ಈ ರಾಶಿಗೆ ಯೋಗದ ದಿನ : ಉಳಿದ ರಾಶಿ ಹೇಗಿದೆ..?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 13, Sep 2018, 7:06 AM IST
Dina Bhavishya September 13
Highlights

ಸರ್ವರಿಗೂ ಗಣೇಶ ಹಬ್ಬದ ಶುಭಾಶಯಗಳು, ಇಂದಿನ ದಿನ ನಿಮ್ಮ ರಾಶಿ ಫಲ ಹೇಗಿದೆ..?

ಮೇಷ
ವಿದೇಶ ಪ್ರಯಾಣ ಯೋಗ. ಮಕ್ಕಳಿಗೆ ಉನ್ನತ
ಶಿಕ್ಷಣದ ಯೋಗವಿದೆ. ಕಲಾಲೋಕದ ವ್ಯಕ್ತಿ
ಗಳಿಗೂ ಬಣ್ಣದ ವ್ಯಾಪಾರಿಗಳಿಗೂ ಲಾಭವಿದೆ.

ವೃಷಭ
ವ್ಯವಹಾರದಲ್ಲಿ ಪ್ರಗತಿ ಇದ್ದರೂ ಒಳಗೊಳಗೆ
ಭಿನ್ನಾಭಿಪ್ರಾಯಗಳಿವೆ. ಇದು ಬಿರುಕುಂಟು
ಮಾಡುವ ಹಂತದವರೆಗೂ ಹೋಗದಷ್ಟೆ.

ಮಿಥುನ
ನಿಮ್ಮ ಉದಾರ ಬುದ್ಧಿಯಿಂದ ಒಳಿತಾಗಲಿದೆ.
ನಿಮ್ಮ ಒಳ್ಳೆಯತನವು ಇಂದು ಉಪಯೋಗಕ್ಕೆ
ಬರಲಿದೆ. ಒಳ್ಳೆಯ ದಿನಗಳು ಹತ್ತಿರದಲ್ಲಿದೆ.

ಕಟಕ
ನಿಮ್ಮ ಹೊಲಿಗೆ ಕೆಲಸದಲ್ಲಿ ಪ್ರಗತಿ ಸಾಧಿಸು
ತ್ತೀರಿ. ಹೊಸ ಗೆಳೆಯನಿಂದ ಹಣದ ಸಹಾಯ
ಸಿಗಲಿದೆ. ವಿನಾಕಾರಣ ಖರ್ಚು ಮಾಡದಿರಿ.

ಸಿಂಹ
ಭವಿಷ್ಯದ ಜೀವನದಲ್ಲಿ ಮತ್ತಷ್ಟು ಯಶಸ್ಸು
ಸಿಗಲಿದೆ. ಹೊಗಳಿಕೆಗೆ ಮನಸ್ಸು ಚಂಚಲ
ವಾಗದಿರಲಿ. ಮಾತಿನ ಮೇಲೆ ನಿಗಾ ಇರಲಿ.

ಕನ್ಯಾ
ನಿಮ್ಮ ಹಳೆಯ ಪ್ರಿಯತಮೆ ನಿಮ್ಮನ್ನು ಇಂದು
ಭೇಟಿಯಾಗಲಿದ್ದಾರೆ. ಆದರೆ ಅಷ್ಟೇ ನಿರ್ಮಲ
ಮನಸ್ಸಿಂದ ಮಾತಾಡಿ ಗೌರವ ಕೊಡಲಿದ್ದೀರಿ.

ತುಲಾ 
ನಿಮ್ಮ ಚತುರತೆಯೇ ನಿಮ್ಮನ್ನು ಕಾಯುತ್ತದೆ.
ಒಳ್ಳೆಯ ಕಾರ್ಯಕ್ಕೆ ಮುಂದಾಗುತ್ತೀರಿ. ತಂದೆ
ತಾಯಿಗಳಿಂದ ನಿಮಗೆ ಮೆಚ್ಚುಗೆ ಸಿಗಲಿದೆ.

ವೃಶ್ಚಿಕ
ರಾಜಕಾರಣದಲ್ಲಿ ಅವಕಾಶ ಗಿಟ್ಟಿಸಲು ಸತತ
ಹೋರಾಟ ನಡೆಸುತ್ತಿದ್ದೀರಿ. ಈ ಸಮಯವು
ನಿಮ್ಮದೆ. ಆಶಾಭಾವನೆ ಇರುವುದು ಒಳಿತು. 

ಧನುಸ್ಸು
ಈಗ ಬೆಳೆಯುತ್ತಿರುವ ಬೆಳೆಯಲ್ಲಿ ಹೆಚ್ಚಿನ
ಲಾಭ ಸಿಗಲಿದೆ. ತಾಳ್ಮೆಯಿಂದ ಇದ್ದರೆ ಕ್ಷೇಮ.
ಪ್ರೀತಿ ಪಾತ್ರರ ಜೊತೆ ಅನ್ಯೋನ್ಯರಾಗಿರಿ.

ಮಕರ
ಹೊಸ ಪ್ರವಾಸಿ ಕೇಂದ್ರಗಳನ್ನು ನೋಡಲೂ,
ಪ್ರಮುಖರನ್ನು ಭೇಟಿಯಾಗಲೂ ಇದು ಸೂಕ್ತ
ಸಮಯ. ವಾತಾವರಣವೂ ಪೂರಕವಾಗಿದೆ.

ಕುಂಭ
ಇಂದು ಗೆಳೆಯರಿಂದ ಒಳ್ಳೆಯ ಸುದ್ದಿ ಸಿಗಲಿದೆ.
ಅನಾವಶ್ಯಕ ಖರ್ಚಿಗಳಿಗೆ ಕಡಿವಾಣ ಹಾಕಿ.
ತಂದೆ-ತಾಯಿಯ ಮಾತುಗಳೇ ಆಶೀರ್ವಾದ.

ಮೀನ 
ಕುಟುಂಬದವರಿಂದ ಸಂತಸ ಸಿಗಲಿದೆ. ಮಕ್ಕಳ
ಬಗ್ಗೆ ಗಮನವಿರಲಿ. ಮಹತ್ವದ ಮಾತುಕತೆ
ಯಲ್ಲಿ ಪಾಲ್ಗೊಳ್ಳುವಿರಿ. ಖುಷಿಯ ದಿನವಿದು.

loader