ಇಂದು ಈ ರಾಶಿಯವರಿಗೆ ಧನಲಾಭದ ದಿನ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 20, Jul 2018, 7:03 AM IST
Special Bhavishya July 20
Highlights

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು. ಇಂದು ಕರ್ಕಟಕ ರಾಶಿಯಲ್ಲಿ ಸೂರ್ಯ, ಬುಧ, ರಾಹುಗಳಿದ್ದು, ಶುಕ್ರನು ಸಿಂಹರಾಶಿಲ್ಲಿದ್ದಾನೆ , ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ತುಲಾ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.

ಇಂದು ಈ ರಾಶಿಯವರಿಗೆ ಧನಲಾಭದ ದಿನ

ಮೇಷ ರಾಶಿ : ಪ್ರಿಯರೇ ನಿಮ್ಮ ಮನಸ್ಸಿಗೆ ಸಮಾಧಾನವಿರಲಿದೆ. ನಿಮ್ಮ ವ್ಯಾಪಾರದಲ್ಲಿ ಸ್ತ್ರೀಯರ ಸಹಕಾರವಿರಲಿದೆ. ನಿಮ್ಮ ಉದ್ಯೋಗ ಸ್ಥಳದಲ್ಲಿ ಉತ್ತಮ ಸ್ಥಾನ ಹೊಂದುತ್ತೀರಿ. ಉತ್ತಮ ದಿನವಾಗಿರಲಿದೆ. 

ದೋಷಪರಿಹಾರ : ನಿಮ್ಮ ತಂದೆ-ತಾಯಿಗೆ ನಮಸ್ಕಾರ ಮಾಡಿ

ವೃಷಭ : ಇಂದು ನಿಮ್ಮ ಪಾಲಿಗೆ ಅನಾರೋಗ್ಯದ ದಿನ. ಸ್ವಲ್ಪ ದೇಹದಲ್ಲಿ ಏರುಪೇರಾಗಬಹುದು, ಮುಖ್ಯವಾಗಿ ನಿಮ್ಮ ತಾಯಿಯಿಂದ ನಿಮ್ಮ ಉದ್ಯೋಗಕ್ಕೆ ಸಹಾಯವಾಗಲಿದೆ. ನೀವು ಯೋಚನೆ ಮಾಡಿದ ಸಂಗತಿ ಫಲಕಾರಿಯಾಗಿರುವುದಿಲ್ಲ. ನಿಮ್ಮ ಯೋಜನೆಯನ್ನು ಮುಂದೂಡಿ. 

ದೋಷ ಪರಿಹಾರ : ದುರ್ಗಾ ದರ್ಶನ ಮಾಡಿ

ಮಿಥುನ : ಆತ್ಮೀಯರೇ ಇಂದು ನಿಮಗೆ ಧನಲಾಭವಿದೆ. ತಂದೆಯಿಂದ ಸಹಕಾರವೂ ದೊರೆಯಲಿದೆ. ನಿಮ್ಮ ಕಾರ್ಯ ಸಾಧನೆಗೆಹಿರಿಯರ ಸಹಕಾರ ಇರಲಿದೆ. ಉದ್ಯೋಗದಲ್ಲೂ ಉತ್ತಮ ಫಲ. ಮಕ್ಕಳಿಂದ ಸಂತಸ. ಶುಭದಿನ  

ದೋಷ ಪರಿಹಾರ : ಸೂರ್ಯ ದರ್ಶನ ಮಾಡಿ

ಕಟಕ : ಇಂದು ನಿಮ್ಮ ಪಾಲಿಗೆ ಸಂತಸದ ದಿನ, ಸುಖ ಸ್ಥಾನದಲ್ಲಿರು ಗುರು-ಚಂದ್ರರು ಸುಖವೃದ್ಧಿಮಾಡಲಿದ್ದಾರೆ. ತಾಯಿಯಿಂದ ಸಹಕಾರ ಸಿಗಲಿದೆ, ವಾಹನ ಲಾಭ, ಮಿತ್ರರಿಂದ ಉತ್ತಮ ಸಹಕಾರ, ಶುಭ ದಿನವಾಗಿರಲಿದೆ.  
  
ದೋಷ ಪರಿಹಾರ : ಚಂದ್ರನ ಉಪಾಸನೆ ಮಾಡಿ ಅಂದ್ರೆ ಚಂದ್ರಾಯ ನಮ: ಮಂತ್ರವನ್ನು 10 ಬಾರಿ ಜಪಿಸಿ

ಸಿಂಹ : ಇಂದು ನಿಮ್ಮ ಸಹೋದರಿಯರು ನಿಮಗೆ ದೊಡ್ಡ ಉಪಕಾರಮಾಡುತ್ತಾರೆ. ನಿಮ್ಮ ಶ್ರಮಕ್ಕೆ ಹೆಚ್ಚು ಫಲ ದೊರೆಯಲಿದೆ. ಮಕ್ಕಳಿಂದ ಸ್ವಲ್ಪ ಬೇಸರವಾಗಬಹುದು, ನಿಮ್ಮ ಹೊಟ್ಟೆ ಭಾಗದಲ್ಲಿ ಸ್ವಲ್ಪ ಬಾಧೆ ಕಾಣಲಿದೆ. ಆರೋಗ್ಯ ವ್ಯತ್ಯಯ ಅಷ್ಟೆ ಅಲ್ಲ ಆಹಾರ ವ್ಯತ್ಯಯವೂ ಇದೆ. 

ದೋಷ ಪರಿಹಾರ : ಶಿವನಿಗೆ ಭಸ್ಮಾಭಿಷೇಕ ಮಾಡಿಸಿ ಅಥವಾ ಬಿಲ್ವಪತ್ರೆ ಸಮರ್ಪಿಸಿ.

ಕನ್ಯಾ : ಆತ್ಮೀಯರೇ ಇಂದು ನಿಮ್ಮ ಕುಟುಂಬದಲ್ಲಿ ಬಂಧುಗಳ ಸಮಾಗಮ, ಕಲಾಪ ಮಿತ್ರರ ಕೂಟ, ಧನ ಸ್ಥಾನದಲ್ಲಿ ಗುರು-ಚಂದ್ರರ ಯೋಗ ದಿಂದ ಧನ ಲಾಭ, ಓಡಾಡುವಾಗ ಸ್ವಲ್ಪ ಜಾಗ್ರತೆ ಇರಲಿ. ಮಕ್ಕಳಿಂದ ಸಹಕಾರ. ಶುಭದಿನ
  
ದೋಷ ಪರಿಹಾರ : ವಿಷ್ಣು ಆರಾಧನೆ ಮಾಡಿ

ತುಲಾ :  ಆತ್ಮೀಯರೇ ಇಂದು ಗಜಕೇಸರಿ ಯೋಗ, ಉತ್ತಮ ಫಲ ನಿರೀಕ್ಷಿಸಬಹುದು, ಗಂಡ-ಹೆಂಡಿರಲ್ಲಿ ಸಾಮರಸ್ಯ. ಸಹೋದರರಲ್ಲಿ ಭಿನ್ನಾಭಿಪ್ರಾಯ, ನಿಮ್ಮ ಮನೆಯಲ್ಲಿ, ಅಥವಾ ಹೊಲದಲ್ಲಿ ಸರ್ಪ ದರ್ಶನವಾಗುವ ಸಾಧ್ಯತೆ ಇದೆ, ಎಚ್ಚರವಾಗಿರಿ.

ದೋಷ ಪರಿಹಾರ : ಸುಬ್ರಹ್ಮಣ್ಯ ಪ್ರಾರ್ಥನೆ, ಅಥವಾ ನಾಗಾರಾಧನೆ ಮಾಡಿ

ವೃಶ್ಚಿಕ : ಆತ್ಮೀಯರೇ, ಇಂದು ನಿಮ್ಮ ದಿನ ಶುಭವಾಗಿರಲಿದೆ, ಭಾಗ್ಯ ಸ್ಥಾನದಲ್ಲಿರುವ ರವಿಯಿಂದಾಗಿ ಅಪ್ಪನಿಂದ ಸಹಕಾರ, ಧನ ವ್ಯಯವಾಗುವ ಸಾಧ್ಯತೆ ಇದೆ, ಸಾಮಾನ್ಯದಿನವಾಗಿರಲಿದೆ. 

ದೋಷ ಪರಿಹಾರ : ಸುಬ್ರಹ್ಮಣ್ಯ ಆರಾಧನೆ ಮಾಡಿ

ಧನಸ್ಸು : ಆತ್ಮೀಯರೇ ಇಂದು ನಿಮ್ಮ ಪಾಲಿಗೆ ಲಾಭದ ದಿನ, ನಿಮ್ಮ ವ್ಯಾಪಾರದಲ್ಲಿ ಲಾಭ. ಉಪನ್ಯಾಸಕರಿಗೆ, ಧರ್ಮ ಗುರುಗಳಿಗೆ ಶುಭದಿನವಾಗಿರಲಿದೆ. ನಿಮ್ಮ ಗುರು ಪ್ರಾರ್ಥನೆ ಮಾಡಿ. ಇಂದು ನಿಮ್ಮ ಸಕಲ ಕಾರ್ಯಗಲೂ ಶುಭದಿಂದಿರಲಿವೆ.

ದೋಷ ಪರಿಹಾರ : ನಿಮ್ಮ ಪರಂಪರೆಯ ಗುರುಗಳಿಗೆ ಮನ:ಪೂರ್ವಕ ನಮಸ್ಕಾರ ಮಾಡಿ

ಮಕರ :  ಆತ್ಮೀಯರೇ ಇಂದು ನಿಮ್ಮ ಪಾಲಿಗೆ ಸ್ವಲ್ಪ ಅಸಮಧಾನ, ಆದರೆ ಶುಭವೂ ಇದೆ. ನಿಮ್ಮ ಕಾರ್ಯಗಳೆಲ್ಲ ಸಾಕಾರಗೊಳ್ಳಲಿವೆ. ಉತ್ತಮ ಅಭಿವೃದ್ಧಿಯೂ ಇದೆ. ದಿನ ಪ್ರಾರಂಭವಾಗುವ ಮುನ್ನ ಸೂರ್ಯ ಪ್ರಾರ್ಥನೆ ಮಾಡಿ
  
ದೋಷ ಪರಿಹಾರ : ಸೂರ್ಯನಿಗೆ 12 ನಮಸ್ಕಾರ ಮಾಡಿ

ಕುಂಭ : ಆತ್ಮೀಯರೇ ಇಂದು ನಿಮ್ಮ ಪಾಲಿಗೆ ಶುಭದಾಯಕ ದಿನ, ಉದ್ಯೋಗದಲ್ಲಿ ಪ್ರಶಂಸೆ, ಹಿರಿಯರಿಂದ ಉತ್ತಮ ಮಾತುಕೇಳಲಿದ್ದೀರಿ. ಶಾಲಾಕಾಲೇಜಿನ ಅಧ್ಯಾಪಕರಿಗೆ ಉತ್ತಮ ದಿನ, ಹಲವರಿಂದ ಉದ್ಯೋಗ ಸ್ಥಳದಲ್ಲಿ ಶುಭ ಸುದ್ದಿ.   

ದೋಷ ಪರಿಹಾರ :  ಗುರು ಪ್ರಾರ್ಥನೆ ಮಾಡಿ
  
ಮೀನ : ಸ್ನೇಹಿತರೆ ಇಂದು ನೀವು ನೆಮ್ಮದಿಯನ್ನು ಕಾಣಬಹುದು. ಆದರೆ ಸ್ವಲ್ಪ ಮಟ್ಟಿಗೆ ಆರೋಗ್ಯ ವ್ಯತ್ಯಯವಾಗುವ ಸಾಧ್ಯತೆ ಇದೆ. ವಾಹನದಲ್ಲಿ ಓಡಾಡುವಾಗ ಸ್ವಲ್ಪ ಜಾಗ್ರತೆ ಇರಲಿ.    
  
ದೋಷ ಪರಿಹಾರ : ಸೀತಾಸಹಿತ ರಾಮಚಂದ್ರನ ದರ್ಶನ ಮಾಡಿ

ಗೀತಾಸುತ.

loader