Asianet Suvarna News Asianet Suvarna News

ಈ ದಿನ ಯಾವ ರಾಶಿಗೆ ಶುಭ ಫಲ ತರುವುದು..?

ಈ ದಿನ ಯಾವ ರಾಶಿಗೆ ಶುಭ ಫಲ ತರುವುದು..?

Dina Bhavishya October 3
Author
Bengaluru, First Published Oct 3, 2018, 7:04 AM IST
  • Facebook
  • Twitter
  • Whatsapp

ಈ ದಿನ ಯಾವ ರಾಶಿಗೆ ಶುಭ ಫಲ ತರುವುದು..?


ಮೇಷ
ದೃಢ ನಿರ್ಧಾರ ಕೈಗೊಳ್ಳಲು ಇದು ಒಳ್ಳೆಯ
ದಿನ. ಸ್ನೇಹಿತರ ಮಾತಿನಿಂದ ಮನಸ್ಸಿಗೆ
ನೋವಾಗಲಿದೆ. ಅಧಿಕಾರಿಗಳಿಗೆ ಶುಭ ದಿನ.

ವೃಷಭ
ಮತ್ತೊಬ್ಬರ ಬಗ್ಗೆ ಅನುಮಾನಪಡುವುದು
ಬೇಡ. ನಿಮ್ಮ ಪ್ರಾಮಾಣಿಕತೆಗೆ ಗೌರವ
ಸಂದಾಯವಾಗಲಿದೆ. ಪರ ನಿಂದನೆ ಬೇಡ.

ಮಿಥುನ
ಮನಸ್ಸಿನಗೆ ನೆಮ್ಮದಿ ದೊರೆಯಲಿದೆ.
ವಿಘ್ನಗಳು ದೂರಾಗಲಿವೆ. ಬಂಧುಗಳ
ಸಹಕಾರದಿಂದ ಕಾರ್ಯ ಸಿದ್ಧಿ. ತಾಳ್ಮೆ ಮುಖ್ಯ.

ಕಟಕ
ಪ್ರಭಾವಿ ವ್ಯಕ್ತಿಗಳನ್ನು ಭೇಟಿಯಾಗುವಿರಿ.
ಕಲಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಲಿದ್ದೀರಿ.
ನಿಗದಿತ ಕೆಲಸಗಳಿಗೆ ಹೆಚ್ಚಿನ ಆಧ್ಯತೆ ನೀಡಿ.

ಸಿಂಹ
ಮನೆಯಲ್ಲಿ ಹಬ್ಬದ ವಾತಾವರಣ. ಆಸಕ್ತಿಯ
ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಿ. ಸಣ್ಣ ಪುಟ್ಟ
ಸಮಸ್ಯೆಗಳಿಗೆ ಚಿಂತೆ ಮಾಡುವುದು ಬೇಡ

ಕನ್ಯಾ
ಆರ್ಥಿಕವಾಗಿ ಲಾಭವಾಗಲಿದೆ. ಸಹೋದರರ
ಸಹಕಾರ ದೊರೆಯಲಿದೆ. ಸಮಯಕ್ಕೆ ಸರಿ
ಯಾಗಿ ಕೆಲಸಕ್ಕೆ ಹಾಜರಾಗಿ. ದಿನವಿಡೀ ಸಂತಸ

ತುಲಾ 
ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳು
ವಿರಿ. ಏಕಾಗ್ರತೆ ಸಿದ್ಧಿಸಲಿದೆ. ಆರೋಗ್ಯದಲ್ಲಿ
ಕೊಂಚ ಏರುಪೇರು. ನೆಮ್ಮದಿ ನೆಲೆಯಾಗಲಿದೆ

ವೃಶ್ಚಿಕ
ಆಸೆಗೆ ಬಲಿಯಾಗದಿರಿ. ಎಚ್ಚರಿಕೆಯಿಂದ
ಅಂದುಕೊಂಡಿರುವ ಕಾರ್ಯಗಳನ್ನು ಮಾಡಿ.
ವಾಹನ ಚಾಲಕರಿಗೆ ಒಳ್ಳೆಯ ದಿನವಿದು. 

ಧನುಸ್ಸು
ಹಣಕಾಸಿನ ವಿಚಾರದಲ್ಲಿ ಹಿಡಿತವಿರಲಿ.
ಹತ್ತಿರದ ಗೆಳೆಯರಿಂದ ಸಿಹಿ ಸಮಾಚಾರ
ಕೇಳುವಿರಿ. ಮಾಡುವ ಕೆಲಸದಲ್ಲಿ ಪ್ರಗತಿ.

ಮಕರ
ನಿದ್ದೆಯಲ್ಲಿ ವ್ಯತ್ಯಯವಾಗಲಿದೆ. ಪರೋಪ
ಕಾರಕ್ಕೆ ಹೆಚ್ಚು ಮುಂದಾಗುವಿರಿ. ನಿಮ್ಮ ಕೆಲಸಕ್ಕೆ
ದೊಡ್ಡ ಅಧಿಕಾರಿಗಳಿಂದ ಮೆಚ್ಚುಗೆ ಸಿಗಲಿದೆ.

ಕುಂಭ
ಸಣ್ಣ ಮನಸ್ಥಾಪಕ್ಕೆ ಅಧೀರರಾಗುವುದು ಬೇಡ.
ಗೆಳೆಯರ ಮಾತಿಗೆ ಮಾನ್ಯತೆ ನೀಡಿ. ಸಮ
ಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡಿ.

ಮೀನ
ಆಪ್ತ ವಲಯದಲ್ಲಿ ನಿಮ್ಮ ಮಾತಿಗೆ ಬೆಲೆ
ಸಿಕ್ಕಲಿದೆ. ಹಿರಿಯರ ಬಗ್ಗೆ ಗೌರವ ಇರಲಿ. ಈ
ದಿನ ಚಿಂತೆಯಿಂದ ಮುಕ್ತಿ ದೊರೆಯಲಿದೆ.

Follow Us:
Download App:
  • android
  • ios