'ಬುಧ ಕಾಡಿ ಬದುಕಿದವರಿಲ್ಲ ಶನಿ ಕಾಡಿ ಸಾಯದವರಿಲ್ಲ' ಎಂಬೊಂದು ಗಾದೆ ಇದೆ. ಶನಿ ಕಾಡಲು ಶುರು ಮಾಡಿದರೆ ಸಾಕ್ಷಾತ್ ಚತುರ್ಮುಖ ಬ್ರಹ್ಮಾನೇ ಬಂದ್ರೂ ಬಿಡಿಸಲು ಸಾಧ್ಯವಿಲ್ಲ. ಯಾಕೆ ಶನಿ ಅಂದ್ರೆ ಅಷ್ಟು ಭಯ..? 

ಶನಿ ಒಳ್ಳೆ ಫಲಗಳನ್ನ ಕೊಡೋದೇ ಇಲ್ವಾ..? ಶನಿ ಕಾಟ, ಶನಿ ಪೀಡೆ ಅಂತೆಲ್ಲ ಜನ ಈ ಶನಿಗ್ರಹವನ್ನ ದೂಷಿಸೋದು ಯಾಕೆ..? 

ಯಾರು ಈ ಶನಿ..? 
ಶನಿ ಒಂದು ತಾಮಸ ಗ್ರಹ. ಸೂರ್ಯ ಹಾಗೂ ಛಾಯಾದೇವಿಯರಿಗೆ ಹುಟ್ಟಿದ ಮಗುವೇ ಈ ಶನಿ. ಸೂರ್ಯ ಒಂದು ದಿನ ಇದ್ದಕ್ಕಿದ್ದ ಹಾಗೆಯೇ ಛಾಯಾಳನ್ನ ಬಿಟ್ಟು ಮೊದಲ ಮಡದಿ ಸಂಜ್ಞಾದೇವಿಯನ್ನ ಹುಡುಕಿ ಹೊರಟುಬಿಟ್ಟ. . ತನ್ನ ತಾಯಿಯನ್ನು ಬಿಟ್ಟು ಹೋದನಲ್ಲ ಇವನೊಬ್ಬ ಗಂಡನಾ  ಅಂತನ್ನಿಸಿ ಶನಿ ತಂದೆಯ ಮೇಲೆ ಕೋಪಿಸಿಕೊಂಡ. ಹಾಗಾಗಿ ತಂದೆ-ಮಗನಿಗೆ ದ್ವೇಷ, ಶತ್ರುತ್ವ. ಆ ಕಥೆ ದೊಡ್ಡದು ಸದ್ಯಕ್ಕೆ ಇಷ್ಟು ಅರ್ಥ ಮಾಡಿಕೊಳ್ಳೋಣ. ತಂದೆ-ಮಕ್ಕಳಿಗೆ ಮಹಾ ದ್ವೇಷ

ಶನಿಯಿಂದಾಗಿ ಗಂಡ-ಹೆಂಡಿರಲ್ಲೂ ಶತ್ರುತ್ವ..!
ಹೌದು. ಅದಕ್ಕೆ ಕಾರಣವೇ ತಂದೆ-ಮಕ್ಕಳ ಶತ್ರುತ್ವ. ಶನಿ ಹಾಗೂ ಸೂರ್ಯರು ತಂದೆ ಮಕ್ಕಳೇ ಆದ್ರೂ ಅವರಿಬ್ರೂ ಶತ್ರುಗಳು. ಹಾಗಾಗಿಯೇ ಸಿಂಹ ರಾಶಿಯವರಿಗೂ ಮಕರ- ಕುಂಭ ರಾಶಿಯವರಿಗೂ ಅಷ್ಟಕ್ಕಷ್ಟೇ. ಮಕರ - ಕುಂಭಗಳಿಗೆ ಶನಿ ಅಧಿಪತಿ. ಸಿಂಹ ರಾಶಿಗೆ ಸೂರ್ಯ ಅಧಿಪತಿ ಹೀಗಾಗಿ ಈ ರಾಶಿಯವರು ಪರಸ್ಪರ ವಿವಾಹವಾದರೆ ಅವರಲ್ಲಿ ಸ್ನೇಹ ಭಾವ ಇರೋದಿಲ್ಲ. ಅಕಸ್ಮಾತ್ ಸಿಂಹ ರಾಶಿಯವರು ಮಕರ-ಕುಂಭರಾಶಿಯವರನ್ನೇನಾದ್ರೂ ಮದುವೆಯಾಗಿಬಿಟ್ರೆ ಕಥೆ ಮುಗೀತು ಅಂತಲೇ ಅರ್ಥ. ಗಂಡ-ಹೆಂಡಿರು ಜೀವನದಲ್ಲಿ ನೆಮ್ಮದಿಯಾಗಿರೋದಕ್ಕೆ ಸಾಧ್ಯವೇ ಇಲ್ಲ.

ಮಂತ್ರ ಜಪದಿಂದೇನು ಪ್ರಯೋಜನ

ಶನಿ ಅಂದ್ರೆ ಹೆದರಿಕೆ ಯಾಕೆ..?

ಯಾಕಂದ್ರೆ ವಿಕ್ರಮಾದಿತ್ಯನ ಕಥೆ ಅಂಥ ಭಯಂಕರ ಭಯವನ್ನ ಹುಟ್ಟಿಸಿದೆ. ಚಕ್ರವರ್ತಿಯಾಗಿದ್ದ ವಿಕ್ರಮಾದಿತ್ಯ ಏನಿಲ್ಲದ ಭಿಕಾರಿಯಾಗಿಬಿಟ್ಟ. ಪರ ರಾಜ್ಯದಲ್ಲಿ ತಿರುಕನಾದ, ಅವನ ಕೈ-ಕಾಲುಗಳನ್ನ ಕಡಿದರು, ತಿನ್ನಲು ಅನ್ನವಿಲ್ಲ, ಕುಡಿಯಲು ನೀರಿಲ್ಲ, ಜನ ನಿಂದೆ ಹೀಗೆ ಪಡಬಾರದ ಕಷ್ಟ ಪಟ್ಟ. 

ಶನಿಕಾಟಕ್ಕೆ ನರಳಿದ ಮತ್ತೊಬ್ಬ ಚಕ್ರವರ್ತಿ ನಳ. ನಳ ದಮಯಂತಿಯರ ಕಥೆ  ನಿಮಗೆ ಗೊತ್ತೇ ಇದೆ. ಉಡಲು ತುಂಡು ಬಟ್ಟೆಯೂ ಇಲ್ಲ ಪರಿಸ್ಥಿತಿಯನ್ನ ತಂದೊಡ್ಡಿದ ಶನಿ. ಹೀಗಾಗಿ ಶನಿ ಅಂದ್ರೆ ಜನರಿಗೆ ಭಯಂಕರ ಭಯ.
ಆ ಗ್ರಹದ ಸ್ವಭಾವವೇ ಹಾಗಿದೆ. ಶನಿ ಉಗ್ರ ಗ್ರಹ, ತಾಮಸ ಸ್ವಭಾವದವನು. ಕಷ್ಟಗಳ ಸುರಿಮಳೆಯನ್ನೇ ತಂದೊಡ್ಡುತ್ತಾನೆ ಹಾಗಾಗಿ ಶನಿ ಅಂದ್ರೆ ಭಯ, ಅವನ ದಶಾ ಕಾಲದಲ್ಲಿ ನಿರ್ಗತಿಕರನ್ನಾಗಿ ಮಾಡಿಬಿಡ್ತಾನೆ, ಪಾಪ ಕರ್ಮಗಳನ್ನ ಮಾಡಿಸುತ್ತಾನೆ, ತಿರುಕರನ್ನಾಗಿ ಮಾಡಿಬಿಡ್ತಾನೆ ಎನ್ನುತ್ತಾರೆ. 

ಇತರೆ ಗ್ರಹಗಳು ಒಂದು ರಾಶಿಯನ್ನ ಪ್ರವೇಶಿಸಿದರೆ ಆ ರಾಶಿಯನ್ನಷ್ಟೇ ಆಳುತ್ತವೆ. ಆದ್ರೆ ಶನಿ ಒಂದು ರಾಶಿ ಪ್ರವೇಶ ಮಾಡಿದರೆ ತನ್ನ ಹಿಂದಿನ ರಾಶಿ ಹಾಗೂ ಮುಂದಿನ ರಾಶಿ ಎರಡೂ ರಾಶಿಯವರನ್ನೂ ಆಳುತ್ತಾನೆ, ನರಳಿಸುತ್ತಾನೆ. ಹೀಗಾಗಿ ಶನಿ ವಿಶೇಷ ಗ್ರಹ ಅಂತ ಕರೆಸಿಕೊಂಡಿದೆ. 

ಪ್ರಸ್ತುತ ಶನಿ ಗ್ರಹ ಧನಸ್ಸು ರಾಶಿಯಲ್ಲಿರುವ ಕಾರಣ ಅದರ ಹಿಂದಿನ ರಾಶಿಯಾದ ವೃಶ್ಚಿಕ ಹಾಗೂ ಮುಂದಿನ ರಾಶಿಯಾದ ಮಕರ ಹೀಗೆ ಮೂರೂ ರಾಶಿಗಳನ್ನ ಆಳುತ್ತಿದ್ದಾನೆ. ಆ ಮೂರೂ ರಾಶಿಯವರಿಗೆ ಶನಿ ತನ್ನ ಪ್ರಭಾವವನ್ನ ತೋರಿಸುತ್ತಿದ್ದಾನೆ. 

ತ್ರಿ ಮೂರ್ತಿಗಳಿಗೆ ನಗ್ನಳಾಗಿಯೇ ಬಡಿಸಲು ಬಂದಳಾ ಅನಸೂಯಾ?

ಶನಿ ಕಾಟದಿಂದ ಮಕ್ತರಾಗೋದು ಹೇಗೆ?
ಕೆಲವರಂತೂ ಈ ಶನಿಕಾಟದಿಂದಾಗಿ ಮನೆ-ಮಠ ಮಾರಿ ಬೀದಿಗೆ ಬಂದದ್ದೂ ಇದೆ. ಇದೆಲ್ಲ ಸಾಡೇಸಾತ್ ಪ್ರಭಾವ. ಇಂಥ ಶನಿ ಕಾಟದಿಂದ ಮುಕ್ತರಾಗಬೇಕಿದ್ದರೆ ನೀವು ಮಾಡಬೇಕಾದದ್ದೇನು..?

ಶನಿವಾರದ ದಿನ ಶುಚಿರ್ಭೂತರಾಗಿ ಶನೈಶ್ಚರ ದೇವಸ್ಥಾನ ಅಥವ ಶಿವ ದೇವಸ್ಥಾನಕ್ಕೆ ಹೋಗಬೇಕು ಆ ದೇವಾಲಯದಲ್ಲಿ ಅಶ್ವತ್ಥ ವೃಕ್ಷವಿರಬೇಕು ಅಂಥ ಸನ್ನಿಧಿಗೆ ತೆರಳಿ 

ಓಂ ಕೋಣಸ್ಥಾಯ ನಮ:
 
ಓಂ ಕೃಷ್ಣಾಯ ನಮ:
 
ಓಂ ಯಮಾಯ ನಮ:

ಓಂ ರೌದ್ರಾಂತಕಾಯ ನಮ: 

ಓಂ ಪಿಂಗಳಾಯ ನಮ:

ಓಂ ಬಭ್ರುವೇ ನಮ:

ಓಂ ಶನೈಶ್ಚರಾಯ ನಮ:

ಓಂ ಸೌರಿಯೇ ನಮ:

ಓಂ ವಿಪ್ಲಾಶ್ರಯಾಯ ನಮ:

ಓಂ ಮಂದಾಯ ನಮ:


ಈ ನಾಮಗಳನ್ನು ಹೇಳುತ್ತಾ 9 ಪ್ರದಕ್ಷಿಣೆ ಮಾಡಬೇಕು. ಸಾಧ್ಯವಾದರೆ ನಿಮ್ಮ ತೂಕದ ಎಳ್ಳನ್ನು ದೇವಸ್ಥಾನಕ್ಕೆ ದಾನ ಮಾಡಿ. ಶಿವನಿಗೆ ರುದ್ರಾಭಿಷೇಕ ಮಾಡಿಸಿದರೂ ಶನಿಕಾಟದಿಂದ ಮುಕ್ತರಾಗುತ್ತೀರಿ.

ಅನಸೂಯಾ ವ್ರತ ಭಂಗಕ್ಕೆ ನಗ್ನ ಬೇಡಿಕೆ