ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು.  ಇಂದು  ಕರ್ಕಟಕ ರಾಶಿಯಲ್ಲಿ  ಸೂರ್ಯ, ಬುಧ, ರಾಹುಗಳಿದ್ದು, ಶುಕ್ರನು  ಇಂದು ಸಿಂಹರಾಶಿ ಬಿಟ್ಟು ಕನ್ಯಾರಾಶಿಯನ್ನು ಪ್ರವೇಶಿಸಿದ್ದಾನೆ. ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ಮೀನ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  


ಮೇಷ ರಾಶಿ : ಇಂದು ನಿಮ್ಮ ಸುಖ ಸ್ಥಾನದ ಅಧಿಪತಿ  ವ್ಯಯ ಸ್ಥಾನದಲ್ಲಿದ್ದುದರಿಂದ ಸುಖ ನಾಶ, ಬಂಧುಗಳಿಂದ ಮಾತು ಕೇಳಬೇಕಾದ ಸಂದರ್ಭ ಬರಬಹುದು ಧನಾಧಿಪತಿ ಋಣ ಸ್ಥಾನಕ್ಕೆ ಹೋಗಿರುವುದರಿಂದ ಸಾಲ ಮಾಡಬೇಕಾದ ಪರಿಸ್ಥಿತಿ ಅಥವಾ ಸಾಲ ಬಾಧೆ ಕಾಡಲಿದೆ.
  

ದೋಷಪರಿಹಾರ : ಅನ್ನಪೂರ್ಣೇಶ್ವರಿಗೆ ವಸ್ತ್ರ ದಾನ ಮಾಡಿ

ವೃಷಭ : ಆತ್ಮೀಯರೇ ನಿಮ್ಮ ರಾಶ್ಯಾಧಿಪತಿ ಇಂದು ಚತುರ್ಥದಿಂದ ಪಂಚಮಕ್ಕೆ ಹೋಗಿದ್ದಾನೆ. ನಿಮ್ಮ ಮಕ್ಕಳಿಂದ ಅನುಕೂಲ, ಅಥವಾ ಮಕ್ಕಳ ಉನ್ನತಿ ಸಾಧ್ಯತೆಗಳಿವೆ. ಆದರೆ ಶುಕ್ರ ಅಲ್ಲಿ ನೀಚ ಉತ್ತಮ ಫಲ ನಿರೀಕ್ಷಿಸುವುದು ಸಾಧ್ಯವಿಲ್ಲ. ಆರೋಗ್ಯದಲ್ಲಿ ಬಾಧೆ ಸಣ್ಣಪುಟ್ಟ ನೋವು ಕಾಣಿಸಬಹುದು, ಕಾಲಿನ ಭಾಗಕ್ಕೆ ಪೆಟ್ಟಾಗಬಹುದು ಎಚ್ಚರದಿಂದ ಓಡಾಡಿ.

ದೋಷ ಪರಿಹಾರ : ದುರ್ಗಾ ದೇವಿಗೆ ಕೆಂಪು ಹೂಗಳನ್ನು ಸಮರ್ಪಣೆ ಮಾಡಿ

ಮಿಥುನ : ಆತ್ಮೀಯರೇ ಇಂದು ನಿಮ್ಮ ವ್ಯಯಾಧಿಪತಿ ಚತುರ್ಥ ಸ್ಥಾನಕ್ಕೆ ಬಂದಿರುವುದರಿಂದ ನಿಮ್ಮ ವಾಹನದಲ್ಲಿ ತೊಂದರೆಯಾಗುವ ಸಾಧ್ಯತೆ ಇದೆ, ಅಷ್ಟೇ ಅಲ್ಲ ನಿಮ್ಮ ಕ್ಷೇತ್ರ ಅಂದ್ರೆ ಭೂಮಿ ಸಂಬಂಧಿ ಸಮಸ್ಯೆಗಳು ಉಂಟಾಗಲಿವೆ. ದಾಂಪತ್ಯದಲ್ಲಿ ಸ್ವಲ್ಪ ಭಿನ್ನಾಭಿಪ್ರಾಯಗಳೂ ಮೂಡಬಹುದು. ಮಾತು ಸ್ವಲ್ಪ ಕಡಿಮೆ ಮಾಡಿ. 

ದೋಷ ಪರಿಹಾರ : ನಿಮ್ಮ ಹೆಸರಲ್ಲಿ ಮಹಾನಾರಾಯಣೋಪನಿಷತ್ತನ್ನು ಪಾರಾಯಣ ಮಾಡಿಸಿ.

ಕಟಕ : ಇಂದು ನಿಮ್ಮ ಲಾಭಾಧಿಪತಿ ತೃತೀಯಕ್ಕೆ ಬಂದಿದ್ದಾನೆ ನಿಮ್ಮ ಅಣ್ಣತಮ್ಮಂದಿರಿಂದ ಲಾಭ, ನಿಮ್ಮ ಸಾಹಸದಿಂದ ಕಾರ್ಯ ಸಾಧೆಯನ್ನೂ ಮಾಡಲಿದ್ದೀರಿ. ಅಲ್ಲಿ ಮಾಂದಿಯೂ ಸೇರಿದ್ದಾನೆ ಸ್ವಲ್ಪ ತೊಡಕುಗಳೂ ಇವೆ. ಎಚ್ಚರವಾಗಿರಿ.
  
ದೋಷ ಪರಿಹಾರ : ಶ್ರೀಸೂಕ್ತದಿಂದ ದುರ್ಗಾ ದೇವಿಗೆ ಅಭಿಷೇಕ ಮಾಡಿಸಿ

ಸಿಂಹ : ನಿಮ್ಮ ಉದ್ಯೋಗಾಧಿಪತಿ ಧನ ಸ್ಥಾನಕ್ಕೆ ಬಂದಿದ್ದಾನೆ ಅಷ್ಟೇ ಅಲ್ಲ ನೀಚನಾಗಿದ್ದಾನೆ ಹಾಗಾಗಿ ಉದ್ಯೋಗ ತೊಂದರೆ ಅಥವಾ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ. ಸಹೋದರಿಯರಿಂದಲೂ ಕಿರಿಕಿರಿ ತೊಂದರೆಗಳಾಗುತ್ತವೆ. ಸಾಮಾನ್ಯದಿನವಾಗಿರಲಿದೆ.


ದೋಷ ಪರಿಹಾರ : ದುರ್ಗಾ ದೇವಿಗೆ ಹಾಲು ಸಮರ್ಪಣೆ ಮಾಡಿ

ಕನ್ಯಾ : ಆತ್ಮೀಯರೇ ಇಂದು ನಿಮ್ಮ ಧನಾಧಿಪತಿ ನಿಮ್ಮ ಸ್ಥಾನಕ್ಕೆ ಬಂದಿದ್ದಾನೆ ಇಂದಿನಿಂದ ಒಂದು ತಿಂಗಳ ಕಾಲ ಸ್ವಲ್ಪ ಹಣಕಾಸಿನ ತೊಂದರೆ ಶುರವಾಗಬಹುದು. ಆದಷ್ಟು ಕಡಿಮೆ ಖರ್ಚು ಮಾಡಿ, ಚಿಕ್ಕಪುಟ್ಟದ್ದನ್ನೂ ಲೆಕ್ಕವಿಟ್ಟುಕೊಂಡು ಉಳಿತಾಯ ಮಾಡಿ. ಯಾರಲ್ಲೂ ಸಾಲ ಕೇಳಬೇಡಿ.
  
ದೋಷ ಪರಿಹಾರ : ಲಕ್ಷ್ಮೀ ಆರಾಧನೆ ಮಾಡಿ

ತುಲಾ :  ಆತ್ಮೀಯರೇ ಅಧಿಪತಿ ವ್ಯಯ ಸ್ಥಾನದಲ್ಲಿ ನೀಚನಾಗಿದ್ದಾನೆ. ನಿಮ್ಮ ಆರೋಗ್ಯದಲ್ಲಿ ಬಾಧೆ ಉಂಟಾಗಲಿದೆ. ನೀವಂದುಕೊಂಡ ಕಾರ್ಯ ವಿಳಂಬವಾಗಬಹುದು. ಮಾತುಕೊಟ್ಟವರು ಇಲ್ಲ ಎಂದು ನಿರಾಶೆ ಮಾಡಬಹುದು. ಆದಷ್ಟು ಎಚ್ಚರವಾಗಿರಿ.
 

ದೋಷ ಪರಿಹಾರ : ದುರ್ಗಾ ಸಪ್ತಶತಿ ಪಾರಾಯಣ ಮಾಡಿ

ವೃಶ್ಚಿಕ : ಆತ್ಮೀಯರೇ,  ಇಂದು ನಿಮ್ಮ ಹೆಂಡತಿಯಿಂದ ಸಹಕಾರ ಸಿಗಲಿದೆ, ಆ ಸಹಕಾರ ಅಪೂರ್ಣವಾಗಿರಲಿದೆ, ನಿಮ್ಮ ಮಕ್ಕಳಿಂದ ಸಹಾಯ ಸಿಗುವ ಸಾಧ್ಯತೆ ಇದೆ. ನಿಮ್ಮ ಹಣ ನಷ್ಟವಾಗುವ ಸಾಧ್ಯತೆ ಇದೆ. ಹಣದ ವಿಷಯದಲ್ಲಿ ಎಚ್ಚರವಾಗಿರಿ.

ದೋಷ ಪರಿಹಾರ : ಸುಬ್ರಹ್ಮಣ್ಯ ದರ್ಶನ ಹಾಗೂ ಮಂತ್ರ ಜಪಿಸಿ

ಧನಸ್ಸು : ಆತ್ಮೀಯರೇ ಇಂದು ನಿಮ್ಮ ದಿನ ಅಷ್ಟಾಗಿ ಶುಭವಿಲ್ಲ. ನಿಮ್ಮ ಧನಸ್ಥಾನದಲ್ಲಿ ಕುಜ-ಕೇತು ಯುತಿ ಅಷ್ಟೇನು ಒಳ್ಳೇದಲ್ಲ, ಆರೋಗ್ಯಾಧಿಪತಿ ನೀಚನಾಗಿದ್ದಾನೆ ಆತನಿಗೆ ಶನಿ ದೃಷ್ಟಿಯೂ ಇದೆ, ಹೀಗಾಗಿ ಸ್ವಲ್ಪ ಅಸಮಾಧಾನ ನಿಮ್ಮನ್ನು ಕಾಡಲಿದೆ.


ದೋಷ ಪರಿಹಾರ : ಗುರು ದರ್ಶನ , ಅಥವಾ ದಕ್ಷಿಣಾಮೂರ್ತಿ ಪ್ರಾರ್ಥನೆ ಮಾಡಿ

ಮಕರ :  ನಿಮ್ಮ ಉದ್ಯೋಗಾಧಿಪತಿ ನೀಚನಾಗಿದ್ದಾನೆ. ನಿಮ್ಮ ಉದ್ಯೋಗದಲ್ಲಿ ವ್ಯತ್ಯಯವಾಗಬಹುದು, ಉದ್ಯೋಗ ಕಳೆದುಹೋಗಲೂಬಹುದು, ಅಷ್ಟೇ ಅಲ್ಲ ನಿಮ್ಮ  ಹಣ ವ್ಯಯವಾಗುವ ಸಾಧ್ಯತೆಯೂ ಇದೆ. ಎಚ್ಚರವಾಗಿರಿ.
  
ದೋಷ ಪರಿಹಾರ : ಶನಿ ದೇವರಿಗೆ ಎಳ್ಳುದಾನ ಮಾಡಿ

ಕುಂಭ : ಆತ್ಮೀಯರೇ ನಿಮ್ಮ ಪಾಲಿಗೆ ಧನಾಗಮನ, ಆದರೆ ಸ್ವಲ್ಪ ಸುಖ ನಾಶವೂ ಇದೆ. ನಿಮ್ಮ ಭಾಗ್ಯಾಧಿಪತಿ ನೀಚನಾಗಿರುವುದರಿಂದ ಸ್ವಲ್ಪ ಅದೃಷ್ಟ ಕೈಕೊಡುವ ಸಾಧ್ಯತೆಯೂ ಸ್ವಲ್ಪ ಧನ ವ್ಯಯವೂ ಇದೆ. ಉಳಿದಂತೆ ಹೆಚ್ಚು ಯೋಚನೆ ಬೇಡ. 

ದೋಷ ಪರಿಹಾರ :  ಶಿವನಿಗೆ ಭಸ್ಮ ಸಮರ್ಪಣೆ ಮಾಡಿ
  
ಮೀನ : ಸ್ನೇಹಿತರೆ ಇಂದು ನಿಮ್ಮ ತೃತೀಯ ಭಾವಾಧಿಪತಿ ನೀಚ ಸ್ಥಾನಕ್ಕೆ ಹೋಗಿದ್ದಾನೆ ನಿಮ್ಮ ಸಹೋದರ ಸಹೋದರಿಯರಲ್ಲಿ ಭಿನ್ನಾಭಿಪ್ರಾಯ ಮೂಡಬಹುದು, ಅಷ್ಟೇ ಅಲ್ಲ ಶುಕ್ರ ನಿಮ್ಮ ಅಷ್ಟಮಾಧಿಪತಿಯೂ ಹೌದು. ಹಾಗಾಗಿ ದುರ್ಗಾರಾಧನೆ ಮಾಡಿ.
  
ದೋಷ ಪರಿಹಾರ : ಸಪ್ತಶತಿ ಪಾರಾಯಣ ಮಾಡಿಸಿ

ಗೀತಾಸುತ.