ಚಂದ್ರ ಮತ್ತು ಮನುಷ್ಯನ ಮನಸ್ಸಿನ ನಡುವಿನ ಸಂಬಂಧ ತುಂಬ ಮೊದಲಿನಿಂದಲೂ ತಿಳಿದಿದೆ. ಮನಸ್ಸಿನ ವ್ಯಗ್ರತೆ, ಹುಚ್ಚುತನದ ಹಿಂದೆಯೂ ಚಂದ್ರ ಇದ್ದಾನೆ. ಹಾಗೆಯೇ ಲೈಂಗಿಕ ಶಕ್ತಿಯ ಮೇಲೆ ಹುಣ್ಣಿಮೆಯ ಪ್ರಭಾವವನ್ನೂ ಉಲ್ಲೇಖಿಸಲಾಗಿದೆ.

ಆಕಾಶದ ಚಂದ್ರನಿಗೂ ಮನುಷ್ಯನ ಮನಸ್ಸಿಗೂ ತುಂಬ ನಿಕಟವಾದ ಸಂಬಂಧ ಇದೆ ಎಂಬುದನ್ನು ವಿಜ್ಞಾನಿಗಳು ತುಂಬಾ ಹಿಂದೆಯೇ ಪ್ರೂವ್‌ ಮಾಡಿದ್ದಾರೆ. ಭಾರತೀಯ ಧರ್ಮ ಶಾಸ್ತ್ರಗಳು ಕೂಡ ಅದನ್ನು ಒಪ್ಪಿಕೊಂಡಿವೆ. ಅಂದ ಮೇಲೆ, ಹುಣ್ಣಿಮೆ- ಅಮಾವಾಸ್ಯೆಗಳೂ ಮನುಷ್ಯನ ಮನಸ್ಸಿನ ಮೇಲೆ ತುಂಬು ಪ್ರಭಾವ ಬೀರಲೇ ಬೇಕಲ್ಲವೇ? ಅದು ಯಾವ ಬಗೆಯ ಪ್ರಭಾವ ಎಂಬುದೂ ಕುತೂಹಲಕಾರಿ. ಹುಣ್ಣಿಮೆ ದಿನ ಮನುಷ್ಯನಲ್ಲಾಗುವ ಬದಲಾವಣೆಗಳೇನು, ಅದಕ್ಕೆ ಕಾರಣಗಳೇನು? ಇಂಗ್ಲಿಷ್‌ನಲ್ಲಿ ಚಂದಿರನನ್ನು ಲೂನಾ ಅಥವಾ ಮೂನ್ ಎಂದು ಕರೆಯುತ್ತಾರೆ. ಲ್ಯಾಟಿನ್ ಪದವಾದ ಲ್ಯುನಾಟಿಕ್ ಎಂಬ ಪದದಿಂದ ಲೂನಾರ್ ಎಂಬುದು ಹುಟ್ಟಿಕೊಂಡಿದೆ. ಲ್ಯೂನಾಟಿಕ್‌ ಎಂದರೆ ಮರುಳು ಎಂಬರ್ಥವೂ ಇದೆ. ಆತ ಮನಸ್ಸಿಗೆ ಕವಿಸುವ ಮರುಳು ಯಾವ ಥರದ್ದು? ನೋಡೋಣ ಬನ್ನಿ.

ಸೂರ್ಯ ಹಾಗೂ ಚಂದ್ರನ ನಡುವೆ ಭೂಮಿ ಬಂದಾಗ ಚಂದಿರನ ಬೆಳಕು ಉಜ್ವಲವಾಗಿರುತ್ತದೆ. ಚಂದ್ರನನ್ನು ಸ್ತ್ರೀಲಿಂಗ ಎಂದು ಬಹಳಷ್ಟು ಧರ್ಮಗಳಲ್ಲಿ ಪರಿಗಣಿಸಲಾಗುತ್ತದೆ. ಜ್ಯೋತಿಷ್ಯದಲ್ಲಿ ಚಂದ್ರನು ಭಾವನೆ ಹಾಗೂ ಬುದ್ಧಿವಂತಿಕೆ ಜೊತೆಗೆ ಎಲ್ಲ ರಾಶಿಗಳ ರಾಜ ಕಟಕವನ್ನು ಪ್ರತಿನಿಧಿಸುತ್ತಾನೆ. ರಾಶಿ ಚಕ್ರದಲ್ಲಿ ಕಟಕ ರಾಶಿ ನಾಲ್ಕನೇ ಮನೆಯಲ್ಲಿರುತ್ತದೆ. ಆ ವೇಳೆಯಲ್ಲಿ ಕಟಕ ರಾಶಿಯವರು ಭಾವನಾತ್ಮಕವಾಗಿರುತ್ತಾರೆ.

28 ದಿನಗಳ ರಾಶಿಚಕ್ರದಲ್ಲಿ ಚಂದ್ರ ಎಲ್ಲ ರಾಶಿಗಳಿಗೂ ಪ್ರವೇಶಿಸುತ್ತಾನೆ. ಹಾಗೆ ಚಂದ್ರನು ಯಾವ ರಾಶಿ ಪ್ರವೇಶಿಸುತ್ತಾನೋ ಆಯಾ ರಾಶಿಯವರು ಅಂದು ಸೂಕ್ಷ್ಮಮತಿಗಳಾಗುತ್ತಾರೆ. ಚಂದ್ರನು ಪ್ರತಿ ರಾಶಿಯಲ್ಲಿ ಎರಡೂ ಇಲ್ಲವೇ ಒಂದೂವರೆ ದಿನ ನೆಲೆಸಿರುತ್ತಾನೆ. ಕಾಳಜಿ, ಕರುಣೆ, ಸ್ಫೂರ್ತಿ, ಭಾವನೆ, ಖುಷಿ, ಶಾಂತಿ, ಬೇರೆಯವರ ಕಷ್ಟಕ್ಕೆ ಕರಗುವುದು ಇವು ಚಂದ್ರನ ಧನಾತ್ಮಕ ಶಕ್ತಿಗಳಾದರೆ, ಗಾಬರಿ, ಭಯ, ಸಿನಿಕತೆ, ಆತ್ಮಹತ್ಯೆ ನಿರ್ಧಾರಗಳು ಇವು ಚಂದ್ರನ ಋಣಾತ್ಮಕ ಶಕ್ತಿಗಳಾಗಿರುತ್ತವೆ.

ವೈದಿಕ ಜ್ಯೋತಿಷ್ಯದಲ್ಲಿ ಚಂದ್ರನು ತಾಯಿ, ಗರ್ಭಿಣಿ, ಮಿದುಳು, ಬುದ್ಧಿವಂತಿಕೆ, ಗೌರವ, ಭಾವನೆ, ಸ್ವಭಾವ, ಪ್ರೀತಿ, ತೋಟ, ಉಪ್ಪು, ಔಷಧ, ವಿದೇಶ ಪ್ರಯಾಣ, ಹಾಲು ಇವುಗಳ ಪ್ರತಿನಿಧಿಯಾಗಿದ್ದಾನೆ. ಚಂದ್ರನ ಋತು ಚಕ್ರವೂ ಸಹ ಬಹಳಷ್ಟು ಪ್ರಾಮುಖ್ಯತೆ ಹೊಂದಿದ್ದು ಮಾಟ ಮಂತ್ರಗಳನ್ನು ಅಮಾವಾಸ್ಯೆ ಇಲ್ಲವೇ ಹುಣ್ಣಿಮೆಯ ದಿನ ಕೈಗೊಂಡರೆ ಯಶಸ್ವಿಯಾಗುತ್ತದೆ ಎಂದು ನಂಬಲಾಗುತ್ತದೆ. ಧ್ಯಾನ, ದೈಹಿಕ ಬೆಳವಣಿಗೆ, ಕನಸು ಇವು ಚಂದ್ರನಿಗೆ ಸಂಬಂಧಿಸಿದ ವಿಷಯಗಳಾಗಿವೆ. ಷೇರು ಮಾರುಕಟ್ಟೆ ವ್ಯವಹಾರದಲ್ಲೂ ಚಂದ್ರನು ಮಹತ್ವದ ಪಾತ್ರ ವಹಿಸುತ್ತಾನೆ.

ಮಾನವ ಶರೀರದಲ್ಲಿ ಪ್ರಾಣ ಮತ್ತು ಮನಸ್ಸು ಎನ್ನುವ ಎರಡು ಶಕ್ತಿಗಳಿವೆ. ಮಾನವನ ಶರೀರದ ಪ್ರತೀ ಭಾಗಗಳಲ್ಲೂ ಈ ಎರಡೂ ಶಕ್ತಿಗಳು ಪ್ರವೇಶಿಸುವ ದಾರಿಗಳಿವೆ. ಚಂದ್ರನ ಶಕ್ತಿಯು ಮನುಷ್ಯನ ಮೆದುಳಿನ ಗ್ರಂಥಿಗಳ ಮೂಲಕ ಪ್ರವೇಶಿಸುತ್ತವೆ. ಇದು ನಾವು ಮಲಗಿದಾಗಿನಿಂದ ಎದ್ದೇಳುವ ತನಕ ಎಲ್ಲ ಚಟುವಟಿಕೆಗಳನನ್ನು ನಿರ್ವಹಿಸುತ್ತದೆ. ಧ್ಯಾನದಂತಹ ಕ್ರಿಯೆ ನಡೆಯುವಾಗ ಚಂದ್ರನ ಬೆಳಕು ಮಿದುಳಿನ ಗ್ರಂಥಿಯ ಮೂಲಕ ಪ್ರವೇಶಿಸಿ ಆತ್ಮಕ್ಕೆ ಕತ್ತಲೆ ಮತ್ತು ಬೆಳಕಿನ ಅನುಭವವಾಗುವಂತೆ ಮಾಡುತ್ತದೆ.

ಮನುಷ್ಯನ ಮನಸ್ಸು ಪ್ರಜ್ಞೆ, ಸುಪ್ತ ಪ್ರಜ್ಞೆ ಹಾಗೂ ಪ್ರಾಣವನ್ನು ಒಳಗೊಂಡಿರುತ್ತದೆ. ಇವೆಲ್ಲವೂ ಒಂದಕ್ಕೊಂದು ಬೆಸೆದುಕೊಂಡಿರುತ್ತದೆ. ನಮ್ಮ ಸುಪ್ತ ಪ್ರಜ್ಞೆಯು ಧನಾತ್ಮಕ ಹಾಗೂ ಋಣಾತ್ಮಕ ಶಕ್ತಿಗಳಿಂದ ತುಂಬಿರುತ್ತದೆ. ಮನಸ್ಸಿನ ಮೇಲೆ ಚಂದ್ರನ ಪ್ರಭಾವವು ಭಾವನೆಗಳ ಏರಿಳಿತವನ್ನು ಉಂಟುಮಾಡುತ್ತದೆ. ಚಂದ್ರನ ತರಂಗಾಂತರಗಳು ಹೆಚ್ಚಾಗಿರುವ ದಿನಗಳಲ್ಲಿ ನಮ್ಮ ಮನಸ್ಸು ಹುಚ್ಚು ಕುದುರೆಯಂತೆ ಆಡುತ್ತದೆ. ಇದು ವೈದ್ಯಕೀಯವಾಗಿಯೂ ಸತ್ಯ.

ಮನೆಯಲ್ಲಿ ನಾಯಿ, ಬೆಕ್ಕಿನ ಈ ದಿಕ್ಕಿನಲ್ಲಿ ಊಟ ಹಾಕಬೇಡಿ!

ಪೂರ್ಣಿಮೆಯ ರಶ್ಮಿಗಳು ಮನುಷ್ಯನ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಪೂರ್ಣಿಮೆಯ ದಿನದಂದೇ ಕೆಲವು ಪ್ರಾಣಿಗಳು ತನ್ನ ಸಂಗಾತಿಯನ್ನು ಸೇರುತ್ತವೆ. ಮನುಷ್ಯನೂ ಕೂಡ ಹುಣ್ಣಿಮೆಯ ದಿನದಂದು ಹೆಚ್ಚು ಲೈಂಗಿಕ ಶಕ್ತಿ ಹೊಂದಿರುತ್ತಾನೆ ಎಂದು ಹೇಳಲಾಗುತ್ತದೆ. ಹುಣ್ಣಿಮೆ ದಿನದಂದೇ ಮನುಷ್ಯನು ಸರಸ ಸಲ್ಲಾಪದಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾನೆ ಎಂಬುದು ಅಲ್ಲಗಳೆಯಲಾಗದ ಸತ್ಯ. ಪ್ರಾಚೀನ ಸಂಸ್ಕೃತ ಕಾವ್ಯಗಳಲ್ಲೂ ಹುಣ್ಣಿಮೆಯ ಚಂದ್ರನನ್ನು ಕಾಮವರ್ಧಕ ಎಂದು ಕರೆಯಲಾಗಿದೆ. ಹಾಗೆಂದರೆ ಕಾಮವನ್ನು ಹೆಚ್ಚಿಸುವವನು ಎಂದು.

ದೇಶದಲ್ಲಿ ನಡೆದಿರುವ ಅಪರಾಧ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಹುಣ್ಣಿಮೆಯ ದಿನದಂದೇ ಹೆಚ್ಚು ಅಪರಾಧ ಪ್ರಕರಣಗಳು ನಡೆಯುತ್ತವೆ. ಆಧ್ಯಾತ್ಮಿಕ ದಾರಿಗಳೇ ಇಂತಹ ಅಪರಾಧಗಳನ್ನು ತಡೆಯುವ ಏಕೈಕ ಶಕ್ತಿಯಾಗಿದೆ.

ಈ 5 ರಾಶಿಗೆ ಹೆಚ್ಚಾಗಿ ದುಷ್ಟ ಕಣ್ಣಿನ ಪ್ರಭಾವ, ಭಯಾನಕ ತೊಂದರೆ