ಈ ರಾಶಿಗೆ ಶನಿ ಪ್ರಭಾವವಿದ್ದು, ಸೂಕ್ತ ಎಚ್ಚರ ಅಗತ್ಯ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 30, Jul 2018, 7:03 AM IST
Special Bhavishya July 30
Highlights

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು.  ಇಂದು  ಕರ್ಕಟಕ ರಾಶಿಯಲ್ಲಿ  ಸೂರ್ಯ, ಬುಧ, ರಾಹುಗಳಿದ್ದು, ಶುಕ್ರನು  ಸಿಂಹ ರಾಶಿಲ್ಲಿದ್ದಾನೆ , ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ಕುಂಭ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  

ಈ ರಾಶಿಗೆ ಶನಿ ಪ್ರಭಾವವಿದ್ದು, ಸೂಕ್ತ ಎಚ್ಚರ ಅಗತ್ಯ

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು.  ಇಂದು  ಕರ್ಕಟಕ ರಾಶಿಯಲ್ಲಿ  ಸೂರ್ಯ, ಬುಧ, ರಾಹುಗಳಿದ್ದು, ಶುಕ್ರನು  ಸಿಂಹ ರಾಶಿಲ್ಲಿದ್ದಾನೆ , ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ಕುಂಭ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  

ಮೇಷ ರಾಶಿ : ಆತ್ಮೀಯರೇ ನಿಮ್ಮ ಲಾಭ ಸ್ಥಾನದಲ್ಲಿರುವ ಚಂದ್ರನಿಗೆ ಗುರು ದೃಷ್ಟಿ  ಇರುವುದರಿಂದ ನೀರಿನ ವ್ಯಾಪಾರಿಗಳಿಗೆ, ದ್ರವ ಪದಾರ್ಥದ ವ್ಯಾಪಾರಿಗಳಿಗೆ ಲಾಭವಿದೆ. ಆದರೆ ಭಾಗ್ಯ ಸ್ಥಾನದ ಶನಿ ನಿಮ್ಮ ಅದೃಷ್ಟಕ್ಕೆ ಕತ್ತರಿ ಹಾಕುತ್ತಾನೆ. ಏನಾದರೂ ಒಳ್ಳೇದಾದ್ರೆ ಅದರಲ್ಲಿ ಸಂಪೂರ್ಣ ನಿಮ್ಮ ಶ್ರಮವೇ ಇರಲಿದೆ. ಉತ್ಸಾಹದ ದಿನ. ಶುಭವಾಗಲಿ.  

ದೋಷಪರಿಹಾರ : ದೇವಿ ದೇವಸ್ಥಾನಕ್ಕೆ 5 ಲೋಟದಷ್ಟು ಹಾಲು ಸಮರ್ಪಿಸಿ ಬನ್ನಿ.

ವೃಷಭ : ಆತ್ಮೀಯರೇ ಇಂದು ನಿಮ್ಮ ಪಾಲಿಗೆ ಸಹೋದರರಿಂದ ಅಥವಾ ಸಹೋದರಿಯರಿಂದ ಉದ್ಯೋಗಕ್ಕೆ ಸಹಾಯವಾಗುವ  ಸಾಧ್ಯತೆ ಇದೆ. ನಿಮ್ಮ ಉದ್ಯೋಗ ಸ್ಥಾನಕ್ಕೆ ಗುರು ದೃಷ್ಟಿ ಇರುವುದರಿಂದ ಹೊಸ ಕೆಲಸ ಅಥವಾ ಇರುವ ಕೆಲಸದಲ್ಲಿ ಏಳಿಗೆ ಇದೆ. ಸ್ತ್ರೀಯರಿಂದ ಆರೋಗ್ಯ ರಕ್ಷಣೆ. ಶುಭದಿನ.

ದೋಷ ಪರಿಹಾರ : ಸಪ್ತಶತಿ ಪಾರಾಯಣ ಮಾಡಿಸಿ.

ಮಿಥುನ : ಆತ್ಮೀಯರೇ ಇಂದು ನಿಮ್ಮ ಸ್ವಶ್ರಮದಿಂದ ಧನ ಸಮೃದ್ಧವಾಗಲಿದೆ. ಬರುವ ಹಣ ಬರಲಿದೆ. ಕರ್ಮಸ್ಥಾನದ ಗುರು ತ್ರಿಕೋನದಲ್ಲಿರುವುದರಿಂದ ಉದ್ಯೋಗಿಗಳಿಗೆ ತೊಂದರೆ ಇಲ್ಲ. ಸಮಾಧಾನದ ದಿನವಾಗಿರಲಿದೆ. ನಿಮ್ಮ ಸಹೋದರಿ ನಿಮ್ಮ ಸಹಾಯಕ್ಕೆ ಬರುವ ಬದಲು ಸ್ವಲ್ಪ ಕಿರಿಕಿರಿ ಮಾಡಬಹುದು. ಸಮಾಧಾನವಿರಲಿ.

ದೋಷ ಪರಿಹಾರ : ವಿಷ್ಣು ಸಹಸ್ರನಾಮ 3 ಬಾರಿ ಪಠಿಸುವುದರಿಂದ ಇಷ್ಟಕಾರ್ಯ ಸಿದ್ಧಿ

ಕಟಕ : ಇಂದು ನಿಮ್ಮ ರಾಶ್ಯಾಧಿಪತಿ ಅಷ್ಟಮ ಸ್ಥಾನಗತನಾದ್ದರಿಂದ ಸ್ವಲ್ಪ ಆಯಾಸ, ಶೀತಬಾಧೆ, ಮನೋಬಲ ಕುಗ್ಗುದಹಾಗಾಗುತ್ತದೆ. ಆದರೆ ಚಂದ್ರನಿಗೆ ಗುರು ದೃಷ್ಟಿ ಇರುವುದರಿಂದ ಅಂಥಾ ಪ್ರಯಾಸವೇನೂ ಇಲ್ಲ. ಅನುಕೂಲವಾಗಿರಲಿದೆ. ಬಹಳ ಬೇಗ ಚೇತರಿಸಿಕೊಳ್ಳುವಿರಿ. ನಿಮ್ಮ ಆಪ್ತರಿಗಾಗಿ ಧನವ್ಯಯವಾಗುವ ಸಾಧ್ಯತೆ ಇದೆ.
  
ದೋಷ ಪರಿಹಾರ : ಮಹಾಲಕ್ಷ್ಮಿಯನ್ನು ಆರಾಧನೆ ಮಾಡಿ 

ಸಿಂಹ : ಆತ್ಮೀಯರೇ ಬರೆದಿಟ್ಟುಕೊಳ್ಳಿ  ನಿಮ್ಮ ಸಂಗಾತಿಯಿಂದ ಹಣವ್ಯಯ, ಅಥವಾ ಏನೋ ಒಂದು ನಷ್ಟ ಅನುಭವಿಸುತ್ತೀರಿ. ಕೆಲವರು ಸಂಗಾತಿಯನ್ನೇ ಕಳೆದುಕೊಳ್ಳುವ ಸಾಧ್ಯತೆ ಇದೆ. ಸ್ವಲ್ಪ ಎಚ್ಚರವಾಗಿರಿ. ಮಾತು ಮಿತವಾಗಿರಲಿ. ನಿಮ್ಮ ಉಗ್ರತೆ ಸ್ವಭಾವಕ್ಕೆ ಕಡಿವಾಣ ಹಾಕಿ. ಸಮಾಧಾನವಿರಲಿ.

ದೋಷ ಪರಿಹಾರ : ಶಿವನಿಗೆ 21 ನಮಸ್ಕಾರ ಹಾಕಿ.

ಕನ್ಯಾ : ಆತ್ಮೀಯರೇ ಇಂದು ನಿಮ್ಮ ಆರೋಗ್ಯಕ್ಕಾಗಿ ಸ್ವಲ್ಪ ಹಣವ್ಯಯವಾಗುತ್ತದೆ. ನಿಮಗೆ ಬಂದ ಲಾಭವನ್ನು ಔಷಧಿಗಾಗಿ ವ್ಯಯಿಸಬೇಕಾಗುತ್ತದೆ. ವಾಹನದಲ್ಲಿ ಓಡಾಡುವಾಗ ಎಚ್ಚರವಿರಲಿ, ಮಕ್ಕಳು ಸ್ವಲ್ಪ ಹಟ ಮಾಡಿ ನಿಮ್ಮ ಮನಸ್ಸನ್ನು ಹಾಳುಮಾಡಬಹುದು ಆ ಸನ್ನಿವೇಶ ಎದುರಿಸಲು ತಯಾರಾಗಿರಿ. 
  
ದೋಷ ಪರಿಹಾರ : ಕೃಷ್ಣನಿಗೆ ತುಳಸಿ ಹಾರವನ್ನು ಸಮರ್ಪಿಸಿ ಬನ್ನಿ.

ತುಲಾ :  ಆತ್ಮೀಯರೇ ನಿಮ್ಮ ಉದ್ಯೋಗದಲ್ಲಿ ಯಶಸ್ಸು, ವಿದೇಶ ಪ್ರಯಾಣದ ಸೂಚನೆ, ಬಡ್ತಿ ಸಾಧ್ಯತೆ ಎಲ್ಲವೂ ಅನುಕೂಲಕರವಾಗಿದೆ. ಜಲ ವ್ಯಾಪಾರಿಗಳಿಗೆ ಲಾಭದ ದಿನ. ನಿಶ್ಚಿಂತೆಯಿಂದ ದಿನವನ್ನು ದೂಡುತ್ತೀರಿ. ಶುಭವಾಗಲಿ. 

ದೋಷ ಪರಿಹಾರ : ಲಕ್ಷ್ಮೀ ದೇವಸ್ಥಾನಕ್ಕೆ ಕ್ಷೀರ ಸಮರ್ಪಣೆ ಮಾಡಿ

ವೃಶ್ಚಿಕ : ಆತ್ಮೀಯರೇ, ನಿಮಗೆ ಇಂದು ಶುಭದಾಯಕ ದಿನ. ಓರ್ವ ವ್ಯಕ್ತಿ ನಿಮ್ಮ ಕಾರ್ಯಕ್ಕೆ ಸಹಕಾರಕೊಟ್ಟು ನಿಮ್ಮ ಕೈಹಿಡಿಯುತ್ತಾರೆ. ಆದರೆ ನಿಮ್ಮ ಹಣವ್ಯಯವಾಗುತ್ತದೆ. ಮನೆಯಲ್ಲಿ ಕಳ್ಳತನದಂಥ ಘಟನೆ ಸಂಭವಿಸಬಹುದು. ಎಚ್ಚವಾಗಿರಿ. 

ದೋಷ ಪರಿಹಾರ : ಪಂಚಾಮೃತ ಸಾಮಗ್ರಿಗಳನ್ನು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕೊಟ್ಟುಬನ್ನಿ.

ಧನಸ್ಸು : ಆತ್ಮೀಯರೇ ಇಂದು ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯ ಕಾಣಬಹುದು, ನಿಮ್ಮ ಸಹೋದರಿಯರು ನಿಮ್ಮ ಮನಸ್ಸನ್ನು ಘಾಸಿಗೊಳಿಸಬಹುದು. ನಿಮ್ಮ ಅತ್ತೆ ಕಡೆಯಿಂದ ಸಹಕಾರ ದೊರೆಯುತ್ತದೆ. ನಿಮ್ಮ ಯಜಮಾನರ ಆರೋಗ್ಯದಲ್ಲೂ ವ್ಯತ್ಯಯವಾಗಬಹುದು. ಶುದ್ಧ ಆಹಾರ, ಮಿತಾಹಾರ ಸ್ವೀಕರಿಸಿ

ದೋಷ ಪರಿಹಾರ : ಶನಿದೇವರಿಗೆ ಎಳ್ಳು ಸಮರ್ಪಣೆ ಮಾಡಿಬನ್ನಿ.

ಮಕರ :  ಆತ್ಮೀಯರೇ ನಿಮ್ಮ ಸಂಗಾತಿಯಿಂದ ನಿಮಗೆ ಧನ ಲಾಭ, ಅಷ್ಟೇ ಅಲ್ಲ ನಿಮ್ಮ ಮಾತಿನಿಂದ ಕಾರ್ಯ ಸಾಧನೆಯಾಗುತ್ತದೆ. ಮತ್ತು ಮಾತಿನಿಂದ ಸಮಸ್ಯೆಯಾಗುವ ಸಾಧ್ಯತೆಯೂ ಇದೆ. ಮಾತಾಡುವಾಗ ಎಚ್ಚರವಿರಲಿ.
  
ದೋಷ ಪರಿಹಾರ : ದುರ್ಗಾ ದೇವಿ ದರ್ಶನ ಮಾಡಿ

ಕುಂಭ : ಆತ್ಮೀಯರೇ ಇಂದು ನಿಮ್ಮನ್ನು ಶೀತಬಾಧೆ ಕಾಡಲಿದೆ. ಸ್ವಲ್ಪ ಮಟ್ಟಿಗೆ ಸಾಲ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಲಿದೆ. ಸಾಲವೂ ಒದಗುತ್ತದೆ. ಸಹೋದರರಿಂದ ಕಿರಿಕಿರಿ. ಕ್ರಮೇಣ ಸಮಾಧಾನ ಮೂಡುತ್ತದೆ. ಶುಭದಿನ

ದೋಷ ಪರಿಹಾರ :  ಶಿವ ಹಾಗೂ ಶಕ್ತಿ ಇಬ್ಬರನ್ನೂ ಆರಾಧಿಸಿ.
  
ಮೀನ : ಸ್ನೇಹಿತರೆ ಇಂದು ಮಕ್ಕಳು ನಿಮ್ಮನ್ನು ತೊಂದರೆಗೆ ಗುರಿಯಾಗಿಸುತ್ತಾರೆ. ನಿಮ್ಮ ಮನ:ಶಾಂತಿಯನ್ನು ಕದಡುತ್ತಾರೆ. ಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಆದರೆ ನಿಮ್ಮ ವ್ಯಾಪಾರದಲ್ಲಿ ಲಾಭವಿದೆ. ಭೂ ಲಾಭವೂ ಇದೆ. 
  
ದೋಷ ಪರಿಹಾರ : ದುರ್ಗಾ ದೇವಿಗೆ ಹೂವಿನ ಹಾರ ಸಮರ್ಪಣೆ ಮಾಡಿ

ಗೀತಾಸುತ

loader