ಶ್ರೀ ವಿಲಂಬಿ ನಾಮ ಸಂವತ್ಸರ
ದಕ್ಷಿಣಾಯನ
ಹೇಮಂತ ಋತು
ಮಾರ್ಗಶಿರ ಮಾಸ
ಶುಕ್ಲ ಪಕ್ಷ
ತೃತೀಯಾ ತಿಥಿ
ಉತ್ತರಾಷಾಢ ನಕ್ಷತ್ರ

ರಾಹುಕಾಲ : 03.03 ರಿಂದ 04.28
ಯಮಗಂಡ ಕಾಲ : 09.23 ರಿಂದ 10.48
ಗುಳಿಕ ಕಾಲ : 12.13 ರಿಂದ 01.38

ಮೇಷ ರಾಶಿ : ನಿಮ್ಮ ಸಂಸಾರದಲ್ಲಿ ಉತ್ತಮ ಸಾಮರಸ್ಯ, ಮಕ್ಕಳಿಂದ ಕುಟುಂಬಕ್ಕೆ ಸಹಕಾರ, ಪ್ರಯಾಣದಲ್ಲಿ ಓರ್ವ ಸಂಭಾವಿತ ವ್ಯಕ್ತಿಯ ಪರಿಚಯ, ಅನ್ಯರಿಂದ ಸಹಕಾರ ಪ್ರಾಪ್ತವಾಗಲಿದೆ.

ದೋಷಪರಿಹಾರ : ಸುಬ್ರಹ್ಮಣ್ಯ ಸ್ವಾಮಿ ದರ್ಶನ ಮಾಡಿ

ವೃಷಭ : ಇಂದು ನಿಮ್ಮ ಸುಖ ವೃದ್ಧಿ, ತಂದೆಯಿಂದ ಸಹಕಾರ, ಮಿತ್ರರಿಂದಲೂ ಸಹಾಯ ದೊರೆಯಲಿದೆ. ಮಕ್ಕಳು ನಿಮ್ಮ ಪ್ರತಿಭೆಗೆ ಅಂದರೆ ಬುದ್ಧಿಗೆ ಬೆಳಕಾಗುತ್ತಾರೆ. ಮಕ್ಕಳಿಂದ ಪಾಠ ಕಲಿಯಬೇಕಾಗುತ್ತದೆ. 

ದೋಷ ಪರಿಹಾರ :  ಮೂಕಾಂಬೆ ದರ್ಶನ ಮಾಡಿ.

ಮಿಥುನ : ಇಂದು ನಿಮ್ಮ ಪಾಲಿಗೆ ಶುಭದಿನ, ಧನಾಗಮನವಾಗಲಿದೆ. ನೀವು ಅಂದುಕೊಂಡ ಕಾರ್ಯ ಸಾಕಾರಗೊಳ್ಳಲಿದೆ. ನಿಮ್ಮ ವ್ಯವಹಾರದ ತೊಡಕುಗಳೂ ಕೂಡ ನಿವಾರಣೆಯಾಗಲಿವೆ. ಹೆಚ್ಚು ಚಿಂತಿಸುವ ಅಗತ್ಯವಿಲ್ಲ.  ಆದರೆ ಸ್ವಲ್ಪ ವ್ಯಸನವೂ ಇದೆ. ಎಚ್ಚರ

ದೋಷ ಪರಿಹಾರ : ಶ್ರೀನಿವಾಸನಿಗೆ ತುಳಸಿಹಾರ ಸಮರ್ಪಿಸಿ.

ಕಟಕ : ಸಂಗಾತಿ ನಿಮ್ಮ ಮನಸ್ಸಿಗೆ ಸ್ವಲ್ಪ ಘಾಸಿಮಾಡಬಹುದು, ನೀರಿನ ಬಳಿ ಇರುವವರು ಜಾಗ್ರತೆ ಇಂದ ಇರಬೇಕು. ಅಪಾಯ ಸಾಧ್ಯತೆ ಇದೆ. ನಿಮ್ಮ ಶರೀರದಲ್ಲಿ ಸ್ವಲ್ಪ ಆರೋಗ್ಯ ವ್ಯತ್ಯಯವಾಗಬಹುದು. ಆಹಾರದಲ್ಲಿ ಎಚ್ಚರವಾಗಿರಿ.  
  
ದೋಷ ಪರಿಹಾರ : ಅನ್ನಪೂರ್ಣೇಶ್ವರಿ ದರ್ಶನ ಮಾಡಿ

ಸಿಂಹ : ಇಂದು ನಿಮ್ಮ ಮಾತಿನಿಂದ ನಿಮಗೆ ಪ್ರಶಂಸೆ, ಪ್ರಿಯವಾದವರು ಊಟವನ್ನು ತಂದುಕೊಡುತ್ತಾರೆ ಅಥವಾ ಅನ್ನ ಹಾಕುತ್ತಾರೆ. ಎಥೇಚ್ಛವಾಗಿ ನೀರು ಸಿಗಲಿದೆ. ಕೃಷಿಕರಿಗೆ ಉತ್ತಮದಿನವಾಗಿರಲಿದೆ. ಸಾಫ್ಟ್ ವೇರ್ ಉದ್ಯೋಗಿಗಳಿಗೆ ಧನ ವ್ಯಯ. 

ದೋಷ ಪರಿಹಾರ : ವಿಷ್ಣು ದರ್ಶನ ಮಾಡಿ

ಕನ್ಯಾ : ಇಂದು ನಿಮ್ಮ ಮನಸ್ಸಿನಲ್ಲಿ ಯಾವುದೋ ಒಂದು ವಿಷಯ ತುಂಬ ಕಾಡಲಿದೆ. ಯೋಚನೆ ಮಾಡಿ ನೀವು ಕುಸಿಯಬಹುದು. ಹಿರಿಯರ ಅಥವಾ ಆತ್ಮೀಯರ ಸಲಹೆ ಕೇಳಿ. ಪರಿಹಾರ ಸಿಗಲಿದೆ. ಮುಖ್ಯವಾಗಿ ನಿಮ್ಮ ಆರೋಗ್ಯ ಕೆಡುವ ಸಾಧ್ಯತೆ ಇದೆ. 
  
ದೋಷ ಪರಿಹಾರ : ಗುರು ದರ್ಶನ ಮಾಡಿ

ತುಲಾ :  ಇಂದು ನಿಮ್ಮ ಉದ್ಯೋಗದಲ್ಲಿ ಸ್ವಲ್ಪ ಸಮಸ್ಯೆ ಕಾಡಬಹುದು. ವೈದ್ಯರನ್ನು ಭೇಟಿ ಮಾಡಬೇಕಾದ ಅನಿವಾರ್ಯತೆ ಇದೆ. ನಿಮ್ಮ ಜೀವನದಲ್ಲಿ ಒಂದು ಮುಖ್ಯ ಘಟನೆ ನಡೆಯುವ ಸಾಧ್ಯತೆ ಇದೆ. ನಿಮ್ಮ ಮಾತು ನಯವಾಗಿರಲಿ.

ದೋಷ ಪರಿಹಾರ : ದುರ್ಗಾ ದೇವಿಯ ಆರಾಧನೆ ಮಾಡಿ

ವೃಶ್ಚಿಕ : ಇಂದು ನಿಮ್ಮ ಪಾಲಿಗೆ ಸಾಧನೆಯ ದಿನ, ನಿಮ್ಮ ಸಾಹಸ ಪ್ರವೃತ್ತಿಯಿಂದ ಒಂದು ಹೊಸ ಅವಕಾಶ ಸಿಗಲಿದೆ. ಆದರೆ ಸ್ವಲ್ಪ ಮಟ್ಟಿಗೆ ಧನ ವ್ಯಯವಾಗುವ ಸಾಧ್ಯತೆ ಇದೆ. ಕೊಟ್ಟು ಮೋಸಹೋಗಬೇಡಿ. ಎಚ್ಚರವಾಗಿದ್ದರೆ ಒಳಿತು. 

ದೋಷ ಪರಿಹಾರ : ತಿಲ ದಾನ ಮಾಡಿ

ಧನಸ್ಸು : ಇಂದು ನಿಮ್ಮ ದೇಹದಲ್ಲಿ ಸ್ವಲ್ಪ ಆಲಸ್ಯ ಸ್ವಾಭಾವ, ಅಸಮರ್ಥತೆ ಕಾಡಲಿದೆ,  ಆತ್ಮಸ್ಥೈರ್ಯದ ಕೊರತೆ ಕಾಡಲಿದೆ. ನಿಮ್ಮ ಆತ್ಮಬಲ ವೃದ್ಧಿಗೆ ಸೂರ್ಯ ಪ್ರಾರ್ಥನೆ ಮಾಡಿ

ದೋಷ ಪರಿಹಾರ : ಸೂರ್ಯ  ನಮಸ್ಕಾರ ಮಾಡಿ.

ಮಕರ :  ಮನೆಯ ಕಾರಣಕ್ಕಾಗಿ ಅಧಿಕ ಧನ ವ್ಯಯವಾಗಲಿದೆ. ನೀವು ಅಂದುಕೊಳ್ಳದ ಕಾರಣಕ್ಕೆ ಧನ ವ್ಯಯಿಸಬೇಕಾದ ಸಂದರ್ಭ ಒದಗಲಿದೆ. ಉದ್ಯೋಗ ಸ್ಥಳದಲ್ಲಿ ಸ್ವಲ್ಪ ಬದಲಾವಣೆ ಕಾಣುವ ಸಾಧ್ಯತೆ ಇದೆ. ಸ್ತ್ರೀಯರೊಂದಿಗೆ ಎಚ್ಚರವಾಗಿರಿ. 
  
ದೋಷ ಪರಿಹಾರ : ಶಿವ ಧ್ಯಾನ ಮಾಡಿ

ಕುಂಭ :  ಸೊಂಟಭಾಗದಲ್ಲಿ ಸ್ವಲ್ಪ ಸಮಸ್ಯೆ ಕಾಡಬಹುದು ಅಲ್ಲದೆ ಕಾಲಿಗೆ ಪೆಟ್ಟಾಗುವ ಸಾಧ್ಯತೆಯೂ ಇದೆ. ಉಳಿದಂತೆ ಏನೂ ಸಮಸ್ಯೆ ಇಲ್ಲ. ಶುಭದಿನವಾಗಿರಲಿದೆ. ಉತ್ತಮ ಫಲಗಳನ್ನು ನಿರೀಕ್ಷಿಸಬಹುದು. 

ದೋಷ ಪರಿಹಾರ : ಖಡ್ಗಮಾಲಾ ಸ್ತೋತ್ರ ಪಠಿಸಿ
  
ಮೀನ : ಇಂದು ನಿಮ್ಮ ಸುಖ ಮಕ್ಕಳಿಗೆ ರವಾನೆಯಾಗುತ್ತದೆ. ಅಂದರೆ ನಿಮ್ಮ ಶ್ರಮದಿಂದ ಮಕ್ಕಳಿಗೆ ಲಾಭ, ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯವಾಗಬಹುದು. ಉದ್ಯೋಗದಲ್ಲಿ ಉತ್ತಮ ಸಹಕಾರ. ಶುಭದಿನವಾಗಿರಲಿದೆ.    
  
ದೋಷ ಪರಿಹಾರ : ಸಾಯಿಬಾಬಾ ದರ್ಶನ ಮಾಡಿ