06-12-18 - ಗುರುವಾರ

ಶ್ರೀ ವಿಲಂಬಿ ನಾಮ ಸಂವತ್ಸರ
ದಕ್ಷಿಣಾಯನ
ಶರದೃತು
ಕಾರ್ತೀಕ ಮಾಸ
ಕೃಷ್ಣ ಪಕ್ಷ
ಚತುರ್ದಶಿ ತಿಥಿ
ಅನುರಾಧ ನಕ್ಷತ್ರ

ರಾಹುಕಾಲ : 01.36 ರಿಂದ 03.01
ಯಮಗಂಡ ಕಾಲ : 06.30 ರಿಂದ 07.55
ಗುಳಿಕ ಕಾಲ : 09.20 ರಿಂದ 10.45


ಮೇಷ : ಸಂತಸದ ದಿನ, ಸ್ವಭಾವದಲ್ಲಿ ಕೊಂಚ ಬದಲಾವಣೆ, ಕಚೇರಿಯಲ್ಲಿ ಗೊಂದಲ, ಸ್ತ್ರೀಯರಿಗೆ ಚಿಂತೆ, ಮಕ್ಕಳಿಂದ ಬೇಸರ, ಭಯದ ವಾತಾವರಣ, ಗೊಂದಲದ ವಾತಾವರಣ, ವೃತ್ತಿಗಿಂತ ಪ್ರವೃತ್ತಿಯಲ್ಲೇ ಆಸಕ್ತಿ, ಧನ ಲಾಭ

ಪರಿಹಾರ : ದುರ್ಗಾಪರಮೇಶ್ವರಿ ದರ್ಶನ ಮಾಡಿ

ವೃಷಭ : ಮನಸಿನ ಆಸೆಗೆ ಧಕ್ಕೆ, ಮನೋರೋಗ, ಒಲವಿನ ಮನಸುಗಳಿಗೆ ಬೇಸರ, ಅಶಾಂತಿಯ ವಾತಾವರಣ, ನಂಬಿ ಮೋಸಹೋಗುವ ಸಾಧ್ಯತೆ, ಸ್ವಭಾವದಲ್ಲಿ ಬದಲಾವಣೆ, ಹೊಸ ಕೆಲಸದಲ್ಲಿ ಆಸಕ್ತಿ, ಧರ್ಮಕಾರ್ಯದಲ್ಲಿ ಆಸಕ್ತಿ.

ಪರಿಹಾರ : ಔದುಂಬರ ವೃಕ್ಷಕ್ಕೆ 21 ಪ್ರದಕ್ಷಿಣೆ ಹಾಕಿ


ಮಿಥುನ : ಹೊಸ ಕೆಲಸದ ಚಿಂತೆ,  ಧರ್ಮಕಾರ್ಯ, ಬದುಕಿಸಲ್ಲಿ ಹೊಸ ಆಯಾಮ, ಉದ್ಯೋಗ ಪ್ರಾಪ್ತಿ, ಹೊಸ ಬದುಕು ಪ್ರಾರಂಭ, ಸಂಗಾತಿಯೊಂದಿಗೆ ಚರ್ಚೆ, ಉತ್ತಮ ಬಾಂಧವ್ಯಕ್ಕಾಗಿ ಮಾತುಕತೆ, ಸಮಸ್ಯೆ ಪರಿಹಾರ, ಮಕ್ಕಳಿಗೆ ಹಣ ಹೂಡಿಕೆ, ಧನವೃದ್ಧಿ

ಪರಿಹಾರ : ಹಸಿರು ಬಣ್ಣದ ವಸ್ತ್ರಗಳನ್ನು ದಾನ ಮಾಡಿ


ಕಟಕ : ಉದ್ಯೋಗ ನಿಮಿತ್ತ ಪ್ರಯಾಣ, ಆರ್ಥಿಕ ಲಾಭ, ವಿದೇಶಿ ಬಂಧುಗಳಿಗೆ ಸಂತಸ, ಸಮಾಜದಲ್ಲಿ ಸ್ಥಾನಮಾನ ದೊರೆಯಲಿದೆ, ಐ ಟಿ ಕಂಪನಿಯವರಿಗೆ ಹೆಚ್ಚಿನ ಬಡ್ತಿ, ಉತ್ತಮ ಆರೋಗ್ಯ, ಮನೆ ವಿವಾದ ಬಗೆಹರಿಯುವುದು, ಆರೋಗ್ಯ ಬದಲಾವಣೆ ಕೇಂದ್ರಸ್ಥಾನದಲ್ಲಿ ಗುರುವಿರುವುದರಿಂದ ಹೆಚ್ಚಿನ ಸಮಸ್ಯೆಗಳು ಬಾಧಿಸುವುದಿಲ್ಲ

ಪರಿಹಾರ : ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಅಕ್ಕಿ ದಾನ ಮಾಡಿ

ಸಿಂಹ : ಸರ್ವರ ಸಹಕಾರ, ಕುಟುಂಬದಲ್ಲಿ ಸಂತಸ, ಕೃಷಿ ಕೆಲಸ ಮುಂದುವರೆಯುವುದು, ಹುಂಬತನದಿಂದ ದರ್ಪ ಪ್ರದರ್ಶನ, ಹಣ ಹಿಂತಿರುಗಲಿದೆ, ಜಾಣ್ಮೆಯಿಂದ ಸಮಸ್ಯೆ ಪರಿಹಾರ, ಕಚೇರಿಯಲ್ಲಿ ಸಮಾಧಾನ, ಸಮಾಜದಲ್ಲಿ ನಂಬಿಕೆ, ಆತ್ಮ ವಿಶ್ವಾಸ ಹೆಚ್ಚಲಿದೆ.

ಪರಿಹಾರ : ತಾಮ್ರದ ಬಿಂದಿಗೆಯನ್ನು ದಾನ ಮಾಡಿ

ಕನ್ಯಾ : ಸ್ನೇಹಿತರಿಂದ ಸಹಾಯ, ಅಮ್ಮನಿಗೆ ನೆರವಾಗುವಿರಿ, ಸಂಗೀತಗಾರರಿಗೆ ಆಶಾದಾಯಕ ದಿನ, ಹೊಸ ಪ್ರಯೋಗ, ಮಾನೋಚಾಂಚಲ್ಯ, ಸ್ವಾಭಾವಿಕ ಆಕ್ರೋಶ, ಗುರುಗಳ ದರ್ಶನ, ದೇವಾಲಯ ಭೇಟಿ, ತಾಯಿ ವಾತ್ಸಲ್ಯದಿಂದ ಸಮಾಧಾನ, ಕಳೆದ ವಸ್ತು ಸಿಗಲಿದೆ.

ಪರಿಹಾರ : ಓಂ ನಮೋ ನಾರಾಯಣಾಯ ಮಂತ್ರ ಪಠಿಸಿ.

ತುಲಾ : ಕುಟುಂಬದಲ್ಲಿ ಶಾಂತಿ, ನೆಮ್ಮದಿಯ ವಾತಾವರಣ, ಅನ್ಯರ ಮಾತುಕೇಳಿ ಬೇಸರ, ಸಮಯ ವ್ಯರ್ಥ, ಸಹಕಾರ ಸ್ವಭಾವದಿಂದ ಶ್ರಮ, ಆರ್ಥಿಕ ಲಾಭ, ಸಮಾಜದಲ್ಲಿ ಮಾನ್ಯತೆ, ಸ್ತ್ರೀ ಸುಖ, ಅನ್ಯರಿಂದ ಬದುಕಿನ ಮಾರ್ಗಸೂಚಿ, ಮಾನಸಿಕ ನೆಮ್ಮದಿ

ಪರಿಹಾರ : ಸೌಂದರ್ಯ ಲಹರಿ ಪಾರಾಯಣ ಮಾಡಿ

ವೃಶ್ಚಿಕ : ಕೋರ್ಟು ಕಚೇರಿ ಕೆಲಸದಲ್ಲಿ ಲಾಭ, ಧನ ಪ್ರಾಪ್ತಿ, ಮಿತ್ರರಿಂದ ಸಹಕಾರ, ದೊಡ್ಡವರ ಭೇಟಿ, ಸಂಸಾರದಲ್ಲಿ ಉತ್ತಮ ಒಡನಾಟ, ಪ್ರಿಯಕರಳಿಂದ ಪ್ರಶಂಸೆ, ಶುಭ ಸಮಾಚಾರ, ತಂದೆಯಿಂದ ಪ್ರೋತ್ಸಾಹ, ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ, ಮನಸಿಗೆ ಶಾಂತಿ.

ಪರಿಹಾರ :  ಹಸುವಿಗೆ ಬೆಲ್ಲವನ್ನು ಸಮರ್ಪಿಸಿ.

ಧನಸ್ಸು : ಜಗಳಕ್ಕೆ ಆಸ್ಪದ, ನೇರನುಡಿಯಿಂದ ಉತ್ತಮ ಫಲ, ಟೀಕೆಗಳನ್ನ ಗಂಭಿರವಾಗಿ ಸ್ವೀಕರಿಸುವಿರಿ, ಉದ್ಯೋಗ ಲಾಭ, ವ್ಯವಹಾರದ ಸಮಸ್ಯೆ, ಕುಟುಂಬ ದೂರ, ಗೆಳೆಯರಿಂದ ಸಹಕಾರ, ಬಾಂಧವ್ಯ ಭದ್ರವಾಗುತ್ತದೆ.

ಪರಿಹಾರ : ನಿಮ್ಮ ಮಠದ ಗುರುಗಳ ಆಶೀರ್ವಾದ ಪಡೆಯಿರಿ

ಮಕರ : ಗೊಂದಲ ನಿವಾರಣೆ, ಉದ್ಯೋಗದಲ್ಲಿ ಬದಲಾವಣೆ, ಸಂಬಳ ಹೆಚ್ಚಳ, ರೈತರಿಗೆ ಅನುಕೂಲದ ದಿನ, ಸ್ನೇಹಿತರಿಂದ ಅಪವಾದ, ಮನಸಿಗೆ ಖೇದ, ವೃಥಾ ತಿರುಗಾಟ, ಉದ್ಯೋಗದಲ್ಲಿ ಹೊಸ ಪ್ರಯತ್ನ, ಗೊಂದಲದ ಮನಸ್ಥಿತಿ, ವಸ್ತ್ರ ಲಾಭ.

ಪರಿಹಾರ : ಸುಂದರಕಾಂಡದ ಪಾರಾಯಣ ಮಾಡಿ.

ಕುಂಭ : ಪ್ರಿಯಕರರೊಂದಿಗೆ  ಸುತ್ತಾಟ, ಮನಸಿಗೆ ಮುದ, ಮನೆಯಲ್ಲಿ ಅವಘಡ, ಮಾತಿನಿಂದ ಬೇಸರ, ಅಡಕೆ ವ್ಯಾಪಾರಿಗಳಿಗೆ ಬೇಸರ,ಕಾರ್ಮಿಕರಿಗೆ ಉತ್ತಮ ದಿನ, ಸಣ್ಣ ವ್ಯಾಪಾರಿಗಳಿಗೆ ಲಾಭ, ಕೆಲಸಗಾರರಿಂದ ಕಿರಿಕಿರಿ, ಹಿತೈಷಿಗಳಿಂದ ಉತ್ತಮ ಸಲಹೆ, ಮನೆಗಾಗಿ ಹುಡುಕಾಟ,

ಪರಿಹಾರ : ಶನೈಶ್ಚರ ದರ್ಶನ ಮಾಡಿ.

ಮೀನ : ಹೊಸ ಪ್ರಯತ್ನ, ಮನೆಯಲ್ಲಿ ಪ್ರೋತ್ಸಾಹ, ಮಕ್ಕಳಿಗೆ ಸಂತಸ, ವೈದ್ಯರಿಗೆ ಶುಭದಿನ, ಉಪನ್ಯಾಸಕರಿಗೆ ಪ್ರೋತ್ಸಾಹ, ವ್ಯಾಪಾರಿಗಳಿಗೆ ಉತ್ತಮ ಲಾಭ, ದೈಹಿಕ ಶ್ರಮ, ಕಾರ್ಯದಲ್ಲಿ ಅನಾನುಕೂಲತೆ, ಹಿರಿಯರಿಂದ ಸಲಹೆ, 
ಪರಿಹಾರ : ಗುರುವಿನ ಸ್ಮರಣೆ ಮಾಡಿ

ವಾಞ್ಮಯೀ.