ಈ ರಾಶಿಯವರಿಂದು ಅತ್ಯಂತ ಎಚ್ಚರಿಕೆ ವಹಿಸುವುದು ಅಗತ್ಯ

Special Bhavishya July 2
Highlights

ಈ ರಾಶಿಯವರಿಂದು ಅತ್ಯಂತ ಎಚ್ಚರಿಕೆ ವಹಿಸುವುದು ಅಗತ್ಯ

ಈ ರಾಶಿಯವರಿಂದು ಅತ್ಯಂತ ಎಚ್ಚರಿಕೆ ವಹಿಸುವುದು ಅಗತ್ಯ

ಶ್ರೀ ವಿಲಂಬಿ ನಾಮ ಸಂವತ್ಸರ
ಉತ್ತರಾಯಣ
ಗ್ರೀಷ್ಮ ಋತು
ನಿಜ ಜ್ಯೇಷ್ಠ ಮಾಸ
ಕೃಷ್ಣ ಪಕ್ಷ
ಚತುರ್ಥಿ ತಿಥಿ
ಧನಿಷ್ಠಾ ನಕ್ಷತ್ರ

ರಾಹುಕಾಲ - 07.27 ರಿಂದ 09.09
ಯಮಗಂಡ ಕಾಲ - 10.50 ರಿಂದ 12.31

ಗುಳಿಕ ಕಾಲ - 02.12 ರಿಂದ 03.53

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು. ಮಿಥುನ ರಾಶಿಯಲ್ಲಿ ರವಿ ಇದ್ದು, ಕರ್ಕಟಕ ರಾಶಿಯಲ್ಲಿ ಬುಧ, ಶುಕ್ರ, ರಾಹುಗಳಿದ್ದು, ತುಲಾ ರಾಶಿಯಲ್ಲಿ ಗುರು ಇದ್ದು, ಇಂದೂ ಕೂಡ ಧನಸ್ಸು ರಾಶಿಯಲ್ಲಿ  ಶನಿಯರು ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ಇಂದು ಕುಂಭ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  

ಮೇಷ ರಾಶಿ : ನೋಡಿ ನಿಮ್ಮ ರಾಶಿಯಿಂದ 11 ನೇ ಮನೆಯಲ್ಲಿ ಚಂದ್ರನಿದ್ದಾನೆ. ಇಂದು ನಿಮ್ಮ ಹೊಸ ಕಾರ್ಯ ಪ್ರಾರಂಭವಾಗಲಿದೆ, ತಾಯಿಯಿಂದ ಲಾಭ ಸಿಗಲಿದೆ. ನೀವಿಂದು ನಿಮ್ಮ ಅತ್ಯಾಪ್ತಮಿತ್ರರಿಂದ ಸಂತೋಷ ಹೊಂದಲಿದ್ದೀರಿ. ಸತ್ಫಲ ನಿಮ್ಮ ಪಾಲಿಗಿದೆ. ಯಾವುದಕ್ಕೂ ಚಿಂತೆ ಇಲ್ಲ. 

ದೋಷಪರಿಹಾರ : ದೋಷ ಪರಿಹಾರ ಅನ್ನುವುದಕ್ಕಿಂತ ಫಲ ವೃದ್ಧಿಗಾಗಿ ಓಂ ಷಡಾನನಾಯ ನಮ: ಎಂಬ ಮಂತ್ರವನ್ನ 24 ಬಾರಿ ಪಠಿಸಿದರೆ ಫಲ ವೃದ್ಧಿ. ತಾಮ್ರ ವರ್ಣದ ಬಟ್ಟೆ ಹಾಕುವುದರಿಂದ ತೇಜಸ್ಸು ಹೆಚ್ಚಲಿದೆ.

ವೃಷಭ : ನೀವು ಅಂದುಕೊಂಡ ಕಾರ್ಯಕ್ಕೆ ಓರ್ವ ಸ್ತ್ರೀ ಸಹಾಯ ಬೇಕಾಗುತ್ತದೆ. ಅಷ್ಟೇ ಅಲ್ಲ ಸ್ತ್ರೀಯರಿಂದ ಬೈಗುಳ ಕೇಳಬೇಕಾಗುತ್ತದೆ. ಇಂದಿನ ದಿನ ನಿಮ್ಮ ಸ್ವಭಾವದಲ್ಲಿ ಸ್ವಲ್ಪ ಉಗ್ರತೆ ಇರುತ್ತದೆ. ಹಾಗೂ ತೀವ್ರ ಆಕರ್ಷಣೆಗಳು ನಿಮ್ಮನ್ನು ಬಾಧಿಸುತ್ತವೆ. ಸಮಾಧಾನ ತಾಳ್ಮೆ ಇರಲಿ. ನೀವು ಬಯಸಿದ್ದು ಸಿಗುವುದು ಕಷ್ಟವಿದೆ. ನಿಮ್ಮ ಮನೆ ದೇವರಿಗೆ ಸಾಮ್ರಾಣಿ ಧೂಪದಿಂದ ಸೇವೆ ಮಾಡಿ.

ದೋಷ ಪರಿಹಾರ : ಮಹಾಲಕ್ಷ್ಮಿ ಸನ್ನಿಧಿಗೆ ಹೋಗಿಬನ್ನಿ, ಸಾಧ್ಯವಾದರೆ ಸುಮಂಗಲೆಯರಿಗೆ ವಸ್ತ್ರ ದಾನ ಮಾಡಿ

ಮಿಥುನ : ಆತ್ಮೀಯರೇ ಇಂದು ನೀವು ಬಹಳ ಎಚ್ಚರವಾಗಿರಬೇಕಾದ ದಿನ ಕಾರಣನೀವು ವ್ಯಾಪಾಸ್ಥರಾಗಿದ್ದರೆ ಖಂಡಿತಾ ಮೋಸ ಹೋಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲ ನಿಮ್ಮ ಕಾಲಿಗೆ ಪೆಟ್ಟಾಗುವ ಸಾಧ್ಯತೆ ಇದೆ. ತುಂಬಾ ಹುಷಾರಾಗಿರಬೇಕಾದ ದಿನ. ಆದರೆ ನಿಮ್ಮಲ್ಲಿ ಒಂದು ಆತ್ಮ ಶಕ್ತಿ ಜಾಗೃತವಾಗಿದೆ. ಎಲ್ಲವನ್ನೂ ಎದುರಿಸುವ ಸಾಮರ್ಥ್ಯ ನಿಮ್ಮಲ್ಲಿದೆ. ಆದರೂ ದೈವದ ಮೊರೆ ಹೋಗಿ ದಿನದ ಕಾರ್ಯ ಪ್ರಾರಂಭ ಮಾಡಿ 

ದೋಷ ಪರಿಹಾರ : ಓಂ ಮಧುಸೂಧನಾಯ ನಮ: ಎಂಬ ಮಂತ್ರವನ್ನು 21 ಬಾರಿ ಪಠಿಸಿ.

ಕಟಕ : ಇಂದು ಶೀತ ಬಾಧೆ ನಿಮ್ಮನ್ನು ಕಾಡಲಿದೆ. ಮುಖ್ಯವಾಗಿ ಮನೆಯಲ್ಲಿ ಗಂಡ ಹೆಂಡತಿ ನಡುವೆ ಭಿನ್ನಾಭಿಪ್ರಾಯ ಬರಲಿದೆ. ಮನೆಯಲ್ಲಿ ಮಂಗಳಕಾರ್ಯ ನಡೆಸುವ ಯೋಚನೆ, ನಿಮ್ಮ ವ್ಯಾಪಾರ ಹಾಗೂ ವಹಿವಾಟಿನಲ್ಲಿ ದುಷ್ಟ ಜನರ ಕಾಟ ಇರಲಿದೆ. ಎಚ್ಚರಿಕೆಯಿಂದ ಇರಬೇಕು.  
ದೋಷ ಪರಿಹಾರ : ಆರು ಜನ ಮಾತೆಯರಿಗೆ ಮಂಗಲದ್ರವ್ಯ ದಾನ ಮಾಡಿ.

ಸಿಂಹ : ಇಂದು ನಿಮ್ಮ ರಾಶಿಯವರು ಮಾಡಬೇಕಾದದ್ದೇನು ಅಂದ್ರೆ ಐದು ಹಿಡಿ ಗೋಧಿಯೊಂದಿಗೆ ಶಿವ ದೇವಸ್ಥಾನಕ್ಕೆ ಹೋಗಿ 5 ಪ್ರದಕ್ಷಿಣೆ ಹಾಕಿ ಶಿವನಿಗೆ ಅರ್ಪಿಸಿ ಬನ್ನಿ. ನಂತರ ನಿಮ್ಮ ತಂದೆ ಅಥವಾ ತಂದೆ ಸಮಾನರಿಗೆ ನಮಸ್ಕಾರ ಮಾಡಿ ನಿಮ್ಮ ಕಾರ್ಯ ಪ್ರಾರಂಭ ಮಾಡಿ. ಹೀಗೆ ಮಾಡಿದ್ರೆ ಒಳ್ಳೇದಾಗತ್ತಾ..? ಪರೀಕ್ಷೆ ಮಾಡಿ ನೋಡಿ. 

ದೋಷ ಪರಿಹಾರ : ಬೇರೆ ಏನೂ ಮಾಡುವುದು ಬೇಡ. ಮೇಲೆ ಹೇಳಿದ್ದನ್ನು ಮಾಡಿದರೆ ಸಾಕು.

ಕನ್ಯಾ : ಆತ್ಮೀಯರೇ ಈದಿನ ನೀವು ನಿಮ್ಮ ಮಕ್ಕಳಲ್ಲಿ ಉತ್ಸಾಹವನ್ನು ತುಂಬಲಿದ್ದೀರಿ. ಮಕ್ಕಳಿಂದ ಸಂತಸವೂ ಇದೆ. ಜೊತೆಗೆ ಹೊಟ್ಟೆ ಭಾಗದಲ್ಲಿ ಸಮಸ್ಯೆ ಕಾಣಿಸಿಕೊಳ್ಳಲಿದೆ. ನಾಲ್ಕು ಗರಿಕೆಯೊಂದಿಗೆ ಗಣಪತಿ ದೇವಸ್ಥಾನಕ್ಕೆ ಹೋಗಿ ಗಣಪತಿಗೆ ಸಮರ್ಪಣೆ ಮಾಡಿಬನ್ನಿ. ನಿಮ್ಮ ಸಂಗಾತಿಯಿಂದ ಸ್ವಲ್ಪ ಹಣ ಲಾಭ. ನೆಮ್ಮದಿಯ ದಿನ
  
ದೋಷ ಪರಿಹಾರ : ಓಂ ತ್ರಿವಿಕ್ರಮಾಯ ನಮ: ಮಂತ್ರವನ್ನು 21 ಬಾರಿ ಪಠಿಸಿ.

ತುಲಾ :  ನಿಮ್ಮ ರಾಶಿಯಿಂದ ತೃತೀಯ ಸ್ಥಾನದಲ್ಲಿ ಶನಿ ಇದ್ದು ಸಹೋದರರಲ್ಲಿ ಭಿನ್ನಾಭಿಪ್ರಾಯ ಮೂಡಕಲಿದೆ. ಬೆಳಗ್ಗೆ ಎದ್ದು ಸ್ನಾನ ನಂತರ ಸುಬ್ರಹ್ಮಣ್ಯಸ್ವಾಮಿಗೆ ಮೂರು ಪ್ರದಕ್ಷಿಣೆ ಹಾಕಿ. ಜಗಳ ಸ್ವಲ್ಪ ಸುಧಾರಿಸುತ್ತದೆ.  ಸಂಗಾತಿಯಿಂದ ನೆಮ್ಮದಿ ಸಿಗಲಿದೆ. ಹೆಚ್ಚು ಚಿಂತೆ ಮಾಡಬೇಡಿ.

ದೋಷ ಪರಿಹಾರ : ಓಂ ಹೃಷೀಕೇಶಾಯ ನಮ: ಎಂಬ ಮಂತ್ರವನ್ನು 12 ಬಾರಿ ಪಠಿಸಿ. 

ವೃಶ್ಚಿಕ : ಇಂದು ನಿಮ್ಮ ಕಾರ್ಯಗಳಲ್ಲಿ ಸಾಧನೆ ಕಾಣುತ್ತೀರಿ. ಜೊತೆಗೆ ಅನ್ಯ ಧರ್ಮದವರ ಸಹಾಯ ಸಿಗಲಿದೆ. ವ್ಯಾಪಾರ ಮಾಡುವವರು ಎಚ್ಚರವಾಗಿರಬೇಕು ಓರ್ವ ಸ್ತ್ರೀಯಿಂದ ಮೋಸ ಹೋಗುವ ಸಾಧ್ಯತೆ ಇದೆ. ಸ್ತ್ರೀಯರಿಗೆ ಶುಭ ಫಲವಿರಲಿದೆ ಜೊತೆಗೆ ನಿಮ್ಮ ಸಂಗಾತಿ ನಿಮ್ಮನ್ನು ವಂಚಿಸುವ ಸಾಧ್ಯತೆ ಇದೆ. 

ದೋಷ ಪರಿಹಾರ : ಇಂದು ಓಂ ಷಡಾನನಾಯ ನಮ: ಮಂತ್ರವನ್ನು 6 ಬಾರಿ ಪಠಿಸಿ

ಧನಸ್ಸು : ಆತ್ಮೀಯರೇ ಇಂದು ನಿಮ್ಮ ವ್ಯಾಪಾರದಲ್ಲಿ  ಲಾಭ. ನಿಮ್ಮ ಮಿತ್ರರಿಂದ ಹಾಗೂ ತಂದೆಯಿಂದ ವ್ಯಾಪಾರಕ್ಕೆ ಲಾಭವಾಗಲಿದೆ. ಅಷ್ಟೇ ಅಲ್ಲ ನಿಮ್ಮ ಸಂಗಾತಿಯ ಬಳಗದವರೂ ನಿಗೆ ಸಹಾಯ ಮಾಡಲಿದ್ದಾರೆ. ನಿಮ್ಮ ಬಿರುಸು ಮಾತಿನಿಂದ ನಿಮ್ಮ ಮೇಲೆ ಕೆಲವರು ಕೋಪ ಮಾಡಿಕೊಳ್ಳುವ ಸಾಧ್ಯತೆಯೂ ಇದೆ. ಎಚ್ಚರದಿಂದಿರಿ. 

ದೋಷ ಪರಿಹಾರ : ದತ್ತಾತ್ರೇಯ ದರ್ಶನ ಹಾಗೂ ಉಪಾಸನೆ ಮಾಡಿ. 

ಮಕರ : ಆತ್ಮೀಯರೇ ನಿಮ್ಮ ಈ ದಿನ ಮಹೋನ್ನತವಾಗಿದೆ. ಹೊಸ ಅವಕಾಶ ಹಾಗೂ ಹೊಸ ಉದ್ಯೋಗ ಸಿಗುವ ಕಾಲ, ನೀವು ಆದ್ರೆ ದೇಹದಲ್ಲಿ ಗಾಯ ಉಂಟಾಗುವ ಸಾಧ್ಯತೆ ಇದೆ, ಸ್ವಲ್ಪ ಎಚ್ಚರದಿಂದ ಓಡಾಡಿ. ಮುಳ್ಳಿನ ಗಿಡ ನಿಮಗೆ ಬಾಧೆ ಮಾಡಬಹುದು. ತಲೆ ಹತ್ರ ತರಚುವ ಸಾಧ್ಯತೆ ಇದೆ. ಎಚ್ಚರವಾಗಿರಿ.
  
ದೋಷ ಪರಿಹಾರ : ಐದು ಲೋಟ ಜೇನುತುಪ್ಪ ಹಾಗೂ 5 ಲೋಟ ಸಕ್ಕರೆಯನ್ನು ಗಣೇಶ ದೇವಸ್ಥಾನಕ್ಕೆ ಕೊಟ್ಟುಬನ್ನಿ.

ಕುಂಭ :   ಅಥವಾ ನೀರು ವ್ಯಾಪಾರಿಗಳಿಗೆ ಅನುಕೂಲವಿದೆ, ಹಾಲು, ಪಾನೀಯ ವ್ಯಾಪಾರಸ್ಥರಿಗೆ ಲಾಭದ ದಿನ, ಇಂದು ನೀವು ಮಾಡಬೇಕಾದದ್ದು ಒಂದು ಹೊಸ ಸ್ಟೀಲ್ ತಂಬಿಗೆ ಕೊಂಡುಕೊಂಡು ಆ ತಂಬಿಗೆ ತುಂಬ ಹಾಲನ್ನು ತುಂಬಿ ಶಿವ ದೇವಸ್ಥಾನಕ್ಕೆ ಕೊಟ್ಟು ಬಂದಲ್ಲಿ ಅತ್ಯಂತ ಶುಭಫಲ ಕಾಣಲಿದ್ದೀರಿ.

ದೋಷ ಪರಿಹಾರ :  ಓಂ ಪರಬ್ರಹ್ಮಣೇ ನಮ: ಮಂತ್ರವನ್ನು 24 ಬಾರಿ ಪಠಿಸಿ.
  
ಮೀನ :  ಆತ್ಮೀಯರೇ ಇಂದು ನಿಮ್ಮ ಆರೋಗ್ಯ ಸ್ವಲ್ಪ ಏರುಪೇರಾಗಲಿದೆ. ಆದರೆ ನಿಮ್ಮ ಉತ್ಸಾಹಕ್ಕೇ ನೂ ಕಮ್ಮಿ ಇಲ್ಲ. ತಂದೆಯಿಂದ ಸಹಕಾರ ದೊರೆಯುತ್ತದೆ. ಮಕ್ಕಳಿಂದ ಸ್ವಲ್ಪ ನೆಮ್ಮದಿ ಹಾಳಾಗುವ ಸಾಧ್ಯತೆ ಇದೆ. ಯಾವುದೋ ಒಂದು ಮೂಲದಿಂದ ಹಣ ಬರಲಿದೆ. ಈ ದಿನ ನಿಮ್ಮ ಪಾಲಿಗೆ ಹೆಚ್ಚು ಸಂತೋಷವನ್ನೇ ತರಲಿದೆ. 
  
ದೋಷ ಪರಿಹಾರ : ನೀವು ಅಮ್ಮನವರ ದೇವಸ್ಥಾನಕ್ಕೆ ಕೈಲಾದಷ್ಟು ಕುಂಕುಮ ಸಮರ್ಪಣೆ ಮಾಡಿ ಬನ್ನಿ.

ಗೀತಾಸುತ.

loader