ಈ ದಿನ ನಿಮ್ಮ ಪಾಲಿಗೆ ಶುಭ - ಧನಾಗಮನದ ದಿನ

ಮೇಷ ರಾಶಿ : ಆರೋಗ್ಯದಲ್ಲಿ ಚೇತರಿಕೆ, ಸಂಸಾರದಲ್ಲಿ ಉತ್ತಮ ಸಾಮರಸ್ಯ, ಮಕ್ಕಳಿಂದ ಕುಟುಂಬಕ್ಕೆ ಸಹಕಾರ, ಹೃದಯ ಭಾಗದಲ್ಲಿ ಕೊಂಚ ನೋವು ಕಾಣಿಸಿಕೊಳ್ಳುತ್ತದೆ, ಅನ್ಯರಿಂದ ಸಹಕಾರ ಪ್ರಾಪ್ತವಾಗಲಿದೆ. ಮಿಶ್ರಫಲದ ದಿನ.

ದೋಷಪರಿಹಾರ : ದುರ್ಗಾ ದೇವಿಗೆ ಹಾಲಿನ ಅಭಿಷೇಕ ಮಾಡಿಸಿ.

ವೃಷಭ : ಇಂದು ನಿಮ್ಮ ಸುಖ ವೃದ್ಧಿ, ತಂದೆಯಿಂದ ಸಹಕಾರ, ಮಿತ್ರರಿಂದಲೂ ಸಹಾಯ ದೊರೆಯಲಿದೆ. ಮಕ್ಕಳಿಂದ ನಿಮಗೆ ಪಾಠ, ವ್ಯಾಪಾರದಲ್ಲಿ ಧನಲಾಭ, ನಿಮ್ಮ ಪ್ರಯಾಣದಲ್ಲಿಯೂ ಲಾಭವನ್ನು ಕಾಣಲಿದ್ದೀರಿ.   

ದೋಷ ಪರಿಹಾರ : ಅನ್ನಪೂರ್ಣೇಶ್ವರಿಗೆ ನಮಸ್ಕಾರ ಮಾಡಿ

ಮಿಥುನ : ಇಂದು ನಿಮ್ಮ ಪಾಲಿಗೆ ಶುಭದಿನ, ಧನಾಗಮನವಾಗಲಿದೆ. ನೀವು ಅಂದುಕೊಂಡ ಕಾರ್ಯ ಸಾಕಾರಗೊಳ್ಳಲಿದೆ. ನಿಮ್ಮ ವ್ಯವಹಾರದ ತೊಡಕುಗಳೂ ಕೂಡ ನಿವಾರಣೆಯಾಗಲಿವೆ. ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಸ್ತ್ರೀಯರಿಂದ ಉತ್ತಮ ಲಾಭ. 

ದೋಷ ಪರಿಹಾರ : ಹರಿವಂಶ ಪಾರಾಯಣ ಮಾಡಿಸಿ.

ಕಟಕ : ತಾಯಿಯ ಆರೋಗ್ಯದಲ್ಲಿ ಏರುಪೇರು,  ನಿಮ್ಮ ಸುಖ ಸಮೃದ್ಧವಾಗಲಿದೆ. ಸಂಗಾತಿ ನಿಮ್ಮ ಮನಸ್ಸಿಗೆ ಸ್ವಲ್ಪ ಘಾಸಿಮಾಡಬಹುದು, ನೀರಿನ ಬಳಿ ಇರುವವರು ಜಾಗ್ರತೆ ಇಂದ ಇರಬೇಕು. ಅಪಾಯ ಸಾಧ್ಯತೆ ಇದೆ.   

ದೋಷ ಪರಿಹಾರ : ಜಲದುರ್ಗಾ ದರ್ಶನ ಮಾಡಿ.

ಸಿಂಹ : ಇಂದು ನಿಮ್ಮ ಮಾತಿನಿಂದ ನಿಮಗೆ ಪ್ರಶಂಸೆ, ಪ್ರಿಯವಾದವರಿಂದ ನಿಷ್ಠುರ ಮಾತು ಕೇಳಬೇಕಾಗುತ್ತದೆ,  ಕೃಷಿಕರಿಗೆ ಉತ್ತಮದಿನವಾಗಿರಲಿದೆ. ಹೆಂಡತಿಯಿಂದ ಧನ ಸಹಾಯ. ಉತ್ತಮ ದಿನವಾಗಿರಲಿದೆ. 

ದೋಷ ಪರಿಹಾರ : ಲಕ್ಷ್ಮೀ ವೆಂಕಟೇಶ್ವರ ದರ್ಶನ ಮಾಡಿ. 

ಕನ್ಯಾ : ಒಂದು ಚಿಂತೆ ನಿಮ್ಮನ್ನು ಬಾಧಿಸಲಿದೆ,  ನೀವು ತೆಗೆದುಕೊಂಡ ನಿರ್ಧಾರಗಳೇ ನಿಮಗೆ ಮುಖುವಾಗಬಹುದು, ಸ್ತ್ರೀಯರು ನಿಮ್ಮ ಆತಂಕಕ್ಕೆ ಕಾರಣರಾಗಬಹುದು, ನಿಮ್ಮ ಸಹೋದರರಿಂದ ನೆರವಾಗುತ್ತದೆ. 
  
ದೋಷ ಪರಿಹಾರ : ದತ್ತಾತ್ರೇಯ ದರ್ಶನ ಮಾಡಿ

ತುಲಾ :  ಇಂದು ನಿಮ್ಮ ಉದ್ಯೋಗದಲ್ಲಿ ಸ್ವಲ್ಪ ಸಮಸ್ಯೆ ಕಾಡಬಹುದು. ವೈದ್ಯರನ್ನು ಭೇಟಿ ಮಾಡಬೇಕಾದ ಅನಿವಾರ್ಯತೆ ಇದೆ. ಸಾಹಸ ಕಾರ್ಯಗಳಿಗೆ ಸ್ತ್ರೀಯರ ಸಹಾಯ, ಅಂದುಕೊಂಡ ಕೆಲಸ ಅರ್ಧಕ್ಕೆ ನಿಲ್ಲಲಿದೆ. ಎಚ್ಚರವಾಗಿರಿ. 

ದೋಷ ಪರಿಹಾರ : ಮಹಾಲಕ್ಷ್ಮೀ ಆರಾಧನೆ ಮಾಡಿ.

ವೃಶ್ಚಿಕ : ಇಂದು ನಿಮ್ಮ ಪಾಲಿಗೆ ಸುಖದ ದಿನ, ಹೊಸ ಕಾರ್ಯ ಪ್ರವೃತ್ತಿಯಿಂದ ಗೆಲುವು, ಆದರೆ ಸ್ವಲ್ಪ ಮಟ್ಟಿಗೆ ಧನ ವ್ಯಯವಾಗುವ ಸಾಧ್ಯತೆ ಇದೆ. ನಯವಾದ ಮಾತುಗಳಿಂದ ಕಾರ್ಯ ಸಾಧನೆ ಮಾಡುತ್ತೀರಿ.  

ದೋಷ ಪರಿಹಾರ : ನವಗ್ರಹ ಪ್ರಾರ್ಥನೆ ಮಾಡಿ. 

ಧನಸ್ಸು : ದೇಹಾಯಾಸ ಹಾಗೂ ಆಲಸ್ಯ ಸ್ವಭಾವ, ಸ್ತ್ರೀಯರ ಸಹಾಯದಿಂದ ಕಾರ್ಯ ಸಾಧನೆ, ನಿಮ್ಮ ಇಷ್ಟ ಮಿತ್ರರು ನಿಮ್ಮ ಮನೋ ಇಂಗಿತವನ್ನು ಅರಿತು ಸಹಾಯ ಮಾಡುತ್ತಾರೆ. ದೂರ ಪ್ರಯಾಣಕ್ಕೆ ಸಿದ್ಧತೆ

ದೋಷ ಪರಿಹಾರ : ನಿಮ್ಮ ಗುರುಗಳ ಸ್ಮರಣೆ ಮಾಡಿ. 

ಮಕರ :  ನಿಮ್ಮ ಸಹೋದರರಿಂದ ನಿಮ್ಮ ಕೆಲಸಕ್ಕೆ ಸಹಾಯ, ದಾಂಪತ್ಯದಲ್ಲಿ ಸಮರ, ವಾಗ್ವಾದದಿಂದ ಮನಸ್ತಾಪ, ಉದ್ಯೋಗ ಸ್ಥಳದಲ್ಲಿ ಸ್ವಲ್ಪ ಬದಲಾವಣೆ ಕಾಣುವ ಸಾಧ್ಯತೆ ಇದೆ.  ಸ್ತ್ರೀಯರು ಪುರುಷರೊಡನೆ ವ್ಯವಹರಿಸುವಾಗ ಎಚ್ಚರವಾಗಿರಿ.
  
ದೋಷ ಪರಿಹಾರ : ಎಳ್ಳು ದಾನ ಮಾಡಿ. 

ಕುಂಭ : ಸುಗ್ರಾಸ ಭೋಜನ ಪ್ರಾಪ್ತಿ, ಮಾತಿನಿಂದ ಇತರರನ್ನು ಬೆರಗು ಗೊಳಿಸುತ್ತೀರಿ, ಉದ್ಯೋಗದ ಸ್ಥಳದಲ್ಲಿ ಉತ್ತಮ ಸಹಕಾರ, ದೇಹಾರೋಗ್ಯದಲ್ಲಿ ಚೇತರಿಕೆ, ನಿಮ್ಮ ಶತ್ರುಗಳು ನಿಮ್ಮ ಬಗ್ಗೆ ಕಣ್ಣಿಟ್ಟಿದ್ದಾರೆ ಎಚ್ಚರವಾಗಿರಿ.    

ದೋಷ ಪರಿಹಾರ : ದುರ್ಗಾರಾಧನೆ ಮಾಡಿ. 
  
ಮೀನ : ನಿಮ್ಮ ಕಾರ್ಯಗಳಿಗೆ ಹಿರಿಯರ ಸಹಾಯ, ಉತ್ತಮರ ಭೇಟಿ, ಅನುಕೂಲದ ದಿನ, ಬಂಧುಗಳಿಂದ ಕೊಂಚ ಬೇಸರ, ದಾಂಪತ್ಯದಲ್ಲೂ ಸ್ವಲ್ಪ ಬೇಸರದ ದಿನ, ನಿಮ್ಮ ಪ್ರತಿಭೆಯಿಂದ ಕಾರ್ಯ ಸಾಧನೆ.     
  
ದೋಷ ಪರಿಹಾರ : ಗುರು ಪ್ರಾರ್ಥನೆ ಮಾಡಿ.