ಮೇಷ ರಾಶಿ :  ನಿಮ್ಮ ರಾಶಿಯ ಅಧಿಪತಿ ಲಾಭ ಸ್ಥಾನಕ್ಕೆ ಬಂದಿರುವುದರಿಂದ ಲಾಭ ನಿರೀಕ್ಷಿಸಬಹುದು. ಆರೋಗ್ಯ ಸುಧಾರಣೆ, ನಿಮ್ಮ ಉದ್ಯೋಗ ಸ್ಥಾನದಲ್ಲಿ ಉತ್ತಮ ಫಲ ನಿರೀಕ್ಷಿಸಬಹುದು. ಸಂಗಾತಿಯಿಂದ ಸ್ವಲ್ಪ ಮಟ್ಟಿಗೆ ಕಿರಿಕಿರಿ ತಪ್ಪಿದ್ದಲ್ಲ. 

ದೋಷಪರಿಹಾರ : ಸುಬ್ರಹ್ಮಣ್ಯ ಕವಚ ಪಠಿಸಿ

ವೃಷಭ : ನಿಮ್ಮ ವ್ಯಯಾಧಿಪತಿ ಕರ್ಮ ಸ್ಥಾನಕ್ಕೆ ಬಂದಿರುವುದರಿಂದ ಉದ್ಯೋಗದಲ್ಲಿ ಕಿರಿಕಿರಿಯಾಗಬಹುದು, ಉದ್ಯೋಗ ನಷ್ಟವೂ ಆಗುವ ಸಾಧ್ಯತೆ ಇದೆ. ಆದರೆ ಹೆದರುವ ಅವಶ್ಯಕತೆ ಇಲ್ಲ ಲಾಭಕ್ಕೆ ಗುರು ದೃಷ್ಟಿ ಇರುವುದರಿಂದ ಯಾವುದೋ ರೀತಿಯಲ್ಲಿ ಸಹಕಾರವಾಗುತ್ತದೆ.      

ದೋಷ ಪರಿಹಾರ : ಗುರುವಿನ ಅನುಗ್ರಹಕ್ಕಾಗಿ ದಕ್ಷಿಣಾಮೂರ್ತಿ ಸ್ತೋತ್ರ ಪಠಿಸಿ

ಮಿಥುನ : ಉತ್ತಮ ದಿನ. ಸಂಗಾತಿಯಿಂದ ಬೈಗುಳ ಕೇಳಬೇಕಾದ ಪರಿಸ್ಥಿತಿ ಬರಲಿದೆ, ನೀವಂದುಕೊಂಡ ಹಾಗೆ ಆಗಂತುಕರು ನಿಮ್ಮ ಮನಸ್ಸನ್ನು ಹಾಳುಮಾಡಬುದು. ಪ್ರಯಾಣ ಮಾಡುವಾಗ ಗುರು ಹಿರಿಯರನ್ನು ನೋಡಿ ಗೌರವಿಸಿ.

ದೋಷ ಪರಿಹಾರ : ವಿಷ್ಣು ದೇವಸ್ಥಾನಕ್ಕೆ ಗಂಧದ ಅಭಿಷೇಕ ಮಾಡಿಸಿ

ಕಟಕ : ನೀವು ಕೊಟ್ಟ ಹಣ ಹಿಂದಿರುಗುವ ಸಾಧ್ಯತೆ ಇದೆ, ಕುಟುಂಬದಲ್ಲಿ ನಡೆದ ಕಲಹ ಅಂತ್ಯವಾಗಿ ಸಮಾಧಾನವಾಗಬಹುದು,  ಮನೆ ವಿಚಾರದಲ್ಲಿ ಹಾಗೂ ಸ್ತ್ರೀಯರ ನಡುವೆ ಹೊಂದಾಣಿಕೆಯಲ್ಲಿ ಉತ್ತಮ ಫಲ

ದೋಷ ಪರಿಹಾರ : ಲಲಿತಾ ಸಹಸ್ರನಾಮ ಪಠಿಸಿ.

ಸಿಂಹ :  ತಂದೆ ಮಕ್ಕಳಲ್ಲಿ ಸ್ವಲ್ಪ ಘರ್ಷಣೆ, ಆದರೆ ನಿಮ್ಮ ನಿರ್ಧಾರಗಳು ಕೆಲವೊಮ್ಮೆ ಎಡವಟ್ಟು ಮಾಡುತ್ತವೆ. ನಿಮ್ಮ ಮನಸ್ಸಿನ ಭಾವನೆಗಳಿಗೆ ಸ್ವಲ್ಪ ಘಾಸಿಯಾಗಬಹುದು. ತಂದೆ-ತಾಯಿಯರಿಗೆ ನಮಸ್ಕಾರ ಮಾಡಿ ದಿನವನ್ನು ಪ್ರಾರಂಭ ಮಾಡಿ.

ದೋಷ ಪರಿಹಾರ : ಶಿವನಿಗೆ ಭಸ್ಮಾಭಿಷೇಕ ಮಾಡಿಸಿ

ಕನ್ಯಾ : ಸ್ತ್ರೀಯರಿಂದ ಕಾರ್ಯಾನುಕೂಲ, ಸ್ವಲ್ಪ ಮಟ್ಟಿಗೆ ಹೆಣ್ಣುಮಕ್ಕಳಿಗೂ ತಂದೆಗೂ ಮನಸ್ತಾಪವಾಗಬಹುದು. ನಿಮ್ಮ ಕ್ಷೇತ್ರದಲ್ಲಿ ಅಂದರೆ ವಾಸ ಮಾಡುವ ಕಡೆ ಸ್ವಲ್ಪ ಕ್ಷುದ್ರ ದೋಷಗಳನ್ನು ಕಾಣಬಹುದು. ಎಚ್ಚರವಾಗಿರಿ. 

ದೋಷ ಪರಿಹಾರ : ವಿಷ್ಣು ದೇವಸ್ಥಾನಕ್ಕೆ ತೆಂಗಿನಕಾಯಿ ಸಮರ್ಪಣೆ ಮಾಡಿ

ತುಲಾ :  ಕಾರ್ಯ ಸಾಧನೆಗೆ ಅನುಕೂಲದ ದಿನ, ನಿಮ್ಮ ವೈಯುಕ್ತಿಕ ಅಭಿಪ್ರಾಯಗಳಿಗೆ ಗೌರವ ಸಿಗಲಿದೆ, ಉದ್ಯೋಗದಲ್ಲಿ ಅತ್ಯುತ್ತಮ ಏಳಿಗೆ ಹೊಂದಲಿದ್ದೀರಿ. ನಿಮ್ಮ ಸಂಕಲ್ಪಕ್ಕೆ ಹಿರಿಯರ ಸಹಾಕಾರ ಇರಲಿದೆ. 

ದೋಷ ಪರಿಹಾರ : ದುರ್ಗಾ ದೇವಸ್ಥಾನಕ್ಕೆ ಹರಿದ್ರಾಭಿಷೇಕ ಮಾಡಿಸಿ 

ವೃಶ್ಚಿಕ :  ಸ್ವಲ್ಪ ಮಟ್ಟಿಗೆ ಧನವ್ಯಯ, ಕುಟುಂಬದಲ್ಲಿ ಹಿರಿಯರಿಂದ ಮಾತುಕೇಳಬೇಕಾದ ಸಂದರ್ಭ ಎದುರಾಗುತ್ತದೆ. ಸಾಹಸ ಕಾರ್ಯಗಳಿಗೆ ಹಿನ್ನಡೆ, ಸೌಖ್ಯ ವೃದ್ಧಿ, ವಾಹನ-ಖನಿಜ ವಸ್ತು ಖರೀದಿ. 

ದೋಷ ಪರಿಹಾರ : ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ 

ಧನಸ್ಸು :  ಇಂದು ನಿಮ್ಮ ಮನಸ್ಸಿಗೆ ಸಮಾಧಾನದ ದಿನ, ಕಾರ್ಯ ಸಾಧನೆಗೆ ಸಹಕಾರ, ಉದ್ಯೋಗದಲ್ಲಿ ಪ್ರಗತಿ, ಉತ್ತಮರ ಭೇಟಿ, ಆರೋಗ್ಯದಲ್ಲಿ ಮಾತ್ರ ಕೊಂಚ ವ್ಯತ್ಯಯವಾಗಬಹುದು.   

ದೋಷ ಪರಿಹಾರ : ಭಗವದ್ಗೀತೆ ಪುಸ್ತಕ ದಾನ ಮಾಡಿ

ಮಕರ :  ನೀವು ಅಂದುಕೊಂಡ ಕಾರ್ಯ ಸಾಧಿಸಬಹುದು, ಹಿರಿಯರ ಸಹಾಯ, ಧನ ಸಹಾಯ ಎಲ್ಲವೂ ಲಭಿಸುತ್ತದೆ. ಉತ್ತಮರ ಸಂಗದಲ್ಲಿ ನಿಮ್ಮ ಕಾರ್ಯಸಾಧನೆಗೆ ಸಹಕಾರ. ದಿನದ ಪ್ರಾರಂಭಕ್ಕೂ ಮುನ್ನ ಶಿವ ಸಹಸ್ರನಾಮ ಪಠಿಸಿ. 

ದೋಷ ಪರಿಹಾರ : ಶಿವಾರಾಧನೆ ಮಾಡಿ 

ಕುಂಭ :   ಕಾರ್ಯ ಸಾಧನೆ, ಉದ್ಯೋಗದಲ್ಲಿ ಅತ್ಯಧಿಕ ಶ್ರಮ, ನಿಮ್ಮ ಪ್ರತಿಭೆಯಿಂದ ಅನ್ಯರು ಹೆಸರು ಮಾಡಿಕೊಳ್ಳುತ್ತಾರೆ.  ಆದರೆ ನಿಮ್ಮ ಸಾಮರ್ಥ್ಯಕ್ಕೆ ನೀವು ಉತ್ತಮ ಫಲ ಪಡೆದೇ ಪಡೆಯುತ್ತೀರಿ. ಶುಭ ದಿನ. 

ದೋಷ ಪರಿಹಾರ : ಸಪ್ತಶತಿ ಪಾರಾಯಣ ಮಾಡಿ

ಮೀನ : ಕಾರ್ಯ ಸಾಧನೆಗೆ ಗುರುವಿನ ಅನುಗ್ರಹವಿದೆ, ನಿಮ್ಮ ಉದ್ಯೋಗ, ವ್ಯಾಪಾರದಲ್ಲಿ ನಿಮ್ಮ ಮಾರ್ಗದರ್ಶನದಿಂದ ಧನ ಸಂಪಾದನೆ ಅಧಿಕವಾಗಲಿದೆ. ವೃಥಾ ತಿರುಗಾಟ ಇರಲಿದೆ. ಸ್ವಲ್ಪ ಧನ ವ್ಯಯವೂ ಆಗಲಿದೆ.

ದೋಷ ಪರಿಹಾರ : ಕುಜ ಶಾಂತಿ ಮಾಡಿಸಿ.