ಯಾವ ರಾಶಿಯವರು ಎಚ್ಚರದಿಂದ ಇರಬೇಕು : ಯಾರಿಗಿದೆ ಶುಭ ಫಲ?

Dina Bhavishya June 4
Highlights

ಯಾವ ರಾಶಿವರು ಎಚ್ಚರದಿಂದ ಇರಬೇಕು : ಯಾರಿಗಿದೆ ಶುಭ ಫಲ?

ಯಾವ ರಾಶಿವರು ಎಚ್ಚರದಿಂದ ಇರಬೇಕು : ಯಾರಿಗಿದೆ ಶುಭ ಫಲ?

ಮೇಷ
ಮನೆಯ ಜಗಳ ಹೊರಗೆ ಬರದಂತೆ ಎಚ್ಚರ
ವಹಿಸಿ ಅದಕ್ಕಾಗಿಯೇ ಹೊರಗೆ ಹದ್ದುಗಳಂತೆ
ಕಾದು ಕೂತಿದ್ದಾರೆ. ಅವರಿಗೆ ಗ್ರಾಸವಾಗದಿರಿ.

ವೃಷಭ
ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿರಿ.
ಎಲ್ಲರೊಂದಿಗೆ ಸೌಹಾರ್ದಯುತವಾಗಿರಲು
ಪ್ರಯತ್ನಿಸಿ. ತಾಳ್ಮೆಯಿದ್ದರಷ್ಟೆ ಜಗತ್ತು ಚೆಂದ.

ಮಿಥುನ
ಪೇಂಟ್ ಮಾರಾಟದವರಿಗೆ ಒಳ್ಳೆಯ ದಿನ.
ಆದಾಯವು ಹೆಚ್ಚು. ಹಳೆಯ ಬಾಕಿಗಳು ಈ
ದಿನ ನಿಮ್ಮ ಕೈ ಸೇರಲಿವೆ. ಚಿಂತೆಗಳಿಗೆ ಬ್ರೇಕ್!

ಕಟಕ
ಮನೆಯಲ್ಲಿ ನೆಮ್ಮದಿ. ವೈವಾಹಿಕ ಜೀವನವು
ಎಲ್ಲ ರೀತಿಯ ಸುಖ-ಸಂತೋಷಗಳನ್ನೂ
ನೀಡುತ್ತದೆ. ಈ ದಿನ ಎಲ್ಲವೂ ಒಳಿತಾಗಲಿದೆ.

ಸಿಂಹ
ವಯೋಮಾನದ ತೊಂದರೆ ಬಾದಿಸುವುದು.
ಆದಷ್ಟು ಹೊರಗಿನ ಆಹಾರವನ್ನು ನಿಷೇಧಿಸು
ವುದು ಉಚಿತ. ಗೆಳೆಯರ ಆಗಮನವಾಗಲಿ

ಕನ್ಯಾ
ನಿಮ್ಮಲ್ಲಿನ ಹಣವನ್ನು ಸುರಕ್ಷಿತವಾಗಿಟ್ಟುಕೊಳ್ಳಿ.
ಸಾಧ್ಯವಾದಷ್ಟು ಉಳಿಸುವ ಪ್ರಯತ್ನ ಮಾಡಿ.
ತಜ್ಞರಿಂದ ಸಲಹೆ ಪಡೆದು ಹೂಡಿಕೆ ಮಾಡಿರಿ.

ತುಲಾ 
ಅನಿರೀಕ್ಷಿತ ವೆಚ್ಚಗಳು ಉದ್ಭವಿಸಬಹುದು.
ವೃಥಾ ಖರ್ಚಿಗೆ ಕಡಿವಾಣ ಹಾಕಿ. ಆರೋಗ್ಯ
ತಪಾಸಣೆಗಳನ್ನು ಅಗತ್ಯವಾಗಿ ಮಾಡಿಸಬೇಕು.

ವೃಶ್ಚಿಕ
ಇಂದು ಹೊಸ ರುಚಿಯನ್ನು ಸವಿದ ಕಾರಣ
ಆರೋಗ್ಯದಲ್ಲಿ ಏರುಪೇರು. ಗಂಡನಿಗೆ ಹೊಸ
ರುಚಿ ತಿನ್ನಿಸುವ ಭರದಲ್ಲಷ್ಟೇ ಇದು ನಡೆದಿದೆ. 

ಧನುಸ್ಸು
ಕಲಾಲೋಕದಲ್ಲಿ ದುಡಿಯುವವರಿಗೆ ಹೊಸ
ಹೊಸ ಐಡಿಯಾಗಳು ಬರಲಿವೆ. ಅವುಗಳು
ಸಾಕಾರಗೊಂಡಲ್ಲಿ ಸಾಕಷ್ಟು ಹಣವು ಬರಲಿದೆ.

ಮಕರ
ಒತ್ತಡವು ಹೆಚ್ಚಲಿದೆ. ಆದರೂ ನಿಮ್ಮಲ್ಲಿರುವ
ಸಾಮರ್ಥ್ಯಕ್ಕೆ ಇದೇನು ಅಷ್ಟು ದೊಡ್ಡದಲ್ಲ.
ನಿಭಾಯಿಸಲಿದ್ದೀರಿ. ಧೈರ್ಯವೇ ಮುಖ್ಯ.

ಕುಂಭ
ಇಂದಿನ ಸಮಯವು ಅನುಕೂಲಕರವಾಗಿದೆ.
ಬಯಸದೇ ಸಹಾಯಕ್ಕಾಗಿ ಜನ ಬರಲಿದ್ದಾರೆ.
ಆರೋಗ್ಯದತ್ತ ಗಮನಹರಿಸುವುದು ಸೂಕ್ತ.

ಮೀನ 
ಕೃಷಿಕರೂ ಆದ ನೀವು ಯೋಚಿಸಿ ನಿರ್ಧಾರ
ಗಳನ್ನು ತೆಗೆದುಕೊಂಡರೆ ಇದು ಒಳ್ಳೆಯ
ದಿನವೇ ಆಗಲಿದೆ. ತಾಳ್ಮೆಯಿಂದ ವರ್ತಿಸಿರಿ.

loader