್ಲಿ ಸ್ವಲ್ಪ ಸಂಶಯ ನಿಮ್ಮನ್ನು ಕಾಡಲಿದೆ. ಗಣಪತಿಯನ್ನು ಸ್ಮರಿಸುವುದರಿಂದ ಆ ಸಂಶಯ ನಿವಾರಣೆ ಆಗುತ್ತದೆ.

ದೋಷಪರಿಹಾರ : ಎರಡು ತೆಂಗಿನಾಕಾಯಿಗಳನ್ನು ಗಣಪತಿ ದೇವಸ್ಥಾನಕ್ಕೆ ಕೊಟ್ಟುಬನ್ನಿ.

 

ವೃಷಭ: ಇಂದು ನಿಮ್ಮ ಮನಸ್ಸು ಸ್ವಲ್ಪ ಗೊಂದಲ ಅಥವಾ ಭಯದಲ್ಲೇ ಇರುತ್ತದೆ. ಯಾವ ವಿಚಾರಕ್ಕೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನೀವು ತೆಗೆದುಕೊಂಡ ನಿರ್ಧಾರ 

ನಿಮ್ಮನ್ನು ಗುರಿಮುಟ್ಟಿಸುತ್ತದೆ. ಯೋಚಿಸಬೇಡಿ. ನೀವು ಮಾಡಲೇಬೇಕಾದ ಒಂದು ಕಾರ್ಯವೆಂದರೆ ಲಕ್ಷ್ಮೀ ದೇವಸ್ಥಾನಕ್ಕೆ 8 ಲೋಟದಷ್ಟು ಹಾಲನ್ನು ಅಭಿಷೇಕಕ್ಕೆ 

ಕೊಟ್ಟುಬನ್ನಿ ಆನಂತರ ಆಗುವ ಚಮತ್ಕಾರವನ್ನು ನೀವೇ ಗಮನಿಸಿ.

ದೋಷ ಪರಿಹಾರ : ಯಾದೇವೀ ಸರ್ವ ಭೂತೇಷು ಶಕ್ತಿರೂಪೇಣ ಸಂಸ್ಥಿತಾ  ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ಈ ಮಂತ್ರವನ್ನು 5 ಬಾರಿ ಪಠಿಸಿ.

 

ಮಿಥುನ : ಆತ್ಮೀಯರೇ ಇಂದು ಬೆಳಗ್ಗೆ ಎದ್ದ ತಕ್ಷಣ ತಪ್ಪದೆ ಸೂರ್ಯ ದರ್ಶನ ಮಾಡಿ ಆನಂತರವೇ ನಿಮ್ಮ ಕಾರ್ಯಗಳನ್ನು ಪ್ರಾರಂಭ ಮಾಡಿ.  ನಿಮ್ಮ ತಂದೆಯಿಂದ ಅಥವಾ 

ನಿಮ್ಮ ತಂದೆ ಸಮಾನರಿಂದ ನಿಮಗೆ ಧೈರ್ಯ ಬರಲಿದೆ. ಬಂಧುಗಳು ನಿಮ್ಮ ಧನ ಹಾನಿಗೆ ಕಾರಣರಾಗುತ್ತಾರೆ.  ಹಾಗಂತ ಅವರನ್ನು ಬೈಕೊಳ್ಬೇಡಿ. ಪ್ರೀತಿಯಿಂದಲೇ ನೋಡಿ. 

ಶುಭವೇ ಆಗಲಿದೆ. ದೋಷ ಪರಿಹಾರ : ಸಾಧ್ಯವಾದರೆ ತುಳಸಿ ಮಾಲೆಯನ್ನು ವಿಷ್ಣು ದೇಗುಲಕ್ಕೆ ಸಮರ್ಪಿಸಿ, 

ಸಾಧ್ಯವಾಗದೆ ಇದ್ದವರು ಓಂ ನಾರಸಿಂಹಾಯ ನಮ: ಎಂಬ ಮಂತ್ರವನ್ನು 12 ಬಾರಿ ಪಠಿಸಿ

 

ಕಟಕ: ಇಂದು ನೀವು ದಯವಿಟ್ಟು ಜಾಗ್ರತೆಯಿಂದ ಇರಬೇಕು. ಮನಸ್ಸು ಸ್ವಲ್ಪ ಕೋಪ ಸ್ವಭಾವದಿಂದ ಕೂಡಿರುತ್ತದೆ. ಹಾಗಾಗಿ ಹೆಚ್ಚು ಮಾತು ಬೇಡ. ರಸ್ತೆಯಲ್ಲಿ ಹೋಗುವಾಗ 

ಜಾಗ್ರತೆಯಿಂದ ವಾಹನ ಚಲಾಯಿಸಿ. ಚಂದ್ರಾಯ ನಮ: ಮಂತ್ರವನ್ನು 20 ಬಾರಿ ಪಠಿಸಿ 

ದೋಷ ಪರಿಹಾರ: ಮಹಾಲಕ್ಷ್ಮಿಗೆ ತುಪ್ಪದ ದೀಪವನ್ನು ಹಚ್ಚಿ

.

ಸಿಂಹ: ಆತ್ಮೀಯರೇ ಇಂದು ನಿಮ್ಮ ಮನೋಭಿಲಾಷೆ ಈಡೇರುತ್ತದೆ. ಆದರೆ ಮಕ್ಕಳಿಂದ ಸ್ವಲ್ಪ ಅಸಮಧಾನವಾಗಬಹುದು. ಇನ್ನೊಂದು ಮುಖ್ಯವಿಷಯವೆಂದರೆ ಕಬ್ಬಿಣದ 

ವಸ್ತುವು ತಲೆಗೆ ತಾಕಿ ಹೆಚ್ಚು ಪೆಟ್ಟುಬೀಳುವ ಸಾಧ್ಯತೆ ಇದೆ. ಎಚ್ಚರದಿಂದ ಓಡಾಡಿ.

ದೋಷ ಪರಿಹಾರ : ಓ ದುಂ ದುರ್ಗಾಯ ನಮ: ಎಂಬ ಮಂತ್ರವನ್ನು 8 ಬಾರಿ ಪಠಿಸಿ

 

ಕನ್ಯಾ : ಆತ್ಮೀಯರೇ ಇಂದು ಸ್ತ್ರೀಯರಿಗೆ ಲಾಭದ ದಿನ, ನಿಮ್ಮ ರಾಶಿಯ ಅಧಿಪತಿ ಲಾಭದಲ್ಲಿದ್ದಾನೆ ಹಾಗಾಗಿ ಲಾಭವನ್ನೇ ತರಲಿದೆ. ಇನ್ನೂ ಒಂದು ಸಂತಸದ 

ಸಮಾಚಾರವೆಂದರೆ ನೀವು ನಿರೀಕ್ಷಿಸದ ಕಡೆಯಿಂದ ಧನಲಾಭವಿದೆ.

ದೋಷ ಪರಿಹಾರ : ಓಂ ಹಿರಣ್ಯಗರ್ಭಾಯ ನಮ: ಮಂತ್ರವನ್ನು 9 ಬಾರಿ ಪಠಿಸಿ.

 

ತುಲಾ:  ಪ್ರಿಯರೇ ಇದು ನಿಮ್ಮ ಉತ್ಸಾಹದ ದಿನ, ಮನೋ ಬಲ ಪ್ರಖರವಾಗಿರಲಿದೆ. ಅಂದುಕೊಂಡ ಕೆಲಸ ನೆರವೇರುತ್ತದೆ. ಇನ್ನೊಂದು ಮುಖ್ಯವಿಷಯವೆಂದರೆ ನಿಮ್ಮ 

ಮಕ್ಕಳಿಂದ ನಿಮ್ಮ ಸಹೋದರರಲ್ಲಿ ಭಿನ್ನಾಭಿಪ್ರಾಯಬರಬಹುದು. ಎಚ್ಚರವಹಿಸಿ.

ದೋಷ ಪರಿಹಾರ : ಓಂ ಗುರವೇ ನಮ: ಮಂತ್ರವನ್ನು 18 ಬಾರಿ ಪಠಿಸಿ. ಕೆಲವರು ಗುರುವೇ ಅಂತಾರೆ ಅದು ತಪ್ಪು ಉಚ್ಚಾರಣೆ. ವ್ಯಾಕರಣ ದೋಷಯುಕ್ತ ಪದ ಹಾಗಾಗಿ 

ಗುರವೇ ನಮ: ಅಂತಲೇ ಪಠಿಸಿ. ಅದೇ ಸರಿ ಪ್ರಯೋಗ.

 

ವೃಶ್ಚಿಕ: ಇಂದು ನಿಮ್ಮ ಮನೆಯಲ್ಲಿ ಸ್ವಲ್ಪ ಗಲಾಟೆಯಾಗುವ ಸಂಭವ, ಉದ್ರಿಕ್ತರಾಗಿ ಹೆಚ್ಚು ಮಾತನಾಡುವ  ಸಾಧ್ಯತೆ ಇರುತ್ತದೆ. ಬೇಡ. ಸ್ವಲ್ಪ ಸಮಾಧಾನ ತಂದುಕೊಳ್ಳಿ. 

ಮುಖ್ಯವಾಗಿ 7 ಲೋಟದಷ್ಟು ಎಳ್ಳೆಣ್ಣೆಯನ್ನು ಶನಿ ದೇವಸ್ಥಾನಕ್ಕೆ ಕೊಟ್ಟು ಬನ್ನಿ. 

ದೋಷ ಪರಿಹಾರ : ನೆನ್ನೆಯಂತೆಯೇ ಶಂ ಶನೈಶ್ಚರಾಯ ನಮ: ಮಂತ್ರವನ್ನು 7 ಬಾರಿ ಪಠಿಸಿ.

 

ಧನಸ್ಸು: ಇಂದೂ ನಿಮ್ಮ ಮನಸ್ಸು ಸ್ವಸ್ಥ  ಇರುವುದಿಲ್ಲ. ಸ್ವಲ್ಪ ಸಮಾಧಾನವಿರಲಿ. ಹಾದಿಯಲ್ಲಿ ಸಾಗುವವರೂ ಕೂಡ ಇಂದು ನಿಮಗೆ ಕೋಪ ತರಿಸುವ ಸಾಧ್ಯತೆ ಇದೆ. ಕೋಪ 

ನಿಗ್ರಹಕ್ಕಾಗಿ ಆಂಜನೇಯ ದರ್ಶನ ಮಾಡಿ.

ದೋಷ ಪರಿಹಾರ: ಓಂ ಭಯಕೃದ್ಭಯನಾಶನ: ಮಂತ್ರವನ್ನು 12 ಬಾರಿ ಪಠಿಸಿ. 

 

ಮಕರ : ನಿಮ್ಮ ಕಾರ್ಯಗಳು ನೆರವೇರಲಿವೆ. ನಿಮ್ಮ ತಂದೆಯಿಂದ ಸ್ವಲ್ಪ ಕಿರಿಕಿರಿಯಾಗಲಿದೆ. 

ಆದರೆ ಕಡೆಗಣಿಸುವ ಅವಶ್ಯಕತೆ ಇಲ್ಲ. ನಿಮ್ಮ ಕಾರ್ಯ ನೀವು ಮುಂದುವರೆಸಿ. ತಲೆಗೆ ಪೆಟ್ಟು ಬೀಳುವ ಸಾಧ್ಯತೆ ಇದೆ ಗಮನವಹಿಸಿ.

ದೋಷ ಪರಿಹಾರ: ಓಂ ಮಿತ್ರಾಯ ನಮ: ಮಂತ್ರವನ್ನು 12 ಬಾರಿ ಪಠಿಸಿ.

 

ಕುಂಭ: ಇಂದು ನಿಮ್ಮ ಪಾಲಿಗೆ ಲಾಭದಾಯಕ ದಿನ, ನಿಮ್ಮ ಮಿತ್ರರು ನಿಮಗೆ ಸಹಾಯ ಮಾಡುತ್ತಾರೆ. ಮುಖ್ಯವಾಗಿ ನಿಮ್ಮ ಸಂಗಾತಿ ನಿಮಗೆ ಶುಭ ಸುದ್ದಿ ತರಲಿದ್ದಾಳೆ. 5 

ಬಾಳೆಹಣ್ಣನ್ನು ಆಂಜನೇಯ ಸ್ವಾಮಿಗೆ ಸಮರ್ಪಿಸಿ.   

ದೋಷ ಪರಿಹಾರ: ಆಂಜನೇಯ ಸ್ಮರಣೆಯೇ ಶ್ರೀರಕ್ಷೆ.   

 

ಮೀನ: ಆರೋಗ್ಯ ವೃದ್ಧಿ, ಹಿರಿಯರಿಗೆ ಸ್ವಲ್ಪ ಬೇಸರದ ದಿನ, ಹೆಣ್ಣುಮಕ್ಕಳಿಂದ ಪ್ರೀತಿಯ ಮಾತುಗಳು ಹಾಗೂ ಸಹಾಯ. ಲಾಭದ ದಿನವಾಗಿರಲಿದೆ.

ದೋಷ ಪರಿಹಾರ : ಶ್ರೀ ಪರಮ ಹಂಸಾಯ ನಮ: ಈ ಮಂತ್ರವನ್ನು 12 ಬಾರಿ ಪಠಿಸಿ.

 

- ಗೀತಾಸುತ.

loader