ಈ ರಾಶಿಯವರಿಗೆ ಭಾಗ್ಯೋದಯದ ದಿನ

Special Bhavishya June 27
Highlights

ಈ ರಾಶಿಯವರಿಗೆ ಭಾಗ್ಯೋದಯದ ದಿನ 

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು. ಮಿಥುನ ರಾಶಿಯಲ್ಲಿ ರವಿ ಇದ್ದು, ಕರ್ಕಟಕ ರಾಶಿಯಲ್ಲಿ ಬುಧ, ಶುಕ್ರ, ರಾಹುಗಳಿದ್ದು, ತುಲಾ ರಾಶಿಯಲ್ಲಿ ಗುರು ಇದ್ದು, ಧನಸ್ಸು ರಾಶಿಯಲ್ಲಿ ಚಂದ್ರ - ಶನಿಯರು ಒಟ್ಟಿಗೆ ಇದ್ದಾರೆ. ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ. 

ಮೇಷ ರಾಶಿ: ಪ್ರಿಯ ಓದುಗರೇ ಇಂದು ಪೌರ್ಣಮಿ ನಿಮ್ಮ ರಾಶಿಯಿಂದ  ಭಾಗ್ಯ ಸ್ಥಾನಕ್ಕೆ ಚಂದ್ರ ಗತಿಸಲಿದ್ದಾನೆ. ನಿಮಗೆ ಒಂದು ಸಂತಸ ಹಾಗೂ ನಿರಾಶೆಯ ಸುದ್ದಿ ಎರಡೂ ಇದೆ. ಕಾರಣ ಶನಿ ಜೊತೆ ಚಂದ್ರ ಕೂಡಿರುವ ಕಾರಣ. ಮಾನಸಿಕ ನೆಮ್ಮದಿ ಕಡಿಮೆ. ಎಷ್ಟು ದುಡಿದರೂ ಹೆಸರಿಲ್ಲ, ಎಷ್ಟು ಕಷ್ಟ ಪಟ್ಟರೂ ಹಣವಿಲ್ಲ ಎಂಬ ಭಾವ ಕಾಡುತ್ತದೆ. ಹೊಸ ಆಲೋಚನೆ ನಿಮ್ಮನ್ನು ತೀವ್ರವಾಗಿ ಕಾಡುತ್ತದೆ. 
ದೋಷ ಪರಿಹಾರ - ಮಹಾಲಕ್ಷ್ಮಿ ನಾಮ ಸ್ಮರಣೆಯಿಂದ ಶಾಂತಿ.

ವೃಷಭ : ನಿಮ್ಮ ರಾಶಿಯಿಂದ ಎಂಟನೇ ಭಾವದಲ್ಲಿ ಶನಿ-ಚಂದ್ರರು ಒಟ್ಟಾಗಲಿದ್ದಾರೆ. ಹಾಗಾಗಿ ಇಂದು ನಾಳೆ ಎರಡೂ ದಿನ ನಿಮ್ಮ ಮನೋ ಚಿಂತನೆಗೆ ಉತ್ತರವಿಲ್ಲ. ತುಂಬಾ ಯೋಚಿಸಿ ಕೊರಗುವ ಮನಸ್ಸು ಇಂದು. ಯಾವುದೂ ಕೈಗೂಡುತ್ತಿಲ್ಲ ಎಂಬ ಭಾವನೆ. ಇರುವ ಉದ್ಯೋಗ ಬಿಟ್ಟು ಬೇರೆ ಉದ್ಯೋಗ ಮಾಡುವ ಯೋಚನೆ ಬರಲಿದೆ. 
ದೋಷ ಪರಿಹಾರ : ಒಂದು ಲೋಟ ಹಾಲನ್ನು ದಾನ ಮಾಡಿ. ಸಾಧ್ಯವಾದರೆ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಹಾಲುಕೊಟ್ಟು ಬನ್ನಿ. 

ಮಿಥುನ: ಗಮನ ಇಟ್ಟು ಓದಿಕೊಳ್ಳಿ ಇಂದು ನಿಮ್ಮ ಹಣ ಖಂಡಿತ ವ್ಯಯವಾಗುತ್ತದೆ. ಅಥವಾ ಯಾರಾದರೂ ಕದಿಯುವ ಅಥವಾ ನೀವೇ ಕಳೆದುಕೊಳ್ಳುವ ಸಾಧ್ಯತೆ ಇದೆ. ಹಣಕಾಸಿನ ಬಗ್ಗೆ ಬಹಳ ಎಚ್ಚರದಿಂದ ಇರಬೇಕು. ಇಂದು ನಾಳೆ ಎರಡೂ ದಿನ ಎಚ್ಚರವಾಗಿರಿ. 
ದೋಷ ಪರಿಹಾರ : ಓಂ ವಷಟ್ಕಾರಾಯ ನಮ: ಎಂದು ಪಠಿಸಿ. 

ಕಟಕ: ನಿಮ್ಮ ರಾಶಿಯ ಅಧಿಪತಿ ಶನಿಯುಕ್ತನಾಗಿದ್ದಾನೆ. ಇಂದು ಒಂದು ವಿಷ್ಯದ ಬಗ್ಗೆ ತೀವ್ರವಾಗಿ ಯೋಚಿಸಿ ಖಿನ್ನರಾಗುವ ಸಾಧ್ಯತೆ ಇದೆ. ನಿಮ್ಮದಲ್ಲದ ತಪ್ಪಿಗೆ ನೀವು ಗುರಿಯಾಗುತ್ತೀರಿ. ದು:ಖ ಮಾಡಿಕೊಳ್ಳಬೇಡಿ. 'ಮತ್ಸಮ: ಪಾತಕೀ ನಾಸ್ತಿ ಪಾಪಘ್ನೀ ತ್ವತ್ಸಮಾ ನಹಿ ಏವಂ ಜ್ಞಾತ್ವ ಮಹಾದೇವಿ ಯಥಾ ಯೋಗ್ಯಂ ತಥಾ ಕುರು' ಈ ಮಂತ್ರವನ್ನು ಅನನ್ಯ ಭಕ್ತಿಯಿಂದ ಹೇಳಿಕೊಳ್ಳಿ. ನಿಮ್ಮ ಮನಸ್ಸಿಗೆ ಖಂಡಿತ ಸಮಾಧಾನ ಸಿಗುತ್ತದೆ. 
ದೋಷ ಪರಿಹಾರ: ಲಲಿತಾ ದೇವಿಯನ್ನು ಭಕ್ತಿಯಿಂದ ಪ್ರಾರ್ಥಿಸಿ. ಲಲಿತಾ ಅಂದ್ರೆ ತಾಯಿ ಪಾರ್ವತಿ ದೇವಿ.

ಸಿಂಹ:  ಇಂದು ಸ್ವಲ್ಪ ಕಾರ್ಯಭಾರ ಹೆಚ್ಚು. ಅತೀ ಶ್ರಮದಿಂದ ಕಾರ್ಯ ಮಾಡಬೇಕಾಗುತ್ತದೆ. ಎಷ್ಟು ಮಾಡಿದರೂ ಕೆಲಸ ಮುಗಿಯುತ್ತಿಲ್ಲ ಎಂಬ ಭಾವ ನಿಮ್ಮನ್ನು ಕಾಡುತ್ತದೆ. ಮಾನಸಿಕವಾಗಿ ಬಳಲುವ ಸಾಧ್ಯತೆ. ಹೆಚ್ಚು ನೀರು ಕುಡಿಯಿರಿ. ಮನೆ ದೇವರ ಪ್ರಾರ್ಥನೆ ಮಾಡಿ 
ದೋಷ ಪರಿಹಾರ: ಶಿವ ದೇವಸ್ಥಾನಕ್ಕೆ ಹೋಗಿ ಗೋಧಿ ಧಾನ್ಯದಿಂದ ಅಭಿಷೇಕ ಮಾಡಿಸಿ.

ಕನ್ಯಾ: ಆತ್ಮೀಯರೇ ವಾಹನ ಚಲಾಯಿಸುವಾಗ ಸ್ವಲ್ಪ ಎಚ್ಚರ ವಹಿಸಿ. ತಾಯಿ ಸ್ವಲ್ಪ ಕಟುವಾಗಿ ಮಾತನಾಡಬಹುದು. ಸಹಿಸಿಕೊಳ್ಳಿ. ಬೇಸರ ಮಾಡಿಕೊಳ್ಳಬೇಡಿ. ತಾಯಿ ದೇವರ ಸಮಾನ. ಅವರಿಂದ ಬಂದ ಬೈಗುಳವೇ ನಿಮಗೆ ರಕ್ಷೆಯಾಗುತ್ತದೆ. ಇಂದು ನಿಮ್ಮ ಉದ್ಯೋಗ ಸ್ಥಾನದಲ್ಲಿ ಸಮಾಧಾನಕರ ದಿನ. 
ದೋಷ ಪರಿಹಾರ: 'ಓಂ ಪುರುಷೋತ್ತಮಾಯ ನಮ:' ಎಂಬ ಮಂತ್ರವನ್ನು 18 ಬಾರಿ ಪಠಿಸಿ.

ತುಲಾ:  ಓರ್ವ ಸ್ತ್ರೀ ನಿಮ್ಮ ಹಾದಿ ತಪ್ಪಿಸಲಿದ್ದಾಳೆ. ಅಷ್ಟೇ ಅಲ್ಲ ನೀವೂ ಅಷ್ಟೆ ಸುಲಲಿತವಾಗಿ ಜಾರಿ ಬೀಳಲಿದ್ದೀರಿ. ಎಚ್ಚರವಾಗಿರಿ. ಕಸ್ಟಮರ್ ಕಾಲ್ ಕೂಡ ನಿಮ್ಮ ತಲೆ ಕೆಡಿಸುವ ಸಾಧ್ಯತೆ ಇದೆ. ಮುಖ್ಯವಾಗಿ ಸಹೋದರರಲ್ಲಿ ಹೊಂದಾಣಿಕೆ ತಪ್ಪಬಹುದು. ಜಾಗ್ರತೆ ವಹಿಸಿ.
ದೋಷ ಪರಿಹಾರ : ಶ್ರೀ ಚಂದ್ರ ಸಹೋದರ್ಯೈ ನಮ: ಎಂಬ ಮಂತ್ರವನ್ನು 8 ಬಾರಿ ಪಠಿಸಿ.

ವೃಶ್ಚಿಕ: ಪ್ರಿಯರೇ ನಿಮ್ಮ ಮಾತಿನಿಂದ ಇತರರಿಗೆ ಬೇಸರವಾದೀತು. ನೀವು ಒಳ್ಳೆಯವರೇ ಆದರೆ ಸಂದರ್ಭ ನಿಮ್ಮನ್ನು ಕಟು ಮಾತುಗಾರರನ್ನಾಗಿ ಮಾಡುತ್ತದೆ. ನಿಮ್ಮ ತಪ್ಪಲ್ಲ. ಆದಷ್ಟು ಸ್ವಲ್ಪ ಜಾಗ್ರತೆಯಿಂದ ಮಾತಾಡಿ. ಕಾರಣ ಮಾತಿನ ಸ್ಥಾನವಾದ ಧನಸ್ಸು ರಾಶಿಯಲ್ಲಿ ಶನಿ-ಚಂದ್ರರ ಯುತಿ ಇದೆ ನೋಡಿ ಹಾಗಾಗಿ. ಅಷ್ಟೇ ಅಲ್ಲ ಹಣವ್ಯಯವೂ ಆಗಲಿದೆ. ಜಾಗ್ರತೆವಹಿಸಿ. 
ದೋಷ ಪರಿಹಾರ: 'ಶಂ ಶನೈಶ್ಚರಾಯ ನಮ:' ಮಂತ್ರವನ್ನು 7 ಬಾರಿ ಪಠಿಸಿ.

ಧನಸ್ಸು: ಇಂದು ನಿಮ್ಮ ಮನಸ್ಸು ಕದಡಿ ಹೋಗುವ ಸಾಧ್ಯತೆ ಇದೆ. ದು:ಖಕ್ಕೆ ಒಳಗಾಗುವ ಸನ್ನಿವೇಶ. ಕೆಲಸ, ಅಥವಾ ನಿಮ್ಮ ಸಂಗಾತಿ ಮಾತು, ಅಥವಾ ಆರೋಗ್ಯ ಈ ಕಾರಣಗಳಿಂದ ನಿಮ್ಮ ಮನಸ್ಸು ಖಿನ್ನತೆಗೆ ಹೋಗುತ್ತದೆ. ದಯವಿಟ್ಟು ನಿಮ್ಮ ಮನೋಬಲ ಹೆಚ್ಚಲಿಕ್ಕಾಗಿ ಶಿವ ಸ್ಮರಣೆ ಮಾಡಿ. 
ದೋಷ ಪರಿಹಾರ: ಓಂ ಶಂಭವೇ ನಮ: ಮಂತ್ರವನ್ನು 11 ಬಾರಿ ಹೇಳಿಕೊಳ್ಳಿ. 

ಮಕರ: ಆತ್ಮೀಯ ಓದುಗರೇ ನಿಮ್ಮ ರಾಶಿಯ ವ್ಯಯ ಸ್ಥಾನದಲ್ಲಿ ಚಂದ್ರನಿದ್ದಾನೆ. ನಿಮ್ಮ ಮಡದಿಯಲ್ಲಿ ಅಥವಾ ನಿಮ್ಮ ಯಜಮಾನರಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಬರುವ ಸಾಧ್ಯತೆ ಇದೆ. ಅವರಿಂದ ಧನ ನಷ್ಟವಾಗುವ ಸಾಧ್ಯತೆಯೂ ಇದೆ. ಯಾವುದೋ ವಸ್ತುಕೊಳ್ಳಲು ಹೋಗಿ ಇನ್ನೇನೋ ಆಗಿ ಬಿಡುವ ಸಾಧ್ಯತೆ. ಹೀಗೆ ಸಮಸ್ಯೆ ನಿಮ್ಮನ್ನು ಕಾಡುವ ಸಾಧ್ಯತೆ ಇದೆ. ಎಚ್ಚರವಹಿಸಿ.
ದೋಷ ಪರಿಹಾರ: 'ಓಂ ಶನೈಶ್ಚರಾಯ ನಮ:' ಮಂತ್ರವನ್ನು 21 ಬಾರಿ ಪಠಿಸಿ.

ಕುಂಭ: ಆರೋಗ್ಯ ಸಮಸ್ಯೆ ಕಾಡುವುದು ಬಿಟ್ಟು ಇನ್ನೇನೂ ಸಮಸ್ಯೆ ನಿಮಗಿಲ್ಲ. ಇಂದು ಶುಭದಾಯಕ ದಿನವೇ ಆಗಿರಲಿದೆ. ಯೋಚಿಸಬೇಡಿ. 
ದೋಷ ಪರಿಹಾರ: ಧನ್ವಂತರಿ ದೇವರನ್ನು ನೆನೆಯಿರಿ.   

ಮೀನ : ನಿಮ್ಮ ಮಕ್ಕಳಿಂದ ನಿಮಗೆ ಸ್ವಲ್ಪ ತೊಂದರೆ ಕಿರಿಕಿರಿಯಾಗಲಿದೆ. ಆದಷ್ಟು ಮಕ್ಕಳ ತಂಟೆ ಬೇಡ. ಅವರಿಗೆ ಏನೂ ತಿಳಿ ಹೇಳಬೇಡಿ. ಇನ್ನೆರಡು ದಿನ ಸುಮ್ಮನಿದ್ದು ಬಿಡಿ. ಉಳಿದಂತೆ ಬೇರೇನೂ ಸಮಸ್ಯೆ ಇಲ್ಲ.  
ದೋಷ ಪರಿಹಾರ : ಕನಿಷ್ಟ 12 ಗಾಯತ್ರಿ ಮಂತ್ರವನ್ನಾದರೂ ಪಠಿಸಿ.

ಗೀತಾಸುತ.

loader