12-12-18 - ಬುಧವಾರ
====================
ಶ್ರೀ ವಿಲಂಬಿ ನಾಮ ಸಂವತ್ಸರ
ದಕ್ಷಿಣಾಯನ
ಹೇಮಂತ ಋತು
ಮಾರ್ಗಶಿರ ಮಾಸ
ಶುಕ್ಲ ಪಕ್ಷ
ಪಂಚಮಿ ತಿಥಿ
ಶ್ರವಣ ನಕ್ಷತ್ರ
====================
ರಾಹುಕಾಲ : 12.13 ರಿಂದ 01.38
ಯಮಗಂಡ ಕಾಲ : 07.58 ರಿಂದ 09.23
ಗುಳಿಕ ಕಾಲ : 10.48 ರಿಂದ 12.13
=============================

ಮೇಷ ರಾಶಿ : ಹೊಸ ಕೆಲಸದ ಚಿಂತೆ,  ಧರ್ಮಕಾರ್ಯ, ಬದುಕಿಸಲ್ಲಿ ಹೊಸ ಆಯಾಮ, ಉದ್ಯೋಗ ಪ್ರಾಪ್ತಿ, ಹೊಸ ಬದುಕು ಪ್ರಾರಂಭ, ಸಂಗಾತಿಯೊಂದಿಗೆ ಚರ್ಚೆ, ಉತ್ತಮ ಬಾಂಧವ್ಯಕ್ಕಾಗಿ ಮಾತುಕತೆ, ಸಮಸ್ಯೆ ಪರಿಹಾರ, ಮಕ್ಕಳಿಗೆ ಹಣ ಹೂಡಿಕೆ, ಧನವೃದ್ಧಿ

ದೋಷಪರಿಹಾರ : ಲಕ್ಷ್ಮೀ ಸ್ತೋತ್ರ ಪಠಿಸಿ

ವೃಷಭ : ವ್ಯಾಪಾರದ ಮಾತು ಕತೆ, ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವ ಮನಸ್ಸಾಗಲಿದೆ. ರಾಜಕೀಯದಲ್ಲಿರುವವರಿಗೆ ಮಿತ್ರರ ಸಹಾಯ. ನಿಮ್ಮ ಮಾತಿನಿಂದ ಸ್ತ್ರೀಯರು ಕೋಪ ಮಾಡಿಕೊಳ್ಳುವ ಸಾಧ್ಯತೆ ಇದೆ. ಜಾಗ್ರತೆಯಿಂದ ಮಾತಾಡಿ

ದೋಷ ಪರಿಹಾರ : ದುರ್ಗಾ ಕವಚ ಪಠಿಸಿ

ಮಿಥುನ : ವ್ಯಾಪಾರದಲ್ಲಿ ಮೋಸ ಹೋಗುವ ಸಾಧ್ಯತೆ, ಶತ್ರುಗಳೂ ಮಿತ್ರರಾಗುತ್ತಾರೆ, ನಂಬಿಕೆ ವ್ಯಾಪಾರದಲ್ಲಿ ಲಾಭವನ್ನು ತರಲಿದೆ, ದಾಂಪತ್ಯ ಹೊಂದಾಣಿಕೆಗೆ ಅರ್ಧನಾರೀಶ್ವರ ದರ್ಶನ ಮಾಡಿ. 

ದೋಷ ಪರಿಹಾರ : ಲಕ್ಷ್ಮೀ ನಾರಾಯಣ ಹೃದಯ ಸ್ತೋತ್ರ ಪಠಿಸಿ.

ಕಟಕ : ದಾಂಪತ್ಯದಲ್ಲಿ ಏರುಪೇರು, ಅನ್ಯರ ಮಾತುಕೇಳಿ ವಾಗ್ವಾದಗಳಾಗುವ ಸಾಧ್ಯತೆ, ಕಚೇರಿಯಲ್ಲಿ ಹೆಚ್ಚಿನ ಕೆಲಸ ನಿಮ್ಮ ಮೇಲೆ ಬೀಳಲಿದೆ, ಆರೋಗ್ಯದಲ್ಲಿ ಏರುಪೇರಾಗಲಿದೆ, ಕ್ರೀಡಾಸಕ್ತರಿಗೆ ಉತ್ತಮ ದಿನ.
  
ದೋಷ ಪರಿಹಾರ : ಅನ್ನಪೂರ್ಣೇಶ್ವರಿ ದರ್ಶನ ಮಾಡಿ

ಸಿಂಹ : ತಂದೆಯಲ್ಲಿ ಗೌರವ, ಮನೆಕಟ್ಟುವ ಯೋಚನೆಗೆ ಪುಷ್ಟಿ, ಗೆಳೆಯರ ಸಹಾಯ, ಉತ್ತಮರ ಸಹವಾಸ, ಕಾವ್ಯ ಕಲೆಗಳಲ್ಲಿ ಆಸಕ್ತಿ, ನಿಮ್ಮ ಮನೆಯ ಸ್ಥಳದಲ್ಲಿ ಮಾಟ-ಮಂತ್ರಾದಿ ಕ್ಷುದ್ರ ಶಕ್ತಿಗಳ ದರ್ಶನ, ಭಯ. 

ದೋಷ ಪರಿಹಾರ : ವೀರಭದ್ರ ಸ್ಮರಣೆ ಮಾಡಿ

ಕನ್ಯಾ : ಮನಸ್ಸಿಗೆ ಸಮಾಧಾನ, ಕುಟುಂಬದಲ್ಲಿ ಸ್ತೀಯರಿಂದ ಅನುಕೂಲ, ನಿಮ್ಮ ತಮ್ಮನಿಂದ ಅನುಕೂಲ ಪ್ರಾಪ್ತಿ, ವ್ಯಾಪಾರ ವೃತ್ತಿಗಳಲ್ಲಿ ಲಾಭದ ದಿನ, ನಿಮ್ಮ ದಿನದ ಕಾರ್ಯಗಳಲ್ಲಿ ಅನುಕೂಲ ಪ್ರಾಪ್ತಿ.
  
ದೋಷ ಪರಿಹಾರ :  ವಿಷ್ಣು ಸ್ಮರಣೆ ಮಾಡಿ

ತುಲಾ :  ಆರೋಗ್ಯ ಗುಣಮುಖವಾಗುತ್ತದೆ, ಸಿದ್ಧ ಪುರುಷರ ಭೇಟಿ, ವೃಥಾ ಸುತ್ತಾಟವೂ ಇದೆ, ವೃತ್ತಿಯಲ್ಲಿ ಬೇಸರ, ಉದ್ಯೋಗ ಬಿಡುವ ಮನಸ್ಸಾಗಲಿದೆ, ಆದರೆ ಗಂಭೀರ ವಿಷಯಗಳಲ್ಲಿ ದುಡುಕು ನಿರ್ಧಾರ ಬೇಡ.

ದೋಷ ಪರಿಹಾರ : ಗಣಪತಿ ಪ್ರಾರ್ಥನೆ ಮಾಡಿ

ವೃಶ್ಚಿಕ : ನಿಮ್ಮ ದೇಹದಲ್ಲಿ ಶಕ್ತಿ ವರ್ಧನೆ, ಹಿರಿಯರಿಂದ ಸಹಾಯ, ಮನೆಯ ವಿಷಯಗಳಲ್ಲಿ ಕೊಂಚ ಮನಸ್ತಾಪ, ಧನ ನಷ್ಟ, ಮಾತು ಮನಸ್ಸು ಒಡೆಯಲಿಕ್ಕೆ ಕಾರಣವಾಗುತ್ತದೆ, ಅನ್ಯ ಚಿಂತೆಗಳಿಂದ ಸಮಯ ವ್ಯರ್ಥ. 

ದೋಷ ಪರಿಹಾರ : ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಧನಸ್ಸು : ಉತ್ಸಾಹಕ್ಕೆ ನೀರೆರಚುವ ದಿನ, ನೀವು ಅಂದುಕೊಂಡ ಕಾರ್ಯಗಳಲ್ಲಿ ಹಿನ್ನಡೆ, ಆಗಂತುಕರಿಂದ ಭಯದ ವಾತಾವರಣ, ಕಾರ್ಯಗಳಲ್ಲಿ ಅಡೆತಡೆ, ನಿಮ್ಮ ಪ್ರತಿನಿಧಿಗಳಿಂದ ನಿಮಗೆ ಹಿನ್ನಡೆ ಸಾಧ್ಯತೆ. 

ದೋಷ ಪರಿಹಾರ : ಕಾರ್ಯ ಸಿದ್ಧಿ ಯಂತ್ರ ಧರಿಸಿ

ಮಕರ :  ಪರಸ್ಪರ ಹೊಂದಾಣಿಕೆಯಿಂದ ಕಾರ್ಯ ವೃದ್ಧಿ, ವ್ಯಾಪಾರದಲ್ಲಿ ಲಾಭ, ತಂದೆಯಿಂದ ಅನುಕೂಲ, ನಿಮ್ಮ ಉದ್ಯೋಗದಲ್ಲಿ ಯಶಸ್ಸು, ನಿರಾತಂಕವಾಗಿ ನಿಮ್ಮ ಕಾರ್ಯಗಳು ನಡೆಯಲಿದೆ, ತಾಯಿ ಆ5ರೋಗ್ಯದಲ್ಲಿ ಕೊಂಚ ಏರುಪೇರು.
  
ದೋಷ ಪರಿಹಾರ : ಶಿವನಿಗೆ ರುದ್ರಾಭಿಷೇಕ ಮಾಡಿಸಿ

ಕುಂಭ : ಶುಭದಿನ, ಹೊಸ ಕಾರ್ಯಕ್ಕೆ ಚಾಲನೆ, ಕುಟುಂಬದಲ್ಲಿ ಶುಭಕಾರ್ಯಗಳ ಚಿಂತೆನೆ, ಮುಂದಾಲೋಚನೆಯಿಂದ ಮಾಡಿದ ಕಾರ್ಯಗಳು ಫಲ ನೀಡಲಿವೆ, ಶುಭದಿನ. 

ದೋಷ ಪರಿಹಾರ :  ಶನೈಶ್ಚರ ಪ್ರಾರ್ಥನೆ ಮಾಡಿ.
  
ಮೀನ : ಮದುವೆ, ಇತ್ಯಾದಿ ಮಂಗಳಕಾರ್ಯಗಳಿಗೆ ಚಾಲನೆ, ಉಪಯುಕ್ತ ವಸ್ತುಗಳ ಖರೀದಿ, ಉತ್ತಮ ದಿನ, ವಿದ್ಯಾರ್ಥಿಗಳಿಗೆ, ವಿಜ್ಞಾನಿಗಳಿಗೆ ಉತ್ತಮ ದಿನ, ಉಪನ್ಯಾಸಕರಿಗೆ ಉಪಯುಕ್ತ ಲಾಭ.
  
ದೋಷ ಪರಿಹಾರ : ಹನುಮನ ಸ್ಮರಣೆ ಮಾಡಿ


ವಾಞ್ಮಯೀ.