Asianet Suvarna News Asianet Suvarna News

ಈ ರಾಶಿಗೆ ಕಾದಿಗೆ ಶುಭ ಸುದ್ದಿ : ಉಳಿದ ರಾಶಿ ಹೇಗಿದೆ..?

ಈ ರಾಶಿಗೆ ಕಾದಿಗೆ ಶುಭ ಸುದ್ದಿ : ಉಳಿದ ರಾಶಿ  ಹೇಗಿದೆ..?

Dina Bhavishya October 4
Author
Bengaluru, First Published Oct 4, 2018, 7:02 AM IST
  • Facebook
  • Twitter
  • Whatsapp

ಈ ರಾಶಿಗೆ ಕಾದಿಗೆ ಶುಭ ಸುದ್ದಿ : ಉಳಿದ ರಾಶಿ  ಹೇಗಿದೆ..?

ಮೇಷ
ದಾನ, ಧರ್ಮಗಳನ್ನು ಮಾಡಲು ಮುಂದಾ
ಗುವಿರಿ. ಹಿಂದಿನ ಶ್ರಮಕ್ಕೆ ಇಂದು ಸೂಕ್ತ
ಪ್ರತಿಫಲ ಪಡೆಯುವಿರಿ. ಜಾಗೃತೆ ಅಗತ್ಯ.

ವೃಷಭ
ಕೆಲಸ ಬದಲಾವಣೆ ಸಾಧ್ಯತೆ. ಅಧಿಕ ಖರ್ಚು.
ಆತ್ಮವಿಶ್ವಾಸ ಹೆಚ್ಚಾಗಲಿದೆ. ಅಂದುಕೊಂಡ
ಕೆಲಸವನ್ನು ಮುಂದೂಡುವುದು ಬೇಡ.

ಮಿಥುನ
ಆತ್ಮೀಯರೊಂದಿಗೆ ಮುಕ್ತವಾಗಿ ಮಾತನಾಡಿ.
ಸಮಸ್ಯೆಯ ಸುಳಿಯಿಂದ ಪಾರಾಗುವಿರಿ.
ಒಳ್ಳೆಯ ದಿನಗಳು ಇಂದಿನಿಂದ ಆರಂಭ.

ಕಟಕ
ಆರೋಗ್ಯದ ಬಗ್ಗೆ ನಿರ್ಲಕ್ಷ್ಯಬೇಡ.ಹೋಟೆಲ್
ಊಟವನ್ನು ಕಡಿಮೆ ಮಾಡಿಕೊಳ್ಳುವಿರಿ.
ದುಡಿಮೆ ಹೆಚ್ಚಿದರೂ ಆದಾಯ ಕಡಿಮೆ.

ಸಿಂಹ
ಗೃಹಿಣಿಯರ ಪಾಲಿಗೆ ಹೊಸ ವಸ್ತುಗಳನ್ನು
ಕೊಳ್ಳುವ ಭಾಗ್ಯ. ಮಕ್ಕಳ ವಿಚಾರದಲ್ಲಿ ಹೆಚ್ಚು
ನಿಗಾ ಇರಲಿ. ಕೆಲ ವಿಚಾರಗಲ್ಲಿ ಆತುರ ಬೇಡ.

ಕನ್ಯಾ
ಹೆಚ್ಚು ಉತ್ಸಾಹದಿಂದ ಕೆಲಸ ಮಾಡುವಿರಿ.
ಬಾಲ್ಯದ ಗೆಳೆಯರ ಭೇಟಿ. ಕ್ಷುಲ್ಲಕ ಕಾರಣಕ್ಕೆ
ಹೆಚ್ಚು ತಲೆ ಕೆಡಿಸಿಕೊಳ್ಳುವುದು ಬೇಡ.

ತುಲಾ
ಸ್ವಂತ ತೀರ್ಮಾನ ಕೈಗೊಳ್ಳುವ ಶಕ್ತಿ ಹೆಚ್ಚಲಿದೆ.
ಹಿರಿಯರಿಂದ ನಿಮ್ಮ ಸೃಜನಾತ್ಮಕ ಕೆಲಸಗಳಿಗೆ
ಪ್ರಶಂಸೆ. ಕಲಾವಿದರಿಗೆ ಒಳ್ಳೆಯ ಅವಕಾಶ.


ವೃಶ್ಚಿಕ
ಸ್ನೇಹಿತರನ್ನು ಹೆಚ್ಚಾಗಿ ನಂಬುವಿರಿ. ಶುಭ
ಕಾರ್ಯಕ್ಕೆ ಮುಂದಾಳತ್ವ ವಹಿಸಿಕೊಳ್ಳುವಿರಿ.
ಮನೆಯಲ್ಲಿ ಸಣ್ಣ ಪುಟ್ಟ ಕಲಹ ಉಂಟಾಗಲಿದೆ. 

ಧನುಸ್ಸು
ಸಣ್ಣ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ದೊರೆ
ಯಲಿದೆ. ಹೃದಯ ಸಂಬಂಧಿ ಸಮಸ್ಯೆಗೆ
ಪರಿಹಾರ ದೊರೆಯಲಿದೆ. ಶುಭ ಸುದ್ದಿ ಇದೆ.

ಮಕರ
ಅತಿಯಾದ ಮೊಬೈಲ್ ಬಳಕೆ ಬೇಡ.
ಯೋಗದ ಬಗ್ಗೆ ಆಸಕ್ತಿ ಹೆಚ್ಚಲಿದೆ. ಆಲಸಿತನ
ದಿಂದ ಬಿಡುಗಡೆ ಹೊಂದುವಿರಿ. ಶ್ರಮವಿರಲಿ.

ಕುಂಭ
ಹತ್ತಿರದ ಬಂಧುಗಳ ಆರೋಗ್ಯದಲ್ಲಿ
ಏರುಪೇರು. ದಿನವಿಡೀ ಉತ್ಸಾಹದಿಂದ
ಇರುವಿರಿ. ಉಳಿತಾಯಕ್ಕೆ ಮುಂದಾಗುವಿರಿ.

ಮೀನ 
ಮನೆಗೆ ಹೊಸ ಅತಿಥಿಯ ಆಗಮನವಾಗಲಿದೆ.
ದೇವಸ್ಥಾನಕ್ಕೆ ಭೇಟಿ ನೀಡಲಿದ್ದೀರಿ. ಶಿಕ್ಷಕರಿಂದ
ಪ್ರಶಂಸೆ. ದೂರದ ಪ್ರಯಾಣ ಸಾಧ್ಯ

Follow Us:
Download App:
  • android
  • ios