ಶುಭ ಮುಂಜಾನೆ ಓದುಗರೇ, ಈ ದಿನದ ನಿಮ್ಮ ಭವಿಷ್ಯ ನೋಡಿಕೊಂಡು ಬಿಡಿ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 31, Jul 2018, 7:20 AM IST
July 31 horoscope
Highlights

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು.  ಇಂದು  ಕರ್ಕಟಕ ರಾಶಿಯಲ್ಲಿ  ಸೂರ್ಯ, ಬುಧ, ರಾಹುಗಳಿದ್ದು, ಶುಕ್ರನು  ಸಿಂಹರಾಶಿಲ್ಲಿದ್ದಾನೆ , ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ಕುಂಭ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  

ಮೇಷ ರಾಶಿ : ಇಂದು ನಿಮ್ಮ ಮನಸ್ಸಿನ ಮೇಲೆ ಸತ್ಪರಿಣಾಮ ಮೂಡಲಿದೆ, ಓದುವ ಆಸಕ್ತಿ ಹಾಗೂ ಸಜ್ಜನರ ಸಹವಾಸ ದೊರೆಯಲಿದೆ. ಉತ್ತಮ ಕಾರ್ಯಗಳು ಪ್ರಾರಂಭವಾಗಲಿವೆ. ಶುಭದಿನ.  

ದೋಷಪರಿಹಾರ : ಸುಬ್ರಹ್ಮಣ್ಯ ಸ್ವಾಮಿಯ ಪ್ರಾರ್ಥನೆ ಮಾಡಿ

ವೃಷಭ : ಆತ್ಮೀಯರೇ ಇಂದು ನಿಮ್ಮ ಉದ್ಯೋಗ ಸ್ಥಾನದಲ್ಲಿ ಸ್ತ್ರೀಯರಿಂದ ಅನುಕೂಲ, ವ್ಯಾಪಾರ ಕ್ಷಾತ್ರದಲ್ಲಿ ಸಹಾಯ, ಧನ ಲಾಭವನ್ನು ಕಾಣಬಹುದು. ನಿಮ್ಮ ಕಾಲಿನ ಭಾಗಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ. ಕೋರ್ಟು ಕಚೇರಿ ಕೆಲಸದಿಂದ ಮಾನಸಿಕ ಬೇಸರ

ದೋಷ ಪರಿಹಾರ : ದುರ್ಗಾ ದೇವಿಗೆ 5 ನಮಸ್ಕಾರ ಮಾಡಿ

ಮಿಥುನ : ಆತ್ಮೀಯರೇ ಇಂದು ನಿಮ್ಮ ಪಾಲಿಗೆ ಕೀರ್ತಿಯ ದಿನ, ಯಶಸ್ಸು ನಿಮ್ಮದಾಗಲಿದೆ. ಕಾರ್ಯ ಸಿದ್ಧಿಯೂ ಇದೆ. ಉತ್ತಮರ ಭೇಟಿ, ನಿಮ್ಮ ಗಂಟಲಿನ ಭಾಗದಲ್ಲಿ ಸ್ವಲ್ಪ ತೊಂದರೆಯಾಗುವ ಸಾಧ್ಯತೆ ಇದೆ. ನೀರಿನಲ್ಲಿ ವ್ಯತ್ಯಯವಾಗುತ್ತದೆ. 

ದೋಷ ಪರಿಹಾರ : ಲಕ್ಷ್ಮೀ ನಾರಾಯಣ ಹೃದಯ ಪಾರಾಯಣ ಮಾಡಿ

ಕಟಕ : ಇಂದು ನಿಮ್ಮ  ಆರೋಗ್ಯದಲ್ಲಿ ಕೊಂಚ ವ್ಯತ್ಯಯವಾಗಬಹುದು, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಮೂಡಬಹುದು, ನಿಮ್ಮ ಹತ್ತಿರದ ಬಂಧುಗಳು ನಿಮ್ಮ ಕಷ್ಟವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಮಾನೋ ವೇದನೆ. 
  
ದೋಷ ಪರಿಹಾರ : ನಾಗ ದೇವರ ಆರಾಧನೆ ಮಾಡಿ 

ಸಿಂಹ : ಆತ್ಮೀಯರೇ ನಿಮ್ಮ ರಾಶಿಯಲ್ಲಿ ಸ್ಥಿತನಾಗಿರುವ ಶುಕ್ರನಿಂದ ಸ್ತ್ರೀಯರಿಂದ ಬೇಸರ, ಜಗಳ ಸಂಭವ, ಸಪ್ತಮದಲ್ಲಿರುವ ಚಂದ್ರ ಶುಕ್ರನನ್ನು ನೋಡುವುದರಿಂದ ಸ್ತ್ರೀಯರಲ್ಲಿ ಪರಸ್ಪರ ಭಿನ್ನಾಭಿಪ್ರಾಯಗಳೂ ಮೂಡಬಹುದು.

ದೋಷ ಪರಿಹಾರ : ಪಾರ್ವತಿ ಸಹಿತ ಶಿವ ದೇವಾಲಯಕ್ಕೆ ಹೋಗಿ ಭಸ್ಮ ಹಾಗೂ ಹೂವನ್ನು ಸಮರ್ಪಣೆ ಮಾಡಿ

ಕನ್ಯಾ : ಆತ್ಮೀಯರೇ ಇಂದು ನಿಮ್ಮ ಪಾಲಿಗೆ ಧನಾಗಮನದ ದಿನ, ಆದರೆ ಆರೋಗ್ಯದಲ್ಲಿ ವ್ಯತ್ಯಯವನ್ನೂ ಕಾಣುತ್ತೀರಿ. ನಿಮ್ಮ ಮನಸ್ಸು ನಿಮ್ಮ ಕೈಯಲ್ಲಿರುವುದಿಲ್ಲ. ಸ್ತ್ರೀಯರ ಮಾತಿನಿಂದ ತೊಂದರೆಗೆ ಒಳಗಾಗುವ ಸಾಧ್ಯತೆ ಇದೆ. ವಾಹನದಲ್ಲಿ ಸಂಚರಿಸುವಾಗ ಎಚ್ಚರವಿರಲಿ.
  
ದೋಷ ಪರಿಹಾರ : ಮಹಾಲಕ್ಷ್ಮೀ ಸಹಿತ ವಿಷ್ಣು ವಿಗೆ 18 ನಮಸ್ಕಾರ ಹಾಕಿ.

ತುಲಾ :  ಆತ್ಮೀಯರೇ ನಿಮ್ಮ ಆತ್ಮ ಬಲ ಹೆಚ್ಚಲಿದೆ, ಸ್ತ್ರೀಯರಿಂದ ಅಂದರೆ ಹೆಣ್ಣುಮಕ್ಕಳಿದ್ದರೆ ಅವರಿಂದ ಧೈರ್ಯ ಸ್ಥೈರ್ಯ ಹಾಗೂ ಸಹಾಯ ಸಿಗಲಿದೆ. ನಿಮ್ಮ ಭ್ರಾತೃಗಳಲ್ಲಿ ಅಸಹಕಾರ. ಕಾಲಿನಲ್ಲಿ ಅಥವಾ ಗಂಟಲಿನಲ್ಲಿ ತೊಂದರೆಯಾಗುವ ಸಾಧ್ಯತೆ ಇದೆ. ಆಹಾರದಲ್ಲಿ ವ್ಯತ್ಯಯ ಮಾಡಿಕೊಳ್ಳಬೇಡಿ. 

ದೋಷ ಪರಿಹಾರ : ಶುಕ್ರ ಗ್ರಹ ಆರಾಧನೆ ಮಾಡಿ

ವೃಶ್ಚಿಕ : ಆತ್ಮೀಯರೇ, ನಿಮ್ಮ ಮಾತಿನಿಂದ ಕಲಹವಾಗುವ ಸಾಧ್ಯತೆ ಇದೆ. ವಾಹನದಲ್ಲಿ ಸಂಚರಿಸುವಾಗ ಸ್ತ್ರೀಯರಿಗೆ ಅಥವಾ ಸ್ತ್ರೀಯರಿಂದ ತೊಂದರೆಯಾಗುವ ಸಾಧ್ಯತೆ ಇದೆ. ಆದರೆ ನಿಮ್ಮಲ್ಲಿ ಒಂದು ಧೈರ್ಯ ನಿಮ್ಮ ಸರ್ವ ಕೆಲಸಗಳನ್ನೂ ಮುನ್ನಡೆಸುತ್ತದೆ. ಧೈರ್ಯವಾಗಿರಿ. 

ದೋಷ ಪರಿಹಾರ : ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಧನಸ್ಸು : ಆತ್ಮೀಯರೇ ಇಂದು ನಿಮ್ಮ ದೇಹದಲ್ಲಿ ಸ್ವಲ್ಪ ಏರುಪೇರಾಗುವ ಸಾಧ್ಯತೆ ಇದೆ, ತೃತೀಯ ಚಂದ್ರ ನಿಮ್ಮ ಸಹೋದರಿಯರಲ್ಲಿ ಭಿನ್ನಾಭಿಪ್ರಾಯ ಮೂಡಿಸಬಹುದು. ನಿಮ್ಮ ದೈನಂದಿನ ಕಾರ್ಯಗಳೆಲ್ಲ ವಿಳಂಬವಾಗುತ್ತವೆ. ಜಾಗ್ರತೆಯಿಂದ ದಿನವನ್ನು ಕಳೆಯಿರಿ.

ದೋಷ ಪರಿಹಾರ : ಶಿವಾರಾಧನೆ ಅಥವಾ ದಕ್ಷಿಣಾಮೂರ್ತಿ ಸ್ತೋತ್ರ ಪಠಿಸಿ.

ಮಕರ :  ಆತ್ಮೀಯರೇ ಇಂದು ನಿಮ್ಮ ಪಾಲಿಗೆ ಧನವ್ಯಯ, ಸ್ತ್ರೀ ಮೂಲಕ ಧನವ್ಯಯವಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲ ನೀರಿನ ಸಲುವಾಗಿ ಅಥವಾ ದ್ರವ ಪದಾರ್ಥಗಳಿಗೆ ಹಣ ವ್ಯಯ ಮಾಡುತ್ತೀರಿ. ಸಾಮಾನ್ಯ ದಿನ.
  
ದೋಷ ಪರಿಹಾರ : ಶನಿ ಸ್ತೋತ್ರ ಪಠಿಸಿ

ಕುಂಭ : ಆತ್ಮೀಯರೇ ನಿಮ್ಮ ದೇಹದಲ್ಲಿ ಸ್ವಲ್ಪ ತೊಂದರೆಯಾಗುವ ಸಾಧ್ಯತೆ ಇದೆ. ನಿಮ್ಮ ಕೆಲವರಿಗೆ ತಾಯಿಯಿಂದ ಅನುಕೂಲ, ಮತ್ತೂ ಕೆಲವರಿಗೆ ಉದ್ಯೋಗದಲ್ಲಿ ಅನುಕೂಲ, ಧನ ಲಾಭವೂ ಇದೆ.

ದೋಷ ಪರಿಹಾರ :  ಶಿವಾರಾಧನೆ ಮಾಡಿ, ಅಂದರೆ ಶಿವನಿಗೆ ಬಿಲ್ವಪತ್ರೆ ಸಮರ್ಪಣೆ ಮಾಡಿ
  
ಮೀನ : ಸ್ನೇಹಿತರೆ ಇಂದು ನಿಮ್ಮ ಮಕ್ಕಳಿಂದ ತೊಂದರೆಯಾಗುವ ಸಾಧ್ಯತೆ ಇದೆ, ಅಷ್ಟೇ ಅಲ್ಲ ನಷ್ಟವೂ ಇದೆ. ಧನ ಲಾಭವೂ ಇದೆ. ಉದ್ಯೋಗದಲ್ಲಿ ಬದಲಾವಣೆ, ಮಾನಸಿಕ ತೊಂದರೆಗಳನ್ನು ಅನುಭವಿಸಬೇಕಾದೀತು. ಎಚ್ಚರವಾಗಿರಿ. 

loader