ದಾನ ಮಾಡುವುದು ಒಳ್ಳೆಯದು, ಆದರೆ ತಪ್ಪು ರೀತಿಯಲ್ಲಿ ದಾನ ಮಾಡುವುದು ಅಪಾಯಕಾರಿ. ಚಾಣಕ್ಯನ ಪ್ರಕಾರ, ಯಾವಾಗ ದಾನ ಮಾಡಬೇಕು, ಯಾವಾಗ ಮಾಡಬಾರದು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಈ ಏಳು ಅಂಶಗಳನ್ನು ದಾನಕ್ಕೆ ಮೊದಲು ತಿಳಿದುಕೊಂಡಿರಲೇಬೇಕು.
ದಾನ ಮಾಡುವುದು ಯಾವತ್ತಾದರೂ ನಿಮಗೆ ಮರಳಿ ಒಳ್ಳೆಯ ಫಲ ನೀಡುವ ಸ್ವಭಾವ. ಅಸ್ತಿಕರು, ದೇವರ ಮೇಲೆ ಭಕ್ತಿ ಹೊಂದಿರುವವರು, ಸಾತ್ವಿಕ ಸ್ವಭಾವದವರು, ಬಡಬಗ್ಗರ ಮೇಲೆ ಕರುಣೆ ಹೊಂದಿರುವವರು, ಜೊತೆಗೆ ಸುಕರ್ಮಫಲವನ್ನು ಅಪೇಕ್ಷಿಸುವವರು ಕೂಡ ದಾನ ಮಾಡುತ್ತಾರೆ. ಆದರೆ ಕೆಲವರು ಅತಿಯಾಗಿ, ಕೆಲವರು ಅಪಾತ್ರರಿಗೆ ದಾನ ಮಾಡಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಆಚಾರ್ಯ ಚಾಣಕ್ಯ ವಿವರಿಸುವ ಹಾಗೆ ದಾನ ಮಾಡುವಲ್ಲಿಯೂ ವಿವೇಚನೆ ಇರಬೇಕು. ತಪ್ಪಾಗಿ ಮಾಡುವ ದಾನ ನಿಮ್ಮನ್ನು ಬಡವರನ್ನಾಗಿ ಮಾಡಬಹುದು. ಆದ್ದರಿಂದ, ಯಾವಾಗ ದಾನ ಮಾಡಬೇಕು, ಯಾವಾಗ ಮಾಡಬಾರದು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಚಾಣಕ್ಯ ಈ ಕುರಿತು ಹೇಳುವ ಮಾತುಗಳು ಹೀಗಿವೆ.
1) ಕೈ ಖಾಲಿ ಮಾಡಬಾರದು: ಆಚಾರ್ಯ ಚಾಣಕ್ಯರ ಪ್ರಕಾರ, ತಮ್ಮಲ್ಲಿ ಇರುವುದನ್ನೆಲ್ಲಾ ದಾನ ಮಾಡುವ ಸಾತ್ವಿಕ ಸ್ವಭಾವದವರು ಯಾವಾಗಲೂ ಹಣಕಾಸಿನ ತೊಂದರೆಯಲ್ಲಿರುತ್ತಾರೆ. ದಾನ ಮಾಡುವವನು ಶ್ರೀಮಂತನಾಗುತ್ತಾನೆ ಎನ್ನುವ ನಂಬಿಕೆ ಹಲವರಲ್ಲಿದೆ. ಹೀಗಾಗಿ ದಾನ ಮಾಡುವ ಸಮಯದಲ್ಲಿ ಅವರು ತಮ್ಮ ಪಾಕೆಟ್‌ನಲ್ಲಿ ಇದೆಯೇ ಇಲ್ಲವೇ ಎಂಬುದರ ಬಗ್ಗೆಯೂ ಸಹ ಕಾಳಜಿ ವಹಿಸುವುದಿಲ್ಲ. ಇವರು ಅಪಾಯಕ್ಕೆ ಸಿಲುಕುತ್ತಾರೆ.
2) ಅಪಾತ್ರ ದಾನ ಮಾಡಬಾರದು: ಅಪಾತ್ರರು ಎಂದರೆ ಯೋಗ್ಯರಲ್ಲದವರು. ದನ ಸಾಕಲು ಶಕ್ತಿ ಇಲ್ಲದವನಿಗೆ ದನವನ್ನು ದಾನ ಮಾಡಿದರೆ ಅದು ಬದುಕುತ್ತದೆಯೇ? ಉಳಿಸಿಕೊಳ್ಳಲಾಗದವನಿಗೆ ಕೋಟಿ ರೂಪಾಯಿ ಕೊಟ್ಟರೂ ಉಳಿಸಿಕೊಳ್ಳಲಾರ. ಹೀಗಾಗಿ ಪಾತ್ರರನ್ನು ಗುರುತಿಸಿ ದಾನ ಮಾಡಬೇಕು.
3) ಕೃತಘ್ನರಿಗೆ ದಾನ ಮಾಡಬಾರದು: ಕೃತಘ್ನರು ಎಂದರೆ ಉಪಕಾರ ಸ್ಮರಣೆ ಮಾಡದವರು. ನಿಮ್ಮಿಂದ ದಾನ ತೆಗೆದುಕೊಂಡರೂ ಅದನ್ನು ಯಾವತ್ತೂ ಸ್ಮರಿಸದವರು, ನಿಮ್ಮ ಉಪಕಾರವನ್ನು ಮರೆಯುವವರು, ನಿಮಗೆ ಒಳ್ಳೆಯದನ್ನು ಬಯಸದವರು, ನಿಮಗೆ ಕೇಡನ್ನು ಬಯಸುವವರು- ಇಂಥವರಿಗೆ ದಾನ ಮಾಡಿದರೆ ನಿಮಗೆ ನೀವೇ ಊಟದಲ್ಲಿ ವಿಷ ಹಾಕಿಕೊಂಡಂತೆ.
4) ಅತಿಯಾದ ದಾನ: ಚಾಣಕ್ಯರ ಪ್ರಕಾರ, ಅತಿಯಾದ ದಾನದಿಂದ ರಾಜರೂ ಬಡವರಾದ ಅನೇಕ ಉದಾಹರಣೆಗಳು ಇತಿಹಾಸದಲ್ಲಿ ಕಂಡುಬರುತ್ತವೆ. ಹರಿಶ್ಚಂದ್ರನ ಕತೆಯನ್ನೇ ನೋಡಬಹುದು. ಅಂತಹ ಜನರು ತೀವ್ರ ಸಂಕಷ್ಟದಲ್ಲಿದ್ದಾಗ ಅವರಿಗೆ ಸಹಾಯ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಹಾಗಾಗಿ, ಅತಿಯಾಗಿ ದಾನ ಮಾಡಲು ಹೋಗದಿರಿ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.
5) ಮೂರ್ಖತನದಿಂದ ಮಾಡುವ ದಾನ: ಆಚಾರ್ಯ ಚಾಣಕ್ಯರ ಪ್ರಕಾರ, ಜನರು ತಮ್ಮ ಹಣಕಾಸಿ ವ್ಯವಸ್ಥೆಗಳನ್ನು ನೋಡಿದ ನಂತರವೇ ದಾನ ಮಾಡಬೇಕು. ಮೂರ್ಖತನದಿಂದ ಮಾಡಿದ ಅತಿಯಾದ ದಾನವು ತೊಂದರೆಗೆ ಕಾರಣವಾಗುತ್ತದೆ. ಮೂರ್ಖತನದಿಂದ ಮಾಡಿದ ದಾನವು ಒಂದಲ್ಲ ಒಂದು ದಿನ ಅವರಿಗೆ ಹಣದ ಸಮಸ್ಯೆಗಳನ್ನುಂಟು ಮಾಡುತ್ತದೆ. ದಾನ ಮಾಡುವ ಮುನ್ನ ಮೂರ್ಖತನವನ್ನು ಬಿಟ್ಟು ಸರಿಯಾಗಿ ಯೋಚಿಸಿ ನಂತರವೇ ದಾನ ಮಾಡಬೇಕು.
ಈ ನಕ್ಷತ್ರದಲ್ಲಿ ಜನಿಸಿದ ಹೆಣ್ಣುಮಕ್ಕಳು ತಮ್ಮ ಗಂಡನನ್ನು 'ಕಿಂಗ್' ಮಾಡ್ತಾರೆ!
6) ಪ್ರದರ್ಶನದ ದಾನ: ಕೇವಲ ಪ್ರದರ್ಶನಕ್ಕಾಗಿ ದಾನ ಮಾಡುವವರಿಗೆ ದಾನದ ಪುಣ್ಯವು ಸೇರುವುದಿಲ್ಲ ಮತ್ತು ಅವರು ಬಡತನವನ್ನೂ ಎದುರಿಸಬೇಕಾಗಬಹುದು. ಎಷ್ಟೋ ಸಲ ಇಂತಹವರು ತಮ್ಮ ಹಣದ ಕೊರತೆಯನ್ನು ತೋರಿಸಿಕೊಳ್ಳಲು ಒಪ್ಪದೇ ನಮ್ಮಲ್ಲಿದ್ದ ಅಲ್ಪ ಸ್ವಲ್ಪ ಹಣವನ್ನೂ ದಾನ ಮಾಡುತ್ತಾರೆ ಹಾಗೂ ಇನ್ನಿತರ ವಿಚಾರಕ್ಕಾಗಿ ತುಂಬಾ ಹಣ ಖರ್ಚು ಮಾಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಅವರು ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ.
7) ಧಾರ್ಮಿಕ ಹಿನ್ನೆಲೆ ಇರಲಿ: ದಾನ ಮಾಡುವಾಗ ಎಚ್ಚರ ಚಾಣಕ್ಯನ ಪ್ರಕಾರ ದೇವಾಲಯಕ್ಕೆ ಭೇಟಿ ನೀಡಿ ದಕ್ಷಿಣೆ ನೀಡುವುದರಿಂದ ದೇವರ ಆಶೀರ್ವಾದ ಪ್ರಾಪ್ತಿಯಾಗುತ್ತದೆ. ಸೋಮವಾರ ಶಿವ, ಶನಿವಾರ ಶನಿ, ಗುರುವಾರ ರಾಯರ ಮಠ, ಶುಕ್ರವಾರ ಆಂಜನೇಯ, ಮಂಗಳವಾರ ಮಹಾವಿಷ್ಣು, ಬುಧವಾರ ಕಾಲಭೈರವ, ಭಾನುವಾರ ದೇವಿ ದೇವಾಲಯಗಳ ಮುಂದೆ ದಾನ ನೀಡಬಹುದು.
