ಇಂದಿನ ದಿನ ನಿಮ್ಮ ರಾಶಿಗೆ ಅದೃಷ್ಟ ಒಲಿದು ಬರುವುದು ಖಚಿತ

First Published 1, Aug 2018, 7:09 AM IST
Special Bhavishya August 1
Highlights

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು.  ಇಂದು  ಕರ್ಕಟಕ ರಾಶಿಯಲ್ಲಿ  ಸೂರ್ಯ, ಬುಧ, ರಾಹುಗಳಿದ್ದು, ಶುಕ್ರನು  ಸಿಂಹರಾಶಿಲ್ಲಿದ್ದಾನೆ , ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ಮೀನ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು.  ಇಂದು  ಕರ್ಕಟಕ ರಾಶಿಯಲ್ಲಿ  ಸೂರ್ಯ, ಬುಧ, ರಾಹುಗಳಿದ್ದು, ಶುಕ್ರನು  ಸಿಂಹರಾಶಿಲ್ಲಿದ್ದಾನೆ , ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ಮೀನ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  


ಮೇಷ ರಾಶಿ : ಇಂದು ನಿಮ್ಮ ರಾಶಿಯಿಂದ ವ್ಯಯ ಸ್ಥಾನದಲ್ಲಿ ಚಂದ್ರನಿದ್ದಾನೆ. ಸ್ವಲ್ಪ ಸುಖ ನಾಶ, ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಮಾನಸಿಕ ಹಿಂಸೆ, ವಾಹನದಲ್ಲಿ ಸಂಚರಿಸುವಾಗ ಸ್ವಲ್ಪ ಎಡವಟ್ಟು ಸಂಭವಿಸಬಹುದು ನಿಧಾನಗತಿಯಲ್ಲಿ ಹೋಗಿ. ಜಾಗರೂಕವಾಗಿರಿ. 
  

ದೋಷಪರಿಹಾರ : ದೇವಿಗೆ ಪಂಚಾಮೃತ ಅಭಿಷೇಕ ಮಾಡಿಸಿ

ವೃಷಭ : ಆತ್ಮೀಯರೇ ಇಂದು ನಿಮ್ಮ ಸಹೋದರಿಯರು ನಿಮ್ಮ ಲಾಭಕ್ಕೆ ಕಾರಣವಾಗುತ್ತಾರೆ. ಮಾನಸಿಕ ಶಾಂತಿ ಸಿಗಲಿದೆ, ಉದ್ಯೋಗದಲ್ಲಿ  ಸ್ವಲ್ಪ ಕಿರಿಕಿರಿಯಾಗುವ ಸಂಭವ ಇದೆ, ಸಮಾಧಾನವಿರಲಿ. ಆಸ್ತಿ ವಿಚಾರದಲ್ಲಿ ಸ್ತ್ರೀಯರ ಮಧ್ಯೆ ಕಲಹವಾಗಬಹುದು.

ದೋಷ ಪರಿಹಾರ : ಅನ್ನಪೂರ್ಣೇಶ್ವರಿಗೆ 21 ಬಿಳಿ ಹೂಗಳನ್ನು ಸಮರ್ಪಣೆ ಮಾಡಿ

ಮಿಥುನ : ಆತ್ಮೀಯರೇ ಇಂದು ಉದ್ಯೋಗದಲ್ಲಿ ಉತ್ತಮ ಯಶಸ್ಸು ಹಾಗೂ ಸಹಕಾರವಿರಲಿದೆ. ತಂದೆಯ ಸಹಕಾರ ದೊರೆಯಲಿದೆ. ಆದರೆ ಭೂಮಿಯಲ್ಲಿ ನಷ್ಟ ಅನುಭವಿಸುವ ಹಾಗೂ ವಾಹನದಲ್ಲಿ ತೊಂದರೆ ಅನುಭವಿಸುವ ಸಾಧ್ಯತೆ ಇದೆ. ಕಾಲು ನೋವು ನಿಮ್ಮನ್ನು ಬಾಧಿಸುತ್ತದೆ. 

ದೋಷ ಪರಿಹಾರ : ಓಂ ಮಹಾನಾರಾಯಣಾಯ ನಮ:  ಮಂತ್ರವನ್ನು 21 ಬಾರಿ ಪಠಿಸಿ

ಕಟಕ : ಇಂದು ನಿಮ್ಮ  ನಿಮ್ಮ ಅದೃಷ್ಟ ಕುಲಾಯಿಸಲಿದೆ, ವ್ಯಾಪಾರದಲ್ಲಿ ಸ್ವಲ್ಪ ಮೋಸ ಹೋಗುವ ಸಾಧ್ಯತೆಯೂ ಇದೆ. ಸ್ವಲ್ಪ ಮಟ್ಟಿಗೆ ಧನವ್ಯಯ, ಕಣ್ಣಿನ ಸಮಸ್ಯೆ ಕಾಡಬಹುದು ಅಷ್ಟೇ ಅಲ್ಲ ದೇಹ ಸ್ವಲ್ಪ ಬಾಧೆಗೆ ಒಳಗಾಗುತ್ತದೆ. ದುರ್ಗಾ ಸ್ತೋತ್ರ ಪಠಿಸಿ.
  
ದೋಷ ಪರಿಹಾರ : ಸಪ್ತಶತಿ ಪಾರಾಯಣ ಮಾಡಿ

ಸಿಂಹ : ಆತ್ಮೀಯರೇ ಇಂದು ಈದಿನ ನಿಮ್ಮ ಸಂಗಾತಿ ಅಥವಾ ನಿಮ್ಮ ಮನೆ ಹೆಣ್ಣುಮಕ್ಕಳು ನಿಮ್ಮೊಂದಿಗೆ ವಾಗ್ವಾದ ಮಾಡಬಹುದು. ಧನ ನಷ್ಟವಾಗುವ ಸಾಧ್ಯತೆ ಇದೆ. ಬರುವ ಲಾಭವೂ ಕೈತಪ್ಪಿಹೋಗಲಿದೆ, ಆರೋಗ್ಯದಲ್ಲೂ ಬಾಧೆಯನ್ನು ಅನುಭವಿಸುತ್ತೀರಿ. ಶೀತ ಪ್ರಕೃತಿ ಹೆಚ್ಚಾಗಲಿದೆ.


ದೋಷ ಪರಿಹಾರ : ಧನ್ವಂತರಿ ದೇವರನ್ನು ಪೂಜಿಸಿ

ಕನ್ಯಾ : ಆತ್ಮೀಯರೇ ಇಂದು ನಿಮ್ಮ ಸಂಗಾತಿ ನಿಮ್ಮ ವಿರುದ್ಧ ಮಾತಾಡಬಹುದು, ವ್ಯಾಪಾರದಲ್ಲಿ ಸ್ವಲ್ಪ ಕಿರಿಕಿರಿಯೂ ಇರಲಿದೆ, ಮನೆಯಿಂದ ಹೊರಗೆ ಹೊರಡುವಾಗ ತಪ್ಪದೇ ಶನೈಶ್ಚರ ಮಂತ್ರವನ್ನ ಪಠಿಸಿ.
  
ದೋಷ ಪರಿಹಾರ : ಗುರು ಪ್ರಾರ್ಥನೆ ಮಾಡಿ

ತುಲಾ :  ಆತ್ಮೀಯರೇ ನಿಮ್ಮ ಜೀವನದಲ್ಲಿ ಒಂದು ಹೊಸ ಪ್ರಯತ್ನ, ಜೊತೆಗೆ ಸ್ವಲ್ಪ ಶ್ರಮವೂ ಇದೆ. ಇಂದು ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯ ಕಾಣಲಿದ್ದೀರಿ. ಸಹೋದರರು ನಿಮ್ಮನ್ನು ಕಾಡಲಿದ್ದಾರೆ. ಶುಭಾಶುಭ ಮಿಶ್ರ ಫಲ
 

ದೋಷ ಪರಿಹಾರ : ದುರ್ಗಾ ಸಪ್ತಶತಿ ಪಾರಾಯಣ ಮಾಡಿ

ವೃಶ್ಚಿಕ : ಆತ್ಮೀಯರೇ,  ಇಂದು ನಿಮ್ಮ ರಾಶಿಯವರಿಗೆ ಸ್ವಲ್ಪ ಧನ ವ್ಯಯವಾಗುವ ಸಾಧ್ಯತೆ ಇದೆ. ಕುಟುಂಬದವರಿಗಾಗಿ ಹಣ ವ್ಯಯ. ಹೆಣ್ಣುಮಕ್ಕಳಿಂದ ಸಹಾಯವಾಗಲಿದೆ, ತಂದೆಯಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಬರಲಿದೆ. ಸ್ವಲ್ಪ ಸಮಾಧಾನವಿರಲಿ

ದೋಷ ಪರಿಹಾರ : ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಧನಸ್ಸು : ಆತ್ಮೀಯರೇ ನಿಮ್ಮ ಶರೀರ ಬಾಧೆ ಮುಂದುವರೆಯಲಿದೆ, ಇಂದು ಒಂದು ಜಾಗದ ಇತ್ಯರ್ಥವಾಗಲಿದೆ, ಅಷ್ಟೇ ಅಲ್ಲ ನಿಮ್ಮ ತಾಯಿ ಉತ್ತಮ ಮಾರ್ಗದರ್ಶನ ಮಾಡಲಿದ್ದಾರೆ. ಅವರ ಮಾತೇ  ನಿಮ್ಮ ದಿನವನ್ನು ಶುಭದಾಯಕವಾಗಿಸುತ್ತದೆ. ಆರೋಗ್ಯದಲ್ಲಿ ವ್ಯತ್ಯಯ ಕಾಣಲಿದ್ದೀರಿ.


ದೋಷ ಪರಿಹಾರ : ಅರಳಿ ವೃಕ್ಷ ಪ್ರಾರ್ಥನೆ , ಪ್ರದಕ್ಷಿಣೆ ಮಾಡಿ

ಮಕರ :  ಆತ್ಮೀಯರೇ ಇಂದು ನಿಮ್ಮ ಸಹೋದರಿಯರು ನಿಮ್ಮ ಸಹನೆಯನ್ನು ಪರೀಕ್ಷೆ ಮಾಡುತ್ತಾರೆ. ಅವರಿಂದ ಅನುಕೂಲವೂ  ಇದೆ. ವಾಗ್ವಾದ ಮಾಡದೆ ಕೆಲ ವಿಚಾರಗಳನ್ನು ವಿವೇಕಯುತವಾಗಿ ಬಗೆಹರಿಸಿಕೊಳ್ಳುವ ಗುಣ ನಿಮ್ಮಲ್ಲೇ ಮೂಡುತ್ತದೆ. 
  
ದೋಷ ಪರಿಹಾರ : ಗುರು ಪ್ರಾರ್ಥನೆ ಮಾಡಿ

ಕುಂಭ : ಆತ್ಮೀಯರೇ ನಿಮ್ಮ ಹಣ ವ್ಯಯವಾಗಲಿದೆ, ಮಾತಿನಿಂದ ನಿಮ್ಮ ಕಾರ್ಯ ಸಾಧನೆಯಾಗಲಿದೆ, ಉದ್ಯೋಗದಲ್ಲಿ ಸ್ವಲ್ಪ ಬದಲಾವಣೆಯಾಗುವ ಸಾಧ್ಯತೆ, ಸ್ತ್ರೀಯರಿಗೆ ಮಾನಸಿಕ ಸಮಾಧಾನ, ಮಕ್ಕಳಿಂದ ಸ್ವಲ್ಪ ಕಿರಿಕಿರಿ. 

ದೋಷ ಪರಿಹಾರ :  ನವಗ್ರಹ ಪ್ರಾರ್ಥನೆ ಮಾಡಿ
  
ಮೀನ : ಸ್ನೇಹಿತರೆ ಇಂದು ಸುಖ ಭೋಜನ, ಮಿತ್ರರೊಂದಿಗೆ ಕಲಾಪ, ಉದ್ಯೋಗದಲ್ಲಿ ಸ್ವಲ್ಪ ವ್ಯತ್ಯಯವಾಗುವ ಸಾಧ್ಯತೆ ಇದೆ, ಮಕ್ಕಳಿಂದ ಉತ್ತಮ ಸಹಕಾರ, ಪ್ರಶಂಸೆ, ಉತ್ತಮ ದಿನ 
  
ದೋಷ ಪರಿಹಾರ : ದತ್ತಾತ್ರೇಯ ಪ್ರಾರ್ಥನೆ ಮಾಡಿ

ಗೀತಾಸುತ.

loader