Asianet Suvarna News Asianet Suvarna News

Uttara Kannada: ಜಗಜ್ಯೋತಿ ಬಸವೇಶ್ವರ ಮೂರ್ತಿ ಅನಾವರಣ

ನಗರದ ಪಟೇಲ ವೃತ್ತದ ಸಮೀಪ ನೂತನವಾಗಿ ನಿರ್ಮಾಣಗೊಂಡಿರುವ ಜಗಜ್ಯೋತಿ ಬಸವೇಶ್ವರ ಮೂರ್ತಿ ಅನಾವರಣದ ಸಭಾ ಕಾರ್ಯಕ್ರಮವು ಜನತಾ ವಿದ್ಯಾಲಯ ಮೈದಾನದಲ್ಲಿ ನಡೆಯಿತು.

Jagajyoti Basaveshwara idol inauguration at patel circle dandeli rav
Author
First Published Oct 12, 2022, 10:38 AM IST | Last Updated Oct 12, 2022, 10:40 AM IST

ದಾಂಡೇಲಿ (ಅ.12) : ನಗರದ ಪಟೇಲ ವೃತ್ತದ ಸಮೀಪ ನೂತನವಾಗಿ ನಿರ್ಮಾಣಗೊಂಡಿರುವ ಜಗಜ್ಯೋತಿ ಬಸವೇಶ್ವರ ಮೂರ್ತಿ ಅನಾವರಣದ ಸಭಾ ಕಾರ್ಯಕ್ರಮವು ಜನತಾ ವಿದ್ಯಾಲಯ ಮೈದಾನದಲ್ಲಿ ನಡೆಯಿತು.

ಉತ್ತರ ಕನ್ನಡಕ್ಕೆ ಉತ್ಕೃಷ್ಟ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ಧ: ಸಚಿವ ಸುಧಾಕರ

ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ರಥ ನಿರ್ಮಾಣ ಮಾಡಲು ಉಳ್ಳವರು ಹಣ ನೀಡಬಹುದು. ಆದರೆ ರಥ ನಿರ್ಮಾಣವಾದ ಬಳಿಕ ಅದನ್ನು ಮುಂದೆ ಎಳೆಯಲು ಬಡವರು ಸೇರಿದಂತೆ ಎಲ್ಲರು ಬೇಕು. ಅವರವರ ಶಕ್ತಿ ಮತ್ತು ಭಕ್ತಿಗನುಸಾರ ನೀಡುವ ಸೇವೆ ಮತ್ತು ಭಕ್ತ ಸಮರ್ಪಣೆಗೆ ಎಂದು ಬೆಲೆ ಕಟ್ಟಲಾಗದು. ಹಾಗಾಗಿ ಇದ್ದವರು, ಇಲ್ಲದವರು ಸೇರಿ ಧಾರ್ಮಿಕ ಕೈಂಕರ್ಯಗಳನ್ನು ಮಾಡುವುದೇ ನಿಜವಾದ ಧರ್ಮಕಾರ್ಯ, ಪುಣ್ಯ ಕಾರ್ಯ ಎಂದರು.

ದಾಂಡೇಲಿಯಲ್ಲಿ ಅತ್ಯುತ್ತಮವಾಗಿ ಬಸವೇಶ್ವರ ಮೂರ್ತಿಯನ್ನು ನಿರ್ಮಿಸಿ ಅನಾವರಣಗೊಳಿಸುತ್ತಿರುವುದು ಉತ್ತಮ ಕಾರ್ಯ ಎಂದು ಹೇಳಿದರು. ಸಮಿತಿಯ ಮುಂದಿನ ಕಾರ್ಯಕ್ಕೆ ಸಚಿವರು .1ಲಕ್ಷ ದೇಣಿಗೆ ನೀಡುವುದಾಗಿ ಭರವಸೆ ನೀಡಿದರು.

ಮಹಾರಾಷ್ಟ್ರದ ಕೊಲ್ಲಾಪುರದಲ್ಲಿರುವ ಸಿದ್ದಗಿರಿ ಕನ್ನೇರಿಮಠದ ಜಗದ್ಗುರು ಅದೃಶ್ಯ ಕಾಡಸಿದ್ದೇಶ್ವರ ಶ್ರೀ ಮಾತನಾಡಿ, ಎಲ್ಲ ಧರ್ಮಗಳಿಗೆ ಮತ್ತು ಎಲ್ಲ ಧರ್ಮಗಳ ಆಚರಣೆಗಳಿಗೆ ಆಶ್ರಯ ನೀಡಿದ ದೇಶ ನಮ್ಮದು. ಎಲ್ಲರನ್ನೂ ಪ್ರೀತಿಸುವ ಮತ್ತು ಆರಾಧಿಸುವ ದೇಶ ನಮ್ಮದು ಎಂದರು.

ನಾವು ಬಸವಣ್ಣನವರ ಕಾಯಕ ತತ್ವ ಮೈಗೂಡಿಸಿಕೊಂಡು ನಡೆದರೆ ಸಂಸ್ಕಾರಯುತ ಹಾಗೂ ಸದೃಢ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ. ಬಸವಣ್ಣನವರ ಮೂರ್ತಿ ಅನಾವರಣವಾದರೆ ಸಾಕಾಗದು, ನಾವು ನಮ್ಮ ದೈನಂದೀನ ಬದುಕಿನಲ್ಲಿ ಬಸವ ತತ್ವ ಅನುಷ್ಠಾನಗೊಳಿಸಿಕೊಂಡರೆ ಬಸವಣ್ಣನ ಪುತ್ಥಳಿ ಅನಾವರಣಕ್ಕೆ ನಿಜವಾದ ಅರ್ಥ ಬರುತ್ತದೆ ಎಂದರು.

ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿಮಾತನಾಡಿ, ಬಸವೇಶ್ವರರ ತತ್ವ, ಸಂದೇಶ, ವಚನಗಳು ಮನೆ ಮನಗಳಿಗೂ ಸಾರಲು ಈ ಕಾರ್ಯ ಫಲಪ್ರದವಾಗಲಿ ಎಂದು ಶುಭ ಹಾರೈಸಿದರು.

ಮಾಜಿ ಶಾಸಕ ಸುನೀಲ ಹೆಗಡೆ, ಜ್ಞಾನ ಯೋಗಾಶ್ರಮದ ಬಸವಲಿಂಗ ಶ್ರೀ, ಆತ್ಮಾನಂದ ಶ್ರೀ, ಹರ್ಷಾನಂದ ಶ್ರೀ, ವಿಪ ಸದಸ್ಯರಾದ ಎಸ್‌.ವಿ. ಸಂಕನೂರ, ಮಾಜಿ ಶಾಸಕ ವಿ.ಎಸ್‌. ಪಾಟೀಲ, ಉದ್ಯಮಿ, ಸಮಾಜ ಸೇವಕ ಟಿ.ಆರ್‌. ಚಂದ್ರಶೇಖರ, ಸುಪ್ರದಾ ಕನ್‌ಸ್ಟ್ರಕ್ಷನ್‌ನ ಭುಜಂಗ ಶೆಟ್ಟಿ, ನಗರಸಭಾ ಸದಸ್ಯರಾದ ನರೇಂದ್ರ ಚವ್ಹಾಣ, ಪದ್ಮಜಾ ಜನ್ನು, ಜಗಜ್ಯೋತಿ ಬಸವೇಶ್ವರ ಸಮಿತಿಯ ಅಧ್ಯಕ್ಷ ಯು.ಎಸ್‌. ಪಾಟೀಲ, ಪ್ರಧಾನ ಕಾರ್ಯದರ್ಶಿ ಬಸವರಾಜ ಕಲಶೆಟ್ಟಿ, ಖಜಾಂಚಿ ನಂಜುಂಡಪ್ಪ ಕೆ.ಬಿ., ಉಪಾಧ್ಯಕ್ಷ ನಿಂಗನಗೌಡ ಪಾಟೀಲ ಇದ್ದರು.

ವಚನ ಮಂಟಪ, ಬಸವ ವನ ಕಾರಂಜಿ ಉದ್ಘಾಟನೆ

ನಗರದ ಪಟೇಲ ವೃತ್ತದ ಸಮೀಪದಲ್ಲಿ ನೂತನವಾಗ ನಿರ್ಮಾಣಗೊಂಡಿರುವ ಜಗಜ್ಯೋತಿ ಶ್ರೀ ಬಸವೇಶ್ವರರ ಮೂರ್ತಿ ಅನಾವರಣ ಕಾರ್ಯಕ್ರಮವು ಮಂಗಳವಾರ ವಿಜೃಂಭಣೆಯಿಂದ ಜರುಗಿತು. ಜಗಜ್ಯೋತಿ ಶ್ರೀ ಬಸವೇಶ್ವರರ ಮೂರ್ತಿಯನ್ನು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿರುವ ಸಿದ್ದಗಿರಿ ಕನ್ನೇರಿಮಠದ ಜಗದ್ಗುರು ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ ನೂತನ ವಚನ ಮಂಟಪ, ಬಸವವನ ಕಾರಂಜಿ, ಮೂರ್ತಿ ಅನಾವರಣ ಶಿಲೆಯನ್ನು ಉದ್ಘಾಟಿಸಲಾಯಿತು.

Ayushmann Khurrana 25 ಕೋಟಿಯಿಂದ 15 ಕೋಟಿಗೆ ಸಂಬಳ ಇಳಿಸಿಕೊಂಡ ನಟ; ಕಾರಣ ಕೇಳಿ ಶಾಕ್ ಆಗ್ಬೇಡಿ

ಈ ಸಂದರ್ಭದಲ್ಲಿ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಮಹಾಸ್ವಾಮಿಗಳು, ಅಥಣಿ ತಾಲೂಕಿನ ಕಕಮರಿ ಗುರುದೇವಾಶ್ರಮದ ಶ್ರೀ ಆತ್ಮಾನಂದ ಮಹಾಸ್ವಾಮಿಗಳು, ಜಮಖಂಡಿ ಹುಲ್ಯಾಳ ಗುರುದೇವಾಶ್ರಮದ ಶ್ರೀ ಹರ್ಷಾನಂದ ಸ್ವಾಮಿಗಳು, ಕಾರ್ಮಿಕ ಸಚಿವರಾದ ಅರಬೈಲ್‌ ಶಿವರಾಮ ಹೆಬ್ಬಾರ, ಶಾಸಕರಾದ ಆರ್‌.ವಿ. ದೇಶಪಾಂಡೆ, ವಿಧಾನ ಪರಿಷತ್‌ ಸದಸ್ಯರಾದ ಬಸವರಾಜ ಹೊರಟ್ಟಿ, ಮಾಜಿ ಶಾಸಕರಾದ ಸುನೀಲ ಹೆಗಡೆ, ನಗರಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ, ಉಪಾಧ್ಯಕ್ಷ ಸಂಜಯ ನಂದ್ಯಾಳಕರ, ವೆಸ್ಟ್‌ಕೊಸ್ಟ್‌ ಕಾಗದ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಜೈನ, ಸುಪ್ರದಾ ಕನಸ್ಟ್ರಕ್ಷನ್‌ನ ಭುಜಂಗ ಶೆಟ್ಟಿ, ಸಮಾಜಸೇವಕರಾದ ಟಿ.ಆರ್‌. ಚಂದ್ರಶೇಖರ, ಸುವರ್ಣಾ ಆರ್‌. ಪಾಟೀಲ, ಜಗಜ್ಯೋತಿ ಶ್ರೀ ಬಸವೇಶ್ವರ ಸಮಿತಿಯ ಅಧ್ಯಕ್ಷ ಯು.ಎಸ್‌. ಪಾಟೀಲ, ಪದಾಧಿಕಾರಿಗಳು, ಸದ್ಭಕ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios