ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು.  ಇಂದು  ಕರ್ಕಟಕ ರಾಶಿಯಲ್ಲಿ  ಸೂರ್ಯ, ಬುಧ, ರಾಹುಗಳಿದ್ದು, ಶುಕ್ರನು  ಸಿಂಹರಾಶಿಲ್ಲಿದ್ದಾನೆ , ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ವೃಶ್ಚಿಕ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  

ಈ ರಾಶಿಗೆ ಇಂದು ಆಶ್ಚರ್ಯಕರ ಬೆಳವಣಿಗೆಗಳ ದಿನ

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು. ಇಂದು ಕರ್ಕಟಕ ರಾಶಿಯಲ್ಲಿ ಸೂರ್ಯ, ಬುಧ, ರಾಹುಗಳಿದ್ದು, ಶುಕ್ರನು ಸಿಂಹರಾಶಿಲ್ಲಿದ್ದಾನೆ , ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ವೃಶ್ಚಿಕ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.


ಮೇಷ ರಾಶಿ : ಪ್ರಿಯರೇ ಇಂದು ನಿಮ್ಮ ದಿನ ಪ್ರಾರಂಭವಾಗುವ ಮುನ್ನ ದೇವಿ ದೇವಸ್ಥಾನಕ್ಕೆ ವಸ್ತ್ರದಾನ ಮಾಡಿಬನ್ನಿ. ಸ್ವಲ್ಪ ಆರೋಗ್ಯ ವ್ಯತ್ಯಯ ವಿರಲಿದೆ, ಅನ್ನಾಹಾರ ಸ್ವೀಕಾರದಲ್ಲಿ ಎ್ಚರವಿರಲಿ. ಇಂದು ಕೆಲವರಿಹೆ ವಿಪರೀತ ದೇಹ ಬಾಧೆ ಕಾಡಲಿದೆ. ವೈದ್ಯರನ್ನು ಸಂಪರ್ಕ ಮಾಡಿ

ದೋಷಪರಿಹಾರ : ಓಂ ಷಡಾನನಾಯ ನಮ: ಮಂತ್ರವನ್ನು ಪಠಿಸಿ.

ವೃಷಭ : ಇಂದು ಓಂ ಶುಕ್ರಾಯ ನಮ: ಮಂತ್ರವನ್ನು 12 ಬಾರಿ ಪಠಿಸಿ ನಿಮ್ಮ ದಿನವನ್ನು ಪ್ರಾರಮಭಿಸಿ. ಇಂದು ನಿಮ್ಮ ಮನಸ್ಸಿಗೆ ತುಂಬ ಬೇಸರವಾಗುವ ಘಟನೆ ನಡೆಯಲಿದೆ. ನೀವಂದುಕೊಂಡ ಕಾರ್ಯ ವಿಳಂಬವಾಗಲಿದೆ. ಕಾಲಿಗೆ ಹಾಗೂ ತೊಡೆ ಭಾಗಕ್ಕೆ ಪೆಟ್ಟುಬೀಳುವ ಸಾಧ್ಯತೆ ಇದೆ. ನಿಮ್ಮ ಮನೆಯಲ್ಲಿ ಸ್ತ್ರೀಯರಿಂದ ಸ್ವಲ್ಪ ಕಿರಿಕಿರಿ ಅನುಭವಿಸಬೇಕಾಗುತ್ತದೆ.

ದೋಷ ಪರಿಹಾರ : ಶುಕ್ರ ಗ್ರಹ ಆರಾಧನೆ ಮಾಡಿ

ಮಿಥುನ : ಆತ್ಮೀಯರೇ ಇಂದು ನಿಮ್ಮ ದಿನಚರಿ ಪ್ರಾರಂಭವಾಗುವ ಮುನ್ನ ವಿಷ್ಣು ಸಹಸ್ರನಾಮ ಪಠಿಸಿದರೆ ಉತ್ತಮ. ಇಲ್ಲ ವಿಷ್ಣು ದರ್ಶನವನ್ನಾದರೂ ಮಾಡಿ. ಇಂದು ರೋಗವೇ ನಿಮ್ಮ ಮನೋಬಲವನ್ನು ಕುಗ್ಗಿಸುತ್ತದೆ. ಅನ್ಯರಿಗಾಗಿ ಧನವ್ಯಯ ಮಾಡಿಕೊಳ್ಳುವ ಸಂದರ್ಭ. ಮಕ್ಕಳಿಂದ ಸಹಾಯವೂ ದೊರೆಯುತ್ತದೆ.

ದೋಷ ಪರಿಹಾರ : ಲಕ್ಷ್ಮೀ ಸಹಿತ ವೇಂಕಟೇಶ್ವರ ದರ್ಶನ ಮಾಡಿ

ಕಟಕ : ಇಂದು ನಿಮ್ಮ ದಿನ ಪ್ರಾರಮಭವಾಗುವ ಮುನ್ನ ದುರ್ಗಾ ದೇವಿ ಸ್ತೋತ್ರವನ್ನು ಪಠಿಸಿ ಇಲ್ಲ ದುರ್ಗಾ ದರ್ಶನವನ್ನಾದರೂ ಮಾಡಿ. ಇಂದು ನಿಮ್ಮ ಅಧಿಪತಿ ಮಿತ್ರನ ಮನೆಯಲ್ಲಿ ನೀಚನಾಗಿದ್ದಾನೆ. ಮಾನಸಿಕ ತೊಂದರೆ, ಮನೋವ್ಯಥೆಗಳು ನಿಮ್ಮನ್ನು ಕಾಡಲಿವೆ. ಮಕ್ಕಳಿಂದಲೂ ಬೇಸರವಾಗಬಹುದು. ನಿಮ್ಮ ಬುದ್ಧಿ ನಿಮಗೆ ಕೈಕೊಡುವ ಸಾಧ್ಯತೆ ಇದೆ. ಏನೋ ಕೆಲಸ ಮಾಡಲು ಹೋಗಿ ಮತ್ತೇನೋ ಮಾಡಿ ಒದ್ದಾಡುತ್ತೀರಿ. ಸ್ವಲ್ಪ ಜಾಗ್ರತೆ ಇರಲಿ.

ದೋಷ ಪರಿಹಾರ : ಓಂ ಚಂದ್ರಾಯ ನಮ: ಮಂತ್ರವನ್ನು ಪಠಿಸಿ ಇಲ್ಲ ಲಕ್ಷ್ಮೀ ಸ್ಮರಣೆಯನ್ನಾದರೂ ಮಾಡಿ

ಸಿಂಹ : ಇಂದು ನಿಮ್ಮ ನಿತ್ಯ ಕರ್ಮ ಮುಗಿದ ಮೇಲೆ. ಕನಿಷ್ಟ 15 ನಿಮಿಷಗಳ ಕಾಲ ಸೂರ್ಯನ ಶಾಖವನ್ನ ತೆಗೆದುಕೊಳ್ಳಿ,ಸೂರ್ಯ ನಮಸ್ಕಾರ ಮಾಡಿ. ನಿಮ್ಮ ತಾಯಿಯವರ ಆರೋಗ್ಯದಲ್ಲಿ ಇಂದು ಏರುಪೇರಾಗುವ ಸಾಧ್ಯತೆ ಇದೆ. ವಾಹನದಲ್ಲಿ ಸಂಚರಿಸುವಾಗ ಸ್ವಲ್ಪ ಎಚ್ಚರದಿಂದರಬೇಕು. ಸೂರ್ಯ ದರ್ಶನ ಮಾಡುವುದನ್ನು ಮರೆಯಬೇಡಿ.

ದೋಷ ಪರಿಹಾರ : ಸೂರ್ಯ ಪ್ರಾರ್ಥನೆ ಮಾಡಿ

ಕನ್ಯಾ : ಆತ್ಮೀಯರೇ ಇಂದು ನಿಮ್ಮ ದಿನದ ಪ್ರಾರಂಭದಲ್ಲಿ 12 ತುಳಸಿಯಿಂದ ನಾರಾಯಣನಿಗೆ ಅರ್ಚನೆ ಮಾಡಿ. ನಿಮ್ಮ ಸಹೋದರಿಯರ ಆರೋಗ್ಯ ಸಲುವಾಗಿ ಆಸ್ಪತ್ರೆಗೆ ಹೋಗಬೇಕಾಗುತ್ತದೆ. ನಿಮ್ಮ ಉದ್ಯೋಗದಲ್ಲಿ ಉತ್ತಮ ಫಲ ನಿರೀಕ್ಷಿಸಬಹುದು. ಆದರೆ ಶತ್ರುಗಳ ಕಾಟವೂ ಇದೆ. ಅಶ್ವಾರೋಢ ಯಂತ್ರವನ್ನು ಧರಿಸಿ. ಉದ್ಯೋಗದಲ್ಲಿ ಸ್ಥಿರತೆ ಹಾಗೂ ಏಳಿಗೆ ಹೊಂದುತ್ತೀರಿ. 

ದೋಷ ಪರಿಹಾರ : ನಾರಾಯಣ ಧ್ಯಾನ ಮಾಡಿ

ತುಲಾ : ಆತ್ಮೀಯರೇ ಇಂದು ದಿನದ ಪ್ರಾರಂಭಕ್ಕೂ ಮುನ್ನ ಲಕ್ಷ್ಮೀ ಆರಾಧನೆ ಮಾಡಿ. ಅಥವಾ ದರ್ಶನವನ್ನಾದರೂ ಮಾಡಿ. ಹಣ ವ್ಯಯವಾಗುವ ಸಾಧ್ಯತೆ ಇದೆ. ಆರಾಧನೆ ಮಾಡಿದಲ್ಲಿ 100 ರುಪಾಯಿ ಕಳೆದುಕೊಳ್ಳುವಲ್ಲಿ 50 ರುಪಾಯಿ ಹೀಗುತ್ತದೆ. ಸ್ತ್ರೀಯರ ಸಲುವಾಗಿ ಹಣ ವ್ಯಯವಾಗುತ್ತದೆ. ಉದ್ಯೋಗದಲ್ಲಿ ಲಾಭವಿದೆ. 

ದೋಷ ಪರಿಹಾರ : ಗುರು ದರ್ಶನ ಅಥವಾ ದತ್ತಾತ್ರೇಯ ಆರಾಧನೆ ಮಾಡಿ

ವೃಶ್ಚಿಕ : ಆತ್ಮೀಯರೇ, ಇಂದು ಇಂದು ನಿಮ್ಮ ಪಾಲಿಗೆ ಸ್ವಲ್ಪ ನಿರಾಶಾದಾಯಕ ದಿನ, ನಿಮಗೆ ಬರಬೇಕಿದ್ದ ಅಥವ ದಕ್ಕಬೇಕಿದ್ದ ಅವಕಾಶ ಅನ್ಯರ ಕೈ ಸೇರುತ್ತದೆ. ಹತಾಶರಾಗುವ ದಿನ, ನಿಮ್ಮ ದಿನದ ಪ್ರಾರಂಭಕ್ಕೂ ಮುನ್ನ ಸುಬ್ರಹ್ಮಣ್ಯ ಸೇವೆ ಮಾಡಿ. 

ದೋಷ ಪರಿಹಾರ : ಓಂ ಷಣ್ಮುಖಾಯ ನಮ: ಮಂತ್ರವನ್ನು 64 ಬಾರಿ ಪಠಿಸಿ

ಧನಸ್ಸು : ಆತ್ಮೀಯರೇ ಇಂದು ಆರೋಗ್ಯದಲ್ಲಿ ವ್ಯತ್ಯಯ ಕಾಣುವ ಸಾಧ್ಯತೆ ಇದೆ. ಉತ್ತಮ ದಿನವೂ ಆಗಿದೆ. ನಿಮ್ಮ ಯೋಜನೆಗಳು ಸಾಕಾರಗೊಳ್ಳುತ್ತವೆ. ಆದರೆ ಅರ್ಧ ಶುಭ ಅರ್ಧ ಅಶುಭಯುಕ್ತ ದಿನವಾಗಿರಲಿದೆ.

ದೋಷ ಪರಿಹಾರ : ಶನಿದೇವರಿಗೆ ಎಳ್ಳೆಣ್ಣೆ ದೀಪ ಹಚ್ಚಿ.

ಮಕರ : ಆತ್ಮೀಯರೇ ಇಂದು ಉದ್ಯೋಗದಲ್ಲಿ ಏರುಪೇರು ಕಾಣಬಹುದು, ಮಡದಿಯಿಂದ ತುಂಬು ಸಹಕಾರ, ನಿಮ್ಮ ನೆಚ್ಚಿನ ಸಂಗಾತಿ ನಿಮ್ಮ ಕಾರ್ಯ ಲಾಭಕ್ಕೆ ಸಹಕಾರಿಯಾಗಬಹುದು. ಮಿತ್ರರಿಂದ ಸಹಾಯ ದೊರೆಯಲಿದೆ. ಆಹಾರದಲ್ಲಿ ವ್ಯತ್ಯಯವಾಗಬಹುದು. ಎಚ್ಚರವಹಿಸಿ

ದೋಷ ಪರಿಹಾರ : ಶಿವ ದೇವಸ್ಥಾನಕ್ಕೆ ಇಷ್ಟವಾದ ಕಾಣಿಕೆ ಸಮರ್ಪಿಸಿ.

ಕುಂಭ : ಆತ್ಮೀಯರೇ ಇಂದು ನಿಮ್ಮ ಪಾಲಿಗೆ ಶುಭದಾಯಕ ದಿನ, ನಿಮ್ಮ ಮನಸ್ಸಿನ ಕೋರಿಕೆಗಳು ಈಡೇರುವ ದಿನ, ಉದ್ಯೋಗದಲ್ಲಿ ಲಾಭವನ್ನು ಕಾಣಲಿದ್ದೀರಿ, ಸಹಯವೂ ದೊರೆಯಬಹುದು, ನಿಮ್ಮ ಮದುವೆ ವಿಚಾರವಾಗಿ ಗಂಭೀರ ಚರ್ಚೆಯಾಗಲಿದೆ.

ದೋಷ ಪರಿಹಾರ : ಶಿವಾಷ್ಟೋತ್ತರ ಪಠಿಸಿ

ಮೀನ : ಸ್ನೇಹಿತರೆ ಇಂದು ನಿಮ್ಮ ದಿನದಲ್ಲಿ ಸಂಪೂರ್ಣ ಬದಲಾವಣೆಯಾಗಬಹುದು, ನೀವು ಯೋಜಿಸಿದ ಕಾರ್ಯ ಇನ್ನೊಬ್ಬರ ಕೈ ಸೇರುವ ಸಾಧ್ಯತೆ ಇದೆ. ದುಷ್ಟ ಜನರ ಸಹವಾಸ ನಿಮ್ಮನ್ನು ಹೈರಾಣು ಮಾಡುತ್ತದೆ. ಆದಷ್ಟು ಹಣ ಕೊಟ್ಟು ಮೋಸಹೋಗಬೇಡಿ.

ದೋಷ ಪರಿಹಾರ : ಗುರು ಪ್ರಾರ್ಥನೆ ಮಾಡಿ

ಗೀತಾಸುತ.