ಮೇಷ ರಾಶಿ : ಸ್ತ್ರೀಯರು ಶತ್ರುಗಳಾಗುವ ಸಾಧ್ಯತೆ, ಆದರೆ ಸ್ತ್ರೀಯರೇ ಸಹಯಕ್ಕೂ ಬರಲಿದ್ದಾರೆ, ನೀವು ರೂಪಿಸಿದ ಯೋಜನೆಗೆ ಸ್ತ್ರೀಯರಿಂದ ಕ್ರಯಾಶೀಲತೆ ಸಿಗಲಿದೆ, ಆರೋಗ್ಯ ವ್ಯತ್ಯಯವಾಗಲಿದೆ. 

ದೋಷಪರಿಹಾರ : ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ವೃಷಭ : ವ್ಯವಹಾರದಲ್ಲಿ ಬುದ್ಧಿ ಮಾಂದ್ಯತೆ ಉಂಟಾಗಬಹುದು, ನೀವು ರೂಪಿಸಿದ ಯೋಜನೆ ಪರಿಪೂರ್ಣವಾಗಲಿದೆ, ಹೆಣ್ಣು ಮಕ್ಕಳು ಆಸರೆಯಾಗುತ್ತಾರೆ, ಆರೋಗ್ಯ ತಪಾಸಣೆಯಲ್ಲಿ ಸಹಾಯ ಮಾಡುತ್ತಾರೆ. 

ದೋಷ ಪರಿಹಾರ : ಕಟೀಲು ದುರ್ಗಾಪರಮೇಶ್ವರಿಯ ಸ್ಮರಣೆ ಮಾಡಿ

ಮಿಥುನ : ಕಾರ್ಯ ಸ್ಥಳದಲ್ಲಿ. ಮನೆಯಲ್ಲಿ ಸ್ತ್ರೀಯರಿಂದ ತಕರಾರು, ಹೆಣ್ಣುಮಕ್ಕಳಿಗೆ ಗೌರವ ಕೊಡುವ ಮನಸ್ಸು, ನಿಮ್ಮ ಸಂಗಾತಿಯಲ್ಲಿ ವಾಗ್ವಾದಗಳಾದರೂ ಕೂಡ ನಿಮ್ಮ ಚತುರ ಮಾತುಗಳು ಎಲ್ಲವನ್ನೂ ಸರಿದೂಗಿಸುತ್ತದೆ.

ದೋಷ ಪರಿಹಾರ : ಶನಿ ದರ್ಶನ ಮಾಡಿ

ಕಟಕ : ನಿಮ್ಮ ಆರೋಗ್ಯದಲ್ಲಿ ವ್ಯತ್ಯಯ, ತಾಯಿ ಆರೋಗ್ಯದಲ್ಲೂ ವ್ಯತ್ಯಾಸ ಕಾಣುತ್ತೀರಿ, ನಿಮ್ಮ ವ್ಯಾಪಾರ ಸ್ಥಳದಲ್ಲಿ ಓರ್ವ ಅಂಗ ಊನ ವ್ಯಕ್ತಿ ನಿಮಗೆ ಸಹಾಯ ಮಾಡುತ್ತಾನೆ. ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ದ್ವಿಗುಣ ಲಾಭಗಳಿಸುತ್ತೀರಿ. ಆದರೆ ಮೋಸ ಹೋಗುವ ಸಾಧ್ಯತೆಯೂ ಇದೆ ಎಚ್ಚರ. 
  
ದೋಷ ಪರಿಹಾರ : ದುರ್ಗಾ ನಮಸ್ಕಾರ ಮಾಡಿ

ಸಿಂಹ : ನಿಮ್ಮ ಮನೆ ಜಾಗದಲ್ಲಿ ಮೂವರಿಂದ ತಕರಾರು, ಆದರೆ ನಿಮ್ಮಂತೆಯೇ ನಡೆಯಲಿದೆ, ನಿಮ್ಮ ತಂದೆಯವರ ಸಹಕಾರ ದೊರೆಯಲಿದೆ, ನಿಮ್ಮ ಉದ್ಯೋಗದಲ್ಲಿ ಕೊಂಚ ಬದಲಾವಣೆ, ರಸ್ತೆ ಸಂಚಾರದ ವೇಳೆ ಕಿರಿಕಿರಿ.  

ದೋಷ ಪರಿಹಾರ : ಶಿವ ದೇವಸ್ಥಾನಕ್ಕೆ ಗೋಧಿ ದಾನ ಮಾಡಿ 

ಕನ್ಯಾ : ಸುಖ ಭೋಜನ ಪ್ರಾಪ್ತಿ, ಆದರೆ ಅಜೀರ್ಣವಾಗುವ ಸಾಧ್ಯತೆ, ನಿಮ್ಮ ಮಕ್ಕಳಿಗೆ ಪ್ರತಿಭೆಯಲ್ಲಿ ತೊಡಕುಂಟಾಗಲಿದೆ, ನಿಮ್ಮ ಗಂಟಲು ಭಾಗದಲ್ಲಿ ಅಥವಾ ಕಿಬ್ಬೊಟ್ಟೆ ಭಾಗದಲ್ಲಿ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ. 
  
ದೋಷ ಪರಿಹಾರ :  ಸುಬ್ರಹ್ಮಣ್ಯನಿಗೆ ತುಪ್ಪದ ದೀಪ ಹಚ್ಚಿ 

ತುಲಾ :  ಮಾನಸಿಕ ನೆಮ್ಮದಿ ಹಾಳು, ಬಗೆಯರಿಯದ ವಿಷಯಕ್ಕೆ ಚಿಂತೆ, ಸಮಯ ವ್ಯರ್ಥವಾಗುವ ದಿನ, ಹಿರಿಯರು ಸಲಹೆ ಹೇಳಿದರೂ ನಿಮ್ಮ ಮನಸ್ಸು ಬದಲಾಗುವುದಿಲ್ಲ. ನಿಮ್ಮ ಕುಲದೇವರ ಸ್ಮರಣೆ ಮಾಡಿ. 

ದೋಷ ಪರಿಹಾರ : ದತ್ತಾತ್ರೇಯ ಸ್ಮರಣೆ ಮಾಡಿ 

ವೃಶ್ಚಿಕ : ಬಹು ದೂರದ ಪ್ರಯಾಣಕ್ಕೆ ಸಿದ್ಧತೆ, ನಿಮ್ಮ ದೂರದ ಬಂಧುಗಳ ಆಗಮನ, ಆದರೆ ಸಣ್ಣಮಟ್ಟದ ಮನಸ್ತಾಪ.  ವಸ್ತು ಕಳವಾಗುವ ಸಂಭವ ಇದೆ. ಆದಷ್ಟು ನಿಮ್ಮ ವಸ್ತುಗಳ ಬಗ್ಗೆ ಎಚ್ಚರವಿರಲಿ.    

ದೋಷ ಪರಿಹಾರ : ನಾಗ ಪ್ರಾರ್ಥನೆ ಮಾಡಿ

ಧನಸ್ಸು :  ನಿಮ್ಮ ಆರೋಗ್ಯದಲ್ಲಿ ಕೊಂಚ ವ್ಯತ್ಯಯ, ನಿಮ್ಮ ಯೋಜನೆಗಳಿಗೆ ಶತ್ರುಗಳ ಅಡ್ಡಿ, ನಿಮ್ಮ ಬಂಧುವರ್ಗ ನಿಮ್ಮಲ್ಲಿ ಬೇಸರ ತರಿಸಲಿದೆ, ನಿಮ್ಮ ಪ್ರತಿಭಾ ಸ್ಥಾನ ನಿಮ್ಮ ಸಹೋದರರ ಪಾಲಾಗಲಿದೆ. 

ದೋಷ ಪರಿಹಾರ : ಗುರು ಪ್ರಾರ್ಥನೆ ಮಾಡಿ 

ಮಕರ :  ನಿಮ್ಮ ಯೋಚನೆಯಲ್ಲಿ ಸ್ವಾತಂತ್ರ್ಯವಿಲ್ಲದಾಗುತ್ತದೆ, ಕುಟುಂಬದ ಕಾರಣಕ್ಕೆ ಧನ ವ್ಯಯ, ಮಾತಿನಿಂದಲೂ ಧನ ಹಾನಿಯಾಗುವ ದಿನ, ನಿಮ್ಮ ಸಂಗಾತಿ ನಿಮ್ಮ ಅದೃಷ್ಟ ಬದಲಾಯಿಸಲಿದ್ದಾರೆ.  
  
ದೋಷ ಪರಿಹಾರ : ಶನಿ ಪ್ರಾರ್ಥನೆ ಮಾಡಿ

ಕುಂಭ : ನಿಮ್ಮಲ್ಲಿ ಧೈರ್ಯ ಸ್ಥೈರ್ಯಗಳ ಬೆಳವಣಿಗೆ, ಹೊಸ ಕಾರ್ಯ ಸಾಧನೆಗೆ ಮುನ್ನುಗ್ಗುತ್ತೀರಿ. ನಿಮ್ಮ ಧನ ದ್ವಿಗುಣವಾಗಿ ಬರಲಿದೆ, ನಿಮ್ಮ ಸಹೋದರರ ಸಹಕಾರದಿಂದ ಕಾರ್ಯ ಸಾಧನೆ. 

ದೋಷ ಪರಿಹಾರ : ನವಗ್ರಹ ಪ್ರಾರ್ಥನೆ ಮಾಡಿ
  
ಮೀನ :  ನಿಮ್ಮೊಂದಿಗಿದ್ದ ಗೆಳೆಯರು ನಿಮ್ಮಲ್ಲಿ ಹೊಸ ಆಲೋಚನೆ ಮೂಡಿಸಲಿದ್ದಾರೆ, ಹಳೇ ಗೆಳೆಯರ ಭೇಟಿ, ಹೊಸ ಸಂತೋಷ ನಿಮ್ಮದಾಗಲಿದೆ. ಅನುಕೂಲದ ದಿನವಾಗಿರಲಿದೆ. ಶುಭ ದಿನ.  
  
ದೋಷ ಪರಿಹಾರ : ಶಾರದಾಂಬೆಯ ದರ್ಶನ ಮಾಡಿ