ನಿಮ್ಮ ಅಮ್ಮ ಯಾವ ರಾಶಿ ಎನ್ನುವುದರ ಮೇಲೆ ಅವರು ಯಾವ ರೀತಿಯ ಅಮ್ಮ ಎನ್ನುವುದನ್ನು ಹೇಳಬಹುದು. ಅವರವರ ರಾಶಿಗಳ ಮೇಲೆ ಅಮ್ಮನ ಸ್ವಭಾವ ಗುರುತಿಸಬಹುದು. 

ಪ್ರತಿಯೊಬ್ಬ ಅಮ್ಮ (Mother) ಮಕ್ಕಳಿಗೆ ಒಳಿತಾಗುವ ಕನಸನ್ನೇ ಕಾಣುತ್ತಾಳೆ. ಪ್ರತಿ ಮಹಿಳೆಯರು ವಿಭಿನ್ನವಾಗಿದ್ದರೂ ಅಮ್ಮನಾದಾಗ ಎಲ್ಲರೂ ಒಂದೇ. ಆದರೂ ಅಮ್ಮಂದಿರಲ್ಲಿ ವ್ಯತ್ಯಾಸವಿರುತ್ತದೆ. ಕೆಲವು ಅಮ್ಮಂದಿರು ಮಕ್ಕಳಿಗೆ (Children) ಸಾಕಷ್ಟು ಸ್ವಾತಂತ್ರ್ಯ ನೀಡಿದರೆ, ಕೆಲವರು ಅತಿಯಾಗಿ ಮುದ್ದು ಮಾಡುತ್ತಾರೆ. ಕೆಲವರು ಮಕ್ಕಳಿಗೆ ಆಶಾವಾದ ತುಂಬಿದರೆ, ಕೆಲವರು ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಇದೆಲ್ಲ ಅವರವರ ಸ್ವಭಾವ. ಆದರೆ, ಈ ಸ್ವಭಾವ ರೂಪುಗೊಳ್ಳುವುದು ಅವರ ರಾಶಿಗಳ (Zodiac Sign) ಆಧಾರದ ಮೇಲೆ. 

• ಮೇಷ (Aries)
ಮೇಷ ರಾಶಿಗಳ ಅಮ್ಮಂದಿರು ತಮಗೆ ಅಗತ್ಯವಿರುವಾಗ ಮಕ್ಕಳ ಸಹಾಯ ಕೇಳಲು ಯಾವುದೇ ಹಿಂಜರಿಕೆ ಹೊಂದಿರುವುದಿಲ್ಲ. ಸಣ್ಣದೊಂದು ಸಹಾಯದಿಂದ ಹಲವು ಸಾಧ್ಯತೆಗಳಿರುವುದನ್ನು ಮೇಷ ರಾಶಿಗಳ ಅರಿತಿರುತ್ತಾರೆ. ಅವರು ಕೆಲವೊಮ್ಮೆ ಸೋಮಾರಿ ಎನಿಸಬಹುದಾದರೂ ಸೋಮಾರಿಯಲ್ಲ. ಎಲ್ಲರೂ ಕೆಲಸದಲ್ಲಿ ಕೈಜೋಡಿಸಿದರೆ ಎಲ್ಲರಿಗೂ ಅನುಕೂಲ ಎಂಬುದು ಅವರ ಸಿದ್ಧಾಂತ. 

• ವೃಷಭ (Taurus)
ಮಕ್ಕಳ ಆಹಾರದ ಬಗ್ಗೆ ಹೆಚ್ಚು ಗಮನ ನೀಡುವ ತಾಯಂದಿರೆಂದರೆ ವೃಷಭ ರಾಶಿಯವರು. ದೈನಂದಿನ ಊಟದ ಸಮಯ, ಊಟದ ಪದ್ಧತಿಗೆ ಭಾರೀ ನಿಷ್ಠರಾಗಿರುತ್ತಾರೆ. ಮಕ್ಕಳಿಗೂ ಹಾಗೆಯೇ ಇರುವಂತೆ ಹೇಳುತ್ತಿರುತ್ತಾರೆ. ಕುಟುಂಬದೊಂದಿಗೆ ವಿನೋದದ ಸಮಯ ಕಳೆಯಲು ಇಷ್ಟಪಡುತ್ತಾರೆ. ತಮ್ಮ ಎಷ್ಟೇ ಕೆಲಸಕಾರ್ಯದ ನಡುವೆಯೂ ಮಕ್ಕಳಿಗೆ ಸಮಯ ನೀಡುತ್ತಾರೆ. ಈ ವಿಚಾರದಲ್ಲಿ ಅವರು ನಿಜಕ್ಕೂ ಗ್ರೇಟ್.

• ಮಿಥುನ (Jemini)
ಈ ರಾಶಿಯ ಅಮ್ಮಂದಿರು ಸಕಾರಾತ್ಮಕತೆ ಹೊಂದಿರುತ್ತಾರೆ. ಇವರು ನೈಸರ್ಗಿಕವಾಗಿಯೇ ಚಾಂಪಿಯನ್‌ ಗುಣ ಹೊಂದಿದ್ದು, ಎಲ್ಲವನ್ನೂ ನಿಭಾಯಿಸಬಲ್ಲರು. ಆರೈಕೆ ಮಾಡುವ ಗುಣದಿಂದಾಗಿ ಯಶಸ್ವಿ ಮಕ್ಕಳನ್ನು ರೂಪಿಸುತ್ತಾರೆ. ಇಬ್ಬರೇ ಮಕ್ಕಳಿದ್ದರೂ ಸರಿ, ಇನ್ನೂರು ಮಕ್ಕಳ ಜವಾಬ್ದಾರಿ ಕೊಟ್ಟರೂ ಸರಿ, ಇವರು ಅದನ್ನು ಸಾಧಿಸುತ್ತಾರೆ. ಕೆಲವೊಮ್ಮೆ ಇವರ ವಿಚಾರಗಳು ಚೆದುರಿದಂತೆ ತೋರಿದರೂ ಮಕ್ಕಳನ್ನು ಖುಷಿಯಾಗಿಡುವಲ್ಲಿ ಯಶಸ್ವಿಯಾಗುತ್ತಾರೆ. 

• ಕರ್ಕಾಟಕ (Cancer)
ತಮ್ಮ ನೈತಿಕತೆಯಿಂದ ಮಕ್ಕಳಲ್ಲಿ ಸ್ಫೂರ್ತಿ ತುಂಬುತ್ತಾರೆ. ಮಕ್ಕಳ ಖುಷಿ, ಏಳಿಗೆ, ಆರೋಗ್ಯದ ಬಗ್ಗೆ ತಮ್ಮನ್ನೇ ಅರ್ಪಿಸಿಕೊಳ್ಳುತ್ತಾರೆ. ಈ ಬಗ್ಗೆ ಸದಾಕಾಲ ಆತಂಕ ಪಡುತ್ತಾರೆ. ಬದುಕಿನ ಯಾವುದೇ ಹಂತದಲ್ಲಿ ಮಕ್ಕಳಿಗೆ ಬೆಂಬಲವಾಗಿ ನಿಲ್ಲುತ್ತಾರೆ.|

• ಸಿಂಹ (Leo)
ಮಕ್ಕಳಿಗಾಗಿ ಎಲ್ಲವನ್ನೂ ಮಾಡಲು ಇಷ್ಟಪಡುವ ಅಮ್ಮಂದಿರು ಇವರು. ಅಡುಗೆ ಸೇರಿದಂತೆ ಮಕ್ಕಳಿಗೆ ಇಷ್ಟವಾಗುವ ಎಲ್ಲವನ್ನೂ ಮಾಡುತ್ತಾರೆ. ಮಕ್ಕಳು ಖುಷಿಯಾಗಿರುವಂತೆ ನೋಡಿಕೊಳ್ಳುತ್ತಾರೆ. ಕೆಲವೊಮ್ಮೆ ಈ ಅಮ್ಮಂದಿರು ಡಾಮಿನೇಟ್‌ ಮಾಡುತ್ತಾರೆ. 

• ಕನ್ಯಾ (Vigro)
ಕುಟುಂಬದೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತಾರೆ. ಮಕ್ಕಳ ಕಾಳಜಿಯ ಬಗ್ಗೆ ಅತಿಯಾದ ಬದ್ಧತೆ ಹೊಂದಿರುತ್ತಾರೆ. ಮಕ್ಕಳಿಂದ ಹೆಚ್ಚಿನದನ್ನೇನೂ ನಿರೀಕ್ಷೆ ಮಾಡದ ನಿಸ್ವಾರ್ಥಿಯಾಗಿರುತ್ತಾರೆ. ಆದರೆ, ಅವರಿಂದ ಶಿಸ್ತನ್ನು ನಿರೀಕ್ಷೆ ಮಾಡುತ್ತಾರೆ. ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು, ಇದರಿಂದ ಅವರ ಭವಿಷ್ಯಕ್ಕೆ ಒಳ್ಳೆಯದು ಎನ್ನುವುದು ಇವರ ಧೋರಣೆ.

ಯಾರು ಈ Laughing Buddha? ಮನೆಯಲ್ಲಿಡುವ ಲಾಭಗಳೇನು?

• ತುಲಾ (Libra)
ಮಕ್ಕಳ ನಡುವೆ ಆರೋಗ್ಯಪೂರ್ಣ ಸ್ಪರ್ಧೆಯನ್ನು ಉತ್ತೇಜಿಸುತ್ತಾರೆ. ಖುಷಿಯಾಗಿರುತ್ತಾರೆ, ಕರುಣೆ ಹೊಂದಿರುತ್ತಾರೆ. ಮಕ್ಕಳಿಗೂ ಈ ಗುಣ ಕಲಿಸುತ್ತಾರೆ.

• ವೃಶ್ಚಿಕ (Scorpio)
ಈ ಅಮ್ಮಂದಿರಿಗೆ ಕುಟುಂಬದೊಂದಿಗೆ ವಿರಾಮ, ವಿನೋದದ ಸಮಯದಲ್ಲಿ ಇರುವುದೆಂದರೆ ಭಾರೀ ಇಷ್ಟ. ಸದಾಕಾಲ ಹಸನ್ಮುಖಿಯಾಗಿದ್ದು, ಆಟೋಟ, ಸಂಗೀತಗಳಲ್ಲಿ ಕಾಲ ಕಳೆಯುತ್ತಾರೆ. ಮಕ್ಕಳಿಗೆ ಯಾವುದೇ ಮಿತಿ ಹೇರದೆ, ಉತ್ತೇಜನ ನೀಡುತ್ತಾರೆ.

• ಧನು (Sagittarius)
ಮಕ್ಕಳನ್ನು ನಂಬುವ ತಾಯಂದಿರು ಇವರು. ಸರಿತಪ್ಪುಗಳ ಖಚಿತ ನಿಲುವು ಹೊಂದಿರುವ ಈ ಅಮ್ಮಂದಿರು ಮಕ್ಕಳು ಸರಿಯಾದುದನ್ನೇ ಮಾಡಬೇಕು ಎನ್ನುವ ಗುಣ ಹೊಂದಿರುತ್ತಾರೆ. ಸದಾಕಾಲ ಅವರು ಒಳ್ಳೆಯವರಾಗಿಯೇ ಇರಬೇಕು ಎನ್ನುತ್ತಾರೆ. ಮಕ್ಕಳು ತಮ್ಮ ತಪ್ಪುಗಳಿಂದ ಪಾಠ ಕಲಿತುಕೊಳ್ಳಬೇಕು ಎಂದು ಆಶಿಸುತ್ತಾರೆ.

• ಮಕರ (Capricorn)
ಈ ರಾಶಿಯ ಅಮ್ಮಂದಿರು ಮೇಲ್ನೋಟಕ್ಕೆ ಮಕ್ಕಳ ಕುರಿತು ಅಷ್ಟೇನೂ ಭಾವನಾತ್ಮಕ ಬಾಂಧವ್ಯ ಹೊಂದಿಲ್ಲದಂತೆ ಕಂಡರೂ ಹಾಗೆ ಇರುವುದಿಲ್ಲ. ಇವರು ಸಾಕಷ್ಟು ವಿಶ್ವಾಸಾರ್ಹ ಅಮ್ಮಂದಿರು. 

ತಾವು ಹೇಳಿದ್ದೇ ಆಗಬೇಕೆನ್ನೋ ನಾಲ್ಕು ರಾಶಿಗಳಿವು..

• ಕುಂಭ (Aquarius)
ಮಕ್ಕಳು ಯಾವುದೇ ನಿರ್ಧಾರ ತೆಗೆದುಕೊಂಡರೂ ಪ್ರೀತಿಸುವ ತಾಯಂದಿರು ಇವರು. ಮಿತಿಯಿಲ್ಲದ ಪ್ರೀತಿ ಕೊಡುತ್ತಾರೆ. ಮಕ್ಕಳಿಗೆ ಎಣೆಯಿಲ್ಲದ ಪ್ರೀತಿ ನೀಡಲು ಇವರಿಗೆ ಮಾತ್ರ ಸಾಧ್ಯ. ಅಪಾರ ಬೆಂಬಲ ನೀಡುತ್ತಾರೆ.

• ಮೀನ (Pisces)
ಮಕ್ಕಳಿಗಾಗಿ ಏನನ್ನಾದರೂ ಮಾಡಬಲ್ಲ ತಾಯಂದಿರು ಇವರು. ಕೇರಿಂಗ್‌ ಮಾಡುವ, ಗಮನ ನೀಡುವ ಗುಣ ಹೊಂದಿರುತ್ತಾರೆ. ಮಕ್ಕಳಲ್ಲಿ ಸೆಕ್ಯೂರ್ಡ್‌ ಭಾವನೆ ಮೂಡಿಸುತ್ತಾರೆ.