ವಿಶೇಷ ಭವಿಷ್ಯ : ಈ ರಾಶಿಗೆ ಅದೃಷ್ಟ ಒಲಿಯಲಿದೆ 

19-11-18 - ಸೋಮವಾರ

ಶ್ರೀ ವಿಲಂಬಿ ನಾಮ ಸಂವತ್ಸರ

ದಕ್ಷಿಣಾಯನ

ಶರದೃತು

ಕಾರ್ತಿಕ ಮಾಸ

ಶುಕ್ಲ ಪಕ್ಷ

ಏಕಾದಶಿ ತಿಥಿ

ಉತ್ತರಾಭಾದ್ರ ನಕ್ಷತ್ರ

ರಾಹುಕಾಲ 10.38 ರಿಂದ 12.04

ಯಮಗಂಡ ಕಾಲ 02.57 ರಿಂದ 04.23

ಗುಳಿಕ ಕಾಲ 07.46 ರಿಂದ 09.12

ಮೇಷ ರಾಶಿ : ಸುಖ ನಾಶ, ಮನೆಯಲ್ಲಿ ವಸ್ತು ಕಳವಾಗುವ ಸಾಧ್ಯತೆ ಇದೆ, ವ್ಯಾಪಾರಕ್ಕೆ ಸ್ತ್ರೀಯರ ಅನುಕೂಲ. ಧನ ಆಗಮನ, ತಂದೆ ಸಹಕಾರವಿರಲಿದೆ, ಉದ್ಯೋಗದಲ್ಲಿ ಸ್ವಲ್ಪ ಸಮಸ್ಯೆ ಆಗಲಿದೆ.

ದೋಷಪರಿಹಾರ : ದುರ್ಗಾ ದೇವಿಗೆ ನಾರಿಕೇಳ ಸಮರ್ಪಣೆ ಮಾಡಿ

ವೃಷಭ : ಸ್ತ್ರೀಯರ ಆರೋಗ್ಯದಲ್ಲಿ ಚೇತರಿಕೆ, ದಾಂಪತ್ಯದಲ್ಲಿ ವಿರಸಗಳು ಮೂಡುವ ಸಾಧ್ಯತೆ, ಆದರೆ ಹಿರಿಯರ ಸಲಹೆ ನಿಮ್ಮ ಕಲಹ ಪರಿಹಾರ ಮಾಡುತ್ತದೆ, ಕಾಲಿನ ಭಾಗದಲ್ಲಿ ಸ್ವಲ್ಪ ಎಟ್ಟುಬೀಳುವ ಸಾಧ್ಯತೆಗಳಿದ್ದಾವೆ ಎಚ್ಚರವಾಗಿರಿ.

ದೋಷ ಪರಿಹಾರ : ನವಗ್ರಹಗಳಿಗೆ ಒಂಭತ್ತು ಪ್ರದಕ್ಷಿಣೆ ಹಾಕಿ

ಮಿಥುನ : ಮಾನಸಿಕವಾಗಿ ನೋವು, ಹೆಂಡತಿಯ ಮಾತು ಕೇಳಿ ಮನಸ್ತಾಪ, ವಾಗ್ವಾದಗಳಾಗುವ ಸಾಧ್ಯತೆ, ಮಿತ್ರರ ಸಹಕಾರದಿಂದ ವಂಚಿತರಾಗುತ್ತೀರಿ, ಮಹಾವಿಷ್ಣುವಿನ ಸ್ಮರಣೆ ಮಾಡಿ

ದೋಷ ಪರಿಹಾರ : ಓಂ ನಮೋ ಭಗವತೇ ವಾಸುದೇವಾಯ ಮಂತ್ರ ಪಠಿಸಿ

ಕಟಕ : ಶುಭದಿನ, ಸೌಭಾಗ್ಯ ವೃದ್ಧಿ, ಗುರು-ಹಿರಿಯರ ಸಹಕಾರ, ಆತ್ಮೀಯರ ಭೇಟಿ, ನಿಮ್ಮ ಮನಸ್ಸಿಗೆ ತಕ್ಕುದಾದ ಘಟನೆಗಳು ನಡೆಯುತ್ತವೆ. ಶುಭ ಸಮಾಚಾರ ಕೇಳಲಿದ್ದೀರಿ.

ದೋಷ ಪರಿಹಾರ : ಪಾರ್ವತೀ ದೇವಸ್ಥಾನಕ್ಕೆ ಕ್ಷೀರ ಸಮರ್ಪಣೆ ಮಾಡಿ

ಸಿಂಹ : ನೀವು ಅಂದುಕೊಂಡ ಹಾಗೆ ನಿಮ್ಮ ಸ್ನೇಹಿತರ ಸಹಕಾರ ಸಿಗಲಿದೆ, ದಾಂಪತ್ಯದಲ್ಲಿ ಅಸಹಕಾರ, ನಿಮ್ಮ ವಾಸ ಸ್ಥಳದಲ್ಲಿ ಬುದ್ಧಿವಂತರ ಸಮಾವೇಶ, ಗುರುಗಳ ಅನುಗ್ರಹ ನಿಮ್ಮಮೇಲಿರುತ್ತದೆ.

ದೋಷ ಪರಿಹಾರ : ಶಿವ ದೇವಸ್ಥಾನಕ್ಕೆ ಭಸ್ಮ ಸಮರ್ಪಣೆ ಮಾಡಿ

ಕನ್ಯಾ : ಸ್ತ್ರೀಯರಿಂದ ಸಹಕಾರ, ನಿಮ್ಮ ವ್ಯಾಪಾರದಲ್ಲಿ ಸ್ತ್ರೀಯರ ಸಹಕಾರ, ಲಕ್ಷ್ಮೀ ಸೌಭಾಗ್ಯ ಒಲಿದುಬರಲಿದೆ, ಉತ್ತಮ ದಿನ, ಮನೆಯಲ್ಲಿ ಸ್ವಲ್ಪ ವಂಚನೆಯ ಮನೋಭಾವ, ಅಸಮಧಾನದ ವಾತಾವರಣ ಇರಲಿದೆ.

ದೋಷ ಪರಿಹಾರ : ಹೆಸರು ಕಾಳು ಹಾಗೂ ತಿಲದಾನ ಮಾಡಿ

ತುಲಾ : ಸ್ತ್ರೀಯರಿಗೆ ಉತ್ತಮ ದಿನ, ವಸ್ತ್ರ ಖರೀದಿ ಮಾಡುವ ಮನಸ್ಸು, ಗುರು ಹಿರಿಯರ ಮಾತಿನಿಂದ ಅನುಕೂಲ, ಧನಾಗಮನ, ನಿಮ್ಮ ಮಾತೇ ನಿಮ್ಮ ಜೀವನಕ್ಕೆ ಆಧಾರವಾಗುತ್ತದೆ.

ದೋಷ ಪರಿಹಾರ : ಅನ್ನಪೂರ್ಣೇಶ್ವರಿಗೆ ವಸ್ತ್ರದಾನ ಮಾಡಿ

ವೃಶ್ಚಿಕ : ಉತ್ತಮರ ಸಂಗ ನಿಮ್ಮನ್ನು ಭಾವುಕರನ್ನಾಗಿರುತ್ತದೆ, ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ, ಅನ್ಯರಿಂದಾಗಿ ಧನ ವ್ಯಯ, ವ್ಯಾಪಾರದಲ್ಲಿ ಮಕ್ಕಳು ಮೂಗುತೂರಿಸುವುದರಿಂದ ನಷ್ಟ ಸಂಭವ.

ದೋಷ ಪರಿಹಾರ : ಸುಬ್ರಹ್ಮಣ್ಯ ಸ್ವಾಮಿ ದರ್ಶನ ಮಾಡಿ

ಧನಸ್ಸು : ಶರೀರಕ್ಕೆ ಆಯಾಸ, ಆರೋಗ್ಯದಲ್ಲಿ ತೊಂದರೆಯಾಗುವ ಸಾಧ್ಯತೆ, ಧನ ವ್ಯಯವಾಗುತ್ತದೆ, ಸಹೋದರರಿಂದ ಸ್ವಲ್ಪ ಧೈರ್ಯದಲ್ಲಿ ಹಿನ್ನಡೆ, ಅಧೀರರಾಗುತ್ತೀರಿ. ಗುರು ಪ್ರಾರ್ಥನೆ ಮಾಡಿ

ದೋಷ ಪರಿಹಾರ : ಕಡಲೆಬೇಳೆ ಪಾಯಸ ಮಾಡಿ ದತ್ತಾತ್ರೇಯ ಸ್ವಾಮಿಗೆ ನೈವೇದ್ಯ ಮಾಡಿ

ಮಕರ : ಆಲಸ್ಯದ ದಿನ, ಗಡಿಬಿಡಿ, ಕೆಲಸದ ಒತ್ತಡ, ಆದಾಯದಲ್ಲಿ ತೊಂದರೆ, ವ್ಯಾಪಾರದಲ್ಲೂ ನಷ್ಟ ಸಂಭವ, ಅತಿಯಾದ ಸುತ್ತಾಟ, ಪ್ರಯಾಸಪಡುತ್ತೀರಿ. ಅನಾನುಕೂಲ ಸಂಭವ, ವೃಥಾ ಬೇಸರ.

ದೋಷ ಪರಿಹಾರ : ಕುಲದೇವತಾ ಪ್ರಾರ್ಥನೆ ಮಾಡಿ

ಕುಂಭ : ಅತ್ಯಂತ ಶುಭದಿನ, ಸ್ವಲ್ಪ ದೇಹ ಬಾಧೆ ಬಿಟ್ಟರೆ ಉಳಿದಂತೆ ಏನೂ ಸಮಸ್ಯೆ ಇಲ್ಲ, ನಿಮ್ಮ ಮಿತ್ರರ ಸಹಕಾರದಿಮದ ದೊಡ್ಡ ಸಾಧನೆಗೆ ಸಿದ್ಧವಾಗುತ್ತೀರಿ, ನಿಮ್ಮ ದಾರಿ ಸುಗಮವಾಗುವುದರಲ್ಲಿ ಎರಡು ಮಾತಿಲ್ಲ.

ದೋಷ ಪರಿಹಾರ : ಸುಬ್ರಹ್ಮಣ್ಯ ಹಾಗೂ ಶನಿ ಪ್ರಾರ್ಥನೆ ಮಾಡಿ

ಮೀನ : ಉತ್ತಮ ಫಲ ನಿಮ್ಮದಾಗಲಿದೆ, ಹಿರಿಯರು ನಿಮ್ಮ ಮಾತನ್ನು ಕೇಳುತ್ತಾರೆ, ಹೊಸ ಉದ್ಯೋಗ ಅವಕಾಶ ಲಭಿಸಲಿದೆ, ಧನಾಗಮನ, ಉತ್ತಮರ ಭೇಟಿ. ಅನುಕೂಲ ವಾತಾವರಣ ಇರಲಿದೆ.

ದೋಷ ಪರಿಹಾರ : ಓಂ ದ್ರಾಂ ಓಂ ಗುರು ದತ್ತಾಯ ನಮ: ಪಂತ್ರವನ್ನು 11 ಬಾರಿ ಪಠಿಸಿ

ವಾಞ್ಮಯೀ