Asianet Suvarna News Asianet Suvarna News

ಈ ರಾಶಿಯವರನ್ನು ನಿಮ್ಮ ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳಬೇಡಿ!

ಕೆಳಗಿನ ಜೋಡಿ ರಾಶಿಯವರು ಮದುವೆ ಆಗಲೆಬಾರದು. ಒಂದು ವೇಳೆ ಆದರೆ ಹೊಂದಾಣಿಕೆ ಕೊರತೆ ಬರುತ್ತದೆ. ಯಾಕೆ ಹೀಗೆ ಎಂಬುದಕ್ಕೆ ಉತ್ತರ ಇಲ್ಲಿದೆ. ಈಗಾಗಲೇ ಮದುವೆ ಆಗಿದ್ದರೆ ನಾವೇನು ಮಾಡಲು ಸಾಧ್ಯವಿಲ್ಲ!

Don't marry these Astro signs; Why

ಮದುವೆ ಸ್ವರ್ಗದಲ್ಲಿಯೇ ನಿಶ್ಚಯವಾಗುತ್ತದೆ ಎಂಬ ಮಾತಿದೆ. ಸಂಬಂಧಿಕರಲ್ಲೋ, ಪರಿಚಿತರಲ್ಲೋ ಅಥವಾ ದಲ್ಲಾಳಿಗಳ ಮೂಲಕವೋ, ಮ್ಯಾಟ್ರಿಮೋನಿಯಲ್ಲೊ ಹುಡುಗಿ ಅಥವಾ ಹುಡುಗನನ್ನು ಹುಡುಕಿ ಮದೆಯಾಗುವುದು ಸರ್ವೇಸಾಮಾನ್ಯ. ಇನ್ನು ಪ್ರೇಮ ವಿವಾಹಗಳಿಗೂ ಕೊರತೆ ಇಲ್ಲ. ಅರೇಂಜ್ ಮ್ಯಾರೇಜ್ ಎಂದಾದರೆ ಅಲ್ಲಿ ಜಾತಕ, ರಾಶಿ ಎಲ್ಲ ಹೊಂದಾಣಿಕೆಯಾಗಲೇಬೇಕು ಎಂಬ ಅಲಿಖಿತ ನಿಯಮವೊಂದು ಸಮಾಜದಲ್ಲಿದೆ. 

ಮೇಷ ಮತ್ತು ಕಟಕ
ಮೇಷ ಮತ್ತು ಕಟಕ ರಾಶಿಯವರು ಸದಾ ಪಾದರಸದಂತೆ ಓಡಾಡಿಕೊಂಡು ಇರುವವರೆ ಆಗಿರುತ್ತಾರೆ. ಆದರೆ ಇಬ್ಬರ ನಡುವೆ ಹೊಂದಾಣಿಕೆಯಾಗುವುದು ತುಂಬಾ ಕಷ್ಟ. ಆದರೆ ಇಬ್ಬರ ಅಗತ್ಯಗಳು ಬೇರೆಯಾಗಿರುತ್ತವೆ. ಕಟಕ ರಾಶಿಯವರ ಎಲ್ಲವನ್ನು ಸಲ್ಲಿಸಿಕೊಳ್ಳುವ ಮನೋಭಾವ ಮೇಷ ರಾಶಿಯವರ ಅಗ್ರೇಸ್ಸಿವ್ ಮನೋಭಾವಕ್ಕೆ ವ್ಯತಿರಿಕ್ತವಾಗಬಹುದು.

ಕುಂಭ ಮತ್ತು ಕಟಕ ರಾಶಿ
ಸದಾ ಓಡುತ್ತಿರುವ ಕುಂಭ ರಾಶಿಯವರ ಜೀವನ ಶೈಲಿ ಎಲ್ಲವನ್ನು ಅಳೆದು ತೂಗಿ ಮುಂದೆ ಸಾಗುವ ಕಟಕ ರಾಶಿಯವರೊಂದಿಗೆ ಹೊಂದಾಣಿಕೆಯಾಗದೆ ಇರಬಹುದು. ಇಬ್ಬರ ನಡುವೆ ಕೆಲವು ಸಂದರ್ಭದಲ್ಲಿ ವಾಗ್ಯುದ್ಧ ನಡೆದರೂ ಆಶ್ಚರ್ಯವಾಗಬಹುದು. ತಮ್ಮ ತಮ್ಮ ಐಡೆಂಟಿಟಿಗೆ ಭಂಗ ಬರುತ್ತದೆ ಎಂದು ಅಸ್ತಿತ್ವಕ್ಕೆ ಹೋರಾಡಬಹುದು.

ಸಿಂಹ ಮತ್ತು ವೃಷಭ
ಇಲ್ಲಿ ಕೂಡ ಎರಡು ರಾಶಿಯವರ ಅಗತ್ಯಗಳು ಬೇರೆ ಬೇರೆಯಾಗಿರುತ್ತವೆ. ವೇಗದ ವಾಹನವೊಂದು ಚಲಿಸದೇ ನಿಂತ ವಸ್ತುವಿಗೆ ಡಿಕ್ಕಿಯಾದಾಗ ನಡೆಯುವಂಥ ಅವಘಡ ಎರಡು ರಾಶಿಯವರು ಮದುವೆಯಾದರೆ ಸಂಭವಿಸಿಬಿಡಬಹುದು. ಸಿಂಹ ರಾಶಿಯವರು ಸದಾ ಹೆಸರು ಮತ್ತು ಭವಿಷ್ಯದ ಹಿಂದೆ ಬಿದ್ದಿರುತ್ತಾರೆ. ವೃಷಭ ರಾಶಿಯವರು ಸುರಕ್ಷತೆಗೆ ಆದ್ಯತೆ ನೀಡುತ್ತಾರೆ. ಹಾಗಾಗಿ ಇದು ಸಹ ದಾಂಪತ್ಯದಲ್ಲಿ ಬಿರುಕು ತರಬಹುದು.

ವೃಶ್ಚಿಕ ಮತ್ತು ಮೇಷ
ಇಬ್ಬರು ತಮ್ಮ ಸ್ವತಂತ್ರ ಮನೋಭಾವದಿಂದ ಪರಸ್ಪರ ಕಿತ್ತಾಡಿಕೊಳ್ಳುವ ಸಂದರ್ಭ ಎದುರಾಗುತ್ತದೆ. ವೃಶ್ಚಿಕ ರಾಶಿಯವರು ಅನುಮಾನ ವ್ಯಕ್ತಪಡಿಸುವುದು ಜಾಸ್ತಿ. ಇದೇ ಕಾರಣ ಇಬ್ಬರ ನಡುವಿನ ಬಾಂಧ್ಯವ್ಯಕ್ಕೆ ತೊಡಕಾಗಬಹುದು.

ಮಿಥುನ ಮತ್ತು ಕಟಕ
ಕಟಕ ರಾಶಿಯವರು ತುಂಬಾ ಸೂಕ್ಷ್ಮ ಸ್ವಭಾವದವರು. ಆದರೆ ಮಿಥುನ ರಾಆಶಿಯವರು ನೇರವಾಗಿ ಮಾತನಾಡುವವರು. ಹಾಗಾಗಿ ಇಬ್ಬರ ನಡುವೆ ಹೊಂದಾಣಿಕೆ ಕಷ್ಟ ಕಷ್ಟ.

ಕನ್ಯಾ ಮತ್ತು ಸಿಂಹ
ಸಿಂಹ ರಾಶಿಯವರಿಗೆ ಹಣ ಖರ್ಚು ಮಾಡುವುದು  ಎಂದರೆ ಖುಷಿ. ಆದರೆ ಕನ್ಯಾ ರಾಶಿಯವರಿಗೆ ಉಳಿತಾಯದ ಆದ್ಯತೆ. ಇದೆ ವಿಚಾರಕ್ಕೆ ಇಬ್ಬರ ನಡುವೆ ಗೊಂದಲ ಹುಟ್ಟಿಕೊಂಡರೂ ಆಶ್ಚರ್ಯವಿಲ್ಲ.

ಮಕರ ಮತ್ತು ತುಲಾ
ಮಕರ ರಾಶಿಯವರು ಇತರರನ್ನು ತಮ್ಮ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಲು ನೋಡುತ್ತಾರೆ.  ಪ್ರತಿಯೊಂದು ವಿಚಾರದಲ್ಲಿಯೂ ತಮ್ಮದೆ ಆದ ಅಭಿಪ್ರಾಯ ವ್ಯಕ್ತಪಡಿಸಿ ಅದನ್ನು ಸಾಬೀತು ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ತುಲಾ ರಾಶಿಯವರು ಮೂಡಿ ಸ್ವಭಾವದವರು. ಇಬ್ಬರು ಅತಿ ಹೆಚ್ಚು ಕೆಲಸ ಮಾಡಿದರೂ ಹೊಂದಾಣಿಕೆಗಾಗಿ ಒದ್ದಾಡುವ ಸಂದರ್ಭ ಎದುರಾಗಬಹುದು.

ವೃಷಭ ಮತ್ತು ಕುಂಭ
ಸಂಬಂಧದಲ್ಲಿ ಹೊಂದಾಣಿಕೆ ಆರಂಭವಾಗುವ ಮೊದಲೆ ಮುರಿದು ಬೀಳಬಹುದು. ಇಬ್ಬರು ತಮ್ಮದೇ ದೃಷ್ಟಿಕೋನಕ್ಕೆ ಸದಾ ಅಂಟಿಕೊಂಡಿರುತ್ತಾರೆ. ವೃಷ್ಭದವರಿಗೆ ಅಸ್ತಿತ್ವ ಮುಖ್ಯವಾಗಿ ಎಲ್ಲ ಕಡೆ ಸಾಬೀತು ಮಾಡಲು ಮುಂದಾಗುತ್ತಿರುತ್ತಾರೆ. ಕುಂಭ ರಾಶಿಯವರ ಅಭಿಪ್ರಾಯಕ್ಕೆ ಮನ್ನಣೆ ನೀಡುವುದಕ್ಕೂ ಹಿಂಜರಿಯುತ್ತಾರೆ. ಶಾಂತಿ ಬಯಸುವ ಕುಂಭ ಮತ್ತು ಅಸ್ತಿತ್ವ ಬಯಸುವ ವೃಷಭ ರಾಶಿಯವರ ನಡುವೆ ಸಂಬಂಧ ಬೆಸೆಯುವುದು ಸಾಧ್ಯವೆ ಇಲ್ಲ.

ಮೀನ ಮತ್ತು ಸಿಂಹ
ಮೀನ ರಾಶಿಯವರು ಸದಾ ಕನಸು ಕಾಣುವವರಾಗಿರುತ್ತಾರೆ. ಸಿಂಹ ರಾಶಿಯವರ ಮುನ್ನುಗ್ಗುವ ಮನೋಭಾವಕ್ಕೆ ಕೆಲವೊಂದು ಸಂದರ್ಭದಲ್ಲಿ ಇದರಿಂತ ತಡೆ ಉಂಟಾಗಬಹುದು. ಇಲ್ಲಿ ನೇರ ನೇರ ಮಾತುಕತೆ ನಡೆಯಲು ಹೋಗಿ ಸಂಬಂಧಗಳಲ್ಲಿ ಬಿರುಕು ಕಾಣಿಸಿಕೊಳ್ಳಬಹುದು.

ಮಕರ ಮತ್ತು ಧನು
ಮಕರ ರಾಶಿಯವರಿಗೆ ಸದಾ ಜಾಲಿ ಮೂಡ್ ನಲ್ಲಿ ಇರುವುದಕ್ಕೆ ಇಷ್ಟ. ಧನು ರಾಶಿಯವರಿಗೆ ಬಬ್ಲಿ ಬಬ್ಲಿಯಾಗಿರುವುದಕ್ಕೆ ಇಷ್ಟ. ಆದರೆ ಇಲ್ಲಿ ಒನಬ್ಬರನ್ನು ಒಬ್ಬರು ಮೀರಿಸಬೇಕು ಎಂದು ಮುಂದಾಗುವ ಅಪಾಯ ಎದುರಾಗುವುದರಿಂದ ಹೊಂದಾಣಿಕೆ ಕಷ್ಟ.

ವೃಶ್ಚಿಕ ಮತ್ತು ಕುಂಭ
ಸದಾ ಪ್ರವಾಸದಲ್ಲಿ ತೊಡಗುವ ಕುಂಭ ರಾಶಿಯವರು ತಮ್ಮ ಮನೆಯ ಮತ್ತು ತನ್ನ ಕಮಿಟ್ ಮೆಂಟ್ ಗಳಿಗೆ ಹೆಚ್ಚಿ ಆದ್ಯತೆ ನೀಡುವ ವೃಶ್ಚಿಕ ರಾಶಿಯವರ ನಡುವೆ ದಾಂಪತ್ಯ ಕೂಡಿಕೆಯಾಗುವುದು ಕಷ್ಟ.

ಮಿಥುನ ಮತ್ತು ಮೀನ
ಮಿಥುನ ರಾಶಿಯವರಿಗೆ ಸದಾ ಸಂಪೂರ್ಣ ಸ್ವಾತಂತ್ರ್ಯ ಬೇಕಾಗುತ್ತದೆ. ಆದರೆ ಮೀನ ರಾಶಿಯವರು ಅಸ್ತಿತ್ವಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಇವರಿಬ್ಬರ ನಡುವೆ ಒಂದು ಆಕರ್ಷಣೆ ಸದಾ ಉಳಿದುಕೊಂಡರೂ ಒಂದು ಹಂತಕ್ಕೆ ತಲುಪಿದಾಗ ಎಲ್ಲವೂ ಕೊನೆಯಾಗುತ್ತದೆ.

ಕನ್ಯಾ ಮತ್ತು ಮಿಥುನ
ಎರಡು ರಾಶಿಯವರ ಹುಡುಕಾಟಗಳು ಭಿನ್ನವಾಗಿರುತ್ತವೆ. ಕನ್ಯಾ ರಾಶಿಯವರು ತುಂಬಾ ಗಂಭೀರ ಮತ್ತು ಪ್ರ್ಯಾಕ್ಟಿಕಲ್ ಮನಸ್ಥಿತಿಯರು. ಮಿಥುನ ರಾಶಿಯವರು ಯಾವುದೇ ನಿರ್ಧಾರ ತೆಗೆದುಕೊಳ್ಳಲು ತಕ್ಷಣಕ್ಕೆ ಮುಂದಾಗುವುದಿಲ್ಲ. ಕನ್ಯಾ ರಾಶಿಯವರು ಮುಂದೆ ಸಾಗಲು ಬಯಸಿದರೆ ಮಿಥುನ ರಾಶಿಯವರು ನಾಲ್ಕಾರು ಸಾರಿ ಯೋಚನೆ ಮಾಡೋಣ ಎಂದು ಹೇಳುತ್ತಾರೆ. ಹಾಗಾಗಿ ಈ ಜೋಡಿ ಸಹ ಕೂಡಿಕೆಯಾಗುವುದು ಅನುಮಾನ.

ಇದು ಕೇವಲ ಒಂದು ಮಾರ್ಗದರ್ಶಿ ಸೂತ್ರ ಮಾತ್ರ. ಇದೇ ಅಂತಿಮವಲ್ಲ. ವ್ಯಕ್ತಿಗಳ ಸುತ್ತಲಿನ ವಾತಾವರಣ ಮತ್ತು ಆತ ನಡೆದುಕೊಂಡು ಬಂದ ರೀತಿ ಸಹ ವರ್ತನೆಗಳನ್ನು ಬದಲಾವಣೆ ಮಾಡಬಲ್ಲದರು.

Follow Us:
Download App:
  • android
  • ios