ಈ ರಾಶಿಗೆ ಇಂದಿನ ದಿನ ಅಪಾರ ಲಾಭವನ್ನುಂಟು ಮಾಡುವ ದಿನ 

08-12-18 - ಶನಿವಾರ
====================
ಶ್ರೀ ವಿಲಂಬಿ ನಾಮ ಸಂವತ್ಸರ
ದಕ್ಷಿಣಾಯನ
ಹೇಮಂತ ಋತು
ಮಾರ್ಗಶಿರ ಮಾಸ
ಶುಕ್ಲ ಪಕ್ಷ
ಪ್ರತಿಪತ್ / ದ್ವಿತೀಯಾ
ಮೂಲಾ
====================
ರಾಹುಕಾಲ : 09.21 ರಿಂದ 10.46
ಯಮಗಂಡ ಕಾಲ : 01.37 ರಿಂದ 03.02
ಗುಳಿಕ ಕಾಲ : 06.31 ರಿಂದ 07.56
=============================

ಮೇಷ ರಾಶಿ : ಇಂದು ನಿಮ್ಮ ಸುಖ ಸ್ಥಾನದ ಅಧಿಪತಿ  ಶನಿಯುಕ್ತನಾದ್ದರಿಂದ ಮಾನಸಿಕ ಬೇಸರ, ಖಿನ್ನತೆ ಆವರಿಸಲಿದೆ, ಸುಖ ನಾಶ, ಬಂಧುಗಳಿಂದ ಮಾತು ಕೇಳಬೇಕಾದ ಸಂದರ್ಭ ಬರಬಹುದು. 
  
ದೋಷಪರಿಹಾರ : ಅನ್ನಪೂರ್ಣೇಶ್ವರಿಗೆ ವಸ್ತ್ರ ದಾನ ಮಾಡಿ

ವೃಷಭ : ಉತ್ತಮ ಯೋಗ, ಆರೋಗ್ಯ ವೃದ್ಧಿ, ಸ್ತ್ರೀಯರಿಗೆ ಉತ್ತಮ ಸಹಕಾರ, ನಿಮ್ಮ ಉದ್ಯೋಗದಲ್ಲಿ ಸ್ತ್ರೀಯರಿಂದ ಬೇಸರ, ಮಾನಸಿಕವಾಗಿ ಸ್ವಲ್ಪ ಕುಗ್ಗುವ ಸಾಧ್ಯತೆ ಇದೆ, ಶ್ರಮದ ದಿನ. 

ದೋಷ ಪರಿಹಾರ : ದುರ್ಗಾ ದೇವಿಗೆ ಹೂ ಮಾಲೆ ಕೊಡಿ.

ಮಿಥುನ :  ವಾಹನದಲ್ಲಿ ತೊಂದರೆಯಾಗುವ ಸಾಧ್ಯತೆ ಇದೆ, ಅಷ್ಟೇ ಅಲ್ಲ ನಿಮ್ಮ ಕ್ಷೇತ್ರ ಅಂದ್ರೆ ಭೂಮಿ ಸಂಬಂಧಿ ಸಮಸ್ಯೆಗಳು ಉಂಟಾಗಲಿವೆ. ದಾಂಪತ್ಯದಲ್ಲಿ ಸ್ವಲ್ಪ ಭಿನ್ನಾಭಿಪ್ರಾಯಗಳೂ ಮೂಡಬಹುದು. ಮಾತು ಸ್ವಲ್ಪ ಕಡಿಮೆ ಮಾಡಿ. 

ದೋಷ ಪರಿಹಾರ : ಮಹಾನಾರಾಯಣೋಪನಿಷತ್ತನ್ನು ಪಾರಾಯಣ ಮಾಡಿಸಿ.

ಕಟಕ : ನಿಮ್ಮ ಅಣ್ಣತಮ್ಮಂದಿರಿಂದ ಲಾಭ, ನಿಮ್ಮ ಸಾಹಸದಿಂದ ಕಾರ್ಯ ಸಾಧೆಯನ್ನೂ ಮಾಡಲಿದ್ದೀರಿ.ಆದರೆ ಮಾನಸಿಕ ಬೇಸರ ನಿಮ್ಮ ಜೀವಕ್ಕೇ ಅಪಾಯ ತರಲಿದೆ, ವೃಥಾ ಚಿಂತೆ ಮಾಡಬೇಡಿ.
  
ದೋಷ ಪರಿಹಾರ : ಶ್ರೀಸೂಕ್ತದಿಂದ ದುರ್ಗಾ ದೇವಿಗೆ ಹಾಲಿನ ಅಭಿಷೇಕ ಮಾಡಿ.

ಸಿಂಹ : ಇಂದು ಈದಿನ ನಿಮ್ಮ ಸಂಗಾತಿ ಅಥವಾ ನಿಮ್ಮ ಮನೆ ಹೆಣ್ಣುಮಕ್ಕಳು ನಿಮ್ಮೊಂದಿಗೆ ವಾಗ್ವಾದ ಮಾಡಬಹುದು. ಧನ ನಷ್ಟವಾಗುವ ಸಾಧ್ಯತೆ ಇದೆ. ಬರುವ ಲಾಭವೂ ಕೈತಪ್ಪಿಹೋಗಲಿದೆ, ಆರೋಗ್ಯದಲ್ಲೂ ಬಾಧೆಯನ್ನು ಅನುಭವಿಸುತ್ತೀರಿ. ಶೀತ ಪ್ರಕೃತಿ ಹೆಚ್ಚಾಗಲಿದೆ.

ದೋಷ ಪರಿಹಾರ : ಧನ್ವಂತರಿ ದೇವರನ್ನು ಪೂಜಿಸಿ

ಕನ್ಯಾ : ಇಂದು ನಿಮ್ಮ ಸಂಗಾತಿ ನಿಮ್ಮ ವಿರುದ್ಧ ಮಾತಾಡಬಹುದು, ವ್ಯಾಪಾರದಲ್ಲಿ ಸ್ವಲ್ಪ ಕಿರಿಕಿರಿಯೂ ಇರಲಿದೆ, ಮನೆಯಿಂದ ಹೊರಗೆ ಹೊರಡುವಾಗ ತಪ್ಪದೇ ಶನೈಶ್ಚರ ಮಂತ್ರವನ್ನ ಪಠಿಸಿ.
  
ದೋಷ ಪರಿಹಾರ : ಗುರು ಸ್ತೋತ್ರ ಪಠಿಸಿ

ತುಲಾ :  ನಿಮ್ಮ ಜೀವನದಲ್ಲಿ ಒಂದು ಹೊಸ ಪ್ರಯತ್ನ, ಜೊತೆಗೆ ಸ್ವಲ್ಪ ಶ್ರಮವೂ ಇದೆ. ಇಂದು ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯ ಕಾಣಲಿದ್ದೀರಿ. ಸಹೋದರರು ನಿಮ್ಮನ್ನು ಕಾಡಲಿದ್ದಾರೆ. ಶುಭಾಶುಭ ಮಿಶ್ರ ಫಲ
 
ದೋಷ ಪರಿಹಾರ : ದುರ್ಗಾ ದೇವಿಗೆ 5 ನಮಸ್ಕಾರ ಮಾಡಿ

ವೃಶ್ಚಿಕ : ಇಂದು ಸ್ವಲ್ಪ ಧನ ವ್ಯಯವಾಗುವ ಸಾಧ್ಯತೆ ಇದೆ. ಕುಟುಂಬದವರಿಗಾಗಿ ಹಣ ವ್ಯಯ. ಹೆಣ್ಣುಮಕ್ಕಳಿಂದ ಸಹಾಯವಾಗಲಿದೆ, ತಂದೆಯಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಬರಲಿದೆ. ಸ್ವಲ್ಪ ಸಮಾಧಾನವಿರಲಿ, ಮಾತಿನಿಂದ ಸ್ವಲ್ಪ ಜಗಳ ಸಂಭವ. 

ದೋಷ ಪರಿಹಾರ : ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಧನಸ್ಸು : ನಿಮ್ಮ ಶರೀರ ಬಾಧೆ ಮುಂದುವರೆಯಲಿದೆ, ಇಂದು ಒಂದು ಜಾಗದ ಇತ್ಯರ್ಥವಾಗಲಿದೆ, ಅಷ್ಟೇ ಅಲ್ಲ ನಿಮ್ಮ ತಾಯಿ ಉತ್ತಮ ಮಾರ್ಗದರ್ಶನ ಮಾಡಲಿದ್ದಾರೆ. ಅವರ ಮಾತೇ  ನಿಮ್ಮ ದಿನವನ್ನು ಶುಭದಾಯಕವಾಗಿಸುತ್ತದೆ. ಆರೋಗ್ಯದಲ್ಲಿ ವ್ಯತ್ಯಯ ಕಾಣಲಿದ್ದೀರಿ.

ದೋಷ ಪರಿಹಾರ : ಅರಳಿ ವೃಕ್ಷ ಪ್ರಾರ್ಥನೆ, ಪ್ರದಕ್ಷಿಣೆ ಮಾಡಿ

ಮಕರ :  ಇಂದು ನಿಮ್ಮ ಸಹೋದರಿಯರು ನಿಮ್ಮ ಸಹನೆಯನ್ನು ಪರೀಕ್ಷೆ ಮಾಡುತ್ತಾರೆ. ಅವರಿಂದ ಅನುಕೂಲವೂ  ಇದೆ. ವಾಗ್ವಾದ ಮಾಡದೆ ಕೆಲ ವಿಚಾರಗಳನ್ನು ವಿವೇಕಯುತವಾಗಿ ಬಗೆಹರಿಸಿಕೊಳ್ಳುವ ಗುಣ ನಿಮ್ಮಲ್ಲೇ ಮೂಡುತ್ತದೆ. 
  
ದೋಷ ಪರಿಹಾರ : ಗುರು ಪ್ರಾರ್ಥನೆ ಮಾಡಿ

ಕುಂಭ : ನಿಮ್ಮ ಹಣ ವ್ಯಯವಾಗಲಿದೆ, ಮಾತಿನಿಂದ ನಿಮ್ಮ ಕಾರ್ಯ ಸಾಧನೆಯಾಗಲಿದೆ, ಉದ್ಯೋಗದಲ್ಲಿ ಸ್ವಲ್ಪ ಬದಲಾವಣೆಯಾಗುವ ಸಾಧ್ಯತೆ, ಸ್ತ್ರೀಯರಿಗೆ ಮಾನಸಿಕ ಸಮಾಧಾನ, ಮಕ್ಕಳಿಂದ ಸ್ವಲ್ಪ ಕಿರಿಕಿರಿ. 

ದೋಷ ಪರಿಹಾರ :  ನವಗ್ರಹ ಪ್ರಾರ್ಥನೆ ಮಾಡಿ
  
ಮೀನ : ಉದ್ಯೋಗದಲ್ಲಿ ಸ್ವಲ್ಪ ಬದಲಾವಣೆ, ಉತ್ತಮರ ಸಹವಾಸ ಆದರೆ ಮಾನಸಿಕ ಬೇಸರವೂ ಇದೆ, ಶುಭಾಶುಭ ಫಲ ಮಿಶ್ರವಾದ ದಿನ, ಮನೆ ಕೆಲಸಗಳನ್ನು ಮಾಡುವ ಆಸಕ್ತಿ, ಹಿರಿಯರಿಂದ ಪ್ರಶಂಸೆ.
  
ದೋಷ ಪರಿಹಾರ : ರಾಮ ಮಂತ್ರ ಪಠಿಸಿ

ವಾಞ್ಮಯೀ.