ಈ ರಾಶಿಗೆ ಖಿನ್ನತೆ ಕಾಡುವ ದಿನ ಸೂಕ್ತ ಎಚ್ಚರ ಅಗತ್ಯ 

22-11-18 - ಗುರುವಾರ

ಶ್ರೀ ವಿಲಂಬಿ ನಾಮ ಸಂವತ್ಸರ
ದಕ್ಷಿಣಾಯನ
ಶರದೃತು
ಕಾರ್ತೀಕ ಮಾಸ
ಶುಕ್ಲ ಪಕ್ಷ
ಚತುರ್ದಶಿ
ಭರಣಿ

ರಾಹುಕಾಲ : 01.31 ರಿಂದ 02.57
ಯಮಗಂಡ ಕಾಲ : 06.22 ರಿಂದ 07.48
ಗುಳಿಕ ಕಾಲ : 09.14 ರಿಂದ 10.40


ಮೇಷ ರಾಶಿ : ಇಂದು ಸ್ವಲ್ಪ ಮಟ್ಟಿಗೆ ಅಸಮಧಾನದ ದಿನ, ಮನಸ್ಸಿಗೆ ಖಿನ್ನತೆ ಕಾಡಲಿದೆ. ಕಾರ್ಯದಲ್ಲಿ ಬೇಸರ. ಅದೃಷ್ಟ ಹೀನರಾಗಿ ವಂಚಿತರಾಗುವ ಸಮಯ. ಇಂದು ನೀವು ಯಾವುದೇ ಪ್ರಯಾಸ ಕೆಲಸ ಮಾಡಬೇಡಿ.

ದೋಷಪರಿಹಾರ : ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ.

ವೃಷಭ : ಇಂದು ನಿಮ್ಮ ಪಾಲಿಗೆ ಧನ ನಷ್ಟ. ಬೇಡದ ಕಾರಣಕ್ಕೆ ಹಣವ್ಯಯ ಮಾಡಿಕೊಂಡು ಕೊರಗುತ್ತೀರಿ. ಸ್ವಲ್ಪ ಕಾಲಿನ ಭಾಗಕ್ಕೆ ಗಾಯ ಮಾಡಿಕೊಳ್ಳುತ್ತೀರಿ. ನಿಮ್ಮ ದಿನ ಸ್ವಲ್ಪ ಸುಖ-ದು:ಖ ಮಿಳಿತವಾರಿರಲಿದೆ. ಜಾಗ್ರತೆಯಿಂದ ದಿನವನ್ನ ನಿಭಾಯಿಸಿ. 

ದೋಷ ಪರಿಹಾರ :  ಸೂರ್ಯ ಪ್ರಾರ್ಥನೆ ಹಾಗೂ ಚಂದ್ರ ಪ್ರಾರ್ಥನೆ ಮಾಡಿ.

ಮಿಥುನ :  ಧನ ನಷ್ಟ ಸಂಭವ. ನಿಮ್ಮ ಆರೋಗ್ಯಕ್ಕಾಗಿ, ನಿಮ್ಮ ಶರೀರ ಸೌಖ್ಯಕ್ಕಾಗಿ ಧನ ವ್ಯಯವಾಗುತ್ತದೆ. ಸಹೋದರರ ಸಲುವಾಗಿಯೂ ಧನ ನಷ್ಟವಾಗುವ ಸಾಧ್ಯತೆ ಇದೆ. ಮುಖ್ಯವಾಗಿ ಮನೆಯಲ್ಲಿ ಮಡದಿಯೊಟ್ಟಿಗೆ ಸ್ವಲ್ಪ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಸಮಾಧಾನವಿರಲಿ.

ದೋಷ ಪರಿಹಾರ : ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ಸ್ಮರಣೆ ಮಾಡಿ

ಕಟಕ : ನಿಮ್ಮ ಪಾಲಿದೆ ಸಾಲದ ದಿನ. ಸಾಲ ಮಾಡಿ ಹಣ ಕಳೆದುಕೊಳ್ಳುವ ದಿನ.  ಇವೆಲ್ಲವೂ ನಿಮ್ಮ ಮನೋಬಲವನ್ನು ಕುಗ್ಗಿಸಲಿದೆ. ಜಾಗ್ರತೆ ಇರಲಿ. ಆರೋಗ್ಯದಲ್ಲೂ ಗಮನವಿರಲಿ.
  
ದೋಷ ಪರಿಹಾರ : ಶನಿ ಹಾಗೂ ಸೂರ್ಯ, ಚಂದ್ರರ ಆರಾಧನೆ ಮಾಡಿ

ಸಿಂಹ : ಇಂದು ನಿಮ್ಮ ಹತ್ತಿರದ ಬಂಧುಗಳಿಂದ ನಿಮ್ಮ ಹಣ-ಸಮಯ ವ್ಯರ್ಥವಾಗಲಿದೆ. ಮಕ್ಕಳಿಂದ ಸ್ವಲ್ಪ ಕೆಲಸ ಹೆಚ್ಚುತ್ತದೆ. ಶಾಲೆಯಲ್ಲಿ ಮಕ್ಕಳಿಗೆ ಹೊರೆ ಅದು ನಿಮಗೂ ಹೊರೆಯಾಗಲಿದೆ. ಮಕ್ಕಳ ಪರವಾಗಿ ನೀವೇ ಶ್ರಮ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಒದಗಲಿದೆ. 

ದೋಷ ಪರಿಹಾರ : ಶನಿ ಪ್ರಾರ್ಥನೆ, ಎಳ್ಳು ದಾನ ಮಾಡಿ.

ಕನ್ಯಾ : ನಿಮ್ಮ ಉದ್ಯೋಗದಲ್ಲಿ ಹೆಚ್ಚು ಗಮನವಹಿಸಬೇಕಾಗುತ್ತದೆ. ನಿಮ್ಮ ಅಕ್ಕಪಕ್ಕದ ಸ್ತ್ರೀಯರು ನಿಮ್ಮನ್ನು ಕಾಡಬಹುದು. ಸ್ವಲ್ಪ ಮಟ್ಟಿಗೆ ಸುಖ ಭೋಜನವಿರಲಿದೆ. ಸಾಲ ಕೇಳಿಕೊಂಡು ಬರುವವರನ್ನು ಎದುರಿಸಬೇಕಾಗುತ್ತದೆ.
  
ದೋಷ ಪರಿಹಾರ : ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ 

ತುಲಾ :  ನಿಮ್ಮದು ಇಂದು ಅದೃಷ್ಟ ಹೀನದ ದಿನ. ಬಂದ ಸೌಭಾಗ್ಯ ಬಾಗಿಲಲ್ಲೇ ನಷ್ಟವಾಗುವ ಕಾಲ. ಹೆಚ್ಚು ಕೂಡಿಡಲು ಪ್ರಯತ್ನಿಸಬೇಡಿ. ನಿಮ್ಮ ಮನೆಯಲ್ಲಿ ಹಿರಿಯರು ನಿಮ್ಮ ಮಾತಿಗೆ ಅಡ್ಡಿ ಮಾಡಬಹುದು. ಆದರೆ ಅದರಿಂದ ಅನುಕೂಲವಿದೆ.   

ದೋಷ ಪರಿಹಾರ : ಲಲಿತಾಸಹಸ್ರನಾಮ ಪಠಿಸಿ ಅಥವಾ ಕೇಳಿಸಿಕೊಳ್ಳಿ. 

ವೃಶ್ಚಿಕ : ನಿಮ್ಮ ಸುಖಕ್ಕೆ ಕತ್ತರಿ ಬೀಳುವ ಸಾಧ್ಯತೆ ಇದೆ. ನಿಮ್ಮ ಆರೋಗ್ಯದಲ್ಲೂ ಕೊಂಚ ವ್ಯತ್ಯಾಸವಾಗಲಿದೆ. ಮಕ್ಕಳು ನಿಮ್ಮನ್ನು ಕಾಡಲಿದ್ದಾರೆ. ಅವರಿಗಾಗಿ ನೀವು ಶ್ರಮ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಸಮಾಧಾನವಾಗಿದ್ದರೆ ಒಳಿತು.

ದೋಷ ಪರಿಹಾರ : ಸುಬ್ರಹ್ಮಣ್ಯ ದರ್ಶನ ಅಥವಾ ಪ್ರಾರ್ಥನೆ ಮಾಡಿ 

ಧನಸ್ಸು : ನಿಮ್ಮ ಮನೆಯಲ್ಲಿ ಸ್ವಲ್ಪ ಜಾಗ್ರತೆ ಇರಲಿ. ಗಂಡ ಹೆಂಡಿರಲ್ಲಿ ಮಾನಸಿಕ ಅಸಮಧಾನ ಕಾಡುವ ಸಾಧ್ಯತೆ ಇದೆ. ಮಾತಿನಲ್ಲಿ  ಹಿಡಿತವಿರಲಿ.  ನಿಮ್ಮ ಅಹಂಕಾರವೇ ನಿಮ್ಮನ್ನು ಬಲಿತೆಗೆದುಕೊಳ್ಳುವ ಸಾಧ್ಯತೆ ಇದೆ. ಎಚ್ಚರವಾಗಿರಿ. 

ದೋಷ ಪರಿಹಾರ : ಚಂದ್ರೋಪಾಸನೆ ಇಲ್ಲ ಲಕ್ಷ್ಮೀ ಪ್ರಾರ್ಥನೆ ಮಾಡಿ

ಮಕರ :  ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯ ಕಾಣಲಿದೆ. ನಿಮ್ಮ ಸಂಗಾತಿಗೂ ಆರೋಗ್ಯ ಸಮಸ್ಯೆ ಕಾಡಲಿದೆ. ನರ ದೌರ್ಬಲ್ಯ, ಅಥವಾ ಕಾಲು ನೋವಿನ ಬಾಧೆ ಕಾಡಲಿದೆ. ಸ್ವಲ್ಪ ವೈದ್ಯರ ಸಲಹೆ ಪಡೆಯಿರಿ. 
  
ದೋಷ ಪರಿಹಾರ : ನಾಗ ದೇವರ ಆರಾಧನೆ ಮಾಡಿ. ಅಥವಾ ಹುರುಳಿಕಾಳನ್ನು ದಾನ ಮಾಡಿ

ಕುಂಭ :  ಪುಟ್ಟ ಮಕ್ಕಳು ನಿಮಗೆ ಅಡ್ಡಿ ಮಾಡುವ ಸಾಧ್ಯತೆ ಇದೆ. ಉದ್ಯೋಗ ಸ್ಥಳದಲ್ಲಿ ಅಸಮಧಾನ. ಇಂದು ಶಿವ ಸಹಿತ ಅಮ್ಮನವರ ದೇವಸ್ಥಾನಕ್ಕೆ ಭೇಟಿಕೊಡುವ ಸಾಧ್ಯತೆ ಇದೆ. ಇಂದು ನಿಮ್ಮ ಮನಸ್ಸು ಸ್ವಲ್ಪ ಏರಿಳಿತವನ್ನು ಕಾಣಬಹುದು.

ದೋಷ ಪರಿಹಾರ : ದೇವಿ ಪ್ರಾರ್ಥನೆ ಮಾಡಿ 
  
ಮೀನ : ಇಂದು ನಿಮ್ಮ ಸುಖದಲ್ಲಿ ತೊಂದರೆ, ವಾಹನದಲ್ಲಿ ಸ್ವಲ್ಪ ಏರುಪೇರು. ರಸ್ತೆಯಲ್ಲಿ ಸಾಗುವಾಗ ಜಗಳವಾಗುವ ಸಾಧ್ಯತೆ ಇದೆ. ಸ್ತ್ರೀಯರು ಗಾಡಿ ಓಡಿಸುವಾಗ ಜಾಗರೂಕವಾಗಿರಬೇಕು.  
  
ದೋಷ ಪರಿಹಾರ : ಶ್ರೀನಿವಾಸ ದೇವರ ದರ್ಶನ ಮಾಡಿ


ವಾಞ್ಮಯೀ