ಈ ರಾಶಿಯವರಿಗೆ ಇಂದು ಕುತೂಹಲವೊಂದು ಎದುರಾಗಲಿದೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 21, Jul 2018, 7:10 AM IST
Special Bhavishya July 21
Highlights

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು.  ಇಂದು  ಕರ್ಕಟಕ ರಾಶಿಯಲ್ಲಿ  ಸೂರ್ಯ, ಬುಧ, ರಾಹುಗಳಿದ್ದು, ಶುಕ್ರನು  ಸಿಂಹರಾಶಿಲ್ಲಿದ್ದಾನೆ , ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ತುಲಾ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು.  ಇಂದು  ಕರ್ಕಟಕ ರಾಶಿಯಲ್ಲಿ  ಸೂರ್ಯ, ಬುಧ, ರಾಹುಗಳಿದ್ದು, ಶುಕ್ರನು  ಸಿಂಹರಾಶಿಲ್ಲಿದ್ದಾನೆ , ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ತುಲಾ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  


ಮೇಷ ರಾಶಿ : ಪ್ರಿಯರೇ  ಇಂದು ನೀವು ವಾಹನ ಸಂಚಾರ ಮಾಡುವಾಗ ಬಹಳ ಎಚ್ಚರದಿಂದಿರಬೇಕು. ನಿಮ್ಮ ಮಾತಿನಿಂದ ಸ್ತ್ರೀಯರಿಗೆ ಕೋಪ ಉಂಟಾಗಬಹುದು. ಮತ್ತು ತಿನ್ನುವ ಆಹಾರದಲ್ಲೂ ವ್ಯತ್ಯಯವಾಗಬಹುದು. ನಿಮ್ಮ ಆರೋಗ್ಯ ಸುಧಾರಣೆಯಾಗಲಿದೆ.

ದೋಷಪರಿಹಾರ : ಸುಬ್ರಹ್ಮಣ್ಯ ಸ್ವಾಮಿಗೆ ಜೇನುತುಪ್ಪ ಸಮರ್ಪಣೆ ಮಾಡಿ

ವೃಷಭ : ಇಂದು ನಿಮ್ಮ ವಾಹನ ಓಡಾಟದಲ್ಲಿ ಸ್ವಲ್ಪ ತೊಂದರೆಯಾಗಬಹುದು. ಜಾಗ್ರತೆಯಿಂದಿರಿ. ನಿಮ್ಮ ಕಾಲಿಗೆ ಪೆಟ್ಟುಬೀಳುವ ಸಾಧ್ಯತೆ ಇದೆ. ಬಹಳ ದಿನಗಳಿಂದ ನರಳುತ್ತಿದ್ದ ಖಾಯಿಲೆ ಸ್ವಲ್ಪ ಗುಣಮುಖವಾಗಲಿದೆ. ನಿಮ್ಮ ಸ್ನೇಹಿತರು ನಿಮಗೆ ಸಹಕಾರಕೊಡಲಿದ್ದಾರೆ. ಅರ್ಧ ಶುಭ-ಅರ್ಧ ಅಶುಭದಿನವಾಗಿರಲಿದೆ 

ದೋಷ ಪರಿಹಾರ : ಶುಕ್ರ ಗ್ರಹ ಆರಾಧನೆ ಮಾಡಿ ಇಲ್ಲ ನವಗ್ರಹ ಆರಾಧನೆ ಮಾಡಿ

ಮಿಥುನ : ಆತ್ಮೀಯರೇ ಇಂದು ನಿಮ್ಮ ದಿನದಲ್ಲಿ ಕುತೂಹಲವಿರಲಿದೆ. ಹೊಸಬಹರ ಪರಿಚಯವಾಗಲಿದೆ. ಧನಾಗಮನವೂ ಇದೆ. ನಿಮ್ಮ ಪುತ್ರ-ಪುತ್ರಿಯರಿಂದ ಅನುಕೂಲದ ದಿನ, ನಿಮ್ಮ ಕೋರ್ಟು ಕಚೇರಿ ಕೆಲಸಗಳೆಲ್ಲ ಜಯಶೀಲವಾಗುತ್ತವೆ.   

ದೋಷ ಪರಿಹಾರ : ವೆಂಕಟೇಶ ದೇವಸ್ಥಾನಕ್ಕೆ ಅಭಿಷೇಕ ಸಾಮಗ್ರಗಳನ್ನೋ ಅಥವಾ ಅಲಂಕಾರ ಸಾಮಗ್ರಿಗಳನ್ನೋ ಕೊಟ್ಟುಬನ್ನಿ.

ಕಟಕ : ಇಂದು ನಿಮ್ಮ ಮನೋಭಿಲಾಷೆ ನೆರವೇರುವ ದಿನ,  ಅಂದುಕೊಂಡ ಕೆಲಸಗಳು ಬಹಳ ಬೇಗ ನೆರವೇರುತ್ತವೆ. ಉತ್ತಮರ ಸಂಗ ದೊರೆಯುತ್ತದೆ. ಸ್ತ್ರೀಯರಿಂದ ಧನ ನಷ್ಟ, ಮನೆಯಲ್ಲಿ ಹಿರಿಯರಿಂದ ಆಶೀರ್ವಾದ ಹಾಗೂ ಅನುಕೂಲಸಿಗಲಿದೆ. ನಿಮ್ಮ ಆರೋಗ್ಯ ಸದೃಢವಾಗಲಿದೆ. ದೇವಾಲಯ ದರ್ಶನ
  
ದೋಷ ಪರಿಹಾರ : ದುರ್ಗಾ ದೇವಸ್ಥಾನಕ್ಕೆ ಮಿತ್ರರೊಂದಿಗೆ ಹೋಗಿಬನ್ನಿ.

ಸಿಂಹ : ಇಂದು ನಿಮ್ಮ ಸಹೋದರರಿಂದ ಹಾಗೂ ಸಹೋದರಿಯರಿಂದ ಅನುಕೂಲ ಹಾಗೂ ಸಹಕಾರ ಸಿಗಲಿದೆ. ನಿಮ್ಮ ಆಸ್ತಿ ವಿಚಾರದಲ್ಲಿ ಸ್ವಲ್ಪ ಕಿರಿಕಿರಿಯಾಗುವ ಸಾಧ್ಯತೆ ಇದೆ. ನಿಮ್ಮ ಮನಸ್ಸು ಸಮಾಧಾನದಿಂದಿದ್ದರೂ ಕೆಲ ವಿಚಾರಗಳು ಸ್ತ್ರೀಯರ ಬಗೆಗಿನ ಚರ್ಚೆಗಳು ನಿಮ್ಮಲ್ಲಿ ಖಿನ್ನತೆ ಉಂಟುಮಾಡುತ್ತವೆ.

ದೋಷ ಪರಿಹಾರ : ಶಿವ ಧ್ಯಾನವನ್ನೇ ಮಾಡಿ

ಕನ್ಯಾ : ಆತ್ಮೀಯರೇ ಇಂದು ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯವಾಗುತ್ತದೆ, ಮನೆಯಲ್ಲಿ ಕಿರಿಕಿರಿಯಾಗುತ್ತದೆ, ವೃದ್ಧರು ನಿಮ್ಮನ್ನು ಕಾಡಲಿದ್ದಾರೆ. ಆದರೆ ಸಮಾಧಾವಿರಲಿ. ಅವರಿಗೆ ಸಮಂಜಸ ಉತ್ತರವನ್ನು ಕೊಡಿ. ಚೀರಾಡುವ ಅಗತ್ಯವಿಲ್ಲ. ನೀವು ಹಾಗೆ ಮಾಡುವುದೂ ಇಲ್ಲ ಬಿಡಿ. ವಾಕ್ ಸ್ಥಾನದಲ್ಲಿ ಗುರುವಿರುವಾಗ ನೀವು ತಾನೆ ಹೇಗೆ ಒರಟಾಗಿ ಮಾತನಾಡಲು ಸಾಧ್ಯ..? 
  
ದೋಷ ಪರಿಹಾರ : ಹಿರಿಯರ ಆಶೀರ್ವಾದ ಪಡೆಯಿರಿ

ತುಲಾ :  ಆತ್ಮೀಯರೇ ಇಂದೂ ಕೂಡ ನಿಮ್ಮ ದಿನ ಸುಗಮವಾಗಿರಲಿದೆ. ನಿಮ್ಮ ಕನಸಿನ ರಾಣಿ / ರಾಜ ನಿಮ್ಮನ್ನು ಹೊಂದುತ್ತಾರೆ ಹಾಗೂ ನಿಮ್ಮ ಸಂತಸವನ್ನು ಇಮ್ಮಡಿಮಾಡುತ್ತಾರೆ. ನಿಮ್ಮ ಮನಸ್ಸಿಗೆ ಶಾಂತಿ ತುಂಬಲಿದೆ. ಆಗಂತುಕರ ಭೇಟಿ. ಉತ್ತಮ ಕಾರ್ಯ ಸಾಧನೆ.

ದೋಷ ಪರಿಹಾರ : ಅನ್ನಪೂರ್ಣೇಶ್ವರಿ ದರ್ಶನ ಮಾಡಿ

ವೃಶ್ಚಿಕ : ಆತ್ಮೀಯರೇ, ಇಂದು  ನಿಮ್ಮ ಸರ್ವ ಕಾರ್ಯಗಳೂ ಜಯಶೀಲವಾಗಿರಲಿವೆ. ಸ್ವಲ್ಪ ಮಟ್ಟಿಗೆ ಧರ್ಮ ಕಾರ್ಯಕ್ಕಾಗಿ ಧನ ವ್ಯಯ ಮಾಡುವ ಮನಸ್ಸಾಗಲಿದೆ. ಕೆಲವರಿಗೆ ಉದ್ಯೋಗದಲ್ಲಿ ಸ್ವಲ್ಪ ಕಿರಿಕಿರಿ ಉಂಟಾಗಲಿದೆ. 

ದೋಷ ಪರಿಹಾರ : ಸುಬ್ರಹ್ಮಣ್ಯ ಆರಾಧನೆ ಮಾಡಿ

ಧನಸ್ಸು : ಆತ್ಮೀಯರೇ ಇಂದು ನಿಮ್ಮ ದೇಹದಲ್ಲಿ ಆರೋಗ್ಯ ವ್ಯತ್ಯಯ, ಕೋರ್ಟು ಕಚೇರಿಯಲ್ಲಿ, ನಿಮ್ಮ ನಿತ್ಯ ಸುಖಕ್ಕೇನೂ ತೊಂದರೆ ಇಲ್ಲ. ನಿಮ್ಮ ಕುಟುಂಬದಲ್ಲಿ ಸಾಮರಸ್ಯ ಸ್ವಲ್ಪ ಕಡಿಮೆಯಾಗಲಿದೆ. ಅರ್ಧ ಶುಭ - ಅರ್ಧ ಅಶುಭ

ದೋಷ ಪರಿಹಾರ : ಶನಿ ದೇವರ ಆರಾಧನೆ ಮಾಡಿ

ಮಕರ :  ಆತ್ಮೀಯರೇ ಇಂದು ನಿಮ್ಮ ಪಾಲಿಗೆ ಉತ್ತಮ ದಿನ, ಉದ್ಯೋಗದಲ್ಲಿ ಏನೂ ಕಿರಿಕಿರಿ ಇಲ್ಲ. ನೀವು ನಂಬಿದ ಗುರುಗಳ ಭೇಟಿ ಸಾಧ್ಯತೆ ಇದೆ. ಹಿರಿಯರು ನಿಮ್ಮ ಜೀವನಕ್ಕೆ ಮಾರ್ಗದರ್ಶನ ಮಾಡುತ್ತಾರೆ. ಸಂಗಾತಿಯಿಂದ ಸಂಪೂರ್ಣ ಸಹಕಾರದೊರೆಯಲಿದೆ.
  
ದೋಷ ಪರಿಹಾರ : ಶಿವ ಹಾಗೂ ಪಾರ್ವತಿ ದರ್ಶನ ಮಾಡಿ.

ಕುಂಭ : ಆತ್ಮೀಯರೇ ಇಂದು ಉದ್ಯೋಗದಲ್ಲಿ ಉತ್ತಮ ಅಭಿವೃದ್ಧಿ ಇದೆ. ನೀವು ಅಂದುಕೊಂಡಂತೆ ನಿಮ್ಮ ಕಾರ್ಯ ಯಶಸ್ವಿಯಾಗಲಿದೆ. ನಿಮ್ಮ ಸಂಗಾತಿಯಿಂದ ಸ್ವಲ್ಪ ಕಿರಿಕಿರಿ ಉಂಟಾಗಲಿದೆ. ಸಹೋದರರ ಸಹಕಾರ ದೊರೆಯಲಿದೆ.  

ದೋಷ ಪರಿಹಾರ :  ಶಿವನಿಗೆ ಬಿಲ್ವಾರ್ಚನೆ ಮಾಡಿಸಿ. ಇಲ್ಲಾ ಶಿವಾನಂದಲಹರಿ ಪಠಿಸಿ.
  
ಮೀನ : ಸ್ನೇಹಿತರೆ ಇಂದು ಅಷ್ಟಮ ಚಂದ್ರ ಹಾಗೂ ಗುರು ಯುತಿ ನಿಮ್ಮ ಆರೋಗ್ಯ ವೃದ್ಧಿಮಾಡಲಿದೆ. ಉದ್ಯೋದ್ಯೋಗದಲ್ಲಿ ಮಿತ್ರರು ಸಹಕಾರಕಾರಿಯಾಗಿರುತ್ತಾರೆ. ಪಂಚಮ ರವಿ ರಾಹು ಯುತಿ ತಂದೆಯಿಂದ ಅಸಹಕಾರ ಸಾಧ್ಯತೆ. 
  
ದೋಷ ಪರಿಹಾರ : ಶ್ರೀರಾಮ ನಾಮ ಪಠಿಸಿ

ಗೀತಾಸುತ.

loader