ವಿಶೇಷ ಭವಿಷ್ಯ : ಈ ರಾಶಿಗೆ ಅಂದುಕೊಂಡದ್ದು ಕೈಗೂಡುವ ಕಾಲ

ವಿಲಂಬಿ ನಾಮ ಸಂವತ್ಸರ
ದಕ್ಷಿಣಾಯನ
ಶರದೃತು
ಆಶ್ವೀಜ ಮಾಸ
ಕೃಷ್ಣ ಪಕ್ಷ
ಸಪ್ತಮಿ ತಿಥಿ
ಪುಷ್ಯ ನಕ್ಷತ್ರ


ಮೇಷ - ವ್ಯವಹಾರದಲ್ಲಿ ಸ್ತ್ರೀಯರಿಂದ ಅನುಕೂಲ, ಮಾನಸಿಕವಾಗಿ ಖಿನ್ನತೆ, ಕಾಲಿನ ಭಾಗದಲ್ಲಿ ಪೆಟ್ಟಾಗುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ಸುಧಾರಣೆಯಾಗುವ ಕಾಲ ಸನ್ನಿಹಿತವಾಗಿದೆ. ಕಾರ್ಯಾನುಕೂಲವಾಗಲಿದೆ. 
ಪರಿಹಾರ - ದುರ್ಗಾ ದೇವಿಗೆ ಕೆಂಪು ಹೂಗಳನ್ನು ಸಮರ್ಪಣೆ ಮಾಡಿ

ವೃಷಭ - ಆತ್ಮೀಯರೇ ಇಂದು  ನಿಮ್ಮ ಸಂಗಾತಿ ಅಥವಾ ನಿಮ್ಮ ಮನೆ ಹೆಣ್ಣುಮಕ್ಕಳು ನಿಮ್ಮೊಂದಿಗೆ ವಾಗ್ವಾದ ಮಾಡಬಹುದು. ಧನ ನಷ್ಟವಾಗುವ ಸಾಧ್ಯತೆ ಇದೆ. ಬರುವ ಲಾಭವೂ ಕೈತಪ್ಪಿಹೋಗಲಿದೆ, ಆರೋಗ್ಯದಲ್ಲೂ ಬಾಧೆಯನ್ನು ಅನುಭವಿಸುತ್ತೀರಿ. ಶೀತ ಪ್ರಕೃತಿ ಹೆಚ್ಚಾಗಲಿದೆ.
ಪರಿಹಾರ - ನವಗ್ರಹ ಪ್ರಾರ್ಥನೆ ಮಾಡಿ

ಮಿಥುನ - ಆತ್ಮೀಯರೇ ಇಂದು ನಿಮ್ಮ ಸಂಗಾತಿ ನಿಮ್ಮ ವಿರುದ್ಧ ಮಾತಾಡಬಹುದು, ವ್ಯಾಪಾರದಲ್ಲಿ ಸ್ವಲ್ಪ ಕಿರಿಕಿರಿಯೂ ಇರಲಿದೆ, ಮನೆಯಿಂದ ಹೊರಗೆ ಹೊರಡುವಾಗ ತಪ್ಪದೇ ಶನೈಶ್ಚರ ಮಂತ್ರವನ್ನ ಪಠಿಸಿ.
ಪರಿಹಾರ - ಎಳ್ಳೆಣ್ಣೆಯಿಂದ ಶನಿ ದೇವರಿಗೆ ದೀಪ ಹಚ್ಚಿ

ಕಟಕ - ಆತ್ಮೀಯರೇ ನಿಮ್ಮ ಜೀವನದಲ್ಲಿ ಒಂದು ಹೊಸ ಪ್ರಯತ್ನ, ಜೊತೆಗೆ ಸ್ವಲ್ಪ ಶ್ರಮವೂ ಇದೆ. ಇಂದು ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯ ಕಾಣಲಿದ್ದೀರಿ. ಸಹೋದರರು ನಿಮ್ಮನ್ನು ಕಾಡಲಿದ್ದಾರೆ. ಶುಭಾಶುಭ ಮಿಶ್ರ ಫಲ.
ಪರಿಹಾರ - ದುರ್ಗಾ ಸಪ್ತಶತಿ ಪಾರಾಯಣ ಮಾಡಿ

ಸಿಂಹ - ಆತ್ಮೀಯರೇ,  ಇಂದು ನಿಮ್ಮ ರಾಶಿಯವರಿಗೆ ಸ್ವಲ್ಪ ಧನ ವ್ಯಯವಾಗುವ ಸಾಧ್ಯತೆ ಇದೆ. ಕುಟುಂಬದವರಿಗಾಗಿ ಹಣ ವ್ಯಯ. ಹೆಣ್ಣುಮಕ್ಕಳಿಂದ ಸಹಾಯವಾಗಲಿದೆ, ತಂದೆಯಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಬರಲಿದೆ. ಸ್ವಲ್ಪ ಸಮಾಧಾನವಿರಲಿ
ಪರಿಹಾರ - ಸೂರ್ಯ ಪ್ರಾರ್ಥನೆ ಮಾಡಿ

ಕನ್ಯಾ - ಆತ್ಮೀಯರೇ ನಿಮ್ಮ ಶರೀರ ಬಾಧೆ ಮುಂದುವರೆಯಲಿದೆ, ಇಂದು ಒಂದು ಜಾಗದ ಇತ್ಯರ್ಥವಾಗಲಿದೆ, ಅಷ್ಟೇ ಅಲ್ಲ ನಿಮ್ಮ ತಾಯಿ ಉತ್ತಮ ಮಾರ್ಗದರ್ಶನ ಮಾಡಲಿದ್ದಾರೆ. ಅವರ ಮಾತೇ  ನಿಮ್ಮ ದಿನವನ್ನು ಶುಭದಾಯಕವಾಗಿಸುತ್ತದೆ. ಆರೋಗ್ಯದಲ್ಲಿ ವ್ಯತ್ಯಯ ಕಾಣಲಿದ್ದೀರಿ.
ಪರಿಹಾರ - ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ

ತುಲಾ - ರಾಶಿಯ ಅಧಿಪತಿ ರಾಶಿಯಲ್ಲೇ ಇರುವುದರಿಂದ ಸ್ವಶ್ರಮದಿಂದ ಮೇಲೇಳುವ ಪ್ರಯತ್ನ ಮಾಡುತ್ತೀರಿ. ಬಲವಾದ ಗುರುಬಲವಿರುವುದರಿಂದ ಸರ್ವ ಕಾರ್ಯ ಸಿದ್ಧಿ. ಸಹೋದರರ ಸಹಕಾರ ಸಿಗದೇ ಹೋಗಬಹುದು. 
ಪರಿಹಾರ  - ಲಲಿತಾ ಸಹಸ್ರನಾಮ ಪಠಿಸಿ

ವೃಶ್ಚಿಕ - ನಿಮ್ಮ ರಾಶಿಯಲ್ಲಿರುವ ಗುರು ಬುಧರು ಉತ್ತಮ ಫಲ ನೀಡಲಿದ್ದಾರೆ. ಸ್ವಲ್ಪ ಮಟ್ಟಿಗೆ ಹಣ ವ್ಯಯವಾಗಬಹುದು. ನಿಮ್ಮ ಸಹೋದರರು ಸಹಾಯಕ್ಕೆ ಬರಲಿದ್ದಾರೆ. ಗಣಪತಿ ಪ್ರಾರ್ಥನೆ ಮಾಡಿ ಕಾರ್ಯ ಪ್ರಾರಂಭ ಮಾಡಿ
ಪರಿಹಾರ - ಸುಬ್ರಹ್ಮಣ್ಯನಿಗೆ 6 ನಮಸ್ಕಾರ ಹಾಕಿ

ಧನಸ್ಸು - ನಿಮ್ಮ ಶರೀರಕ್ಕೆ ಸ್ವಲ್ಪ ಪೆಟ್ಟಾಗಬಹುದು, ನೀವೇ ಮಾಡಿದ ತಪ್ಪಿನಿಂದ ಪಶ್ಚತ್ತಾಪ ಪಡಬೇಕಾದೀತು. ಲಾಭವು ಶತ್ರುಗಳ ಪಾಲಾಗುತ್ತದೆ. ನಿಮ್ಮ ಕಾರ್ಯಕ್ಕೆ ಹಿರಿಯರ ಸಲಹೆ ಅಗತ್ಯ. 
ಪರಿಹಾರ - ಗುರು ಚರಿತ್ರೆ ಪಠಿಸಿ

ಮಕರ - ಆತ್ಮೀಯರೇ ಇಂದು ನಿಮ್ಮ ಸಹೋದರಿಯರು ನಿಮ್ಮ ಸಹನೆಯನ್ನು ಪರೀಕ್ಷೆ ಮಾಡುತ್ತಾರೆ. ಅವರಿಂದ ಅನುಕೂಲವೂ  ಇದೆ. ವಾಗ್ವಾದ ಮಾಡದೆ ಕೆಲ ವಿಚಾರಗಳನ್ನು ವಿವೇಕಯುತವಾಗಿ ಬಗೆಹರಿಸಿಕೊಳ್ಳುವ ಗುಣ ನಿಮ್ಮಲ್ಲೇ ಮೂಡುತ್ತದೆ.

ಕುಂಭ - ಆತ್ಮೀಯರೇ ನಿಮ್ಮ ಹಣ ವ್ಯಯವಾಗಲಿದೆ, ಮಾತಿನಿಂದ ನಿಮ್ಮ ಕಾರ್ಯ ಸಾಧನೆಯಾಗಲಿದೆ, ಉದ್ಯೋಗದಲ್ಲಿ ಸ್ವಲ್ಪ ಬದಲಾವಣೆಯಾಗುವ ಸಾಧ್ಯತೆ, ಸ್ತ್ರೀಯರಿಗೆ ಮಾನಸಿಕ ಸಮಾಧಾನ, ಮಕ್ಕಳಿಂದ ಸ್ವಲ್ಪ ಕಿರಿಕಿರಿ. 

ಪರಿಹಾರ - ಶಿವ ದೇವಸ್ಥಾನಕ್ಕೆ ಬಿಲ್ವಪತ್ರೆ ಸಮರ್ಪಿಸಿ

ಮೀನ - ಉತ್ತಮ ಫಲ ಸಿಗಲಿದೆ. ಅಂದುಕೊಂಡ ಕಾರ್ಯ ಸಾಧಿಸುವ ಸರ್ವ ಲಕ್ಷಣವಿದೆ. ನಿಮ್ಮ ಹೊಸ ಪ್ರಯತ್ನಗಳೂ ಕೂಡ ಕೈಗೂಡಲಿವೆ. ಶುಭದಿನ

ಪರಿಹಾರ - ದತ್ತಾತ್ರೇಯ ಪ್ರಾರ್ಥನೆ ಮಾಡಿ

ವಾಞ್ಮಯೀ.