ಈ ರಾಶಿಯವರ ದೀರ್ಘಕಾಲದ ಪ್ರಶ್ನೆಯೊಂದಕ್ಕೆ ಸಿಗಲಿದೆ ಉತ್ತರ

ಆತ್ಮೀಯರೇ, ಇಂದಿನ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು.  ಇಂದು  ಕರ್ಕಾಟಕ ರಾಶಿಯಲ್ಲಿ  ಸೂರ್ಯ, ಬುಧ, ರಾಹುಗಳಿದ್ದು, ಶುಕ್ರನು  ಇಂದು ಸಿಂಹರಾಶಿ ಬಿಟ್ಟು ಕನ್ಯಾರಾಶಿಯನ್ನು ಪ್ರವೇಶಿಸಿದ್ದಾನೆ. ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ಮೀನ ರಾಶಿಯಲ್ಲಿದ್ದಾನೆ. ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  

ಮೇಷ ರಾಶಿ : ಇಂದು ನಿಮ್ಮ ಪಾಲಿಗೆ ಧನ ವ್ಯಯ, ಉದ್ಯೋಗದಲ್ಲಿನ ಕೆಲಸಗಳು ಅರ್ಧಕ್ಕರ್ಧ ಹಾಗೇ ಉಳಿಯುತ್ತದೆ. ಸ್ವಲ್ಪ ಆಯಾಸವೆನಿಸುತ್ತದೆ. ಆದರೆ ನಿಮ್ಮ ಸಂಗಾತಿ ನಿಮ್ಮ ಸಹಕಾರಕ್ಕೆ ಬರುತ್ತಾರೆ. ಚೈತನ್ಯ ಚಿಗುರಲಿದೆ.
  

ದೋಷಪರಿಹಾರ : ಅನ್ನಪೂರ್ಣೇಶ್ವರಿಗೆ ವಸ್ತ್ರ ದಾನ ಮಾಡಿ

ವೃಷಭ : ಆತ್ಮೀಯರೇ ನಿಮ್ಮ ಸಮಸ್ಯೆಗಳಿಗೆ ಇಂದು ಉತ್ತರ ಸಿಗಲಿದೆ, ನಿಮ್ಮ ನಿಮ್ಮ ಮನಸ್ಸು ಚೇತೋಹಾರಿಯಾಗಲಿದೆ. ನಿಮ್ಮ ಸ್ನೇಹಿತರು ನಿಮ್ಮ ಜೊತೆ ಸಂಚಾರಕ್ಕೆ ಬರಲಿದ್ದಾರೆ. ನೀರಿನ ವ್ಯಾಪಾರಿಗಳಿಗೆ ಉತ್ತಮ ದಿನ. 

ದೋಷ ಪರಿಹಾರ : ನಿಮ್ಮ ಕುಲ ದೇವರಿಗೆ ತುಪ್ಪದ ದೀಪವನ್ನು ಹಚ್ಚಿ

ಮಿಥುನ : ಆತ್ಮೀಯರೇ ಇಂದು ನಿಮ್ಮ ದಾಂಪತ್ಯದಲ್ಲಿ ಸ್ವಲ್ಪ ಕಲಹ ಉಂಟಾಗಬಹುದು, ನಿಮ್ಮ ಲಾಭಕ್ಕೆ ಕತ್ತರಿಯೂ ಬೀಳುವ ಸಾಧ್ಯತೆ ಇದೆ. ನಿಮ್ಮ ಮಕ್ಕಳಿಂದ ಸಹಾಯ ಸಿಗಲಿದೆ. ಅಷ್ಟೇ ಅಲ್ಲ ನಿಮ್ಮ ಪ್ರತಿಭೆಗೆ ಶುಭಫಲ ದೊರೆಯಲಿದೆ. 

ದೋಷ ಪರಿಹಾರ : ವಿಷ್ಣು ದೇವಾಲಯಕ್ಕೆ ಹೋಗಿಬನ್ನಿ.

ಕಟಕ : ಇಂದು ನಿಮ್ಮ ಉದ್ಯೋಗದಲ್ಲಿ ಉತ್ತಮ ಪ್ರಗತಿಯನ್ನು ಕಾಣಲಿದ್ದೀರಿ. ಸಹೋದರರ ಸಹಕಾರ ಜೊತೆಗೆ ನಿಮ್ಮ ರೋಗ ಸ್ವಲ್ಪ ಉಲ್ಬಣಗೊಳ್ಳಲಿದೆ. ಚಿಕಿತ್ಸೆಗೆ ಮೊರೆ ಹೋಗಲೇಬೇಕಾದ ಪರಿಸ್ಥಿತಿ. ಮಾನಸಿಕ ಸದೃಢತೆ ಇರಲಿದೆ.
  
ದೋಷ ಪರಿಹಾರ : ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಅಕ್ಕಿ ಸಮರ್ಪಣೆ ಮಾಡಿ

ಸಿಂಹ : ನಿಮ್ಮ ಉತ್ಸಾಹ ಕಡಿಮೆಯಾಗುವ ಸಾಧ್ಯತೆ ಇದೆ, ಮನೋ ಕಾಮನೆ ಈಡೇರುವ ಅವಕಾಶಗಳು ಕಮ್ಮಿ. ನಿಮ್ಮ ರೋಗ ಉಲ್ಬಣವಾಗಬಹುದು. ನಿಮ್ಮ ಉದ್ಯೋಗದಿಂದ ಸ್ವಲ್ಪ ನಷ್ಟವನ್ನು ಅನುಭವಿಸಬೇಕಾಗುತ್ತದೆ.


ದೋಷ ಪರಿಹಾರ : ಶಿವಾರಾಧನೆ ಮಾಡಿ, ಅಥವಾ ಶಿವನಿಗೆ ಗೋಧಿ ಅಭಿಷೇಕ ಮಾಡಿ

ಕನ್ಯಾ : ಆತ್ಮೀಯರೇ ಇಂದು ಇಂದು ನಿಮ್ಮ ಆರೋಗ್ಯದಲ್ಲಿ ಕೊಂಚ ಏರುಪೇರಾಗುವ ಸಾಧ್ಯತೆ ಇದೆ. ನಿಮಗೆ ಧನ ಲಾಭವೂ ಇದೆ. ನಿಮ್ಮ ಮನೆಯಲ್ಲಿ ಅಥವಾ ವಾಹನದಲ್ಲಿ ಅವಘಡಗಳು ಸಂಭವಿಸ ಬಹುದು ಎಚ್ಚರವಾಗಿರಿ.
  
ದೋಷ ಪರಿಹಾರ : ಲಕ್ಷ್ಮೀ ಆರಾಧನೆ ಮಾಡಿ

ತುಲಾ :  ಆತ್ಮೀಯರೇ ನಿಮ್ಮ ದೇಹದಲ್ಲಿ ಸ್ವಲ್ಪ ಆರೋಗ್ಯ ವ್ಯತ್ಯಯವಾಗಿ ಸ್ವಲ್ಪ ಉಲ್ಬಣವಾಗುವ ಸಾಧ್ಯತೆ ಇದೆ. ಹೊಸ ವಾಹನ ಖರೀದಿಗೆ ಆಲೋಚನೆ ಮಾಡುವ ದಿನ, ನಿಮ್ಮ ಸಹೋದರರಲ್ಲಿ ಭಿನ್ನಾಭಿಪ್ರಾಯ ಬರಲಿದೆ. ಎಚ್ಚರವಾಗಿರಿ.
 

ದೋಷ ಪರಿಹಾರ : ದುರ್ಗಾ ಸಪ್ತಶತಿ ಪಾರಾಯಣ ಮಾಡಿ

ವೃಶ್ಚಿಕ : ಆತ್ಮೀಯರೇ,  ಇಂದು ನಿಮ್ಮ ಮಾತೇ ನಿಮಗೆ ಶತ್ರು. ವೃಥಾ ಆಡಿದ ಮಾತು ಬಾಂಧವ್ಯ ಹಾಳುಮಾಡಲಿದೆ. ಮಾತನಾಡುವಾಗ ಜಾಗ್ರತೆ ಇರಲಿ. ನೀವು ಉದ್ಯೋಗಕ್ಕೆ ಅಥವಾ ಯಾವುದೇ ಕಾರ್ಯಕ್ಕೆ ಹೊರಡುವಾಗ ಅಂದುಕೊಂಡ ಕಾರ್ಯದ ಬದಲು ಮತ್ತೊಂದು ಕಾರ್ಯ ಮಾಡುವ ಸಂದರ್ಭ ಎದುರಾಗುತ್ತದೆ. 

ದೋಷ ಪರಿಹಾರ : ಜಲ ದುರ್ಗೆಯ ಆರಾಧನೆ ಮಾಡಿ

ಧನಸ್ಸು : ಆತ್ಮೀಯರೇ ಇಂದು ನಿಮ್ಮ ತಾಯಿಯಿಂದ ಸಂಪೂರ್ಣ ಸಹಾಯ ದೊರೆಯಲಿದೆ. ಅಷ್ಟೇ ಅಲ್ಲ ಓರ್ವ ಸ್ತ್ರೀ  ನಿಮ್ಮ ಮನಸ್ಸನ್ನು ಅರ್ಥಮಾಡಿಕೊಂಡು ನಿಮ್ಮ ಮನೋಭೀಷ್ಟಕ್ಕೆ ತಕ್ಕಹಾಗೆ ಸಹಾಯ ಮಾಡುತ್ತಾರೆ. ನಿಮ್ಮ ದೇಹ ಆರೋಗ್ಯ ಕಳೆದುಕೊಳ್ಳುತ್ತದೆ. ಆಹಾರದಲ್ಲಿ ಏರುಪೇರಾಗಬಹುದು.


ದೋಷ ಪರಿಹಾರ : ದತ್ತಾತ್ರೇಯ ದರ್ಶನ ಮಾಡಿ ಕಡಲೆ ಬೇಳೆಯನ್ನು ದಾನ ಮಾಡಿ

ಮಕರ :  ನಿಮ್ಮ ಸಹೋದರಿ ನಿಮ್ಮ ಸಹಾಯಕ್ಕೆ ಬರುತ್ತಾಳೆ. ನಿಮ್ಮ ಕಾನೂನಾತ್ಮಕ ಕಾರ್ಯಗಳು ವಿಳಂಬವಾಗುತ್ತವೆ. ವ್ಯಾಪಾರ ಸ್ಥಳದಲ್ಲಿ ಅಪಾಯವಾಗುವ ಲಕ್ಷಣಗಳಿವೆ. ಜಾಗ್ರತೆ ಇರಲಿ. ನಿಮ್ಮ ಉತ್ಸಾಹ ಇಮ್ಮಡಿಯಾಗುವುದರಲ್ಲಿ ಸಂದೇಹವಿಲ್ಲ. ಆದರೆ ಗಣಪತಿ ದರ್ಶನ ಮಾಡಿ
  
ದೋಷ ಪರಿಹಾರ : ಗಣಪತಿಗೆ ಗರಿಕೆ ಸಮರ್ಪಣೆ ಮಾಡಿ

ಕುಂಭ : ಆತ್ಮೀಯರೇ ನಿಮ್ಮ ದೇಹ ಸದೃಢಗೊಳ್ಳಲಿದೆ. ಅಷ್ಟೇ ಅಲ್ಲ ನಿಮ್ಮ ಮನೆಯಲ್ಲಿ ಎಲ್ಲರ ಸಹಾಯದಿಂದ ಧನ ಸಮೃದ್ಧವಾಗಲಿದೆ. ಉದ್ಯೋಗದಲ್ಲೂ ಉನ್ನತಿ ಹಾಗೂ ಲಾಭ ದೊರೆಯಲಿದೆ. ಆದರೆ ಸುಖ ನಾಶವೂ ಇದೆ. 

ದೋಷ ಪರಿಹಾರ :  ದೇವಿ ಅಪರಾಧ ಕ್ಷಮಾ ಸ್ತೋತ್ರ ಪಠಿಸಿ
  
ಮೀನ : ಸ್ನೇಹಿತರೆ ಇಂದು ಸುಖ ಭೋಜನ, ಮಕ್ಕಳಿಂದ ಸಹಾಯ ಹಸ್ತ. ವಿದೇಶದಿಂದ ಬಂಧುಗಳ ಆಗಮನ, ವಿಹಾರಕ್ಕೆ ಹೊರಡುವ ಮನಸ್ಸು. ಉದ್ಯೋಗದಲ್ಲಿ ಅತಂತ್ರ ಸ್ಥಿತಿ ಏರ್ಪಾಡಾಗುತ್ತದೆ ಕೆಲವರಿಗೆ.
  
ದೋಷ ಪರಿಹಾರ : ಗಂಧರ್ವ ಹೋಮ ಅಥವಾ ಗಂಧರ್ವ ಆರಾಧನೆ ಮಾಡಿ

ಗೀತಾಸುತ.