ಇಂದೊಂದು ಶುಭ ಸುದ್ದಿಯೊಂದು ಬರಲಿದೆ.
ಬಂಧುಗಳ ಆಗಮನ ಆಗಲಿದೆ. ಖರ್ಚಿನ
ಮೇಲೆ ಸ್ವಲ್ಪ ಹಿಡಿತವಿರಲಿ. ವಿಶ್ರಾಂತಿ ಅಗತ್ಯ.


ವೃಷಭ
ವ್ಯವಹಾರದಲ್ಲಿ ನಿರೀಕ್ಷಿತ ಲಾಭವು ಸಿಗಲಿದೆ.
ಆದರೂ ಇದರಿಂದಲೇ ಸಾಲಗಳು ತೀರು
ವುದಿಲ್ಲ. ಕಷ್ಟಪಟ್ಟರಷ್ಟೇ ಎಲ್ಲವೂ ಸಾಧ್ಯ.


ಮಿಥುನ
ಹಲವು ಮೂಲಗಳಿಂದ ಧನಾಗಮನ. ನಿಮ್ಮ
ಆರ್ಥಿಕ ದುಗುಡವು ಸ್ವಲ್ಪ ಮಟ್ಟಿಗೆ ಕಡಿಮೆ
ಯಾಗಲಿದೆ. ಸ್ಥಿತಿ ಉತ್ತಮವಾಗುವ ಕಾಲ.


ಕಟಕ
ಎಲ್ಲರೊಂದಿಗೂ ಬೆರೆಯಿರಿ, ಧನಾತ್ಮಕವಾದ
ಆಲೋಚನೆಗಳಿಂದ ನಿಮ್ಮ ಕೆಲಸಗಳಲ್ಲಿ ಈಗ
ಯಶಸ್ಸು ದೊರೆಯಲಿದೆ. ನೆಮ್ಮದಿಯಿಂದಿರಿ.

ಸಿಂಹ

ಹೊಸ ಥರದ ಆಲೋಚನೆಗಳು ಈಗ ನಿಮ್ಮನ್ನು
ಹುರಿದುಂಬಿಸಲಿವೆ. ಮಾನಸಿಕವಾಗಿ ನೆಮ್ಮದಿ
ಹೊಂದುತ್ತೀರಿ. ಬೆಳಗಿನ ಜಾವ ಧ್ಯಾನ ಮಾಡಿ.


ಕನ್ಯಾ
ಇಂತಹ ದಿನ ಇಂಥದ್ದೇ ಬಣ್ಣದ ಬಟ್ಟೆ ತೊಡ
ಬೇಕೆಂದು ವಾದ ಸರಿಯಾ ಯೋಚಿಸಿ ನೋಡಿ.
ಕೆಲಸದಲ್ಲಿ ಏಕಾಗ್ರತೆ ಇದ್ದರೆ ಸಾಧನೆ ಖಚಿತ.

ತುಲಾ
ಕೆಲ ಸಮಯದಿಂದ ಅಂದುಕೊಂಡಿದ್ದ ಕೆಲಸ
ಇಂದು ನೆರವೇರಲಿವೆ. ಮನೆಯ ಹೆಂಗಸರು
ಸ್ವಲ್ಪ ಮೌನವ್ರತ ಅನುಸರಿಸಿದರೆ ಒಳಿತು.

ವೃಶ್ಚಿಕ
ಹಣಕಾಸು, ಆಭರಣ ಒಪ್ಪಂದಗಳಿಗೆ ಇಂದು
ಸೂಕ್ತ ಸಮಯ. ವಾಗ್ವಾದಗಳಿಂದ ದೂರವಿರಿ.
ಧನಲಾಭದ ಸಾಧ್ಯತೆಯೂ ಇಂದು ಹೆಚ್ಚಿದೆ.

ಧನುಸ್ಸು
ವಿದೇಶ ಪ್ರಯಾಣದ ಯೋಗವಿದ್ದು ನಿಮ್ಮ
ಮಕ್ಕಳಿಗೆ ಉನ್ನತ ಶಿಕ್ಷಣದ ಯೋಗವೂ ಇದೆ.
ಬಣ್ಣದ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಿದೆ.


ಮಕರ
ಕಂಡವರ ಮುಂದೆಲ್ಲ ನಿಮ್ಮ ಬೇಡಿಕೆ ಇಡದಿರಿ.
ಅವರ‌್ಯಾರು ನಿಮ್ಮ ಜೀವನವನ್ನು ಹಸನುಗೊಳಿ
ಸುವುದಿಲ್ಲ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.


ಕುಂಭ
ಶುಭ ವಾರ್ತೆ ಕೇಳುವಿರಿ. ಮನೆಯಲ್ಲಿ
ಹಬ್ಬದ ವಾತಾವರಣವಿದೆ. ಬಂಧುಗಳ ಭೇಟಿ.
ಹಣಕಾಸಿನ ತೊಂದರೆ ನಿವಾರಣೆಯಾಗಲಿದೆ.

ಮೀನ
ಕೃಷಿಕರಿಗೆ ಎಂದೂ ಕಷ್ಟಗಳೇ ಇರುವುದಿಲ್ಲ.
ಒಳ್ಳೆಯ ದಿನಗಳು ಆಗಾಗ ಬರಲಿವೆ ಎಂಬ
ಸೂಚನೆಯು ಇಂದು ನಿಮ್ಮ ಕಿವಿಗೆ ಬೀಳಲಿದೆ