'ಸಂಪಾಯಿತಲೇ ಪರಾಕ್' ಕಾರ್ಣಿಕ ಭವಿಷ್ಯ, ತೆರೆದಿಟ್ಟ ರಾಜಕೀಯ ಗೂಡಾರ್ಥ!
ಸಂಪಾಯಿತಲೇ ಪರಾಕ್ ಕಾರಣಿಕ ನುಡಿ/ ರಾಜ್ಯ ಮತ್ತು ಕೇಂದ್ರ ರಾಜಕೀಯದಲ್ಲಿ ಸಮಸ್ಯೆ ಇಲ್ಲ/ ಮೈಲಾರ ಕಾರಣಿಕವನ್ನು ವಿಶ್ಲೇಷಿಸಿದ ಒಡೆಯರ್/ ಪ್ರಸಕ್ತ ವರ್ಷದಲ್ಲಿ ಮಳೆ ಬೆಳೆ ಸಮೃದ್ದಿಯಾಗುತ್ತದೆ/ ಏಳು ಕೋಟಿ,ಏಳು ಕೋಟಿ ಚಾಂಗಮಲೋ ಘೋಷಣೆ
ಬಳ್ಳಾರಿ/ ಹಾವೇರಿ(ಫೆ/. 11) ಉತ್ತರ ಕರ್ನಾಟಕದ ಹೆಬ್ಬಾಗಿಲಿನ ಕಾರಣಿಕವೆಂದೇ ಪ್ರಖ್ಯಾತಿಯನ್ನು ಪಡೆದಿರೋ ಬಳ್ಳಾರಿ ಜಿಲ್ಲೆಯ ಮೈಲಾರದ ಮೈಲಾರೇಶ್ವರ ಕಾರಣಿಕ ಭವಿಷ್ಯ ಈ ಬಾರಿ ಎಲ್ಲರಲ್ಲೂ ಹೊಸ ಉತ್ಸಾಹ ಮತ್ತು ಹುಮ್ಮಸ್ಸನ್ನು ತಂದಿದೆ. ಲಕ್ಷಾಂತರ ಭಕ್ತರ ನಿಶ್ಯಬ್ಧತೆಯ ಮಧ್ಯೆ ಮೈಲಾರದ ಗೊರವಪ್ಪ 'ಸಂಪಾಯಿತಲೇ ಪರಾಕ್' ಎನ್ನುತ್ತಿದ್ದಂತೆ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಅಷ್ಟಕ್ಕೂ ಈ ಬಾರಿ ಕಾರಣಿಕದ ಅರ್ಥ ವಿಶೇಷವೇನು ಅನ್ನೋದರ ಕಂಪ್ಲೀಟ್ ಡಿಟೈಲ್ ವರದಿ ಇಲ್ಲಿದೆ ನೋಡಿ..
ಮೈಲಾರದ ಕಾರಣಿಕ ಎಂದಿಗೂ ಸುಳ್ಳಾಗೋದೇ ಇಲ್ವಂತೆ.. ಒಮ್ಮೆ ರಾಜಕೀಯ ಮತ್ತೊಮ್ಮೆ ಕೃಷಿ, ಮಳೆಯಲ್ಲಿ ಇದರ ಭವಿಷ್ಯ ನಿಜವಾಗುತ್ತದೆ .. ಕಾರಣಿಕ ಕೇಳಲೆಂದೇ ಆಂಧ್ರ, ಮಹಾರಾಷ್ಟ್ರ ಸೇರಿದಂತೆ ರಾಜ್ಯದ ಲಕ್ಷಾಂತರ ಜನರು ಬರುತ್ತಾರೆ.. ಹೌದು ಪ್ರತಿಯೊಬ್ಬರಲ್ಲೂ ಒಂದೊಂದು ನಂಬಿಕೆ ಇರುತ್ತದೆ. ಅದರಂತೆ ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಮೈಲಾರದ ಕಾರಣಿಕವನ್ನು ಲಕ್ಷಾಂತರ ಭಕ್ತರು ಒಪ್ಪುತ್ತಾರೆ. ಈ ಬಾರಿಯ ಮೈಲಾರಲಿಂಗೇಶ್ವರ ದೈವವಾಣಿ ಕಾರ್ಣಿ ಕದ ಗೊರವಪ್ಪ ರಾಮಣ್ಣ 'ಸಂಪಾಯಿತಲೇ ಪರಾಕ್' ಎಂದಿದೆ.
ಕಾರಣಿಕವನ್ನು ವಿಶ್ಲೇಷಿಸಿದ ದೇವಸ್ಥಾನದ ಧರ್ಮದರ್ಶಿ ವೆಂಕಪಯ್ಯ ಒಡೆಯರ್ ಈ ಬಾರಿಯ ದೈವವಾಣಿಯ ಅರ್ಥ ಎಲ್ಲರ ಮುಖದಲ್ಲೂ ನಗುವಿರುತ್ತದೆ ಎಂದಗಿದೆ. ಈ ವರ್ಷ ಸಕಲ ಜೀವರಾಶಿ, ಜೀವಾತ್ಮ ಗಳು ಪ್ರೀತಿ ವಿಶ್ವಾಸದಿಂದ ಬಾಳುತ್ತವೆ. ಮಳೆ, ಬೆಳೆ ಸಮೃದ್ಧವಾಗುತ್ತದೆ. ರಾಜಕಾರಣದಲ್ಲಿ ಲೋಪ ದೋಷಗಳಾಗದಂತೆ ರಾಜಕಾರಣ ಮಾಡುತ್ತಾರೆ. ಈ ವರ್ಷ ಜನರು ಸುಖಃ ಶಾಂತಿ ನೆಮ್ಮದಿ ಯಿಂದ ಬದುಕುತ್ತಾರೆಂದರು.
ಬಿಸಿಯಾದ ಪಾಟೀಲರಿಗೆ ಕೃಷಿ-ಖುಷಿ; ಬೈರತಿಗೆ ಬಂಪರ್
ಇನ್ನೂ ಕಳೆದ ವರ್ಷ 'ಕಬ್ಬಣಿದ ಸರಪಳಿ ಹರಿಯಿತಲೇ ಪರಾಕ್' ಎಂದು ಭವಿಷ್ಯವಾಣಿ ಕಾರಣಿಕ ನುಡಿದಿತ್ತು. ಆಗ ಸಮ್ಮಿಶ್ರ ಸರ್ಕಾರ ಪತನವಾಗಿತ್ತು. ಹೀಗಾಗಿ ಈ ಬಾರಿ ಭವಿಷ್ಯದ ಮೇಲೆ ಸಾಕಷ್ಟು ಕೂತುಹಲವಿತ್ತು. ಆದ್ರೆ, ಈ ಬಾರಿ ಭವಿಷ್ಯವಾಣಿ ಎಲ್ಲರಲ್ಲೂ ಹೊಸ ಉತ್ಸಾಹ ಮತ್ತು ಉಲ್ಲಾಸವನ್ನು ತಂದಿದೆ. ಪ್ರಮುಖವಾಗಿ ಈ ಕಾರಣಿಕ ಭವಿಷ್ಯವನ್ನು ಕೃಷಿ ಮತ್ತು ರಾಜಜಕೀಯ ವ್ಯಕ್ತಿಗಳು ತಮ್ಮ ತಮ್ಮ ವಲಯದಲ್ಲಿ ಉಲ್ಲೇಖಿಸುತ್ತಿರೋದ್ರಿಂದ ಈ ಬಾರಿಯ ಕಾರಣಿಕ ಹೊಸ ಹುಮ್ಮಸ್ಸನ್ನು ತಂದಿದೆ. ಇನ್ನೂ ಕಾರಣಿಕ ಹೇಳೋ ಗೊರವಪ್ಪ ಹತ್ತು ದಿನಗಳ ಕಾಲ ಉಪವಾಸವಿದ್ದು, ಈ ಕಾರಣಿಕ ನುಡಿಯುತ್ತಾರೆ. ಕಾರಣಿಕದ ಹತ್ತು ದಿನಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಅಲ್ಲದೆ ಲಕ್ಷಾಂತರ ಜನರಿದ್ದರೂ, ಕಾರಣಿಕ ನುಡಿಯೋ ವೇಳೆ ಒಂಚೂರು ಸದ್ದು ಹೊರಬಾರದೇ ಇರೋದೆ ಇಲ್ಲಿಯ ವಿಶೇಷ..
ಕಾರಣಿಕಕ್ಕೂ ಮುನ್ನ ಹತ್ತು ದಿನಗಳ ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ. ಕಾರಣಿಕದ ಭವಿಷ್ಯ ಅದೇನೇ ಇರಲಿ. ಇಲ್ಲಿಯ ಭಕ್ತ ಸಮೂಹ ನೋಡೋದೇ ಒಂದು ಆನಂದ ಇಷ್ಟೊಂದು ಜನರು ಬಂದು ಇಲ್ಲಿ ಪೂಜೆ ಕೈಂಕರ್ಯ ಮಾಡಿದ್ರೂ ಯಾವುದೆ ಅನಾಹುತವಾಗದೇ ಇರುವುದು ಮೈಲಾರಲಿಂಗೇಶ್ವರನ ಪವಾಡವೇ ಸರಿ..