ಈ ರಾಶಿಗೆ ಉತ್ತಮ ಲಾಭದ ದಿನ : ಕೊಂಚ ಎಚ್ಚರಿಕೆ ಅಗತ್ಯ


ಮೇಷ ರಾಶಿ : ಕುಟುಂಬದವರೊಂದಿಗೆ ಕ್ಷೇತ್ರ ದರ್ಶನ, ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ, ಓದಿನಲ್ಲಿ ಪ್ರಗತಿ, ವ್ಯಾಪಾರದಲ್ಲಿ ಪೈಪೋಟಿ, ಶತ್ರುಗಳಿಂದ ಅಪಾಯ, ತೀರ್ಪಿಗೆ ತಿರುಗಾಟ, ನರ ದೌರ್ಬಲ್ಯ.

ದೋಷ ಪರಿಹಾರ : ಸುಬ್ರಹ್ಮಣ್ಯ ಸ್ವಾಮಿಗೆ ಪಂಚಾಮೃತ ಅಭಿಷೇಕ ಮಾಡಿಸಿ.

ವೃಷಭ : ಸಮಾಜ ಸೇವಕರಿಗೆ ಗೌರವ, ವಿವಾಹ ಯೋಗ, ಭ್ರಾತೃ ಪ್ರೇಮ,  ಕಾರ್ಯ ಲಾಭ, ಹಳೆಯ ಸಾಲ ತೀರಲಿದೆ, ಪಾಲುದಾರಿಕೆ ವ್ಯವಹಾರ ಬೇಡ, ಕುಟುಂಬ ಕಲಹ, ಉತ್ತಮ ದಿನವಾಗಿರಲಿದೆ. 

ದೋಷ ಪರಿಹಾರ : ಶ್ರೀಚಕ್ರ ಆರಾಧನೆ ಮಾಡಿ.

ಮಿಥುನ : ಪತಿ-ಪತ್ನಿಯರಲ್ಲಿ ಹೊಂದಾಣಿಕೆ ಅಸಾಧ್ಯ, ಅನವಶ್ಯಕ ಖರ್ಚುಗಳು, ಮಿತ್ರರೇ ಶತ್ರುಗಳಾಗುವರು, ಹೊಸ ಸಾಲ ಸಂಭವ, ಹಿರಿಯ ಅಧಿಕಾರಿಗಳಿಂದ ತೊಂದರೆ, ಬಿಲ್ವಾರ್ಚನೆ ಮಾಡಿಸಿ.

ದೋಷ ಪರಿಹಾರ : ಗುರು ಚರಿತ್ರೆ ಪಾರಾಯಣ ಮಾಡಿ. 

ಕಟಕ : ದೇಹದಲ್ಲಿ ಸ್ವಲ್ಪ ಬಾಧೆ ಕಾಣಿಸಿಕೊಳ್ಳುತ್ತದೆ, ಆದರೆ ಮನಸ್ಸಿಗೆ ಸಮಾಧಾನವಾಗುವ ಸಂದರ್ಭವೂ ಇದೆ. ನಿಮ್ಮ ಸಂಗಾತಿ ನಿಮ್ಮ ಬಳಿ ಗಂಭೀರ ವಿಚಾರವಾಗಿ ಚರ್ಚೆ ಮಾಡುತ್ತಾರೆ. ಕೆಲ ನಿರ್ಧಾರಗಳು ನಿಮ್ಮನ್ನು  ಕೋಪತರಿಸುವಂತೆ ಮಾಡುತ್ತದೆ

ದೋಷ ಪರಿಹಾರ : ಶ್ರೀಚಕ್ರಕ್ಕೆ ಕುಂಕುಮಾರ್ಚನೆ ಮಾಡಿ.

ಸಿಂಹ : ಇಂದು ನಿಮ್ಮ ದೇಹದಲ್ಲಿ ಸ್ವಲ್ಪ ಸಮಸ್ಯೆ ಕಾಣಿಸಿಕೊಳ್ಳಲಿದೆ, ಗಂಭೀರ ಸಮಸ್ಯೆಯಿಂದ ನಿಮ್ಮ ಆತ್ಮ ಶಕ್ತಿ ಕುಂದಿಹೋಗಲಿದೆ. ಧನವ್ಯಯ, ಸ್ತ್ರೀಯರಿಂದ ಸ್ವಲ್ಪ ಗಂಭೀರ ಸಮಸ್ಯೆ ಉಂಟಾಗಲಿದೆ. ಮಾತಿನಲ್ಲಿ ಎಚ್ಚರವಿರಲಿ.

ದೋಷ ಪರಿಹಾರ : ಸೂರ್ಯ ನಮಸ್ಕಾರ ಮಾಡಿ. 

ಕನ್ಯಾ : ಆತ್ಮೀಯರೇ ನಿಮ್ಮ ಮನೆಯಲ್ಲಿ ಹೆಂಗಸರಿಂದಾಗಿ ಸ್ವಲ್ಪ ನಿಮ್ಮ ಮನಸ್ಸು ಬೇಸರಗೊಳ್ಳಲಿದೆ. ಆದರೆ ಹಿರಿಯರು ಅದನ್ನು ಸರಿಪಡಿಸುತ್ತಾರೆ. ನಿಮ್ಮ ಗುರುಗಳ ದರ್ಶನ ಹಾಗೂ ಅವರ ಮಾರ್ಗದರ್ಶನದಿಂದ ದಿನವನ್ನು ಮುನ್ನಡೆಸಿ.
  
ದೋಷ ಪರಿಹಾರ : ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ

ತುಲಾ :  ನಿಮ್ಮ ಮನಸ್ಸು ಸಂತಸದಿಂದ ಕೂಡಿರುವ ದಿನ, ವಿಹಾರ-ವಿಚಾರಗಳಲ್ಲಿ ದಿನ ಕಳೆಯುವ ಮನಸ್ಸು, ಅಧ್ಯಯನಕ್ಕಾಗಿ ದೂರದ ಊರಿಗೆ ಹೋಗುವ ತಯಾರಿ. ಉತ್ತಮ ವಿಚಾರಗಳ ಚಿಂತನೆ  ಮಾಡುವ ದಿನ.

ದೋಷ ಪರಿಹಾರ : ಬಡವರಿಗೆ ಸಹಾಯ ಮಾಡಿ

ವೃಶ್ಚಿಕ : ಇಂದು ನಿಮ್ಮ ಮಾತುನಿಂದ ಒಂದು ಬಾಂಧವ್ಯವನ್ನು ಹಾಳುಮಾಡಿಕೊಳ್ಳುತ್ತೀರಿ. ನಿಮ್ಮ ಶತ್ರುವಿನಂಥ ಸ್ನೇಹಿತರಿಗಾಗಿ ಹಣವ್ಯಯಮಾಡಿಕೊಳ್ಳಬೇಕಾದ ಅನಿವಾರ್ಯತೆ ಬರುತ್ತದೆ. ತಂದೆ - ಮಕ್ಕಳಲ್ಲಿ ಭಿನ್ನಾಭಿಪ್ರಾಯ. 

ದೋಷ ಪರಿಹಾರ : ಕುಲದೇವತಾ ಪ್ರಾರ್ಥನೆ ಮಾಡಿ

ಧನಸ್ಸು : ನಿಮ್ಮ ಆರೋಗ್ಯದಲ್ಲಿ ಗಂಭೀರ ಸಮಸ್ಯೆ ಕಾಣಿಸಿಕೊಳ್ಳಲಿದೆ, ನಿಮ್ಮ ಹಣ ಅನಾಯಾಸವಾಗಿ ಖರ್ಚಾಗಲಿದೆ. ಒಂದು ಮೂಲದಿಂದ ಆದಾಯವೂ ಬರಲಿದೆ. ನಿಮ್ಮ ಸಹೋದರರಲ್ಲಿ ಉತ್ತಮ ಸಹಕಾರ ಬೆಳೆಯಲಿದೆ.

ದೋಷ ಪರಿಹಾರ : ಶಿವ ಅಷ್ಟೋತ್ತರ ಪಠಿಸಿ

ಮಕರ :  ಇಂದು ನಿಮ್ಮ ಕಾಲಿನ ಭಾಗದಲ್ಲಿ ಸ್ವಲ್ಪ ಪೆಟ್ಟು ಬೀಳಲಿದೆ, ನಿಮ್ಮ ಕಾರ್ಯಗಳಲ್ಲಿ ಹಾಗೂ ಸಂಗಾತಿಯಲ್ಲಿ ಸ್ವಲ್ಪ ಬೇಸರ ಕಾಣುವ ದಿನವಾಗಿದೆ. ನಿಮ್ಮ ಲಾಭದಲ್ಲಿ ಧನ ವ್ಯಯ, ಕುಟುಂಬದಲ್ಲಿ ಧನ ವ್ಯಯವಾಗುವ ಸಾಧ್ಯತೆ ಇದೆ.
  
ದೋಷ ಪರಿಹಾರ : ಮಂಜುನಾಥ ಸ್ವಾಮಿಯನ್ನು ನೆನೆಯಿರಿ. 

ಕುಂಭ : ನಿಮ್ಮ ಸಂಗಾತಿಯ ಜೊತೆಗಿನ ಬೇಸರ ಮುಂದುವರೆಯಲಿದೆ, ಮುಖ್ಯವಾಗಿ ನಿಮ್ಮ ಬೆನ್ನು ಹಾಗೂ ಸೊಂಟಭಾಗದಲ್ಲಿ ಸ್ವಲ್ಪ ನೋವು ಕಾಣಿಸಿಕೊಳ್ಳುತ್ತದೆ.  ಕಾರ್ಯ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ. ಮಿತ್ರರ ಸಹಾಯ ಎಲ್ಲವೂ ಇದೆ.

ದೋಷ ಪರಿಹಾರ :  ನವ ಧಾನ್ಯ ದಾನ ಮಾಡಿ
  
ಮೀನ :  ಇಂದು ನಿಮ್ಮ ಮಕ್ಕಳು ನಿಮ್ಮ ಮನಸ್ಸಿಗೆ ನೋವು ತರಲಿದ್ದಾರೆ. ಅಷ್ಟೇ ಅಲ್ಲ ನೀವು ವಾಹನ ಸಂಚಾರ ಮಾಡುವಾಗ ಸ್ವಲ್ಪ ಸಮಸ್ಯೆ ಕಾಣುತ್ತದೆ. ಸ್ತ್ರೀಯರಿಂದ ಪ್ರಮಾದಕ್ಕೆ ಗುರಿಯಾಗುತ್ತೀರಿ. 
  
ದೋಷ ಪರಿಹಾರ : ಕುಮಾರಿ ಪೂಜೆ ಮಾಡಿ.


ವಾಞ್ಮಯೀ