ಈ ಕಲರ್ ಪರ್ಸ್ ಇಟ್ಕೊಂಡ್ರೆ ದುಡ್ಡು ನಿಲ್ಲೋಲ್ಲ!

First Published 24, Jul 2018, 4:17 PM IST
Must have coloured wallets
Highlights

ಎಷ್ಟೇ ಸಂಬಳ ಬಂದರೂ ದುಡ್ಡು ಕೈಯಲ್ಲಿ ನಿಲ್ಲೋದೇ ಇಲ್ಲ. ತಿಂಗಳು ಕಳೆಯುವುದರಲ್ಲಿ ಜೇಬು ಖಾಲಿಯಾಗಿರುತ್ತೆ ಎನ್ನುವುದು ಹಲವರ ನೋವು. ನಿಮ್ಮ ಆರ್ಥಿಕ ಸ್ಥಿತಿಗತಿಗೆ ನೀವು ಉಪಯೋಗಿಸುವ ಪರ್ಸ್ ಕೂಡ ಕಾರಣ. ಅದರಲ್ಲೂ ನಿಮ್ಮ ಪರ್ಸ್ ಕಲರ್ ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ, ಎನ್ನುತ್ತದೆ ಚೀನಾದ ಫೆಂಗ್ ಶೂಯಿ ಪದ್ದತಿ. ಪರ್ಸ್ ಖರೀದಿಸುವಾಗಲೇ ಫೆಂಗ್ ಶೂಯಿ ನಿಯಮಗಳನ್ನ ಪಾಲಿಸಿದ್ರೆ  ಅದೃಷ್ಟ ಖುಲಾಯಿಸಬಹುದು, ಹಾಗಿದ್ದರೆ ಯಾವ ಬಣ್ಣದ ಪರ್ಸ್ ಬಳ್ಳೆಯದು?

  • ಪರ್ಸ್ ನ ಬಣ್ಣವೇ ನಿಮ್ಮ ಜೇಬಲ್ಲಿ ಹಣ ಉಳಿಯುತ್ತಾ, ಇಲ್ಲ ಎಂದು ನಿರ್ಧರಿಸುತ್ತೆ.
  • ಫೆಂಗ್ ಶೂಯಿ ಪ್ರಕಾರ ಬಂಗಾರದ ಬಣ್ಣ, ಹಳದಿ. ಗುಲಾಬಿ, ಬಿಳಿ ಮತ್ತು ಕಪ್ಪು ಬಣ್ಣದ ಕೊಳ್ಳುವುದು ಸೂಕ್ತ.
  • ಬಂಗಾರದ ಬಣ್ಣದ ಪರ್ಸ್ ಹೊಂದಿರುವವರುವರಿಗೆ ಧನಲಕ್ಷ್ಮಿ ಒಲಿಯುತ್ತಾಳೆ.
  • ಮಹಿಳೆಯರು ಗುಲಾಬಿ ಬಣ್ಣದ ಪರ್ಸ್ ಇಟ್ಕೊಂಡರೆ ದುಡ್ಡು ಕೈ ಸೇರುತ್ತೆ. 
  • ಹಳದಿ ಕಲರ್ ಪರ್ಸ್‌ನಿಂದ ಹೆಚ್ಚು ಆದಾಯದ ಜೊತೆ ಅದೃಷ್ಟವೂ ಖುಲಾಯಿಸುತ್ತೆ.
  • ಖರ್ಚು ಹೆಚ್ಚಾದರೆ, ಕಪ್ಪು ಬಣ್ಣದ ಪರ್ಸ್ ಬಳಸಿ. 
  • ಯಾವುದೇ ಕಾರಣಕ್ಕೂ ಕೆಂಪು ಮತ್ತು ನೀಲಿ ಬಣ್ಣದ ಪರ್ಸ್ ಬಳಸಬೇಡಿ.
  • ಕೆಂಪು ಅಗ್ನಿಯ ದಿಕ್ಕಿನ ಬಣ್ಣವಾಗಿದ್ದು, ಆದಾಯವು ಬೆಂಕಿಯಲ್ಲಿ ಸುಟ್ಟಂತೆ ಕರಗಿ ಬಿಡುತ್ತದೆ. 
  • ಇನ್ನು ನೀಲಿ ನೀರಿನ ಸಂಕೇತ. ಇದೂ ನೀರಿನಷ್ಟೇ ಡೇಂಜರಸ್. ಎಷ್ಟೇ ಹಣ ಸಂಪಾದಿಸಿದರೂ ನೀರಿನಲ್ಲಿ ಹರಿದು ಹೋಗುವಂತೆ ಕೊಚ್ಚಿ ಹೋಗುತ್ತದೆ.
loader