ಹಾವೇರಿ, (ಅ.24): ಪ್ರತಿ ವರ್ಷದಂತೆ ಈ ವರ್ಷವೂ ಸಹ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ಮಾಲತೇಶ ದೇವರ ಕಾರ್ಣಿಕ ನಡೆಯಿತು. 

"

ಈ ಕಾರ್ಣಿಕದಲ್ಲಿ ಪ್ರತಿವರ್ಷದಂತೆ ಮಾಲತೇಶ ದೇವರ ಗೊರವಯ್ಯ ನಾಗಪ್ಪಜ್ಜ ಅವರು, ವ್ಯಾದಿ ಬೂದಿ ಆದಿತಲೆ, ಸೃಷ್ಠಿ ಸಿರಿ ಆಯಿತಲೆ ಪರಾಕ್ ಎಂದು ವಾರ್ಷಿಕ ಭವಿಷ್ಯ ನುಡಿದಿದ್ದಾರೆ.

'ಸಂಪಾಯಿತಲೇ ಪರಾಕ್' ಕಾರ್ಣಿಕ ಭವಿಷ್ಯ, ತೆರೆದಿಟ್ಟ ರಾಜಕೀಯ ಗೂಡಾರ್ಥ! 

'ವ್ಯಾದಿ ಬೂದಿ ಆದಿತಲೇ, ಸೃಷ್ಠಿ ಸಿರಿ ಆಯಿತಲೆ'  ಎನ್ನುವ ನಾಗಪ್ಪಜ್ಜ ಗೊರವಯ್ಯನ ಕಾರ್ಣಿಕ ನುಡಿವಾಣಿಯನ್ನು ಪ್ರಧಾನ ಅರ್ಚಕ ಸಂತೋಷ ಭಟ್ಟ ಎನ್ನುವರು ವಿಶ್ವೇಷಣೆ ಮಾಡಿದ್ದಾರೆ.

  ಈ ವರ್ಷ ಬೆಳೆದ ಯಾವ ಬೆಳೆ ರೈತನಿಗೆ ಸಿಗೋದಿಲ್ಲ. ಕೈಗೆ ಬಂದಿದ್ದು ಬಾಯಿಗೆ ಬರೋದಿಲ್ಲ. ಅವನು ಬೆಳೆದ ಬೆಳೆಗಳು ಹಾಳಾಗುತ್ತೆ.  ಆದರೆ ಮುಂದಿನ ದಿನಗಳಲ್ಲಿ ಹಾಳಾಗಿದ್ದು ಸರಿ ಆಗುತ್ತದೆ. ನಷ್ಟ ಆಗಿದ್ದಕ್ಕೆ ಮುಂದೆ ಭಗವಂತ ರೈತನಿಗೆ ಸಿರಿ ಸಂಪತ್ತು ನೀಡುತ್ತಾನೆ. ಇದು ರೈತವರ್ಗಕ್ಕೆಂದೆ ನುಡಿಯುವ ಭವಷ್ಯವಾಣಿ ಎಂದು ಸಂತೋಷ ಭಟ್ಟ ವಿಶ್ಲೇಷಣೆ ಮಾಡಿದ್ದಾರೆ.