ಶುಭ ಫಲದ ನಿರೀಕ್ಷೆಯಲ್ಲಿದ್ದೀರಾ..? ನಿರೀಕ್ಷೆ ಖಚಿತವಾಗಿ ನೆರವೇರಲಿದೆ

04-07-18 - ಬುಧವಾರ 

ಶ್ರೀ ವಿಲಂಬಿ ನಾಮ ಸಂವತ್ಸರ
ಉತ್ತರಾಯಣ
ಗ್ರೀಷ್ಮ ಋತು
ನಿಜ ಜ್ಯೇಷ್ಠ ಮಾಸ
ಕೃಷ್ಣ ಪಕ್ಷ
ಷಷ್ಠಿ ತಿಥಿ
ಪೂರ್ವಾಭಾದ್ರ ನಕ್ಷತ್ರ

ರಾಹುಕಾಲ - 12.31 ರಿಂದ 02.12
ಯಮಗಂಡ ಕಾಲ - 07.28 ರಿಂದ 09.09
ಗುಳಿಕ ಕಾಲ - 10.50 ರಿಂದ 12.31

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು. ಮಿಥುನ ರಾಶಿಯಲ್ಲಿ ರವಿ ಇದ್ದು, ಕರ್ಕಟಕ ರಾಶಿಯಲ್ಲಿ ಬುಧ, ಶುಕ್ರ, ರಾಹುಗಳಿದ್ದು, ತುಲಾ ರಾಶಿಯಲ್ಲಿ ಗುರು ಇದ್ದು, ಇಂದೂ ಕೂಡ ಧನಸ್ಸು ರಾಶಿಯಲ್ಲಿ  ಶನಿಯರು ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರನು ಇಂದು ಕುಂಭ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  

ಮೇಷ ರಾಶಿ : ಇಂದು ನಿಮ್ಮ ರಾಶಿಯಿಂದ ಲಾಭಸ್ಥಾನದಲ್ಲಿ ಚಂದ್ರನಿದ್ದಾನೆ. ಅಲ್ಲದೆ ನಿಮ್ಮ ರಾಶಿಗೆ ಬಾಧಾಸ್ಥಾನವೇ ಕುಂಭ ರಾಶಿ ಹೀಗಾಗಿ ಸ್ವಲ್ಪ ಆರೋಗ್ಯ ವ್ಯತ್ಯಯ, ಆದರೆ ಬಹಳ ಬೇಗ ಚೇತರಿಕೆಯೂ ಆಗುತ್ತದೆ. ಮನೆಯ ಹೆಣ್ಣುಮಕ್ಕಳಿಂದ ಸಹಾಯ ಸಿಗಲಿದೆ.  

ದೋಷಪರಿಹಾರ : 5 ಕೆಂಪು ಹೂಗಳನ್ನು ಸುಬ್ರಹ್ಮಣ್ಯ ದೇವರಿಗೆ ಹಾಗೂ 9 ಬಿಳಿ ಹೂಗಳನ್ನು ಅನ್ನಪೂರ್ಣೇಶ್ವರಿಗೆ ಅರ್ಪಿಸಿ.

ವೃಷಭ : ಇಂದು ನಿಮ್ಮ ಗುರು ಸಮಾನರಿಗೆ ನಮಸ್ಕಾರ ಮಾಡಿ ದಿನವನ್ನು ಪ್ರಾರಂಭ ಮಾಡಿದರೆ ಅತ್ಯಂತ ಶುಭದಾಯಕ. ಉದ್ಯೋಗದಲ್ಲಿ ಸ್ತ್ರೀಯರಿಂದ ಸಹಾಯ ಸಾಧ್ಯತೆ. ಹೆಚ್ಚು ಕೆಲಸದ ಒತ್ತಡದಲ್ಲಿ ಮನೆಯನ್ನು ಮರೆಯುತ್ತೀರಿ ಅಂದರೆ ಮನೆಯವರಿಂದ ಬೈಸಿಕೊಳ್ಳವ ಸಾಧ್ಯತೆ ಇದೆ. ಆಗಾಗ ಮನೆಯವರನ್ನು ಮಾತನಾಡಿಸಿ. 

ದೋಷ ಪರಿಹಾರ : ತಾಯಿಗೆ ನಮಸ್ಕಾರ ಮಾಡಿ ಹಾಗೂ ದೇವಿ ದೇವಸ್ಥಾನಕ್ಕೆ ಹೋಗಿಬನ್ನಿ.

ಮಿಥುನ : ಇಂದು ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗುತ್ತೀರಿ. ಮಾತು ಕೊಡುವ ಮುನ್ನ ಅದರ ಸಾಧ್ಯತೆಗಳ ಬಗ್ಗೆ ಯೋಚಿಸಿ. ಇಂದು ನಿಮ್ಮ ಮಕ್ಕಳೇ ನಿಮಗೆ ಬುದಧಿ ಹೇಳುವ ದಿನ, ವ್ಯಾಪಾರದಲ್ಲಿ ಸ್ವಲ್ಪ ತೊಂದರೆ. ಮರೆವು ನಿಮ್ಮನ್ನು ಕಾಡುತ್ತದೆ.

ದೋಷ ಪರಿಹಾರ : ಇಂದು ವಿಷ್ಣುಸಹಸ್ರನಾಮ ಪಾರಾಯಣ ಮಾಡಿ ನಿಮ್ಮ ಮನಸ್ಸು ತುಂಬ ಚಂಚಲವೆನ್ನಿದಿರೆ ಓಂ ಶ್ರೀರಾಮ ರಾಮ ರಾಮೇತಿ ಮಂತ್ರವನ್ನು 5 ಬಾರಿ ಪಠಿಸಿ

ಕಟಕ : ಇಂದು ಸಾಮಾನ್ಯವಾಗಿ ನೀವು ಆರೋಗ್ಯದಿಂದ ಬಳಲುತ್ತೀರಿ, ಸ್ವಲ್ಪ ಆಯಾಸ, ಶೀತ ಬಾಧೆ, ಮನೆಯಲ್ಲಿ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಆದರೆ ಸುಖ ಸ್ಥಾನದಲ್ಲಿರುವ ಗುರು ನಿಮಗೆ ನೆಮ್ಮದಿ ತರುತ್ತಾನೆ. ಹೆಚ್ಚು ಬಾಧೆಯಾಗುವುದಿಲ್ಲ. ಯೀಚಿಸುವ ಅಗತ್ಯವಿಲ್ಲ.
  
ದೋಷ ಪರಿಹಾರ : ಅನ್ನಪೂರ್ಣೇಶ್ವರಿಗೆ ಒಂದು ತಂಬಿಗೆಯಲ್ಲಿ ಹಾಲನ್ನು ಅರ್ಪಿಸಿಬನ್ನಿ. 

ಸಿಂಹ : ಈ ದಿನ ನಿಮ್ಮ ತಂದೆಯಿಂದ ಅನುಕೂಲ ಹಾಗೂ ಹಣ ಸಿಗಲಿದೆ. ವ್ಯಾಪಾರದಲ್ಲಿ ಸ್ತ್ರೀಯರ ಸಹಾಯವಾಗುತ್ತದೆ. ಅಷ್ಟೇ ಅಲ್ಲ ಇಂದು ಸ್ತ್ರೀಯರಿಂದ ನಿಮಗೆ ಅಚಾನಕ್ಕಾಗಿ ಪ್ರಯಾಣದ ಸಹಾಯ ಸಿಗಲಿದೆ. ನಿಮ್ಮ ಕಚೇರಿಗೆ ಡ್ರಾಪ್ ಮಾಡಬಹುದು ಅಥವಾ ಮನೆ ಬಳಿ ಬಿಡಬಹುದು. ಅವರನ್ನು ಗೌರವಿಸಿ. ಉತ್ತಮ ದಿನ.

ದೋಷ ಪರಿಹಾರ : ಮನೆಯಲ್ಲೇ ನಿಮ್ಮ ಇಷ್ಟ ದೇವರ ಹೆಸರು ಹೇಳಿ ತುಪ್ಪದ ದೀಪ ಹಚ್ಚಿ.

ಕನ್ಯಾ : ಆತ್ಮೀಯರೇ  ನಿಮ್ಮ ಆರೋಗ್ಯದಲ್ಲಿ ಇಂದು ವ್ಯತ್ಯಯವನ್ನು ಕಾಣಲಿದ್ದೀರಿ. ಕಾಲಿಗೆ ಸ್ವಲ್ಪ ಪೆಟ್ಟಾಗುವ ಸಾಧ್ಯತೆ ಓಡಾಡುವಾಗ ಬಹಳ ಎಚ್ಚರ ವಹಿಸಿ. ಇಂದು ನಿಮ್ಮ ಕುಟುಂಬದಲ್ಲಿ ಹಿರಿಯರಿಂದ ಸಂತಸದ ವಾತಾವರಣ, ನಿಮಗೆ ಹೆಚ್ಚು ಉಪಯೋಗಕ್ಕೆ  ಬರುವ ವಸ್ತು ಲಭ್ಯವಾಗಲಿದೆ.
  
ದೋಷ ಪರಿಹಾರ : 21 ತುಳಸಿ ಪತ್ರೆಯನ್ನು ವಿಷ್ಣು ದೇವರಿಗೆ ಅರ್ಪಿಸಿ ಬನ್ನಿ 

ತುಲಾ :  ಇಂದು ನಿಮ್ಮ ಅಣ್ಣ ಸಮಾನರು  ನಿಮ್ಮ ಕಷ್ಟದಲ್ಲಿ ಭಾಗಿಯಾಗುತ್ತಾರೆ. ಉತ್ತಮ ಪ್ರೋತ್ಸಾಹ ಸಿಗಲಿದೆ. ಆದರೆ ನಿಮ್ಮ ಹಣ ನಷ್ಟವಾಗಲಿದೆ. ಓರ್ವ ಅಪನಂಬಿಕಸ್ಥ ನಿಮ್ಮ ಹಣವನ್ನು ವ್ಯತ್ಯಯ ಮಾಡಲಿದ್ದಾನೆ. ಎಚ್ಚರವಾಗಿರಬೇಕು. ಉದ್ಯೋಗ ಸ್ಥಾನದಲ್ಲಿ ಸ್ತ್ರೀಯರ ಜೊತೆ ಕಲಹ, ಅಥವಾ ಇರಿಸುಮುರಸು ಆಗುವ ಸಾಧ್ಯತೆ. ಎಚ್ಚರವಾಗಿದ್ದರೆ ಅನುಕೂಲ. 

ದೋಷ ಪರಿಹಾರ : ನಿಮ್ಮ ತಾಯಿಗೆ ನಮಸ್ಕಾರ ಮಾಡಿಯೇ ಕಚೇರಿಗೆ ಹೊರಡಿ. 

ವೃಶ್ಚಿಕ : ಆತ್ಮೀಯರೇ ನಿಮ್ಮ ಸಹೋದರ ಭಾವದಲ್ಲಿ ಸ್ವಲ್ಪ ಹೊಂದಾಣಿಕೆ ಸಾಧ್ಯವಾಗದೆ ಜಗಳ ಸಂಭವವಾಗಬಹುದು. ಇಂದು ಸುಖ ಸ್ಥಾನದಲ್ಲಿರುವ ಚಂದ್ರ ಕಲಹ ತಂದಾನು. ಮುಖ್ಯವಾದ ವಿಚಾರವೆಂದರೆ ಹಣ ವ್ಯಯವಾಗುವ ಸಧ್ಯತೆ ಇದೆ. ಅನಾವಶ್ಯಕ ಖರ್ಚು  ಕಡಿಮೆ ಮಾಡಿ ಆನಂತರ ದು:ಖಿಗಳಾಗುತ್ತೀರಿ. ಎಚ್ಚರ. 

ದೋಷ ಪರಿಹಾರ : ಶಿವನನ್ನು ಪ್ರಾರ್ಥನೆ ಮಾಡಿ.  

ಧನಸ್ಸು : ಇಂದು ಶುಭ ದಿನ, ಕೆಲವರಿಗೆ ಸ್ವಲ್ಪ ತೊಂದರೆಯೂ ಇದೆ ಮೈಯಲ್ಲಿ ಗಾಯವಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಕಿರಿಕಿರಿ ಹೆಚ್ಚಾಗಿರಲಿದೆ. ಈ ಮಾತು ನಿಮಗೆ ಬೇಸರವಾಗಬಹುದು ಆದರೆ ಇಂದು ಅನಿವಾರ್ಯ ಪರಿಸ್ಥಿತಿ. ಎಚ್ಚರವಾಗಿದ್ದುಬಿಡಿ. ಮುಖ್ಯವಾಗಿ ನಿಮ್ಮ ಕೆಲಸವನ್ನು ಬೇರೆಯವರಿಗೆ ವಹಿಸಬೇಡಿ. ಮನೆಯಲ್ಲಿ ಸಹೋದರರ ಸಹಾಯವಿದೆ.

ದೋಷ ಪರಿಹಾರ : ಇಂದು ನೀವು ಶನಿದೇವರ ಪ್ರಾರ್ಥನೆ ಮಾಡಿ. ಸಾಧ್ಯವಾದರೆ ಎಳ್ಳೆಣ್ಣೆ ದೀಪ ಹಚ್ಚಿ 

ಮಕರ : ಆತ್ಮೀಯರೇ ನಿಮ್ಮ ಕುಟುಂಬದಲ್ಲಿ ಓರ್ವ ಸ್ತ್ರೀಯಿಂದ ಕಲಹ ಮೂಡುವ ಸಾಧ್ಯತೆ. ಸ್ವಲ್ಪ ಎಚ್ಚರವಾಗಿದ್ದರೆ ಒಳ್ಳೇದು. ನೀವು ಯಾರೊಂದಿಗೂ ಹೆಚ್ಚು ಮಾತನಾಡಬೇಡಿ. ವೃಥಾ ನಿಮ್ಮಮೇಲೆ ಆಪಾದನೆ ಬಂದಾತು. ತಂದೆ-ಮಕ್ಕಳಲ್ಲಿ ಕಿತ್ತಾಟ ವಾಗುವ ಸಾಧ್ಯತೆ ಇದೆ. ಸ್ವಲ್ಪ ಮಾತು ಕಡಿಮೆ ಮಾಡಿ ಸಾಕು.
  
ದೋಷ ಪರಿಹಾರ : ಓಂ ಮಂತ್ರವನ್ನು 21 ಬಾರಿ ಪಠಿಸಿ

ಕುಂಭ :   ಆತ್ಮೀಯರೇ ನಿಮಗೆ ಸುಖ ಭೋಜನ ಪ್ರಾಪ್ತಿ, ಇಷ್ಟವಿಲ್ಲದ ಕೆಲಸ ಮಾಡಬೇಕಾದ ಸ್ಥಿತಿ ಬರಬಹುದು. ಉದ್ಯೋಗದಲ್ಲಿ ಸಹಕಾರಿ ಮನೋಭಾವನೆ ಕಾಣುತ್ತೀರಿ. ದೈವಾನುಕೂಲವಿರಲಿದೆ. ಕುಟುಂಬದವರಿಂದ ಸೌಭಾಗ್ಯ ಒದಗಲಿದೆ. ಸೌಭಾಗ್ಯವೆಂದರೆ ಸೈಟು ಮನೆ ಸಿಗುತ್ತಾ ಅಂತಲ್ಲ ನಿಮ್ಮ ಮನೋಭಿಲಾಷೆ ಈಡೇರಿಸುತ್ತಾರೆ. ಆದರೆ ಸ್ವಲ್ಪ ದೇಹ ಬಾಧೆಯೂ ಇರಲಿದೆ. ಆರೋಗ್ಯದ ಕಡೆ ಗಮನವಿರಲಿ.

ದೋಷ ಪರಿಹಾರ : ನಿಮ್ಮ ಕುಲದೇವತೆಯನ್ನು ಸ್ಮರಿಸಿ ಸಾಕು.
  
ಮೀನ :  ಆತ್ಮೀಯ ಓದುಗರೇ ನಿಮ್ಮ ರಾಶಿಗೆ ಇನ್ನೆರಡು ತಿಂಗಳಲ್ಲಿ ಗುರುವು ಅನುಕೂಲ ಮಾಡಲಿದ್ದಾನೆ. ಸ್ವಲ್ಪ ತಾಳ್ಮೆ ಇರಲಿ. ಇಂದು ನಿಮ್ಮ ಪಾಲಿಗೆ ಶುಭ ದಿನವೇ ಇದೆ. ತಂದೆ ನಿಮಗೆ ಆಫೀಸ್ ಅಥವಾ ನೀವು ಬಯಸಿದಲ್ಲಿಗೆ ಡ್ರಾಪ್ ( ವಾಹನ ಸಹಾಯ )ಮಾಡುವ ಸಾಧ್ಯತೆ ಇದೆ. 
  
ದೋಷ ಪರಿಹಾರ : ನಿಮ್ಮ ಗುರುಪೀಠದ ಗುರುಗಳನ್ನು 9 ಬಾರಿ ನೆನೆಯಿರಿ. ಅಥವಾ ಓಂ ದಕ್ಷಿಣಾಮೂರ್ತಯೇ ನಮ: ಎಂಬ ಮಂತ್ರವನ್ನು 12 ಬಾರಿ ಪಠಿಸಿ.

ಗೀತಾಸುತ.